ETV Bharat / technology

ದೊಡ್ಡ ಹೆಜ್ಜೆಯತ್ತ ಭಾರತದ ಖಾಸಗಿ ಬಾಹ್ಯಾಕಾಶ ವಲಯ! PSLV-C62 ಇಂದ ಉಡಾವಣೆಯಾಗಲಿದೆ 10 ಉಪಗ್ರಹಗಳು!

Dhruva Space: ಧ್ರುವ ಸ್ಪೇಸ್‌ನ ಪೋಲಾರ್ ಆಕ್ಸೆಸ್-1 ಮಿಷನ್ PSLV-C62 ಮೂಲಕ 10 ಉಪಗ್ರಹಗಳನ್ನು ಉಡಾವಣೆ ಮಾಡುವ ಮೂಲಕ ಭಾರತದ ಖಾಸಗಿ ಬಾಹ್ಯಾಕಾಶ ವಲಯಕ್ಕೆ ಹೊಸ ಉತ್ತೇಜನ ನೀಡಲಿದೆ. ಈ ಬಗ್ಗೆ ಇಲ್ಲಿದೆ ಮಾಹಿತಿ..

INDIAN PRIVATE SPACE COMPANY  CUBESAT LAUNCH INDIA  POLAR ACCESS 1 MISSION  PSLV C62 LAUNCH
ದೊಡ್ಡ ಹೆಜ್ಜೆಯತ್ತ ಭಾರತದ ಖಾಸಗಿ ಬಾಹ್ಯಾಕಾಶ ವಲಯ! (Photo Credit: Dhruva Space)
author img

By ETV Bharat Tech Team

Published : January 10, 2026 at 8:20 AM IST

2 Min Read
Choose ETV Bharat

Dhruva Space: ಭಾರತದ ಖಾಸಗಿ ಬಾಹ್ಯಾಕಾಶ ಕ್ಷೇತ್ರದ ಸಾಧನೆಗಳನ್ನು ಭಾರತ ಮತ್ತು ಜಗತ್ತು ನೋಡುವ ಸಮಯ ಈಗ ಬರುತ್ತಿದೆ. ಭಾರತದ ಖಾಸಗಿ ಬಾಹ್ಯಾಕಾಶ ವಲಯವು ನಿರಂತರವಾಗಿ ಹೊಸ ಎತ್ತರವನ್ನು ಏರುತ್ತಿದೆ. ಪ್ರಸ್ತುತ ಹೈದರಾಬಾದ್ ಮೂಲದ ಬಾಹ್ಯಾಕಾಶ ತಂತ್ರಜ್ಞಾನ ಕಂಪನಿ ಧ್ರುವ ಸ್ಪೇಸ್ ಮಹತ್ವದ ಘೋಷಣೆಯೊಂದನ್ನು ಮಾಡಿದೆ.

ಜನವರಿ 8ರಂದು ನಡೆದ ಸುದ್ದಿಗೋಷ್ಠಿಯಲ್ಲಿ, ಕಂಪನಿಯು ಇಲ್ಲಿಯವರೆಗಿನ ತನ್ನ ಅತ್ಯಂತ ಮಹತ್ವದ ಉಡಾವಣಾ ಕಾರ್ಯಕ್ರಮವನ್ನು ಪೋಲಾರ್ ಆಕ್ಸೆಸ್-1 (PA-1) ಎಂದು ಘೋಷಿಸಿತು. ಈ ಮಿಷನ್ ಆರು ಭಾರತೀಯ ರಾಜ್ಯಗಳು ಮತ್ತು ಎರಡು ದೇಶಗಳನ್ನು ಸಂಪರ್ಕಿಸುವ 10 ಬಾಹ್ಯಾಕಾಶ ಕಾರ್ಯಾಚರಣೆಗಳನ್ನು ಏಕಕಾಲದಲ್ಲಿ ಪ್ರಾರಂಭಿಸಲಿದೆ.

INDIAN PRIVATE SPACE COMPANY  CUBESAT LAUNCH INDIA  POLAR ACCESS 1 MISSION  PSLV C62 LAUNCH
ದೊಡ್ಡ ಹೆಜ್ಜೆಯತ್ತ ಭಾರತದ ಖಾಸಗಿ ಬಾಹ್ಯಾಕಾಶ ವಲಯ (Photo Credit: Dhruva Space)

ಪೋಲಾರ್ ಆಕ್ಸೆಸ್-1 ಡಿಟೇಲ್ಸ್​: ಈ ಮಿಷನ್ ಜನವರಿ 12ರಂದು ಅಂದ್ರೆ ಸೋಮವಾರ ಶ್ರೀಹರಿಕೋಟಾದ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ಇಸ್ರೋದ ವಿಶ್ವಾಸಾರ್ಹ PSLV-DL-C62 ರಾಕೆಟ್ ಮೂಲಕ ಉಡಾವಣೆಯಾಗಲಿದೆ. ಧ್ರುವ ಸ್ಪೇಸ್‌ನ ಕಾರ್ಯಕ್ರಮವನ್ನು ಸನ್​-ಸಿಂಕ್ರೊನಸ್ ಕಕ್ಷೆಗೆ ನಿಯಮಿತ ಮತ್ತು ಸಂಘಟಿತ ಪ್ರವೇಶವನ್ನು ಒದಗಿಸಲು ನಿರ್ದಿಷ್ಟವಾಗಿ ವಿನ್ಯಾಸಗೊಳಿಸಲಾಗಿದೆ. ಧ್ರುವ ಸ್ಪೇಸ್ ಅನ್ನು 2012 ರಲ್ಲಿ ಸ್ಥಾಪಿಸಲಾಯಿತು ಮತ್ತು ಅಂದಿನಿಂದ ಭಾರತದಲ್ಲಿ ಬಾಹ್ಯಾಕಾಶ ಕ್ಷೇತ್ರದ ಖಾಸಗೀಕರಣದ ಕಡೆಗೆ ಅವಿಶ್ರಾಂತವಾಗಿ ಕೆಲಸ ಮಾಡಿದೆ. ಕಂಪನಿಯು ಉಪಗ್ರಹಗಳು, ಗ್ರೌಂಡ್​ ಸ್ಟೇಷನ್​ ಮತ್ತು ಉಡಾವಣಾ ಸೇವೆಗಳನ್ನು ಒಂದೇ ಅಥವಾ ವಿಭಿನ್ನ ರೀತಿಯಲ್ಲಿ ಪರಿಹಾರ ಒದಗಿಸುತ್ತದೆ.

INDIAN PRIVATE SPACE COMPANY  CUBESAT LAUNCH INDIA  POLAR ACCESS 1 MISSION  PSLV C62 LAUNCH
ದೊಡ್ಡ ಹೆಜ್ಜೆಯತ್ತ ಭಾರತದ ಖಾಸಗಿ ಬಾಹ್ಯಾಕಾಶ ವಲಯ (Photo Credit: Dhruva Space)

ಪೋಲಾರ್ ಆಕ್ಸೆಸ್-1 ಧ್ರುವ ಸ್ಪೇಸ್‌ನ ಸಂಪೂರ್ಣ ಆಂತರಿಕ ಬಾಹ್ಯಾಕಾಶ ಮೂಲಸೌಕರ್ಯವನ್ನು ಬಳಸಿಕೊಳ್ಳುತ್ತದೆ. ಇದರಲ್ಲಿ ಉಪಗ್ರಹ ವೇದಿಕೆ, ಬೇರ್ಪಡಿಕೆ ವ್ಯವಸ್ಥೆ ಮತ್ತು ಗ್ರೌಂಡ್​ ಸ್ಟೇಷನ್​ ಸೇವೆಯಾಗಿ ಬಳಸಲಾಗುತ್ತದೆ. ಕಂಪನಿಯು ಈಗಾಗಲೇ 2024ರಲ್ಲಿ ಇದಕ್ಕಾಗಿ IN-SPACE ಅನುಮೋದನೆಯನ್ನು ಪಡೆದಿದೆ.

ಉಡಾವಣಾ ವಿವರಗಳು

ಫಿಲ್ಡ್​ವ್ಯಾಲ್ಯೂ
ಹೆಸರುPolar Access -1 (PA-1)
ಪ್ರಕಾರಸನ್​-ಸಿಂಕ್ರೊನಸ್ ಆರ್ಬಿಟ್​ (SSO)
ಆರ್ಬಿಟ್​ಸನ್​-ಸಿಂಕ್ರೊನಸ್ ಆರ್ಬಿಟ್​ (SSO)
ಆಫ್​ರಿಂಗ್ಸ್​P-DoT ಉಪಗ್ರಹ ವೇದಿಕೆ, DSOD-1U ಬೇರ್ಪಡಿಕೆ ವ್ಯವಸ್ಥೆ, DSOD-6U ಬೇರ್ಪಡಿಕೆ ವ್ಯವಸ್ಥೆ, ಗ್ರೌಂಡ್​ ಸ್ಟೇಷನ್​, GSaaS (Ground Station as a Service)
ಲಾಂಚ್​ ಸೈಟ್​SDSC-SHAR, ಆಂಧ್ರಪ್ರದೇಶ, ಭಾರತ

ಹಲವಾರು ರಾಜ್ಯಗಳು ಮತ್ತು ದೇಶಗಳಿಗೆ ಮೊದಲ ಉಪಗ್ರಹಗಳು

  • ಈ ಮಿಷನ್ ಹಲವಾರು ರಾಜ್ಯಗಳು ಮತ್ತು ದೇಶಗಳ ಮೊದಲ ಉಪಗ್ರಹ ಉಪಕ್ರಮಗಳಿಗೆ ಜೀವ ತುಂಬುತ್ತಿದೆ.
  • ನೇಪಾಳದ ಭೂ ವೀಕ್ಷಣಾ ಉಪಗ್ರಹವು ಪರಿಸರ ಮೇಲ್ವಿಚಾರಣೆಯ ಮೇಲೆ ಕೇಂದ್ರೀಕರಿಸುತ್ತದೆ.
  • ಒಡಿಶಾದ ಮೊದಲ ಉಪಗ್ರಹವಾದ CGUSAT-1 ವಿಪತ್ತುಗಳ ಸಮಯದಲ್ಲಿ ಸಂವಹನವನ್ನು ಸುಧಾರಿಸಲು ಸಹಾಯ ಮಾಡುತ್ತದೆ.
  • ಕರ್ನಾಟಕದ DSAT-1 ದ್ವಿಮುಖ ಸಂವಹನ ಮತ್ತು ಟೆಲಿಮೆಟ್ರಿಯನ್ನು ಒದಗಿಸುತ್ತದೆ.
  • ಈ ಮಿಷನ್ ಈಶಾನ್ಯ ಭಾರತಕ್ಕೆ ವಿಶೇಷ ಮಹತ್ವವನ್ನು ಹೊಂದಿದೆ. ಅಸ್ಸಾಂನ ಡಾನ್ ಬಾಸ್ಕೋ ವಿಶ್ವವಿದ್ಯಾಲಯದ ಸಹಯೋಗದೊಂದಿಗೆ ಅಭಿವೃದ್ಧಿಪಡಿಸಲಾದ LACHIT-1 ಇಡೀ ಈಶಾನ್ಯಕ್ಕೆ ಮೊದಲ ಉಪಗ್ರಹ ಕಾರ್ಯಾಚರಣೆಯಾಗಿದೆ.
  • ತಮಿಳುನಾಡು ಒಳಗೊಂಡ ಮಿಷನ್ ಕಕ್ಷೆಯಲ್ಲಿ ಇಂಧನ ತುಂಬುವ ತಂತ್ರಜ್ಞಾನವನ್ನು ಪ್ರದರ್ಶಿಸುತ್ತದೆ.
  • ಗುಜರಾತ್‌ನ 1U ಉಪಗ್ರಹವು ಅಹಮದಾಬಾದ್‌ನಿಂದ ಗೋಚರಿಸುವ ಕೃತಕ ನಕ್ಷತ್ರವನ್ನು ಬಳಸುತ್ತದೆ.
  • ತೆಲಂಗಾಣದ ಧ್ರುವ ಸ್ಪೇಸ್‌ನ ಸ್ವಂತ ಉಪಗ್ರಹ THYBOLT-3 ಅನ್ನು ಸಹ ಸೇರಿಸಲಾಗಿದೆ. ಇದು ವಿಪತ್ತು ಸಂವಹನ ಜಾಲಗಳನ್ನು ಬಲಪಡಿಸುತ್ತದೆ.
INDIAN PRIVATE SPACE COMPANY  CUBESAT LAUNCH INDIA  POLAR ACCESS 1 MISSION  PSLV C62 LAUNCH
ದೊಡ್ಡ ಹೆಜ್ಜೆಯತ್ತ ಭಾರತದ ಖಾಸಗಿ ಬಾಹ್ಯಾಕಾಶ ವಲಯ (Photo Credit: Dhruva Space)

ಗಮನಾರ್ಹವಾಗಿ ಈ ಕಾರ್ಯಾಚರಣೆಗಳು ವಿಶ್ವಾದ್ಯಂತ ಹವ್ಯಾಸಿ ರೆಡಿಯೋ ಆಪರೇಟರ್‌ಗಳಿಗೂ ಲಭ್ಯವಾಗುವಂತೆ ಮಾಡಲಾಗುವುದು. ಧ್ರುವ ಸ್ಪೇಸ್‌ನ ಈ ಉಪಕ್ರಮವು ತಂತ್ರಜ್ಞಾನವನ್ನು ಅಭಿವೃದ್ಧಿಪಡಿಸುವುದಲ್ಲದೆ ವಿದ್ಯಾರ್ಥಿಗಳು, ವಿಶ್ವವಿದ್ಯಾಲಯಗಳು ಮತ್ತು ರಾಜ್ಯಗಳನ್ನು ಬಾಹ್ಯಾಕಾಶ ತಂತ್ರಜ್ಞಾನದೊಂದಿಗೆ ನೇರವಾಗಿ ಸಂಪರ್ಕಿಸಲು ಬಲವಾದ ಅಡಿಪಾಯವನ್ನು ಹಾಕುತ್ತದೆ.

ಓದಿ: ಉಪಗ್ರಹದ ಮೂಲಕ ರಾತ್ರಿಯೂ ಬೆಳಕು! 'ಸನ್‌ಲೈಟ್ ಆನ್ ಡಿಮಾಂಡ್' ವಿವಾದಿತ ಉಪಗ್ರಹ​ ಈ ವರ್ಷ ಉಡಾವಣೆ