ETV Bharat / technology

ಶುರುವಾಯ್ತು ಭಾಗಶಃ ಚಂದ್ರಗ್ರಹಣ, ಮಧ್ಯಾಹ್ನ 12.30ಕ್ಕೆ ಮುಕ್ತಾಯ!: ದೇಶದ ಜನತೆಗೆ ನೋಡುವ ಭಾಗ್ಯವಿಲ್ಲವೇ?; ಇಲ್ಲಿದೆ ಲೈವ್​ ಸ್ಟ್ರೀಮಿಂಗ್​

Lunar Eclipse 2026: ಸೂರ್ಯಗ್ರಹಣದ ನಂತರ ಇದೀಗ ಭಾಗಶಃ ಚಂದ್ರಗ್ರಹಣ ಉತ್ತರ ಅಮೆರಿಕದಲ್ಲಿ ಗೋಚರಿಸುತ್ತಿದೆ ಎಂದು ನಾಸಾ ಹೇಳಿದೆ. ಭಾರತದಲ್ಲಿ ಸೂತಕ ಕಾಲವೂ ಇದೆಯೋ.. ಇಲ್ಲವೋ ಎಂಬ ವಿವರಗಳು ಇಲ್ಲಿವೆ..

EARTH SHADOW FULL MOON  WHAT IS LUNAR ECLIPSE NASA  RED MOON ATMOSPHERE SCATTERING  FULL MOON EARTH BETWEEN SUN
ಭಾಗಶಃ ಚಂದ್ರಗ್ರಹಣ, (Photo Credit: AP)
author img

By ETV Bharat Tech Team

Published : August 28, 2026 at 7:39 AM IST

3 Min Read
Choose ETV Bharat

Lunar Eclipse 2026: ಆಗಸ್ಟ್ ಖಗೋಳ ಘಟನೆಗಳಿಗೆ ಫುಲ್​ ಬ್ಯುಸಿ ತಿಂಗಳಾಗಿದೆ. ಇತ್ತೀಚಿನ ಸೂರ್ಯಗ್ರಹಣ, ಪರ್ಸೀಡ್ಸ್ ಉಲ್ಕಾಪಾತ ಮತ್ತು ಈಗ ಭಾಗಶಃ ಚಂದ್ರಗ್ರಹಣ ಸಂಭವಿಸುತ್ತಿದೆ. ಈ ದಿನ ಉತ್ತರ ಅಮೆರಿಕದ ಬಹುಭಾಗದಲ್ಲಿ ಗೋಚರಿಸುತ್ತಿರುವ ಈ ಗ್ರಹಣದಲ್ಲಿ ಆಕಾಶ ವೀಕ್ಷಕರು ಭೂಮಿಯ ನೆರಳು ಹುಣ್ಣಿಮೆಯ ಚಂದ್ರನ ಮೇಲ್ಮೈಯಲ್ಲಿ ಹರಡುವುದನ್ನು ನೋಡುತ್ತಿದ್ದಾರೆ. ಈ ಬಾರಿ ವಿಶೇಷವಾಗಿ ಭಾಗಶಃ ಗ್ರಹಣವಾಗಿರುವುದರಿಂದ ಚಂದ್ರನ ಒಂದು ಭಾಗ ಮಾತ್ರ ಕತ್ತಲಾಗುತ್ತದೆ.

ಭಾಗಶಃ ಚಂದ್ರಗ್ರಹಣವು ಆಗಸ್ಟ್ 27-28, 2026 ರಂದು ಎಂದರೆ ಇಂದು ಸಂಭವಿಸುತ್ತಿದೆ. ಇದು ಆಗಸ್ಟ್ 27ರ ಸಂಜೆ ಪ್ರಾರಂಭವಾಗಿ ಆಗಸ್ಟ್ 28ರ ಮುಂಜಾನೆ ಗರಿಷ್ಠ ಮಟ್ಟವನ್ನು ತಲುಪುತ್ತದೆ. ಸಮಯವು ನಿಮ್ಮ ಸ್ಥಳವನ್ನು ಆಧರಿಸಿ ಬದಲಾಗುತ್ತದೆ. ಆದರೆ, ನಾಸಾ ಪ್ರಕಾರ ಇದು ಸುಮಾರು 12:13 AM ET ಎಂದು ಅಂದಾಜಿಸಲಾಗಿದೆ. ಉತ್ತರ ಅಮೆರಿಕದ ವೀಕ್ಷಕರಿಗೆ ಇದು ಅತ್ಯುತ್ತಮ ಸಮಯವಾಗಿದೆ.

2026 ಚಂದ್ರಗ್ರಹಣ ದಿನಾಂಕ ಮತ್ತು ಸಮಯ: ಖಗೋಳ ಹಂತಗಳನ್ನು ಭಾರತೀಯ ಪ್ರಮಾಣಿತ ಸಮಯಕ್ಕೆ ಪರಿವರ್ತಿಸಿದಾಗ ಆಗಸ್ಟ್ 28 ಬೆಳಗ್ಗೆ ಇರುತ್ತದೆ.

  • ಪೆನಂಬ್ರಲ್ ಗ್ರಹಣ ಪ್ರಾರಂಭ: ಬೆಳಗ್ಗೆ 6:55
  • ಭಾಗಶಃ ಗ್ರಹಣ ಪ್ರಾರಂಭ: ಬೆಳಗ್ಗೆ 8:04
  • ಗರಿಷ್ಠ ಚಂದ್ರಗ್ರಹಣ: ಬೆಳಗ್ಗೆ 9:43
  • ಭಾಗಶಃ ಗ್ರಹಣ ಮುಕ್ತಾಯ: ಬೆಳಗ್ಗೆ 11:21,
  • ಪೆನಂಬ್ರಲ್ ಹಂತ ಮುಕ್ತಾಯ: ಮಧ್ಯಾಹ್ನ 12:30.

ಇಡೀ ಪೆನಂಬ್ರಲ್ ಘಟನೆಯು ಸುಮಾರು 5 ಗಂಟೆ 35 ನಿಮಿಷಗಳನ್ನು ತೆಗೆದುಕೊಳ್ಳುತ್ತದೆ ಮತ್ತು ಗಾಢವಾದ ಭಾಗಶಃ ಹಂತವು ಸುಮಾರು 3 ಗಂಟೆ 16 ನಿಮಿಷಗಳನ್ನು ತೆಗೆದುಕೊಳ್ಳುತ್ತದೆ. ಜಾಗತಿಕ ಗ್ರಹಣ ಹಂತಗಳು ಭಾರತೀಯ ಕಾಲಮಾನ ಪ್ರಕಾರದಲ್ಲಿವೆ.

ಗ್ರಹಣ ಹೇಗೆ ಸಂಭವಿಸಲಿದೆ?: ಈ ಭಾಗಶಃ ಚಂದ್ರಗ್ರಹಣವು ತಿಂಗಳ ಹುಣ್ಣಿಮೆಯ ಸಮಯದಲ್ಲಿ ಭೂಮಿಯು ಸೂರ್ಯ ಮತ್ತು ಚಂದ್ರನ ನಡುವೆ ಹಾದುಹೋದಾಗ ಸಂಭವಿಸುತ್ತದೆ. ಈ ಸಮಯದಲ್ಲಿ ಭೂಮಿಯ ಬಾಗಿದ ಒಳಗಿನ ನೆರಳು ಚಂದ್ರನ ಮೇಲ್ಮೈ ಮೇಲೆ ನಿಧಾನವಾಗಿ ಹೆಚ್ಚಾಗುತ್ತಾ ಕಾಣಿಸುತ್ತದೆ. ಗ್ರಹಣದ ಅತ್ಯಂತ ಹೆಚ್ಚಿನ ಪರಿಣಾಮದ ಸಮಯದಲ್ಲಿ ಒಂದು ತೆಳುವಾದ ಅರ್ಧಚಂದ್ರಾಕಾರದ ಪಟ್ಟಿಯ ಮೇಲೆ ನೇರ ಸೂರ್ಯನ ಬೆಳಕು ಬೀಳುತ್ತಲೇ ಇರುತ್ತದೆ.

ಚಂದ್ರಗ್ರಹಣ ಎಲ್ಲಲ್ಲಿ ಕಾಣುತ್ತಿದೆ?: 27 - 28 ಆಗಸ್ಟ್‌ನ ಈ ಭಾಗಶಃ ಚಂದ್ರಗ್ರಹಣವು ಉತ್ತರ ಅಮೆರಿಕ, ದಕ್ಷಿಣ ಅಮೆರಿಕ, ಯುರೋಪ್ ಮತ್ತು ಆಫ್ರಿಕಾದ ಕೆಲವು ಭಾಗಗಳಲ್ಲಿ ವಾಸಿಸುವ ಸುಮಾರು 3.3 ಬಿಲಿಯನ್ ಜನರಿಗೆ ಕಾಣಿಸಲಿದೆ. ಭೂಮಿಯಿಂದ ನೋಡುವ ಎಲ್ಲ ಜನರಿಗೆ ಪ್ರತಿ ಹಂತವೂ ಒಂದೇ ಸಮಯದಲ್ಲಿ ನಡೆಯುತ್ತದೆ. ಆದರೂ ಗ್ರಹಣದ ಪ್ರತಿ ಹಂತದ ಸ್ಥಳೀಯ ಸಮಯವು ನಿಮ್ಮ ಸ್ಥಳಕ್ಕೆ ಅನುಗುಣವಾಗಿ ಬೇರೆ ಬೇರೆಯಾಗಿರುತ್ತದೆ.

ಅಮೆರಿಕದ ವೆಸ್ಟ್ ಕೋಸ್ಟ್‌ನಲ್ಲಿ ಲಾಸ್ ಏಂಜಲೀಸ್ (ಕ್ಯಾಲಿಫೋರ್ನಿಯಾ) ಮತ್ತು ಪೋರ್ಟ್‌ಲ್ಯಾಂಡ್ (ಒರೆಗಾನ್) ನಂತಹ ನಗರಗಳಲ್ಲಿ ನೋಡುವವರಿಗೆ ಗ್ರಹಣದ ಅತ್ಯಂತ ಹೆಚ್ಚಿನ ಪರಿಣಾಮದ ಸಮಯವು ಸೂರ್ಯ ಮುಳುಗಿದ ಕೆಲವೇ ಗಂಟೆಗಳ ನಂತರ ಬರಲಿದೆ. ನ್ಯೂಯಾರ್ಕ್ ಮತ್ತು ಜಾಕ್ಸನ್‌ವಿಲ್ಲೆನಂತಹ ಈಸ್ಟ್ ಕೋಸ್ಟ್ ನಗರಗಳಿಂದ ನೋಡುವವರಿಗೆ ಈ ಚಂದ್ರನ ದೃಶ್ಯವು ಮಧ್ಯರಾತ್ರಿಯ ಸುಮಾರಿಗೆ ಕಾಣಿಸಲಿದೆ. ಸದ್ಯ ಚಂದ್ರಗ್ರಹಣ ಸಂಭವಿಸುತ್ತಿದ್ದು, ಇಲ್ಲಿ ಕೆಳಗೆ ನೀಡಲಾಗಿರುವ ಲೈವ್​ ಸ್ಟ್ರೀಮಿಂಗ್​ನಲ್ಲಿ ನೀವು ನೋಡಬಹುದು..

ಭಾರತದಲ್ಲಿ ಗ್ರಹಣ ಕಾಣುವುದಿಲ್ಲ ಏಕೆ?: ಯುಕೆ, ಯುರೋಪ್ ಮತ್ತು ಆಫ್ರಿಕಾಕ್ಕೆ ಈ ಗ್ರಹಣವು ಬೆಳಗಿನ ಜಾವ ನಡೆಯಲಿದೆ. ಇದು ಸೂರ್ಯೋದಯಕ್ಕೆ ಸ್ವಲ್ಪ ಮೊದಲು ನಡೆಯಲಿದ್ದು, ಆಗ ಚಂದ್ರನು ಪಶ್ಚಿಮ ದಿಗಂತದ ಕಡೆಗೆ ಕೆಳಗೆ ಬಾಗಿರುತ್ತಾನೆ. ಗ್ರಹಣ ಸಂಭವಿಸಿದಾಗ ಭೂಮಿಯ ಹಗಲಿನ ಭಾಗದಲ್ಲಿರುವ ಜನರಿಗೆ ಚಂದ್ರ ಕಾಣುವುದಿಲ್ಲ. ಆದ್ದರಿಂದ ಆಸ್ಟ್ರೇಲಿಯಾ, ಭಾರತ, ಚೀನಾ ಮತ್ತು ಜಪಾನ್ ನಂತಹ ಹಲವು ದೇಶಗಳಲ್ಲಿ ಇದನ್ನು ನೋಡಲು ಸಾಧ್ಯವಾಗುವುದಿಲ್ಲ.

ಕನ್ನಡಕ ಇಲ್ಲದೇ ನೋಡಬಹುದು: ಚಂದ್ರಗ್ರಹಣದ ವಿಶೇಷತೆ ಎಂದರೆ ಸೂರ್ಯಗ್ರಹಣಕ್ಕಿಂತ ಭಿನ್ನವಾಗಿ ಇದನ್ನು ಯಾವುದೇ ವಿಶೇಷ ಕನ್ನಡಕ ಇಲ್ಲದೇ ಬರಿಗಣ್ಣಿನಿಂದ ನೋಡಬಹುದು. ಚಂದ್ರಗ್ರಹಣ ನೋಡಲು ನಿಮಗೆ ಸುರಕ್ಷತಾ ಕನ್ನಡಕ ಅಥವಾ ವಿಶೇಷ ಉಪಕರಣದ ಅಗತ್ಯವಿಲ್ಲ. ಆದರೆ, ದೂರದರ್ಶಕ ಅಥವಾ ಟೆಲಿಸ್ಕೋಪ್‌ನಿಂದ ಅನುಭವ ಇನ್ನಷ್ಟು ಉತ್ತಮವಾಗಬಹುದು.

ಚಂದ್ರಗ್ರಹಣ ಹೇಗೆ ಸಂಭವಿಸುತ್ತದೆ?: ಚಂದ್ರಗ್ರಹಣವು ಚಂದ್ರ, ಭೂಮಿ ಮತ್ತು ಸೂರ್ಯ ಒಂದೇ ನೇರ ರೇಖೆಯಲ್ಲಿ ಎದುರು - ಬದುರು ಬಂದಾಗ ಸಂಭವಿಸುತ್ತದೆ. ಈ ಸಮಯದಲ್ಲಿ ಚಂದ್ರನು ಭೂಮಿಯ ನೆರಳಿನ ಮೂಲಕ ಹಾದುಹೋಗುತ್ತಾನೆ. ಆದರೆ, ಚಂದ್ರಗ್ರಹಣದ ಸಮಯದಲ್ಲಿ ಚಂದ್ರನು ಆಕಾಶದಿಂದ ಕಣ್ಮರೆಯಾಗುವುದಿಲ್ಲ. ಬದಲಿಗೆ ಇದು ಗಾಢ ಕೆಂಪು ಬಣ್ಣದಲ್ಲಿ ಕಾಣಿಸುತ್ತದೆ. ಇದೇ ಕಾರಣಕ್ಕೆ ಇದನ್ನು ಬ್ಲಡ್ ಮೂನ್ ಎಂದು ಕರೆಯಲಾಗುತ್ತದೆ.

ಓದಿ: ಹಿಮಾಲಯದಲ್ಲಿ ಪ್ರಕೃತಿಯ ರೌದ್ರಾವತಾರ!: ಮಣ್ಣಿನ ಸುನಾಮಿಗೆ ನೂರಾರು ಜನ ಬಲಿ, ಸಾವಿರಾರೂ ಮಂದಿ ನಾಪತ್ತೆ; ವಿಜ್ಞಾನಿಗಳು ಹೇಳಿದ್ದೇನು?