ETV Bharat / technology

ಫ್ಯಾಮಿಲಿಗಾಗಿ ಹೊಸ 7-ಸೀಟರ್​ ಎಲೆಕ್ಟ್ರಿಕ್​ ಕಾರು ಪ್ರಸ್ತುತ ಪಡಿಸಿದ ಮಹೀಂದ್ರಾ!

Mahindra Xev 9s Teaser Released: ಅತೀ ಶೀಘ್ರವೇ "ಮಹೀಂದ್ರಾ XEV 9S" ಮಾರುಕಟ್ಟೆಗೆ ಬರಲಿದ್ದು, ಲಾಂಚಿಂಗ್​ ಮುನ್ನಾ ಪ್ರಮುಖ ವಿವರಗಳು ಬಹಿರಂಗವಾಗಿವೆ. ಈ ಬಗ್ಗೆ ಇಲ್ಲಿದೆ ಫುಲ್​ ಡೀಟೆಲ್ಸ್​..

MAHINDRA XEV 9S  MAHINDRA XEV 9S INTERIOR TEASER  MAHINDRA XEV 9S DESIGN  MAHINDRA XEV 9S 7 SEATER
ಫ್ಯಾಮಿಲಿಗಾಗಿ ಹೊಸ 7-ಸೀಟರ್​ ಎಲೆಕ್ಟ್ರಿಕ್​ ಕಾರು ಪ್ರಸ್ತುತ ಪಡಿಸಿದ ಮಹೀಂದ್ರಾ (Photo Credit- Mahindra & Mahindra)
author img

By ETV Bharat Tech Team

Published : November 15, 2025 at 11:31 AM IST

2 Min Read
Choose ETV Bharat

Mahindra Xev 9s Teaser Released: ದೇಶೀಯ SUV ತಯಾರಕ ಮಹೀಂದ್ರಾ & ಮಹೀಂದ್ರಾದಿಂದ ಹೊಸ ಎಲೆಕ್ಟ್ರಿಕ್ SUV ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಯಾಗಲಿದೆ. ಕಂಪನಿಯು ನವೆಂಬರ್ 27 ರಂದು "ಮಹೀಂದ್ರಾ XEV 9S" ಹೆಸರಿನಲ್ಲಿ ಈ ಕಾರನ್ನು ಬಿಡುಗಡೆ ಮಾಡಲು ಸಿದ್ಧವಾಗಿದೆ. ಈಗಾಗಲೇ ಈ ಕಾರಿನ ಟೀಸರ್‌ಗಳು ಬಿಡುಗಡೆ ಆಗುತ್ತಿವೆ. ಇತ್ತೀಚೆಗೆ ಮತ್ತೊಂದು ಟೀಸರ್ ಬಿಡುಗಡೆಯಾಗಿದ್ದು, ಇದು ಅದರ ಒಳಾಂಗಣ ಮತ್ತು ವೈಶಿಷ್ಟ್ಯಗಳ ಕುರಿತು ಹೊಸ ವಿವರಗಳನ್ನು ಬಹಿರಂಗಪಡಿಸುತ್ತದೆ.

ಈ ಮುಂಬರುವ ಮಹೀಂದ್ರಾ "XEV 9S" ಅನ್ನು ನವೆಂಬರ್ 27 ರಂದು ಕಂಪನಿಯ ಪ್ರೀಮಿಯಂ EV ಶ್ರೇಣಿಯಲ್ಲಿ ಮೂರು-ಸಾಲಿನ ಪ್ರವೇಶವಾಗಿ ಬಿಡುಗಡೆ ಮಾಡಲಾಗುವುದು. ಈ ಎಲೆಕ್ಟ್ರಿಕ್ SUV ಕಂಪನಿಯ INGLO ಸ್ಕೇಟ್‌ಬೋರ್ಡ್ ಪ್ಲಾಟ್‌ಫಾರ್ಮ್‌ನಲ್ಲಿ ನಿರ್ಮಿಸಲಾದ 7-ಸೀಟರ್​ SUV ಆಗಿರುತ್ತದೆ. ಈ ಹಿಂದೆ ಮಾರುಕಟ್ಟೆಗೆ ತರಲಾದ "XEV 9e" ಮತ್ತು "BE 6" ಎಲೆಕ್ಟ್ರಿಕ್ ಕಾರುಗಳನ್ನು ಸಹ ಅದೇ ವೇದಿಕೆಯಲ್ಲಿ ನಿರ್ಮಿಸಲಾಗಿದೆ. ಹೆಚ್ಚುವರಿ ಸಾಲಿನ ಸೀಟುಗಳಿಗಾಗಿ ಇದು "ಮಹೀಂದ್ರಾ XEV 9e" ಗಿಂತ ಉದ್ದವಾದ ವೀಲ್‌ಬೇಸ್ ಅನ್ನು ಹೊಂದಿರುತ್ತದೆ.

ಮಹೀಂದ್ರಾ XEV 9S ಟೀಸರ್: ಕಂಪನಿಯು ಬಿಡುಗಡೆ ಮಾಡಿದ ವಿಡಿಯೋ ಕ್ಲಿಪ್ ಹೊಸ "ಮಹೀಂದ್ರಾ XEV 9S"ನ ಕ್ಯಾಬಿನ್ ಅನ್ನು ತೋರಿಸುತ್ತದೆ. ಇದು ಬ್ಲ್ಯಾಕ್​ ಡಿಸೈನ್​, ಸಿಲ್ವರ್​ ಪ್ಲೇಟ್ಸ್​ ಮತ್ತು ಕಾಂಟ್ರಾಸ್ಟ್ ಸ್ಟಿಚಿಂಗ್​ನೊಂದಿಗೆ ಸಣ್ಣ-ಸಣ್ಣ ರಂದ್ರ ವಸ್ತುಗಳಿಂದ ಮಾಡಿದ ಸೀಟುಗಳನ್ನು ಹೊಂದಿದೆ. ಪ್ರಯಾಣಿಕರು ಮಹೀಂದ್ರಾ "BE 6" ಮತ್ತು "XEV 9e" ನಂತಹ ಅದೇ ಹರ್ಮನ್ ಕಾರ್ಡನ್ ಸಿಸ್ಟಮ್​ ಅನ್ನು ಪಡೆಯುತ್ತಾರೆ.

ಇದು ಕ್ಯಾಬಿನ್ ಡ್ಯಾಶ್‌ಬೋರ್ಡ್‌ನಲ್ಲಿ ಟ್ರಿಪಲ್-ಸ್ಕ್ರೀನ್ ಸೆಟಪ್ ಅನ್ನು ಹೊಂದಿರುತ್ತದೆ. ಇಂಟೀರಿಯರ್​ ಸಾಫ್ಟ್-ಟಚ್ ವಸ್ತುಗಳನ್ನು ಒಳಗೊಂಡಿದೆ. ಎಸ್‌ಯುವಿ ಸೀಟುಗಳಿಗೆ ಮೆಮೊರಿ ಕಾರ್ಯಗಳನ್ನು ಸಹ ಹೊಂದಿರುತ್ತದೆ. ಇತರ ನಿರೀಕ್ಷಿತ ವೈಶಿಷ್ಟ್ಯಗಳಲ್ಲಿ ವೆಂಟಿಲೇಟೆಡ್​ ಸೀಟ್ಸ್​, ಪನೋರಮಿಕ್ ಸನ್‌ರೂಫ್, ಪವರ್ಡ್​ ಟೈಲ್‌ಗೇಟ್ ಮತ್ತು ಲೆವೆಲ್-2 ADAS ಸೂಟ್ ಸೇರಿವೆ.

ಮಹೀಂದ್ರಾ XEV 9S ಇತರ ವಿವರಗಳು: ಮಹೀಂದ್ರಾ XEV 9S ಅನ್ನು ಸ್ಕೇಲೆಬಲ್ INGLO ಪ್ಲಾಟ್‌ಫಾರ್ಮ್‌ನಲ್ಲಿ ನಿರ್ಮಿಸಲಾಗುವುದು ಎಂಬುದು ಗಮನಾರ್ಹ. ಇದು ವಿಭಿನ್ನ ಉದ್ದಗಳು ಮತ್ತು ಆಸನ ವಿನ್ಯಾಸಗಳನ್ನು ಹೊಂದಿರುವ ವಾಹನಗಳನ್ನು ಒಂದೇ ಬೇಸ್‌ನಲ್ಲಿ ನಿರ್ಮಿಸಲು ಅನುವು ಮಾಡಿಕೊಡುತ್ತದೆ. ಪರಿಣಾಮವಾಗಿ ಮಹೀಂದ್ರಾ ಪ್ರಮುಖ ಘಟಕಗಳನ್ನು ಗಮನಾರ್ಹವಾಗಿ ಬದಲಾಯಿಸದೆ ವೀಲ್‌ಬೇಸ್ ಅನ್ನು ವಿಸ್ತರಿಸಲು ಸಾಧ್ಯವಾಗುತ್ತದೆ.

ಆದರೆ ಈ ಹೊಸ 7-ಆಸನಗಳ ಕಾರಿನ ಇಂಟೀರಿಯರ್​ ವಿನ್ಯಾಸವು 5-ಸೀಟರ್​ ಮಹೀಂದ್ರಾ "XEV 9e" ಗಿಂತ ಭಿನ್ನವಾಗಿರುತ್ತದೆ ಎಂದು ನಿರೀಕ್ಷಿಸಲಾಗಿದೆ. ಸ್ಕೇಟ್‌ಬೋರ್ಡ್ ಪ್ಲಾಟ್‌ಫಾರ್ಮ್ ಫ್ಲಾಟ್-ಫ್ಲೋರ್ ವಿನ್ಯಾಸವು ಕಾರಿನ ಎರಡನೇ ಸಾಲಿನ ಸೀಟುಗಳನ್ನು ಹಿಂದಕ್ಕೆ ಮಡಚಲು ಅನುವು ಮಾಡಿಕೊಡುತ್ತದೆ.

ಮಹೀಂದ್ರಾ XEV 9S ಪವರ್‌ಟ್ರೇನ್: ಪವರ್‌ಟ್ರೇನ್‌ನ ಕುರಿತು ಯಾವುದೇ ವಿವರಗಳನ್ನು ಬಹಿರಂಗಪಡಿಸದಿದ್ದರೂ, ಮುಂಬರುವ ಮಹೀಂದ್ರಾ "XEV 9S" ಟಾಪ್-ಸ್ಪೆಕ್ "ಮಹೀಂದ್ರಾ XEV 9e" ಗೆ ಹೋಲುವ ವಿಶೇಷಣಗಳೊಂದಿಗೆ ಬರುವ ನಿರೀಕ್ಷೆಯಿದೆ. ಈ ರೂಪಾಂತರವು 75 kWh ಬ್ಯಾಟರಿಯನ್ನು ಹೊಂದಿದೆ. ಇದು ಸಿಂಗಲ್​ ಚಾರ್ಜ್‌ನಲ್ಲಿ 656 ಕಿ.ಮೀ ವರೆಗೆ ಚಲಿಸುವ ಭರವಸೆ ನೀಡುತ್ತದೆ. ಕಡಿಮೆ-ಸ್ಪೆಕ್ ಮಹೀಂದ್ರಾ "XEV 9e" 59 kWh ಬ್ಯಾಟರಿ ಪ್ಯಾಕ್ ಹೊಂದಿದೆ. ಇದು 542 ಕಿ.ಮೀ ವರೆಗೆ ಸಿಂಗಲ್​ ಚಾರ್ಜ್ ವ್ಯಾಪ್ತಿಯನ್ನು ನೀಡುತ್ತದೆ ಎಂದು ಹೇಳಲಾಗಿದೆ.

ಓದಿ: ಜಗತ್ತಿಗೆ ಅಚ್ಚರಿ ಉಂಟುಮಾಡಿದ ಚಂದ್ರಯಾನ-3: ಭೂಮಿ-ಚಂದ್ರನ ನಡುವೆ ನಲುಗುತ್ತಿರುವ ಪ್ರೊಪಲ್ಷನ್ ಮಾಡ್ಯೂಲ್