ವಾಟ್ಸ್ಆ್ಯಪ್, ಅರಟ್ಟೈಗೆ ಟಕ್ಕರ್ ಕೊಡಲು ಎಲೋನ್ ಮಸ್ಕ್ ಸಜ್ಜು!: XChat ಆರಂಭಿಸಿದ ಬಿಲಿಯನೇರ್
XChat: ಎಲಾನ್ ಮಸ್ಕ್ ಅವರು X ಪ್ಲಾಟ್‌ಫಾರ್ಮ್‌ನಲ್ಲಿ ಸಂದೇಶ ಕಳುಹಿಸುವ ಸೇವೆಯಾದ XChat ಅನ್ನು ಪರಿಚಯಿಸಿದ್ದಾರೆ. ಇದು ಯಾವರೀತಿ ಕೆಲಸ ಮಾಡುತ್ತದೆ ಎಂಬ ವಿವರ ಇಲ್ಲಿದೆ..

Published : November 18, 2025 at 8:29 AM IST
XChat: ವಾಟ್ಸ್ಆ್ಯಪ್ ಮತ್ತು ಅರಟ್ಟೈಗೆ (Arattai) ಕಠಿಣ ಸ್ಪರ್ಧೆ ನೀಡಲು ಎಲೋನ್ ಮಸ್ಕ್ ತಮ್ಮ ಸಾಮಾಜಿಕ ಮಾಧ್ಯಮ ವೇದಿಕೆಯಾದ ಎಕ್ಸ್‌ನಲ್ಲಿ XChat ಅನ್ನು ಪ್ರಾರಂಭಿಸಿದ್ದಾರೆ. ಇದು ಜನಪ್ರಿಯ ಸಂದೇಶ ವೇದಿಕೆಗಳಾದ ವಾಟ್ಸ್ಆ್ಯಪ್ ಮತ್ತು ಅರಟ್ಟೈಗೆ ಕಠಿಣ ಸವಾಲನ್ನು ಒಡ್ಡಲಿದೆ. ಎಕ್ಸ್ ಚಾಟ್‌ನ ಪ್ರಮುಖ ವೈಶಿಷ್ಟ್ಯಗಳಲ್ಲಿ ಎಂಡ್-ಟು-ಎಂಡ್ ಎನ್‌ಕ್ರಿಪ್ಶನ್, ಸಂದೇಶಗಳನ್ನು ಎಡಿಟ್ ಅಥವಾ ಡಿಲೀಟ್ ಮಾಡುವ ಸಾಮರ್ಥ್ಯ ಮತ್ತು ಸ್ಕ್ರೀನ್‌ಶಾಟ್ ನಿರ್ಬಂಧಿಸುವಿಕೆ ಸೇರಿದಂತೆ ಅನೇಕ ಟೂಲ್ಗಳು ಸೇರಿವೆ.
ಎಲೋನ್ ಮಸ್ಕ್ ಈ ಮಾಹಿತಿಯನ್ನು ಎಕ್ಸ್‌ನಲ್ಲಿ ಪೋಸ್ಟ್ ಮಾಡುವ ಮೂಲಕ ಹಂಚಿಕೊಂಡಿದ್ದಾರೆ. ಎಕ್ಸ್ ಮನಿ ಶೀಘ್ರದಲ್ಲೇ ಬಿಡುಗಡೆಯಾಗಲಿದ್ದು, ಎಕ್ಸ್ ಅನ್ನು ಎವೆರಿಥಿಂಗ್ ಅಪ್ಲಿಕೇಶನ್ ಮಾಡಲು ಬಯಸುತ್ತೇನೆ ಎಂದು ಅವರು ಹೇಳಿದ್ದಾರೆ.
ನಿಮ್ಮ ಸಂದೇಶಗಳನ್ನು ಯಾರೂ ಓದಲು ಸಾಧ್ಯವಾಗುವುದಿಲ್ಲ: ಎನ್‌ಕ್ರಿಪ್ಟ್ ಮಾಡಿದ ಸಂದೇಶ ಕಳುಹಿಸುವಿಕೆ, ಆಡಿಯೊ-ವಿಡಿಯೋ ಕರೆಗಳು ಮತ್ತು ಫೈಲ್ ವರ್ಗಾವಣೆಗಳೊಂದಿಗೆ ಎಕ್ಸ್ ಹೊಸ ಸೇವೆಯನ್ನು ಪ್ರಾರಂಭಿಸಿದೆ. ಎಕ್ಸ್ ಅನ್ನು ಎವೆರಿಥಿಂಗ್ ಅಪ್ಲಿಕೇಶನ್ ಮಾಡುವ ಗುರಿಯೊಂದಿಗೆ ಎಕ್ಸ್ ಮನಿ ಶೀಘ್ರದಲ್ಲೇ ಎಕ್ಸ್‌ನಲ್ಲಿ ಬಿಡುಗಡೆಯಾಗಲಿದೆ. ಇದರರ್ಥ ಎಕ್ಸ್ ಅನ್ನು ಸಾಮಾಜಿಕ ಮಾಧ್ಯಮಕ್ಕೆ ಮಾತ್ರವಲ್ಲದೇ ಹಣದ ವಹಿವಾಟುಗಳಿಗೂ ಬಳಸಬಹುದು ಎಂದು ಎಲೋನ್ ಮಸ್ಕ್ ಮಾಹಿತಿ ನೀಡಿದ್ದಾರೆ. ಇದು ಅರಟ್ಟೈ ಮತ್ತು ವಾಟ್ಸಾಪ್‌ನಂತೆಯೇ ಕಾರ್ಯನಿರ್ವಹಿಸಲಿದೆ.
ಗೌಪ್ಯತೆಗೆ ಹೆಚ್ಚಿನದ ಒತ್ತು!: X ಚಾಟ್‌ನಲ್ಲಿ ಗೌಪ್ಯತೆ ಅತ್ಯಂತ ಮುಖ್ಯ. ಎಲ್ಲಾ ಚಾಟ್‌ಗಳು ಮತ್ತು ಹಂಚಿಕೊಂಡ ಫೈಲ್‌ಗಳು ಎಂಡ್-ಟು-ಎಂಡ್ ಎನ್‌ಕ್ರಿಪ್ಟ್ ಆಗಿರುತ್ತವೆ. ಇದರರ್ಥ ಕಳುಹಿಸುವವರು ಮತ್ತು ಸ್ವೀಕರಿಸುವವರನ್ನು ಹೊರತುಪಡಿಸಿ ಬೇರೆ ಯಾರೂ ಸಂದೇಶಗಳನ್ನು ಓದಲು ಸಾಧ್ಯವಾಗುವುದಿಲ್ಲ. ಎಕ್ಸ್ನ ಹೆಲ್ಪ್ ಸೆಂಟರ್ ಪ್ರಕಾರ, ಗ್ರೂಪ್ ಮೆಸೇಜ್ಗಳು ಮತ್ತು ಮಿಡಿಯಾವನ್ನು ಈಗ ಮೊದಲಿಗಿಂತ ಭಿನ್ನವಾಗಿ ಎನ್‌ಕ್ರಿಪ್ಟ್ ಮಾಡಬಹುದಾಗಿದೆ ಎಂದು ಹೇಳಿದೆ.
ಎಡಿಟ್ ಮೆಸೇಜ್ಗಳ ಯಾವುದೇ ಲೇಬಲ್ ಮಾಡಲಾಗುವುದಿಲ್ಲ: ಎಲಾನ್ ಮಸ್ಕ್ ಅವರ ಹೊಸ ಸಂದೇಶ ಸೇವೆಯು ಬಳಕೆದಾರರಿಗೆ ಸಂದೇಶಗಳನ್ನು ಕಳುಹಿಸಿದ ನಂತರ ಅವುಗಳನ್ನು ಎಡಿಟ್ ಮಾಡಲು ಮತ್ತು ಡಿಲೀಟ್ ಮಾಡಲು ಅನುಮತಿಸುತ್ತದೆ. ಆದರೆ, ಡಿಲೀಟ್ ಸಂದೇಶಗಳನ್ನು ಲೇಬಲ್ ಮಾಡಲಾಗುವುದಿಲ್ಲ. ಇದರರ್ಥ ನೀವು ಆ ಮೆಸೇಜ್ಗಳನ್ನು ಡಿಲೀಟ್ ಮಾಡಿರುವುದಾಗಿ ಚಾಟ್‌ನಲ್ಲಿ ತಿಳಿದುಬರುವುದಿಲ್ಲ.
ಎಕ್ಸ್ಚಾಟ್ನಲ್ಲಿ ಸ್ಕ್ರೀನ್‌ಶಾಟ್‌ಗಳನ್ನು ಸಹ ನಿರ್ಬಂಧಿಸಬಹುದು. ಚಾಟ್‌ಗಳನ್ನು ಖಾಸಗಿಯಾಗಿಡಲು, ಬಳಕೆದಾರರು ಸ್ಕ್ರೀನ್‌ಶಾಟ್‌ಗಳನ್ನು ನಿಷ್ಕ್ರಿಯಗೊಳಿಸುವ ಆಯ್ಕೆಯನ್ನು ಹೊಂದಿರುತ್ತಾರೆ. ಇದಲ್ಲದೇ ಯಾರಾದರೂ ನಿಮ್ಮ ಡೈರೆಕ್ಟ್ ಮೆಸೇಜ್ಗಳು (DM) ಅಥವಾ ಗುಂಪು ಚಾಟ್‌ಗಳ ಸ್ಕ್ರೀನ್‌ಶಾಟ್ ತೆಗೆದುಕೊಳ್ಳಲು ಪ್ರಯತ್ನಿಸಿದರೆ ನೀವು ನೋಟಿಫಿಕೇಶನ್ ಸ್ವೀಕರಿಸುತ್ತೀರಿ.
X ಚಾಟ್‌ನಲ್ಲಿ ಜಾಹೀರಾತುಗಳು ಇಲ್ಲ: X ಚಾಟ್ ಜಾಹೀರಾತುಗಳಿಂದ ಮುಕ್ತವಾಗಿರುತ್ತದೆ ಮತ್ತು ಬಳಕೆದಾರರ ಡೇಟಾವನ್ನು ಟ್ರ್ಯಾಕ್ ಮಾಡಲಾಗುವುದಿಲ್ಲ. X ಚಾಟ್ ಮತ್ತು ಹಿಂದಿನ DM ಗಳು ಒಂದೇ ಸ್ಥಳದಲ್ಲಿ ಲಭ್ಯವಿರುತ್ತವೆ. ವಾಯ್ಸ್ ಮೆಮೊಗಳಿಗೆ ಬೆಂಬಲವನ್ನು ಶೀಘ್ರದಲ್ಲೇ X ಚಾಟ್‌ಗೆ ಸೇರಿಸಲಾಗುತ್ತದೆ. X ಚಾಟ್ ಪ್ರಸ್ತುತ iOS ಮತ್ತು ವೆಬ್‌ನಲ್ಲಿ X ಸಾಮಾಜಿಕ ಮಾಧ್ಯಮ ವೇದಿಕೆಯ DM ಗಳ ವಿಭಾಗದ ಮೂಲಕ ಲಭ್ಯವಿದೆ. ಸಂದೇಶ ಸೇವೆಯನ್ನು ಶೀಘ್ರದಲ್ಲೇ ಆಂಡ್ರಾಯ್ಡ್‌ನಲ್ಲಿ ಪ್ರಾರಂಭಿಸಲಾಗುವುದು ಎಂದು ಕಂಪನಿ ಹೇಳುತ್ತದೆ.
ಎಕ್ಸ್ಚಾಟ್ನ ಪ್ರಮುಖ ಲಕ್ಷಣಗಳು
- ಎಂಡ್-ಟು-ಎಂಡ್ ಎನ್‌ಕ್ರಿಪ್ಶನ್: ಇದು ಬಳಕೆದಾರರ ಚಾಟ್‌ಗಳನ್ನು ಸಂಪೂರ್ಣವಾಗಿ ಸುರಕ್ಷಿತವಾಗಿಸುತ್ತದೆ.
- ಮೆಸೇಜ್ಗಳು ಕಣ್ಮೆರೆ: ನಿರ್ದಿಷ್ಟ ಸಮಯದ ನಂತರ ಸಂದೇಶಗಳು ಆಟೋಮೆಟಿಕ್ ಆಗಿ ಕಣ್ಮರೆಯಾಗುತ್ತವೆ. ಆದರೆ ಬಳಕೆದಾರರು ಇದಕ್ಕಾಗಿ ಟೈಮರ್ ಅನ್ನು ಹೊಂದಿಸಬಹುದು.
- ಫೈಲ್ ಶೇರಿಂಗ್: ಈ ಮೆಸೇಜಿಂಗ್ ಪ್ಲಾಟ್ಫಾರ್ಮ್ ಮೂಲಕ ನೀವು ಯಾವುದೇ ರೀತಿಯ ಫೈಲ್ ಅನ್ನು ಹಂಚಿಕೊಳ್ಳಬಹುದು.
- ಆಡಿಯೊ ಮತ್ತು ವಿಡಿಯೋ ಕರೆ: ಬಳಕೆದಾರರು ಫೋನ್ ಸಂಖ್ಯೆ ಇಲ್ಲದೆ ಕರೆಗಳನ್ನು ಮಾಡಬಹುದು.
ಯಾರಿಗೆಲ್ಲ ಲಭ್ಯವಿದೆ?: XChat ಎಲ್ಲಾ X ಬಳಕೆದಾರರಿಗೆ ಲಭ್ಯವಿದೆ. ಆದರೆ ಪ್ರೀಮಿಯಂ ಬಳಕೆದಾರರು ಮಾತ್ರ ಕೆಲವು ವಿಶೇಷ ವೈಶಿಷ್ಟ್ಯಗಳನ್ನು ಬಳಸಬಹುದು. ಎಲೋನ್ ಮಸ್ಕ್ X ಅನ್ನು ಖರೀದಿಸಿದಾಗಿನಿಂದ ಅವರು ಅದನ್ನು ಸೂಪರ್ ಅಪ್ಲಿಕೇಶನ್ ಆಗಿ ಅಭಿವೃದ್ಧಿಪಡಿಸುತ್ತಿದ್ದಾರೆ. ಅವರು ಎಕ್ಸ್ಗೆ ಒಂದರ ನಂತರ ಒಂದರಂತೆ ಹೊಸ ವೈಶಿಷ್ಟ್ಯಗಳನ್ನು ಸೇರಿಸುತ್ತಿದ್ದಾರೆ.
ಓದಿ: ‘ಎಐ’ ಅಲ್ಲ! ಅದಕ್ಕಿಂತ ಮಿಗಿಲಾದ ದೊಡ್ಡ ಬಿಕ್ಕಟ್ಟನ್ನು ನಾವು ಮರೆಯುತ್ತಿದ್ದೇವೆ: ಆನಂದ್ ಮಹೀಂದ್ರಾ

