ETV Bharat / technology

ಇಂದು ಆಗಸದಲ್ಲಿ ಕೆಂಬಣ್ಣದ ಚಂದ್ರ ದರ್ಶನ! ಸೂತಕ ಅವಧಿ, ಗ್ರಹಣ ಸಮಯದ ಮಾಹಿತಿ

Lunar Eclipse 2026: ಇಂದು ಈ ವರ್ಷದ ಮೊದಲ ಚಂದ್ರಗ್ರಹಣ ಸಂಭವಿಸಲಿದೆ. ಗ್ರಹಣ ಸಮಯ ಮತ್ತು ಸೂತಕ ಅವಧಿ ಯಾವಾಗ, ಗ್ರಹಣದ ಸಮಯದಲ್ಲಿ ಏನು ಮಾಡಬೇಕು, ಗ್ರಹಣ ಎಲ್ಲಲ್ಲಿ ಗೋಚರಿಸುತ್ತದೆ ಎಂಬಿತ್ಯಾದಿ ವಿವರ.

HOLI 2026  CHANDRA GRAHAN 2026  BLOOD MOON INDIA 2026  TOTAL LUNAR ECLIPSE
ಇಂದು ಆಗಸದಲ್ಲಿ ಖಗೋಳ ವಿಸ್ಮಯ (Photo Credit: IANS)
author img

By ETV Bharat Tech Team

Published : March 3, 2026 at 9:50 AM IST

2 Min Read
Choose ETV Bharat

Lunar Eclipse 2026: ಈ ವರ್ಷದ ಮೊದಲ ಚಂದ್ರಗ್ರಹಣ ಇಂದು ಅಂದ್ರೆ ಮಂಗಳವಾರ ಮಾರ್ಚ್ 3ರಂದು ಸಂಭವಿಸಲಿದೆ. ಸಿಂಹ ರಾಶಿಚಕ್ರ ಚಿಹ್ನೆ, ಪೂರ್ವ ಫಾಲ್ಗುಣಿ ನಕ್ಷತ್ರ ಮತ್ತು ಧೃತಿ ಯೋಗದಲ್ಲಿ ಫಾಲ್ಗುಣದ ಹುಣ್ಣಿಮೆಯ ದಿನ ಚಂದ್ರಗ್ರಹಣ ಜರುಗುತ್ತಿದೆ. ಮಧ್ಯಾಹ್ನ 3:20ಕ್ಕೆ ಪ್ರಾರಂಭವಾಗಿ 3 ಗಂಟೆ 27 ನಿಮಿಷಗಳ ಕಾಲ ಗ್ರಹಣ ಇರುತ್ತದೆ. ಈ ಸಮಯದಲ್ಲಿ ಅದ್ಭುತವಾದ ರಕ್ತ ವರ್ಣದ ಚಂದ್ರ ಆಕಾಶದಲ್ಲಿ ಗೋಚರಿಸುತ್ತಾನೆ. ಗೋಚರ ಸಮಯ ಸಂಜೆ 6:33ರಿಂದ ಸಂಜೆ 6:48ರ ನಡುವೆ ಇರುತ್ತದೆ.

ಚಂದ್ರಗ್ರಹಣದ ಸೂತಕ ಅವಧಿ ಗ್ರಹಣಕ್ಕೆ ಒಂಬತ್ತು ಗಂಟೆಗಳ ಮೊದಲು ಶುರು. ಆದ್ದರಿಂದ ಸೂತಕ ಅವಧಿ ಬೆಳಗ್ಗೆ 6:23ಕ್ಕೆ ಆರಂಭವಾಗಿ ಮತ್ತು ಗ್ರಹಣದ ಕೊನೆಯಲ್ಲಿ ಕೊನೆಗೊಳ್ಳುತ್ತದೆ. ಸೂತಕ ಅವಧಿಯಲ್ಲಿ ಯಾವುದೇ ಶುಭ ಕಾರ್ಯಗಳನ್ನು ಮಾಡುವುದಿಲ್ಲ. ದೇವಾಲಯದ ಬಾಗಿಲುಗಳನ್ನು ಮುಚ್ಚಲಾಗುತ್ತದೆ. ಇಂದಿನ ಚಂದ್ರಗ್ರಹಣ ಭಾರತ ಸೇರಿದಂತೆ ಪ್ರಪಂಚಾದ್ಯಂತ ಅನೇಕ ದೇಶಗಳಲ್ಲಿ ಗೋಚರಿಸುತ್ತದೆ.

ಭಾರತದಾದ್ಯಂತ ಗ್ರಹಣ ಗೋಚರಿಸುತ್ತದೆ. ಆದರೆ ಚಂದ್ರಗ್ರಹಣದ ಆರಂಭ ದೇಶದಲ್ಲೆಲ್ಲಿಯೂ ಗೋಚರಿಸುವುದಿಲ್ಲ. ಪೂರ್ವ ಭಾರತದ ಕೆಲವು ಪ್ರದೇಶಗಳಲ್ಲಿ ಪೂರ್ಣ ಚಂದ್ರಗ್ರಹಣದ ಅಂತ್ಯವು ಗೋಚರಿಸುತ್ತದೆ. ಆದರೆ ಇತರ ಪ್ರದೇಶಗಳಲ್ಲಿ ಭಾಗಶಃ ಚಂದ್ರಗ್ರಹಣದ ಅಂತ್ಯ ಮಾತ್ರ ಕಂಡುಬರುತ್ತದೆ. ಭಾರತೀಯ ಕಾಲಮಾನ ಸಂಜೆ 5:58ಕ್ಕೆ ಗ್ರಹಣ ಸ್ಪರ್ಶಿಸಿ ಸಂಜೆ 6:48ಕ್ಕೆ ಕೊನೆಗೊಳ್ಳುತ್ತದೆ.

ಚಂದ್ರ ಗ್ರಹಣದ ಆರಂಭ, ಅಂತ್ಯದ ಸಮಯ:

  • ಚಂದ್ರ ಗ್ರಹಣದ ಆರಂಭದ ಸಮಯ: ಮಧ್ಯಾಹ್ನ 3:20
  • ಚಂದ್ರ ಗ್ರಹಣದ ಅಂತ್ಯದ ಸಮಯ: ಸಂಜೆ 6:48
  • ಭಾರತದಲ್ಲಿ ಚಂದ್ರ ಗ್ರಹಣದ ಒಟ್ಟು ಸಮಯ: 14-20 ನಿಮಿಷಗಳು

ವರ್ಷದ ಮೊದಲ ಚಂದ್ರಗ್ರಹಣ ಪೂರ್ವ ಭಾರತದಲ್ಲಿ ಗೋಚರಿಸಲಿದೆ. ದೆಹಲಿ-ಎನ್‌ಸಿಆರ್, ಚೆನ್ನೈ, ಕೋಲ್ಕತ್ತಾ, ಹೈದರಾಬಾದ್, ಮುಂಬೈ, ಅಹಮದಾಬಾದ್, ಬೆಂಗಳೂರು, ಭುವನೇಶ್ವರ, ಪಾಟ್ನಾ, ಇಂಫಾಲ್, ಗುವಾಹಟಿ, ಶಿಲ್ಲಾಂಗ್, ಕೊಹಿಮಾ ಮತ್ತು ಇಟಾನಗರಗಳಲ್ಲಿಯೂ ಗೋಚರಿಸಲಿದೆ. ಅನೇಕ ಪ್ರದೇಶಗಳಲ್ಲಿ ಭಾಗಶಃ ಗೋಚರಿಸಲಿದೆ.

ಭಾರತ ಹೊರತುಪಡಿಸಿ ಆಸ್ಟ್ರೇಲಿಯಾ, ಪೂರ್ವ ಏಷ್ಯಾ, ಉತ್ತರ ಮತ್ತು ಮಧ್ಯ ಅಮೆರಿಕ, ಪೆಸಿಫಿಕ್ ಮಹಾಸಾಗರ ಮತ್ತು ಪಶ್ಚಿಮ ದಕ್ಷಿಣ ಅಮೆರಿಕದಲ್ಲಿ ಗ್ರಹಣ ಗೋಚರಿಸಲಿದೆ. ಮಧ್ಯ ಏಷ್ಯಾ ಮತ್ತು ದಕ್ಷಿಣ ಅಮೆರಿಕದ ದೊಡ್ಡ ಭಾಗಗಳಲ್ಲಿಯೂ ಕಂಡುಬರಲಿದೆ. ಆಫ್ರಿಕಾ ಮತ್ತು ಯುರೋಪಿನಲ್ಲಿ ಗೋಚರಿಸುವುದಿಲ್ಲ.

ಸೂತಕ ಅವಧಿಯಲ್ಲಿ ಏನು ಮಾಡಬೇಕು?:

  • ಸೂತಕ ಅವಧಿಯಲ್ಲಿ ಪೂಜೆ ನಡೆಸಲಾಗುವುದಿಲ್ಲ. ಮಂತ್ರಗಳನ್ನು ಜಪಿಸಬಹುದು ಮತ್ತು ನಿಮ್ಮ ಮನಸ್ಸಿನಲ್ಲಿ ದೇವರ ಹೆಸರುಗಳನ್ನು ಸ್ಮರಿಸಬಹುದು.
  • ನೀವು ಗುರು ಮಂತ್ರವನ್ನು ತೆಗೆದುಕೊಂಡಿದ್ದರೆ ಅದನ್ನು ನಿಮ್ಮ ಮನಸ್ಸಿನಲ್ಲಿ ಜಪಿಸಿ.
  • ಗುರು ಮಂತ್ರವನ್ನು ತೆಗೆದುಕೊಳ್ಳದಿದ್ದರೆ ಓಂ ನಮಃ ಶಿವಾಯ ಅಥವಾ ಓಂ ನಮೋ ಭಗವತೇ ವಾಸುದೇವಾಯ ಎಂದು ಜಪಿಸಬಹುದು.
  • ಯಾವುದೇ ಮಂತ್ರವನ್ನು ಜಪಿಸಲು ಬಯಸದಿದ್ದರೆ ನಿಮ್ಮ ನೆಚ್ಚಿನ ದೇವರ ಹೆಸರನ್ನು ಜಪಿಸಬಹುದು.

ಬ್ಲಡ್​ ಮೂನ್​: ಇಂದು ಸಂಜೆ ಚಂದ್ರಗ್ರಹಣದ ಸಮಯದಲ್ಲಿ ಚಂದ್ರನು ಬಿಳಿ ಬಣ್ಣದಲ್ಲಿ ಅಲ್ಲ ಬದಲಾಗಿ ಕಡು ಕೆಂಪು ಮತ್ತು ನೀಲಿ ಬಣ್ಣದಲ್ಲಿ ಕಾಣಿಸಿಕೊಳ್ಳುತ್ತಾನೆ. ಇದು ಆಕಾಶದಲ್ಲಿ ರಕ್ತಸಿಕ್ತ ಚಂದ್ರನ ಅದ್ಭುತ ದೃಶ್ಯ ಸೃಷ್ಟಿಸುತ್ತದೆ. ಈ ಅಪರೂಪದ ಸಂಪೂರ್ಣ ಚಂದ್ರಗ್ರಹಣವು ದೇಶ ಮತ್ತು ಪ್ರಪಂಚದ ಅನೇಕ ಭಾಗಗಳಲ್ಲಿ ಗೋಚರಿಸುತ್ತದೆ. ಖಗೋಳಶಾಸ್ತ್ರಜ್ಞರ ಪ್ರಕಾರ, ಚಂದ್ರನು ಭೂಮಿಯ ನೆರಳಿನ ಮೇಲಿನ ಭಾಗದ ಮೂಲಕ ಹಾದುಹೋದಾಗ ಮತ್ತು ಓಝೋನ್ ಪದರದಿಂದ ಬರುವ ಬೆಳಕಿನಿಂದ ಪ್ರಭಾವಿತವಾದಾಗ ಕಡು ಕೆಂಪು ಮತ್ತು ನೀಲಿ ಬಣ್ಣದಲ್ಲಿ ಕಾಣಿಸಿಕೊಳ್ಳುತ್ತದೆ ಎನ್ನುತ್ತಾರೆ.

ಇದನ್ನೂ ಓದಿ: ರಸ್ತೆಗಳಲ್ಲಿ ಓಡಾಡುವ ಐಷಾರಾಮಿ ಹಡಗು ಪರಿಚಯಿಸಿದ ಮರ್ಸಿಡಿಸ್-ಬೆನ್ಜ್! ಹೇಗಿವೆ ಗೊತ್ತಾ ಫೀಚರ್ಸ್?