ETV Bharat / technology

ಹೋಳಿ ಹಬ್ಬದಂದೇ ಚಂದ್ರ ಗ್ರಹಣ! ‘ಬ್ಲಡ್ ಮೂನ್​’ ವೀಕ್ಷಿಸುವುದು ಎಲ್ಲಿ?

Lunar Eclipse 2026: ಮಾರ್ಚ್ 3ರಂದು ಅಂದ್ರೆ ನಾಳೆ ಹೋಳಿ ಹುಣ್ಣಿಮೆ. ಆದ್ರೆ ಹಬ್ಬದಂದೇ ಚಂದ್ರ ನಮಗೆ ಗೋಚರಿಸುವುದಿಲ್ಲ.

TOTAL LUNAR ECLIPSE  BLOOD MOON INDIA 2026  CHANDRA GRAHAN 2026
ಹೋಳಿ ಹಬ್ಬದಂದೇ ಚಂದ್ರನನ್ನು ನುಂಗಲಿರುವ ಸೂರ್ಯ (Image Credit: NASA)
author img

By ETV Bharat Tech Team

Published : March 2, 2026 at 11:26 AM IST

3 Min Read
Choose ETV Bharat

Lunar Eclipse 2026: ಉಂಗುರಾಕಾರದ ಸೂರ್ಯಗ್ರಹಣದ ಕೆಲವೇ ದಿನಗಳ ಬಳಿಕ ಆಗಸ ಮತ್ತೊಂದು ಅದ್ಭುತ ದೃಶ್ಯಕ್ಕೆ ಅಣಿಯಾಗುತ್ತಿದೆ. ಸೂರ್ಯ ಜ್ವಾಲೆಯ ಉಂಗುರದೊಂದಿಗೆ ನಮಗೆ ದರ್ಶನ ನೀಡಿದ್ರೆ, ಈ ಬಾರಿ ಚಂದ್ರ ಕೆಂಬಣ್ಣದಲ್ಲಿ ಕಂಗೊಳಿಸಲಿದ್ದಾನೆ. ಅಂದ್ರೆ ಗ್ರಹಣದ ಸಮಯದಲ್ಲಿ ಬಿಳಿ ಚಂದ್ರ ರಕ್ತವರ್ಣಕ್ಕೆ ತಿರುಗುತ್ತಾನೆ.

ಸಾಮಾನ್ಯವಾಗಿ ಭೂಮಿಯು ಸೂರ್ಯ ಮತ್ತು ಚಂದ್ರನ ನಡುವೆ ಬಂದಾಗ ಚಂದ್ರಗ್ರಹಣ ಸಂಭವಿಸುತ್ತದೆ. ನಂತರ ಭೂಮಿಯ ನೆರಳು ಚಂದ್ರನ ಮೇಲ್ಮೈ ಮೇಲೆ ಬೀಳುತ್ತದೆ. ಆ ಸಮಯದಲ್ಲಿ ಚಂದ್ರನ ಒಂದು ಭಾಗಕ್ಕೆ ಮಾತ್ರ ನೆರಳು (ಭೂಮಿಯ ನೆರಳು) ಆವರಿಸಿದರೆ, "ಭಾಗಶಃ ಚಂದ್ರಗ್ರಹಣ" ಸಂಭವಿಸುತ್ತದೆ. ಇಡೀ ಚಂದ್ರ ಭೂಮಿಯ ನೆರಳಿನಡಿಯಲ್ಲಿ ಬಂದಾಗ ಅದುವೇ "ಸಂಪೂರ್ಣ ಚಂದ್ರಗ್ರಹಣ."

ಇನ್ನೂ ಸ್ಪಷ್ಟವಾಗಿ ಹೇಳುವುದಾದರೆ ಭೂಮಿಯು ಸೂರ್ಯ ಮತ್ತು ಚಂದ್ರನ ನಡುವಿನ ರೇಖೆಯನ್ನು ಸಂಪೂರ್ಣವಾಗಿ ನಿರ್ಬಂಧಿಸಿದರೆ ಅದು "ಸಂಪೂರ್ಣ ಚಂದ್ರಗ್ರಹಣ." ಅದು ಸ್ವಲ್ಪಮಟ್ಟಿಗೆ ನಿರ್ಬಂಧಿಸಿದರೆ "ಭಾಗಶಃ ಚಂದ್ರಗ್ರಹಣ." ಇನ್ನೊಂದು ಪ್ರಮುಖ ಅಂಶವೆಂದರೆ ಚಂದ್ರಗ್ರಹಣ ಯಾವಾಗಲೂ ಹುಣ್ಣಿಮೆಯ ದಿನದಂದು ಸಂಭವಿಸುತ್ತದೆ. ಆದರೆ ಪ್ರತಿ ಹುಣ್ಣಿಮೆಗೂ ಚಂದ್ರಗ್ರಹಣ ಇರುವುದಿಲ್ಲ ಎಂಬುದು ಗಮನಾರ್ಹ.

ಈ ಬಾರಿ ಸಂಭವಿಸುವ ಸಂಪೂರ್ಣ ಚಂದ್ರಗ್ರಹಣ "ರಕ್ತ ಚಂದ್ರ" ಆಗಿರುತ್ತದೆ ಎಂದು ವಿಜ್ಞಾನಿಗಳು ಹೇಳುತ್ತಾರೆ. ಏಕೆಂದರೆ ಈ ಗ್ರಹಣ ಕಾಲದಲ್ಲಿ, ಚಂದ್ರ ಸಂಪೂರ್ಣವಾಗಿ ಭೂಮಿಯ ನೆರಳಿನಲ್ಲಿರುವುದರಿಂದ ಸೂರ್ಯನ ಬೆಳಕು ನೇರವಾಗಿ ಚಂದ್ರನನ್ನು ತಲುಪುವುದಿಲ್ಲ. ಸೂರ್ಯನ ಬೆಳಕಿನಲ್ಲಿ ಕಡಿಮೆ ತರಂಗಾಂತರಗಳನ್ನು ಹೊಂದಿರುವ ನೀಲಿ ಬೆಳಕು ಸುಲಭವಾಗಿ ಚದುರಿಹೋಗುತ್ತದೆ. ಆದರೆ ಕೆಂಪು ಮತ್ತು ಕಿತ್ತಳೆ ಬೆಳಕು ದೀರ್ಘ ತರಂಗಾಂತರಗಳಂತೆ ಭೂಮಿಯ ದಟ್ಟವಾದ ವಾತಾವರಣವನ್ನು ಭೇದಿಸಿ ಚಂದ್ರನ ಮೇಲ್ಮೈ ತಲುಪುತ್ತದೆ. ಈ ಕಿತ್ತಳೆ ಮತ್ತು ಕೆಂಪು ಬಣ್ಣಗಳು ಭೂಮಿಯ ಮೂಲಕ ಹಾದುಹೋಗುತ್ತವೆ ಮತ್ತು ನಂತರ ಚಂದ್ರನನ್ನು ತಲುಪುತ್ತವೆ.

  • ಸೂಪರ್ ಮೂನ್: ಈ ವೇಳೆ ಚಂದ್ರ ಭೂಮಿಗೆ ಹತ್ತಿರದಲ್ಲಿರುತ್ತಾನೆ. ಹೀಗಾಗಿ ಚಂದ್ರ ಸಾಮಾನ್ಯಕ್ಕಿಂತ 14% ದೊಡ್ಡದಾಗಿ ಮತ್ತು 30% ಪ್ರಕಾಶಮಾನವಾಗಿ ಕಾಣಿಸಿಕೊಳ್ಳುತ್ತಾನೆ.
  • ಹಾರ್ವೆಸ್ಟ್ ಮೂನ್: ಇದು ಪ್ರತಿ ಎರಡೂವರೆ ವರ್ಷಗಳಿಗೊಮ್ಮೆ ಸಂಭವಿಸುತ್ತದೆ. 1940ರಿಂದ ಕ್ಯಾಲೆಂಡರ್ ತಿಂಗಳಿನಲ್ಲಿ ಎರಡನೇ ಹುಣ್ಣಿಮೆಯನ್ನು "ಬ್ಲೂ ಮೂನ್" ಎಂದು ಕರೆಯಲಾಗುತ್ತದೆ.
  • ಹಾರ್ವೆಸ್ಟ್ ಮೂನ್: ಈ ರೀತಿಯ ಚಂದ್ರನನ್ನು ಶರತ್ಕಾಲದಲ್ಲಿ ಸೆಪ್ಟೆಂಬರ್ 22-23 ರಂದು ಕಾಣಬಹುದು. ಇದು ರೈತರಿಗೆ ತಮ್ಮ ಬೆಳೆಗಳನ್ನು ಕೊಯ್ಲು ಮಾಡಲು ಹೆಚ್ಚುವರಿ ಬೆಳಕನ್ನು ಒದಗಿಸುತ್ತದೆ. ಅದಕ್ಕಾಗಿಯೇ ಇದನ್ನು "ಹಾರ್ವೆಸ್ಟ್ ಮೂನ್" ಎಂದು ಕರೆಯಲಾಗುತ್ತದೆ.

ಬ್ಲಡ್ ಮೂನ್ ಭಾರತದಲ್ಲಿ ಯಾವಾಗ ಗೋಚರಿಸುತ್ತದೆ?: ಭಾರತೀಯ ಹವಾಮಾನ ಇಲಾಖೆ (ಐಎಂಡಿ ಸ್ಥಾನಿಕ ಖಗೋಳ ಕೇಂದ್ರ, ಕೋಲ್ಕತ್ತಾ) ಪ್ರಕಾರ, ಈ ಪೂರ್ಣ ಚಂದ್ರಗ್ರಹಣ 12 ಫಾಲ್ಗುಣ, 1947 ರಂದು ಶಕೆ ಯುಗದಲ್ಲಿ ಸಂಭವಿಸುತ್ತದೆ. ಇದು ಮಾರ್ಚ್ 3ರಂದು ಭಾರತೀಯ ಪ್ರಮಾಣಿತ ಸಮಯ (IST) ಮಧ್ಯಾಹ್ನ 3:20ಕ್ಕೆ ಪ್ರಾರಂಭವಾಗಿ ಸಂಜೆ 6:48ಕ್ಕೆ ಕೊನೆಗೊಳ್ಳುತ್ತದೆ. ಚಂದ್ರಗ್ರಹಣ ಸಂಜೆ 4:34ಕ್ಕೆ ಪ್ರಾರಂಭವಾಗಿ ಸಂಜೆ 5:33ಕ್ಕೆ ಕೊನೆಗೊಳ್ಳುತ್ತದೆ. ಹೈದರಾಬಾದ್‌ನಲ್ಲಿ ಸಂಪೂರ್ಣ ಚಂದ್ರಗ್ರಹಣ 26 ನಿಮಿಷಗಳ ಕಾಲ ಗೋಚರಿಸಲಿದೆ.

ಮತ್ತೊಂದೆಡೆ, TimeAndDate ಪ್ರಕಾರ ಭಾರತೀಯ ಪ್ರಮಾಣಿತ ಸಮಯ (IST) ಪ್ರಕಾರ ಗ್ರಹಣ ಸಮಯಗಳು ಈ ಕೆಳಗಿನಂತಿವೆ:

  • ಪೆನುಂಬ್ರಲ್​ ಹಂತ ಆರಂಭ: 4:58 PM
  • ಚಂದ್ರಗ್ರಹಣ ಪ್ರಾರಂಭ: 4:58 PM
  • ಚಂದ್ರ ಗ್ರಹಣ ಮುಕ್ತಾಯ 5:32 PM
  • ಪೆನುಂಬ್ರಲ್​ ಹಂತ ಕೊನೆಗೊಳ್ಳುವುದು: 7:53 PM IST

ಯಾವಾಗ ನೋಡಬೇಕು?: ಚಂದ್ರಗ್ರಹಣವನ್ನು ಸ್ಪಷ್ಟವಾಗಿ ವೀಕ್ಷಿಸಲು ಸರಿಯಾದ ಸಮಯ ಯಾವುದು ಎಂದು ನಿಖರವಾಗಿ ಹೇಳಲು ಸಾಧ್ಯವಿಲ್ಲ. ಇದು ನಿಮ್ಮ ಸ್ಥಳವನ್ನು ಅವಲಂಬಿಸಿರುತ್ತದೆ. ಪಶ್ಚಿಮ ಪ್ರದೇಶಗಳನ್ನು ಹೊರತುಪಡಿಸಿ ಭಾರತದ ಹೆಚ್ಚಿನ ಭಾಗಗಲ್ಲಿ ಗ್ರಹಣವು ಸಂಪೂರ್ಣವಾಗಿ ಗೋಚರಿಸುತ್ತದೆ. ಸಂಪೂರ್ಣ ಹಂತದ ಅಂತ್ಯವನ್ನು ಈಶಾನ್ಯ ಭಾರತ, ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳ ಕೆಲವು ಸ್ಥಳಗಳಿಂದ ಕಾಣಬಹುದು. ಈ ಒಟ್ಟು ಚಂದ್ರಗ್ರಹಣವು ಪೂರ್ವ ಏಷ್ಯಾ, ಆಸ್ಟ್ರೇಲಿಯಾ, ಪೆಸಿಫಿಕ್ ಮಹಾಸಾಗರ ಮತ್ತು ಅಮೆರಿಕಗಳಿಂದಲೂ ಗೋಚರಿಸುತ್ತದೆ. ಚಂದ್ರಗ್ರಹಣದ ನಿಖರವಾದ ಸಮಯವನ್ನು ಕಂಡುಹಿಡಿಯಲು ನೀವು TimeAndDate.com ಅಥವಾ NASA ಎಕ್ಲಿಪ್ಸ್ ಪೋರ್ಟಲ್‌ನಲ್ಲಿ ಸಂವಾದಾತ್ಮಕ ನಕ್ಷೆಗಳು ಮತ್ತು ನೈಜ-ಸಮಯದ ಪರಿಕರಗಳನ್ನು ಬಳಸಬಹುದು.

ವೀಕ್ಷಿಸುವುದು ಹೇಗೆ?: ಸೂರ್ಯಗ್ರಹಣದಂತೆ ಚಂದ್ರಗ್ರಹಣವನ್ನು ವೀಕ್ಷಿಸಲು ನಿಮಗೆ ವಿಶೇಷ ಕನ್ನಡಕ ಅಗತ್ಯವಿಲ್ಲ. ಆದರೆ ಬರಿಯ ಕಣ್ಣುಗಳಿಂದ ವಿದ್ಯಮಾನವನ್ನು ನೋಡುವುದಕ್ಕಿಂತ ಬೈನಾಕ್ಯುಲರ್ ಅಥವಾ ದೂರದರ್ಶಕವನ್ನು ಬಳಸುವುದು ಸುರಕ್ಷಿತ. ಚಂದ್ರಗ್ರಹಣ ಪ್ರಪಂಚದಾದ್ಯಂತ ಅನೇಕ ಸ್ಥಳಗಳಲ್ಲಿ ಜನರಿಗೆ ಗೋಚರಿಸುತ್ತದೆ. ಸರಿಯಾದ ಸಮಯದಲ್ಲಿ ಉತ್ತಮ ವೀಕ್ಷಣಾ ಸ್ಥಳಗಳನ್ನು ಅನುಸರಿಸುವ ಮೂಲಕ ಮತ್ತು ಪ್ರಾಯೋಗಿಕ ಸಲಹೆಗಳನ್ನು ಅನುಸರಿಸುವ ಮೂಲಕ ನೀವು ಈ ಖಗೋಳ ವಿದ್ಯಮಾನವನ್ನು ಸ್ಪಷ್ಟವಾಗಿ ವೀಕ್ಷಿಸಬಹುದು.

ಸೂತಕಾಲ ಮತ್ತು ಸಾಂಸ್ಕೃತಿಕ ಮಹತ್ವ: ಭಾರತದಲ್ಲಿ ಸೂತಕಾಲ (ಗ್ರಹಣದ ಮೊದಲು ಮತ್ತು ಸಮಯದಲ್ಲಿ ಕಂಡುಬರುವ ಅಶುಭ ಗಳಿಗೆ) ಗ್ರಹಣ ಪ್ರಾರಂಭವಾಗುವ 9 ಗಂಟೆಗಳ ಮೊದಲು ಪ್ರಾರಂಭವಾಗುತ್ತದೆ. ಈ ಸಮಯದಲ್ಲಿ ಅನೇಕ ಜನರು ತಿನ್ನುವುದು, ಅಡುಗೆ ಮಾಡುವುದು ಅಥವಾ ಶುಭ ಕಾರ್ಯಗಳನ್ನು ಮಾಡುವುದನ್ನು ತಪ್ಪಿಸುತ್ತಾರೆ. ಭಾರತದ ಹಲವಾರು ಭಾಗಗಳಲ್ಲಿನ ದೇವಾಲಯಗಳು ಸೂತ ಅವಧಿಯಲ್ಲಿ ಮುಚ್ಚಲ್ಪಟ್ಟಿರಬಹುದು ಮತ್ತು ಗ್ರಹಣ ಮುಗಿದ ನಂತರ ಶುದ್ಧೀಕರಣ ವಿಧಿಗಳನ್ನು ಮಾಡಿದ ನಂತರ ಮತ್ತೆ ತೆರೆಯಬಹುದು. ಅನೇಕ ಕುಟುಂಬಗಳಿಗೆ ಗ್ರಹಣವು ಆಧ್ಯಾತ್ಮಿಕವಾಗಿ ಪ್ರಬಲ ಸಮಯ ಎಂಬ ನಂಬಿಕೆ ಇದ್ದು, ಮಂತ್ರ ಪಠಿಸುವುದು, ಧ್ಯಾನ ಮಾಡುವುದು ಅಥವಾ ಉಪವಾಸ ಮಾಡುವುದರಲ್ಲಿ ತೊಡಗುತ್ತಾರೆ.

ಇದನ್ನೂ ಓದಿ: ಜಾಗತಿಕ ಮಾರುಕಟ್ಟೆಗೆ ಶಿಯೋಮಿ 17 ಸೀರಿಸ್: ಕ್ಯಾಮೆರಾಗೆ ಹೆಚ್ಚಿನ ಒತ್ತು?