ಬೆಂಗಳೂರಿನಲ್ಲಿ ಕವಾಸಕಿ Z300 ಅಬ್ಬರ: ನಿಂಜಾ 300 ಎಂಜಿನ್‌ನೊಂದಿಗೆ ಹೊಸ ನೇಕೆಡ್ ಬೈಕ್, ಮುಂದಿನ ವಾರದಿಂದ ಬುಕಿಂಗ್ ಓಪನ್
Kawasaki Z300 Launched India: ಕವಾಸಕಿ ತನ್ನ ಹೊಸ Z300 ನೇಕೆಡ್ ಬೈಕ್ ಅನ್ನು ಬೆಂಗಳೂರಿನಲ್ಲಿ ಅನಾವರಣಗೊಳಿಸಿದ್ದು, 296cc ಇಂಜಿನ್, TFT ಡಿಸ್ಪ್ಲೇ ಹೊಂದಿದ್ದು ಅಕ್ಟೋಬರ್ 19 ರಿಂದ ಬುಕಿಂಗ್ ಆರಂಭವಾಗಲಿದೆ.

Published : October 12, 2026 at 9:25 AM IST
Kawasaki Z300 Launched India: ದೇಶದ ಪ್ರೀಮಿಯಂ ಸ್ಪೋರ್ಟ್ಸ್ ಮೋಟಾರ್‌ಸೈಕಲ್ ಮಾರುಕಟ್ಟೆಯಲ್ಲಿ ಕವಾಸಕಿ ತನ್ನ ಸ್ಥಿತಿಯನ್ನು ಇನ್ನಷ್ಟು ಬಲಪಡಿಸಲು ಮುಂದಾಗಿದೆ. ಕಂಪನಿಯು ತನ್ನ ಹೊಸ ಸ್ಟ್ರೀಟ್-ನೇಕೆಡ್ ಬೈಕ್ ಕವಾಸಕಿ Z300 ಅನ್ನು ಭಾರತೀಯ ಗ್ರಾಹಕರಿಗಾಗಿ ಅನಾವರಣಗೊಳಿಸಿದೆ. ಈ ಮೋಟಾರ್‌ಸೈಕಲ್ ಅನ್ನು ಕಂಪನಿಯ ಜನಪ್ರಿಯ ಮಾಡೆಲ್ ಕವಾಸಕಿ ನಿಂಜಾ 300ರ ಪ್ಲಾಟ್‌ಫಾರ್ಮ್ ಮೇಲೆ ತಯಾರಿಸಲಾಗಿದೆ. ಕಂಪನಿಯ ಜನಪ್ರಿಯ Z ಲೈನಪ್‌ನಲ್ಲಿ ಇದು ಎಂಟ್ರಿ-ಲೆವೆಲ್ ಮಾಡೆಲ್ ಆಗಿ ಮಾರುಕಟ್ಟೆಗೆ ಬಂದಿದೆ. ಇದು ಬೈಕ್ ಪ್ರಿಯರನ್ನು ಸೆಳೆಯುವುದು ಖಚಿತ ಎನ್ನಬಹುದು.
ಬೆಂಗಳೂರಿನಲ್ಲಿ ಅದ್ಧೂರಿ ಪ್ರದರ್ಶನ: ಬೆಂಗಳೂರಿನಲ್ಲಿ ಆಯೋಜಿಸಿದ್ದ ವಿಶೇಷ ಕಾರ್ಯಕ್ರಮದಲ್ಲಿ ಕವಾಸಕಿ ತನ್ನ ಈ ಹೊಸ ಬೈಕ್ ಅನ್ನು ಪ್ರದರ್ಶಿಸಿದೆ. ಈ ಬೈಕ್‌ನ ಲುಕ್ ಬಹುತೇಕ ಕಂಪನಿಯ ದೊಡ್ಡ ಬೈಕ್ Z900 ನಂತೆ ಕಾಣುತ್ತದೆ. ಆದರೆ ಕಾರ್ಯಕ್ಷಮತೆಗಾಗಿ ಇದರಲ್ಲಿ 296ccಯ ಚಿಕ್ಕ ಲಿಕ್ವಿಡ್-ಕೂಲ್ಡ್ ಪ್ಯಾರಲೆಲ್-ಟ್ವಿನ್ ಇಂಜಿನ್ ಬಳಸಲಾಗಿದೆ. ಈ ಶಕ್ತಿಶಾಲಿ ಇಂಜಿನ್ 39hp ಗರಿಷ್ಠ ಪವರ್ ಮತ್ತು 26.1Nm ಪೀಕ್ ಟಾರ್ಕ್ ಉತ್ಪಾದಿಸುವ ಸಾಮರ್ಥ್ಯ ಹೊಂದಿದೆ. ಇದರ ಜೊತೆಗೆ ನಿಂಜಾ 300 ನಂತೆ ಇದರಲ್ಲಿಯೂ 6-ಸ್ಪೀಡ್ ಗೇರ್‌ಬಾಕ್ಸ್ ಸಪೋರ್ಟ್ ಅನ್ನು ನೀಡಲಾಗಿದೆ. ಇದು ರೈಡಿಂಗ್ ಅನ್ನು ಇನ್ನಷ್ಟು ಸ್ಮೂತ್ ಮಾಡುತ್ತದೆ.
ಆಧುನಿಕ ಡಿಸೈನ್ ಮತ್ತು ಫೀಚರ್ಸ್: ಡಿಸೈನ್ ದೃಷ್ಟಿಕೋನದಿಂದ ಈ ಬೈಕ್‌ನಲ್ಲಿ ಅಗಲವಾದ ಮತ್ತು ನೇರವಾದ ಸಿಂಗಲ್-ಪೀಸ್ ಹ್ಯಾಂಡಲ್‌ಬಾರ್ ನೀಡಲಾಗಿದೆ. ಇದು ಚಾಲಕನಿಗೆ ಆರಾಮದಾಯಕ ರೈಡಿಂಗ್ ಅನುಭವವನ್ನು ನೀಡುತ್ತದೆ. ಕವಾಸಕಿ ನಿಂಜಾ 300ರ ಹಳೆಯ ಸೆಮಿ-ಡಿಜಿಟಲ್ ಯೂನಿಟ್ ಬದಲಿಗೆ ಈ ಹೊಸ ಕವಾಸಕಿ Z300 ಮಾಡೆಲ್‌ನಲ್ಲಿ ಅತ್ಯಾಧುನಿಕ TFT ಇನ್ಸ್ಟ್ರುಮೆಂಟ್ ಕ್ಲಸ್ಟರ್ ಬಳಕೆ ಮಾಡಲಾಗಿದೆ. ಇದರಲ್ಲಿ ಸ್ಮಾರ್ಟ್‌ಫೋನ್ ಕನೆಕ್ಟಿವಿಟಿ ಜೊತೆಗೆ ಅನೇಕ ಹೊಸ ಸ್ಮಾರ್ಟ್ ಫೀಚರ್ಸ್ ಕೂಡ ಲಭ್ಯವಿದೆ.
ಕಂಪನಿಯು ಈ ಮೋಟಾರ್‌ಸೈಕಲ್ ಅನ್ನು ಮುಖ್ಯವಾಗಿ ಎರಡು ಆಕರ್ಷಕ ಬಣ್ಣದ ಆಯ್ಕೆಗಳಲ್ಲಿ ಮಾರುಕಟ್ಟೆಗೆ ತಂದಿದೆ. ಇದರಲ್ಲಿ ಗ್ರೀನ್ ಮತ್ತು ಬ್ಲ್ಯಾಕ್ ಬಣ್ಣಗಳು ಸೇರಿವೆ. Z ಸೀರಿಸ್ನ ಸಿಗ್ನೇಚರ್ ಸುಜಿ ಡಿಸೈನ್ ಈ ಬೈಕ್‌ನಲ್ಲಿಯೂ ಮುಂದುವರಿದಿದೆ. ನೇಕೆಡ್ ಸ್ಟ್ರೀಟ್‌ಫೈಟರ್ ಲುಕ್ ಯುವ ರೈಡರ್‌ಗಳನ್ನು ಗುರಿಯಾಗಿಸಿಕೊಂಡಿದೆ.
ಬುಕಿಂಗ್ ದಿನಾಂಕ ಮತ್ತು ಸಂಭಾವ್ಯ ಬೆಲೆ: ಪ್ರಾರಂಭಿಕ ಹಂತದಲ್ಲಿ ಕಂಪನಿಯು ಈ ಬೈಕ್ ಅನ್ನು ಮೊದಲು ಬೆಂಗಳೂರಿನಲ್ಲಿ ಪ್ರದರ್ಶಿಸಿದ್ದರೂ ಅಕ್ಟೋಬರ್ 18 ರಂದು ಇದನ್ನು ಮುಂಬೈ ಮತ್ತು ಪುಣೆಯಲ್ಲಿಯೂ ಪ್ರದರ್ಶಿಸಲಾಗುವುದು. ಈ ಬೈಕ್‌ನ ಅಧಿಕೃತ ಬುಕಿಂಗ್ ಅಕ್ಟೋಬರ್ 19 ರಿಂದ ಆರಂಭವಾಗಲಿದೆ. ಇದರ ಎಲ್ಲಾ ತಾಂತ್ರಿಕ ಮಾಹಿತಿ, ವೇರಿಯಂಟ್ ಮತ್ತು ಬೆಲೆಯ ಬಗ್ಗೆ ಅಕ್ಟೋಬರ್ 20 ರಂದು ಕವಾಸಕಿಯ ಅಧಿಕೃತ ವೆಬ್‌ಸೈಟ್‌ನಲ್ಲಿ ಘೋಷಣೆ ಮಾಡಲಾಗುವುದು.
ಕವಾಸಕಿ ಇಂಡಿಯಾ ವೆಬ್‌ಸೈಟ್ ಪ್ರಕಾರ ನಿಂಜಾ 300ರ ಎಕ್ಸ್-ಶೋರೂಮ್ ಬೆಲೆ 3.34 ಲಕ್ಷ ರೂಪಾಯಿ ಇದೆ. ಹೊಸ Z300 ಒಂದು ನೇಕೆಡ್ ಸ್ಟ್ರೀಟ್‌ಫೈಟರ್ ಬೈಕ್ ಆಗಿರುವುದರಿಂದ ಮತ್ತು ಇದರಲ್ಲಿ ಹೆಚ್ಚಿನ ಬಾಡಿ-ವರ್ಕ್ ಇಲ್ಲದ ಕಾರಣ ಹೊಸ ಎಲೆಕ್ಟ್ರಾನಿಕ್ಸ್ ಫೀಚರ್ಸ್ ಇದ್ದರೂ ಕಂಪನಿ ಇದರ ಬೆಲೆಯನ್ನು 3 ಲಕ್ಷ ರೂಪಾಯಿಗಿಂತ ಕಡಿಮೆ ಇಡಬಹುದು ಎಂದು ಅಂದಾಜಿಸಲಾಗಿದೆ.
ಸ್ಪರ್ಧೆ ಯಾರ ಜೊತೆ?: ಮಾರುಕಟ್ಟೆಯಲ್ಲಿ ಇದು KTM 390 Duke ಮತ್ತು TVS Apache RTR 310 ನಂತಹ ಬೈಕ್‌ಗಳಿಗೆ ಕಠಿಣ ಸವಾಲು ನೀಡಲಿದೆ. 300cc ವಿಭಾಗದಲ್ಲಿ ಪ್ರೀಮಿಯಂ ನೇಕೆಡ್ ಬೈಕ್ ಹುಡುಕುತ್ತಿರುವವರಿಗೆ ಇದು ಉತ್ತಮ ಆಯ್ಕೆಯಾಗಲಿದೆ. ಕವಾಸಕಿ ಬ್ರಾಂಡ್ ವ್ಯಾಲ್ಯೂ ಮತ್ತು ಜಪಾನೀಸ್ ಎಂಜಿನ್ ವಿಶ್ವಾಸಾರ್ಹತೆ ಇದರ ಪ್ಲಸ್ ಪಾಯಿಂಟ್ ಆಗಲಿದೆ.
ಓದಿ: ಭಾರತದಲ್ಲಿ EV ಹವಾ ಜೋರು: ಸೆಪ್ಟೆಂಬರ್‌ನಲ್ಲಿ 95% ಮಾರಾಟ ಜಿಗಿತ, ಟಾಟಾ ಮತ್ತೆ ಮಾರುಕಟ್ಟೆ ಲೀಡರ್!

