ಇನ್ಸ್ಟಾಗ್ರಾಂನಲ್ಲಿ ಹಬ್ಬದ ವೈಬ್ಸ್! ದೀಪದ ಬೆಳಕಿನಲ್ಲಿ ನಿಮ್ಮ ಫೋಟೋಗಳು, ವಿಡಿಯೋಗಳು ‘ರೀಸ್ಟೈಲ್’!
Diwali Filters On Instagram: ದೀಪಾವಳಿ ಭಾರತದ ಅತ್ಯಂತ ಜನಪ್ರಿಯ ಹಬ್ಬಗಳಲ್ಲಿ ಒಂದಾಗಿದೆ. ಈ ವರ್ಷ ದೀಪಾವಳಿಯನ್ನು ವಿಶೇಷವಾಗಿಸಲು ಇನ್ಸ್ಟಾಗ್ರಾಂ ತನ್ನ ಭಾರತೀಯ ಬಳಕೆದಾರರಿಗಾಗಿ ಕೆಲವು ವಿಶೇಷ ವೈಶಿಷ್ಟ್ಯಗಳನ್ನು ಪರಿಚಯಿಸಿದೆ. ಅವುಗಳ ವಿವರ ಇಲ್ಲಿದೆ..

Published : October 18, 2025 at 7:51 AM IST
Diwali Filters On Instagram: ಇನ್ಸ್ಟಾಗ್ರಾಂನಲ್ಲಿ ಮೆಟಾ ದೀಪಾವಳಿ-ವಿಷಯದ ವಿಶೇಷ ಪರಿಣಾಮಗಳನ್ನು ಬಿಡುಗಡೆ ಮಾಡಿದೆ. ಈ ಅಪ್ಡೇಟ್ ನಿಮ್ಮ ಫೋಟೋಗಳು ಮತ್ತು ವಿಡಿಯೋಗಳಿಗೆ ಬೇರೆ ಯಾವುದೇ ಅಪ್ಲಿಕೇಶನ್ ಅನ್ನು ತೆರೆಯದೆಯೇ ಹಬ್ಬದ ಸ್ಪರ್ಶವನ್ನು ನೀಡುತ್ತದೆ. ಈಗ ನೀವು ಇನ್ಸ್ಟಾಗ್ರಾಂನಲ್ಲಿ ನಿಮ್ಮ ಸ್ಟೋರಿಗಳು ಮತ್ತು ವಿಡಿಯೋಗಳಿಗೆ ಪಟಾಕಿಗಳು, ದೀಪಗಳು ಮತ್ತು ರಂಗೋಲಿ ದೀಪಗಳನ್ನು ಸೇರಿಸಬಹುದು. ಇದಕ್ಕಾಗಿ ಬಳಕೆದಾರರು ಇನ್ಸ್ಟಾಗ್ರಾಂ "Restyle" ವೈಶಿಷ್ಟ್ಯವನ್ನು ಬಳಸಬೇಕಾಗುತ್ತದೆ.
"Restyle" ವೈಶಿಷ್ಟ್ಯವೇನು?: ಈ ವರ್ಷ ನಿಮ್ಮ ದೀಪಾವಳಿಯನ್ನು ವಿಶೇಷವಾಗಿಸಲು ಇನ್ಸ್ಟಾಗ್ರಾಂ ಎಲ್ಲಾ ಪ್ರಯತ್ನಗಳನ್ನು ಮಾಡಿದೆ. ಈ ಬಾರಿ ಇದು "Restyle" ವೈಶಿಷ್ಟ್ಯದ ಮೂಲಕ ತನ್ನ ಅಪ್ಲಿಕೇಶನ್‌ಗೆ ದೀಪಾವಳಿ ಸ್ಪರ್ಶವನ್ನು ಸೇರಿಸಿದೆ. ಈ "Restyle" ಮೆಟಾ AI ನಿಂದ ಒಂದು ಅನನ್ಯ, ಸೃಜನಶೀಲ ಸಾಧನವಾಗಿದೆ. ಇದು ನಿಮ್ಮ ಕಂಟೆಂಟ್ಗೆ (ಫೋಟೋಗಳು ಅಥವಾ ವಿಡಿಯೋಗಳು) ಹೊಸ ಲುಕ್ ನೀಡಲು AI ಅನ್ನು ಬಳಸುತ್ತದೆ. ಹೀಗಾಗಿ ನಿಮ್ಮ ಪೋಸ್ಟ್‌ಗಳಿಗೆ ಹಬ್ಬದ ವಾತಾವರಣವನ್ನು ನೀಡುತ್ತದೆ.
ಇನ್ಸ್ಟಾಗ್ರಾಂನಲ್ಲಿ ದೀಪಾವಳಿ ವೈಬ್: ಈ ದೀಪಾವಳಿ ಹಬ್ಬಕ್ಕಾಗಿ ಮೆಟಾ 6 ವಿಶೇಷ ಪರಿಣಾಮಗಳನ್ನು ಬಿಡುಗಡೆ ಮಾಡಿದೆ. ಅವುಗಳ ವಿವರಗಳು ಹೀಗಿವೆ..
ಫೋಟೋಗಳಿಗಾಗಿ:
- Fireworks (ಪಟಾಕಿಗಳ ನೋಟ)
- Diyas (ದೀಪಗಳು)
- Rangoli (ವರ್ಣರಂಜಿತ ವಿನ್ಯಾಸಗಳು)
ವಿಡಿಯೋಗಳಿಗಾಗಿ:
- Lanterns (ಹಾರುವ ದೀಪಗಳು)
- Marigold (ಸೇವಂತಿ ಹೂವಿನ ಅಲಂಕಾರಗಳು)
- Rangoli (ದೀಪಾವಳಿ-ಥೀಮ್)
ಈ ಪ್ರತಿಯೊಂದು ಪರಿಣಾಮಗಳು ದೀಪಾವಳಿಯ ಸಂಪ್ರದಾಯಗಳು ಮತ್ತು ವರ್ಣರಂಜಿತ ಸಂಸ್ಕೃತಿಯಿಂದ ಪ್ರೇರಿತವಾಗಿವೆ. ಇದು ನಿಮ್ಮ ಕಂಟೆಂಟ್ಗೆ ಹೆಚ್ಚಿನ ಉತ್ಸಾಹವನ್ನು ನೀಡುತ್ತದೆ.
ಈ ವೈಶಿಷ್ಟ್ಯವನ್ನು ಬಳಸುವುದು ಹೇಗೆ?: ನಿಮ್ಮ ಸ್ಟೋರೀಸ್ಗೆ ದೀಪಾವಳಿ ಲುಕ್ ಸೇರಿಸಲು ಈ ಹಂತಗಳನ್ನು ಅನುಸರಿಸಿ.
- ಇದಕ್ಕಾಗಿ ಮೊದಲು ನಿಮ್ಮ ಇನ್ಸ್ಟಾಗ್ರಾಂ ಅಪ್ಲಿಕೇಶನ್ ಓಪನ್ ಮಾಡಿ ಮತ್ತು "+" ಮೇಲೆ ಟ್ಯಾಪ್ ಮಾಡಿ.
- ನಂತರ ನಿಮ್ಮ ಗ್ಯಾಲರಿಯಿಂದ ಫೋಟೋ ಅಥವಾ ವಿಡಿಯೋವನ್ನು ಆಯ್ಕೆಮಾಡಿ.
- ನಂತರ ಮೇಲಿನ ಬಾರ್‌ನಲ್ಲಿ ಗೋಚರಿಸುವ Restyle ಐಕಾನ್ (ಪೇಂಟ್ ಬ್ರಷ್) ಮೇಲೆ ಕ್ಲಿಕ್ ಮಾಡಿ.
- ಈಗ ಎಫೆಕ್ಟ್ಸ್ ಬ್ರೌಸರ್‌ಗೆ ಹೋಗಿ ದೀಪಾವಳಿ ಎಫೆಕ್ಟ್ಗಳನ್ನು ಆಯ್ಕೆಮಾಡಿ (Fireworks, Diyas, Rangoli)
- ಬಳಿಕ ನಿಮ್ಮ ಸ್ಟೋರಿಯನ್ನು ಪೋಸ್ಟ್ ಮಾಡಲು Done ಆಪ್ಶನ್ ಮೇಲೆ ಕ್ಲಿಕ್ ಮಾಡಿ..
ಎಡಿಟ್ಸ್ ಅಪ್ಲಿಕೇಶನ್‌ನಲ್ಲಿ ದೀಪಾವಳಿ ಆವೃತ್ತಿ: ನೀವು ವಿಡಿಯೋಗಳನ್ನು ಎಡಿಟ್ ಮಾಡಲು ಬಯಸಿದರೆ, ಮೆಟಾ "ಎಡಿಟ್ಸ್ ಅಪ್ಲಿಕೇಶನ್" ನಿಮಗೆ ಸೂಕ್ತವಾಗಿದೆ. ದೀಪಾವಳಿ ಪರಿಣಾಮಗಳನ್ನು ಈಗ "Restyle" ಗೆ ಸೇರಿಸಲಾಗಿದೆ. ಅದನ್ನು ಬಳಸಲು ಕೆಳಗಿನ ಹಂತಗಳನ್ನು ಅನುಸರಿಸಿ.
- ಇದಕ್ಕಾಗಿ Edits ಅಪ್ಲಿಕೇಶನ್ ಓಪನ್ ಮಾಡಿ "+" ಮೇಲೆ ಟ್ಯಾಪ್ ಮಾಡುವ ಮೂಲಕ ಹೊಸ ಪ್ರಾಜೆಕ್ಟ್ ಅನ್ನು ರಚಿಸಿ.
- ಈಗ ವಿಡಿಯೋವನ್ನು ಆಯ್ಕೆಮಾಡಿ (Reels, Camera, Gallery).
- ವಿಡಿಯೋ ಟೈಮ್‌ಲೈನ್‌ನಲ್ಲಿ ಗೋಚರಿಸುತ್ತದೆ, ಅದರ ಮೇಲೆ ಕ್ಲಿಕ್ ಮಾಡಿ.
- ಈಗ ಕೆಳಗೆ ಸ್ಕ್ರಾಲ್ ಮಾಡಿ ಮತ್ತು Restyle ಮೇಲೆ ಟ್ಯಾಪ್ ಮಾಡಿ.
- ದೀಪಾವಳಿ ಶೀರ್ಷಿಕೆಯ ಅಡಿಯಲ್ಲಿ ಹೋಗಿ Lanterns, Marigold ಅಥವಾ Rangoli ಅನ್ನು ಆಯ್ಕೆಮಾಡಿ.
- ನೀವು ಎಡಿಟ್ ಅನ್ನು ಪೂರ್ಣಗೊಳಿಸಿದ ನಂತರ, Export ಮಾಡಿ. ವಿಡಿಯೋ Export ಆದ ಬಳಿಕ ಪೋಸ್ಟ್ ಮಾಡಿ.
ಈ ಎಫೆಕ್ಟ್ಗಳು ಎಲ್ಲಿಯವರೆಗೆ ಲಭ್ಯ?: ಈ ಹಬ್ಬದ ಎಫೆಕ್ಟ್ಗಳು ಅಕ್ಟೋಬರ್ 29 ಕ್ಕೆ ಸೀಮಿತವಾಗಿವೆ. ಅಂದರೆ, ಕೇವಲ ಎರಡು ವಾರಗಳು. ಅವು ಭಾರತದಲ್ಲಿ ಮಾತ್ರವಲ್ಲದೆ ಅಮೆರಿಕ, ಕೆನಡಾ, ಸಿಂಗಾಪುರ ಮತ್ತು ಆಸ್ಟ್ರೇಲಿಯಾದಲ್ಲಿಯೂ ಲಭ್ಯವಿದೆ. ಈ ದೀಪಾವಳಿಯಲ್ಲಿ ನೀವು Instagram ನಲ್ಲಿ ಪೋಸ್ಟ್ ಅಥವಾ ರೀಲ್ ಅನ್ನು ಹಂಚಿಕೊಳ್ಳಲು ಬಯಸಿದರೆ ಈ ಎಫೆಕ್ಟ್ಗಳನ್ನು ಬಳಸುವುದರಿಂದ ನಿಮ್ಮ ಸ್ಟೋರಿಗಳಿಗೆ ಹೆಚ್ಚು ರೋಮಾಂಚಕ ವೈಬ್ ಸಿಗುತ್ತದೆ.
ರೇ-ಬ್ಯಾನ್ ಮೆಟಾ ಗ್ಲಾಸ್: ಮತ್ತೊಂದೆಡೆ ಮೆಟಾ ತನ್ನ "ರೇ-ಬ್ಯಾನ್ ಮೆಟಾ ಗ್ಲಾಸ್"ಗಳಿಗೆ ದೀಪಾವಳಿ ವೈಬ್‌ಗಳನ್ನು ಕೂಡ ಸೇರಿಸಿದೆ. ಇದರೊಂದಿಗೆ ನೀವು ಈಗ ನಿಮ್ಮ ಕನ್ನಡಕದಿಂದ ತೆಗೆದ ಫೋಟೋಗಳನ್ನು ದೀಪಾವಳಿ-ಕಂಟೆಂಟ್ ಲುಕ್ನೊಂದಿಗೆ Restyle ಮಾಡಬಹುದು. ಇದು ವರ್ಣರಂಜಿತ ರಂಗೋಲಿಗಳು, ಪಟಾಕಿಗಳು ಮತ್ತು ದೀಪಗಳನ್ನು ಒಳಗೊಂಡಿದೆ. ನೀವು ಮಾಡಬೇಕಾಗಿರುವುದು Hey Meta, Restyle this" ಎಂಬ ಆರ್ಡರ್ ನೀಡುವುದು. ಮೆಟಾ AI ತಕ್ಷಣವೇ ನಿಮ್ಮ ಫೋಟೋವನ್ನು ದೀಪಾವಳಿ ಥೀಮ್‌ನೊಂದಿಗೆ Restyle ಮಾಡುತ್ತದೆ.
ಓದಿ: ಮೆಟಾ ಎಐ ಸ್ಮಾರ್ಟ್ಗ್ಲಾಸ್ಗೆ ದೀಪಿಕಾ ಧ್ವನಿ; ಹಿಂದಿಯಲ್ಲೂ ವಾಯ್ಸ್ ಕಮಾಂಡ್

