ETV Bharat / technology

ದೇಶೀಯ​ ಮಾರ್ಕೆಟ್​ನಲ್ಲಿ ಮಹೀಂದ್ರ ಫುಲ್​ ಆ್ಯಕ್ಟಿವ್​! ಮತ್ತೊಂದು ಕಾರ್​ ಲಾಂಚ್​

Mahindra XUV 3XO EV Launched: ಮಹೀಂದ್ರಾ ತನ್ನ ಹೊಸ XUV 3XO EV ಅನ್ನು ಬಿಡುಗಡೆ ಮಾಡಿದೆ. ಇದರ ಬೆಲೆ ಮತ್ತು ಫೀಚರ್ಸ್​ ಸೇರಿದಂತೆ ಫುಲ್​ ಡಿಟೇಲ್ಸ್​ ಇಲ್ಲಿದೆ..

MAHINDRA XUV 3XO EV RANGE  MAHINDRA XUV 3XO EV FEATURES  MAHINDRA XUV 3XO EV PRICE  MAHINDRA XUV 3XO EV DETAILS
ದೇಶೀಯ​ ಮಾರ್ಕೆಟ್​ನಲ್ಲಿ ಮಹೀಂದ್ರ ಫುಲ್​ ಆ್ಯಕ್ಟಿವ್ (Photo Credit: Mahindra & Mahindra)
author img

By ETV Bharat Tech Team

Published : January 8, 2026 at 11:11 AM IST

3 Min Read
Choose ETV Bharat

Mahindra XUV 3XO EV Launched: ಜನವರಿ 2026ರ ಕಾರು ಮಾರುಕಟ್ಟೆಯು ಹೊಸ ಮಾದರಿಗಳ ಸುಳಿಯಲ್ಲಿ ಮುಳುಗಿದೆ. ಪ್ರಮುಖ ಆಟೋಮೊಬೈಲ್ ಕಂಪನಿಗಳು ದೇಶದಲ್ಲಿ ತಮ್ಮ ಹೊಸ ಕಾರುಗಳನ್ನು ಬಿಡುಗಡೆ ಮಾಡಲು ಸಜ್ಜಾಗಿವೆ. ಇವುಗಳಲ್ಲಿ ದೇಶೀಯ SUV ತಯಾರಕ ಮಹೀಂದ್ರಾ ಆ್ಯಂಡ್​ ಮಹೀಂದ್ರಾ ಇತ್ತೀಚೆಗೆ (ಜನವರಿ 5) ಹೊಸ "ಮಹೀಂದ್ರಾ XUV 7XO" ಅನ್ನು ಬಿಡುಗಡೆ ಮಾಡಿದೆ. ಇದರ ಬಿಡುಗಡೆಯ ಬೆನ್ನಲ್ಲೇ ಈಗ ದೇಶದಲ್ಲಿ ಮತ್ತೊಂದು ಹೊಸ "XUV 3XO EV" ಅನ್ನು ಪರಿಚಯಿಸಿದೆ. ಮಾರುಕಟ್ಟೆಯಲ್ಲಿ ಇದರ ಬೆಲೆ ರೂ. 13.89 ಲಕ್ಷಗಳಿಂದ (ಎಕ್ಸ್-ಶೋರೂಂ) ಪ್ರಾರಂಭವಾಗುತ್ತದೆ. ಕಂಪನಿಯು ತನ್ನ "ಮಹೀಂದ್ರಾ XUV 400" ಬದಲಿಗೆ ಈ ಹೊಸ ಎಲೆಕ್ಟ್ರಿಕ್ SUV ಅನ್ನು ಬಿಡುಗಡೆ ಮಾಡಿದೆ. ಇದು ಸಿಂಗಲ್​ ಬ್ಯಾಟರಿ ಪ್ಯಾಕ್‌ನೊಂದಿಗೆ ಎರಡು ರೂಪಾಂತರಗಳಲ್ಲಿ ಲಭ್ಯವಿದೆ.

ಹೊಸ ಮಹೀಂದ್ರಾ XUV 3XO EV ಡಿಸೈನ್​: ವಿನ್ಯಾಸದ ವಿಷಯದಲ್ಲಿ, ಈ EV ಅಲಾಯ್ ವೀಲ್‌ಗಳನ್ನು ಒಳಗೊಂಡಂತೆ ಮಹೀಂದ್ರಾ 3XO ICE ಶೈಲಿಯನ್ನು ಅನುಸರಿಸುತ್ತದೆ. ಇದರ ದೊಡ್ಡ ಬದಲಾವಣೆಗಳಲ್ಲಿ ಬಾಡಿ-ಕಲರ್​ ಗ್ರಿಲ್ ಮತ್ತು ಬಂಪರ್‌ನಲ್ಲಿ ಬಾಡಿ-ಕಲರ್​ನ ಇನ್ಸರ್ಟ್‌ಗಳೊಂದಿಗೆ ಪರಿಷ್ಕೃತ ಸೆಂಟ್ರಲ್ ಏರ್ ವೆಂಟ್‌ಗಳು ಸೇರಿವೆ.

ಮಹೀಂದ್ರಾ 400 ನಂತೆ, ಹೊಸ "ಮಹೀಂದ್ರಾ 3XO EV" ಸಹ ಕಾಪರ್​-ಫಿನಿಷ್ಡ್​ ಟ್ರಿಮ್ ಇನ್ಸರ್ಟ್‌ಗಳು ಮತ್ತು ಹೊರಭಾಗದಲ್ಲಿ ಬ್ಯಾಡ್ಜಿಂಗ್ ಅನ್ನು ಪಡೆಯುತ್ತದೆ. ಇದು 'ಟ್ವಿನ್ ಪೀಕ್ಸ್' ಮಹೀಂದ್ರಾ ಲೋಗೋವನ್ನು ಸಹ ಉಳಿಸಿಕೊಂಡಿದೆ.

ಹೊಸ ಮಹೀಂದ್ರಾ XUV 3XO EV ಬೆಲೆ:

Mahindra XUV 3XO EV ವೇರಿಯಂಟ್ಸ್​ಬೆಲೆ (ಎಕ್ಸ್-ಶೋರೂಂ)
AX5ರೂ. 13.89 ಲಕ್ಷ
AX7 Lರೂ. 14.96 ಲಕ್ಷ

ಹೊಸ ಮಹೀಂದ್ರಾ XUV 3XO EV ಇಂಟೀರಿಯರ್​: ಇದರ ಇಂಟೀರಿಯರ್​ಗೆ ಸಂಬಂಧಿಸಿದಂತೆ ಕ್ಯಾಬಿನ್ ವಿನ್ಯಾಸವು ಹೆಚ್ಚಾಗಿ ಒಂದೇ ಆಗಿರುತ್ತದೆ. ಆದರೆ ದೊಡ್ಡ ವ್ಯತ್ಯಾಸವೆಂದರೆ ಇಂಟೀರಿಯರ್​ ಟ್ರಿಮ್ ಕಲರ್ಸ್​. ಇದು ಡ್ಯಾಶ್‌ಬೋರ್ಡ್, ಡೋರ್ಸ್​ ಮತ್ತು ಮಿಡಲ್​ ಕನ್ಸೋಲ್‌ನಲ್ಲಿ ಕಾಪರ್​ ಕಲರ್​ ಇಂಟೀರಿಯರ್​ ಇನ್ಸರ್ಟ್‌ಗಳನ್ನು ಹೊಂದಿದೆ.

ಬ್ಯಾಟರಿ ಪ್ಯಾಕ್, ಪವರ್ ಔಟ್‌ಪುಟ್: ಕಂಪನಿಯು ಇದನ್ನು ಎರಡು ರೂಪಾಂತರಗಳಲ್ಲಿ ಪರಿಚಯಿಸಿದೆ. ಅವುಗಳೆಂದರೆ AX5 ಮತ್ತು AX7 L.

ಈ ಎರಡೂ ರೂಪಾಂತರಗಳು ಒಂದೇ ರೀತಿಯ 39.4 kWh ಬ್ಯಾಟರಿ ಪ್ಯಾಕ್‌ನೊಂದಿಗೆ ಬರುತ್ತವೆ. ಅದೇ ಸಾಮರ್ಥ್ಯದ ಬ್ಯಾಟರಿ ಪ್ಯಾಕ್ "ಮಹೀಂದ್ರಾ XUV 400 EV"ನಲ್ಲಿ ಲಭ್ಯವಿದೆ. ಎಲೆಕ್ಟ್ರಿಕ್ ಮೋಟಾರ್ ಅದೇ 148 bhp, 310 Nm ಔಟ್‌ಪುಟ್ ಅನ್ನು ಸಹ ನೀಡುತ್ತದೆ. ಫುಲ್​ ಚಾರ್ಜ್‌ನಲ್ಲಿ 285 ಕಿಮೀ ವರೆಗೆ ನೈಜ-ಪ್ರಪಂಚದ ವ್ಯಾಪ್ತಿಯನ್ನು ನೀಡುತ್ತದೆ ಎಂದು ಕಂಪನಿ ಹೇಳಿಕೊಂಡಿದೆ.

ಹೊಸ ಮಹೀಂದ್ರಾ XUV 3XO EV ವೈಶಿಷ್ಟ್ಯಗಳು: ವೈಶಿಷ್ಟ್ಯಗಳ ವಿಷಯದಲ್ಲಿ "AX5" ರೂಪಾಂತರವು ಮೂರು ಡ್ರೈವ್ ಮೋಡ್ಸ್​, ಫ್ರೀಕ್ವೆನ್ಸಿ ಸೆಲೆಕ್ಟಿವ್ ಡ್ಯಾಂಪರ್ಸ್​, ಸನ್‌ರೂಫ್, ಟ್ವಿನ್ 10.25-ಇಂಚಿನ ಡಿಸ್ಪ್ಲೇಗಳು, ಅಲೆಕ್ಸಾ ಬಿಲ್ಟ್-ಇನ್‌ನೊಂದಿಗೆ ಅಡ್ರಿನೊಎಕ್ಸ್, ವೈರ್‌ಲೆಸ್ ಆಂಡ್ರಾಯ್ಡ್ ಆಟೋ ಮತ್ತು ಆಪಲ್ ಕಾರ್‌ಪ್ಲೇ ಕಂಪಾಟಿಬಿಲಿಟಿ, 16-ಇಂಚಿನ ಅಲಾಯ್ ವೀಲ್ಸ್​, LED ಪ್ರೊಜೆಕ್ಟರ್ ಹೆಡ್‌ಲ್ಯಾಂಪ್‌ಗಳೊಂದಿಗೆ ಬರುತ್ತದೆ.

ಇವುಗಳ ಜೊತೆಗೆ ಈ ರೂಪಾಂತರವು ಕ್ರೂಸ್ ಕಂಟ್ರೋಲ್, ರಿಯರ್ ವ್ಯೂ ಕ್ಯಾಮೆರಾ, ಡ್ಯುಯಲ್-ಜೋನ್ ಕ್ಲೈಮೇಟ್ ಕಂಟ್ರೋಲ್, ಕೀಲೆಸ್ ಎಂಟ್ರಿ ಮತ್ತು ಗೋ, ಆಟೋ ಹೆಡ್‌ಲ್ಯಾಂಪ್‌ಗಳು ಮತ್ತು ವೈಪರ್‌ಗಳು, ವೈರ್‌ಲೆಸ್ ಚಾರ್ಜಿಂಗ್ ಪ್ಯಾಡ್, ಎಲೆಕ್ಟ್ರಾನಿಕ್ ಪಾರ್ಕಿಂಗ್ ಬ್ರೇಕ್, ESP, 6- ಏರ್‌ಬ್ಯಾಗ್‌ಗಳು ಮತ್ತು ಟೈರ್ ಪ್ರೆಶರ್ ಮಾನಿಟರಿಂಗ್‌ನಂತಹ ವೈಶಿಷ್ಟ್ಯಗಳನ್ನು ಸಹ ಪಡೆಯುತ್ತದೆ.

ಮತ್ತೊಂದೆಡೆ, "AX7 L" ರೂಪಾಂತರವು ಪನೋರಮಿಕ್ ಸನ್‌ರೂಫ್, ಲೆದರೆಟ್ ಅಪ್ಹೋಲ್ಸ್ಟರಿ, ಬೃಹತ್ 17-ಇಂಚಿನ ಅಲಾಯ್ ವೀಲ್‌ಗಳು, ಫಾಗ್ ಲ್ಯಾಂಪ್‌ಗಳು, ಹರ್ಮನ್ ಕಾರ್ಡನ್ ಆಡಿಯೊ ಸಿಸ್ಟಮ್, 360-ಡಿಗ್ರಿ ಕ್ಯಾಮೆರಾ, ಬ್ಲೈಂಡ್ ಸ್ಪಾಟ್ ಮಾನಿಟರಿಂಗ್, ಫ್ರಂಟ್ ಪಾರ್ಕಿಂಗ್ ಸೆನ್ಸರ್‌ಗಳು, ಆಟೋ-ಡಿಮ್ಮಿಂಗ್ IRVM, ಕೂಲ್ಡ್ ಗ್ಲೋವ್‌ಬಾಕ್ಸ್ ಮತ್ತು ವಿಶೇಷವಾಗಿ ಲೆವೆಲ್-2 ADAS ತಂತ್ರಜ್ಞಾನದಂತಹ ವೈಶಿಷ್ಟ್ಯಗಳೊಂದಿಗೆ ಬರುತ್ತದೆ.

ಡೆಲಿವರಿ ಯಾವಾಗ ಪ್ರಾರಂಭ?: ಈ ಹೊಸ ಮಹೀಂದ್ರಾ 3XO EV ವಿತರಣೆಗಳು ಫೆಬ್ರವರಿ 23ರಿಂದ ಪ್ರಾರಂಭವಾಗಲಿವೆ. ಭಾರತೀಯ ಮಾರುಕಟ್ಟೆಯಲ್ಲಿ ಈ SUV "ಟಾಟಾ ನೆಕ್ಸಾನ್ EV" ಮತ್ತು "MG ವಿಂಡ್ಸರ್ EV"ಗಳೊಂದಿಗೆ ಅದೇ ಬೆಲೆ ಶ್ರೇಣಿಯಲ್ಲಿ ಸ್ಪರ್ಧಿಸಲಿದೆ.

ಓದಿ: ಅನ್ವೇಷ ಸ್ಯಾಟಲೈಟ್​: ವರ್ಷದ ಮೊದಲ ಉಡಾವಣೆಗೆ ಇಸ್ರೋ ಸಜ್ಜು! ಭೂಮಿಗೆ ಬರುತ್ತಾ ಬೆಂಕಿಯ ಉಂಡೆ?