ಎಲ್ಲದಕ್ಕೂ ಒಂದೇ ಟಿಕೆಟ್! ಎಲ್ಲಿಂದಲಾದರೂ ಎಲ್ಲಿಗಾದರೂ ಬಹು ಸಾರಿಗೆ ವ್ಯವಸ್ಥೆ ಮೂಲಕ ಪ್ರಯಾಣಿಸಿ!
Common Mobility App: ಹೈದರಾಬಾದ್ ಮಹಾನಗರ ಅಭಿವೃದ್ಧಿ ಪ್ರಾಧಿಕಾರ ಆ್ಯಪ್ವೊಂದು ಸಿದ್ಧಪಡಿಸುತ್ತಿದೆ. ಈ ಆ್ಯಪ್ ಮೂಲಕ ನೀವು ಒಂದೇ ಟಿಕೆಟ್ನಲ್ಲಿ ಬಹು ಸಾರಿಗೆ ವ್ಯವಸ್ಥೆಯನ್ನು ಬಳಸಿಕೊಂಡು ನಿಮ್ಮ ಗಮ್ಯಸ್ಥಾನವನ್ನು ಸೇರಬಹುದು.

Published : April 22, 2026 at 10:42 AM IST
Common Mobility App: RTC ಬಸ್‌ಗಳು, ಮೆಟ್ರೋ, MMTS, Ola, Uber ಹೀಗೆ ಯಾವುದೇ ಸಾರಿಗೆ ಸೌಲಭ್ಯಗಳಾಗಲಿ ನಗರದ ನಿವಾಸಿಗಳು ಒಂದೇ ಟಿಕೆಟ್ ಬಳಸಿ ಪ್ರಯಾಣಿಸುವ ಅವಕಾಶವನ್ನು ಅತೀ ಶೀಘ್ರದಲ್ಲೇ ಪಡೆಯಲಿದ್ದಾರೆ. ಇದಕ್ಕೆ ಅವಶ್ಯಕತೆಯಾಗಿರುವ ಕಾಮನ್ ಮೊಬಿಲಿಟಿ ಆ್ಯಪ್ ಅನ್ನು ಯುನಿಫೈಡ್ ಮೆಟ್ರೋಪಾಲಿಟಿನ್ ಡೆವಲಪ್ಮೆಂಟ್ ಅಥಾರಿಟಿ (UMTA) ಪರಿಚಯಿಸುತ್ತಿದೆ.
ಹೈದರಾಬಾದ್ ಮಹಾನಗರ ಅಭಿವೃದ್ಧಿ ಪ್ರಾಧಿಕಾರ (HMDA) ಈ ಅಪ್ಲಿಕೇಶನ್‌ನ ಅಭಿವೃದ್ಧಿಗಾಗಿ ಸಲಹೆಗಾರರನ್ನು ನೇಮಿಸಲು ಟೆಂಡರ್‌ಗಳನ್ನು ಆಹ್ವಾನಿಸಿದೆ. ಈ ಅಪ್ಲಿಕೇಶನ್ ಮೂಲಕ ಬಳಕೆದಾರರು ಟಿಕೆಟ್ ಖರೀದಿ ಯಾವುದೇ ಆರಂಭಿಕ ಹಂತದಿಂದ ಯಾವುದೇ ಗಮ್ಯಸ್ಥಾನಕ್ಕೆ ತಮ್ಮ ಆದ್ಯತೆಯ ಸಾರಿಗೆ ವಿಧಾನವನ್ನು ಬಳಸಿಕೊಂಡು ಪ್ರಯಾಣಿಸಬಹುದಾಗಿದೆ. ಅದು ಯಾವರೀತಿ ಎಂಬುದನ್ನು ತಿಳಿಯೋಣ.
ಈ ಆ್ಯಪ್ನ ಪ್ರತ್ಯೇಕತೆ ಏನು?
ಒಬ್ಬ ವ್ಯಕ್ತಿಯು ಅಮೀರ್‌ಪೇಟೆಯಿಂದ ಸುಚಿತ್ರ ಜಂಕ್ಷನ್‌ಗೆ ಪ್ರಯಾಣಿಸಲು ಬಯಸಿದರೆ ಅವರು ಪ್ರಸ್ತುತ ಬಸ್ ಅಥವಾ ಮೆಟ್ರೋವನ್ನು ಸಿಕಂದರಾಬಾದ್‌ಗೆ ತೆಗೆದುಕೊಂಡು ಅಲ್ಲಿಂದ ಓಲಾ ಅಥವಾ ಉಬರ್, ಆಟೋ-ರಿಕ್ಷಾ ಅಥವಾ ಕ್ಯಾಬ್ ಅನ್ನು ಬುಕ್ ಮಾಡಬೇಕು. ಅವರು ಕಡಿಮೆ ಖರ್ಚಿನಲ್ಲಿ ಗಮ್ಯಸ್ಥಾನ ತಲುಪಬೇಕಾದ್ರೆ ಅವರು ಬಸ್‌ನಲ್ಲಿ ಪ್ರಯಾಣಿಸಬೇಕಾಗುತ್ತದೆ.
ಆದ್ರೆ ಹೈದರಾಬಾದ್ ಮಹಾನಗರ ಅಭಿವೃದ್ಧಿ ಪ್ರಾಧಿಕಾರ ಹೊಸ ಆ್ಯಪ್ವೊಂದನ್ನು ಸಿದ್ಧಪಡಿಸಲು ಟೆಂಡರ್ ಕರೆದಿದ್ದು, ಈ ಆ್ಯಪ್ ಮೂಲಕ ನೀವು ಒಂದೇ ಟಿಕೆಟ್ನಲ್ಲಿ ನಿಮ್ಮ ಗಮ್ಯಸ್ಥಾನವನ್ನು ಸೇರಬಹುದು. ಆ ಆ್ಯಪ್ ಹೆಸರೇ ಕಾಮನ್ ಮೊಬಿಲಿಟಿ.
ಈ ಕಾಮನ್ ಮೊಬಿಲಿಟಿ ಆ್ಯಪ್ ಅನ್ನು ಮೊದಲು ನಿಮ್ಮ ಸ್ಮಾರ್ಟ್‌ಫೋನ್‌ನಲ್ಲಿ ಡೌನ್‌ಲೋಡ್ ಮಾಡಿ ಇನ್ಸ್ಟಾಲ್ ಮಾಡಿಕೊಳ್ಳಬೇಕು. ಬಳಿಕ ನೀವು ಮೂಲ ಮತ್ತು ಗಮ್ಯಸ್ಥಾನವನ್ನು ನಿರ್ದಿಷ್ಟಪಡಿಸಬೇಕು. ನಂತರ ಅಪ್ಲಿಕೇಶನ್ ಆ ನಿರ್ದಿಷ್ಟ ಸ್ಥಳಗಳನ್ನು ಹೇಗೆ ತಲುಪುವುದು ಎಂಬುದರ ಕುರಿತು ವಿವರಗಳನ್ನು ಒದಗಿಸುತ್ತದೆ. ಇದು ಮೆಟ್ರೋ, MMTS ಅಥವಾ ಬಸ್ ಸೇವೆಗಳ ಬಗ್ಗೆ ನಿಮಗೆ ಮಾರ್ಗದರ್ಶನ ನೀಡುತ್ತದೆ. ಬಳಿಕ ನೀವು ನಿಮ್ಮ ಗಮ್ಯಸ್ಥಾನವನ್ನು ತಲುಪಲು ಆ ಸಾರಿಗೆ ಕೇಂದ್ರಗಳಿಂದ ಹೇಗೆ ಮುಂದುವರಿಯಬೇಕೆಂದು ಸೂಚಿಸುತ್ತದೆ.
ಆ್ಯಪ್ನಲ್ಲಿ ನೀವು ಟಿಕೆಟ್ ಬುಕ್ ಮಾಡಿ ಪೇಮೆಂಟ್ ಮಾಡಿದ್ರೆ ಸಾಕು.. ನಿಮಗೊಂದು ಕ್ಯೂಆರ್ ಕೋಡ್ ಬರುತ್ತದೆ. ನೀವು ಅದನ್ನು ಉಪಯೋಗಿಸಿಕೊಂಡು ನೀವು ಮೆಟ್ರೋ, MMTS ಅಥವಾ RTC ಬಸ್‌ಗಳ ಮೂಲಕ ಪ್ರಯಾಣಿಸಲು ಬಳಸಬೇಕು.
ನಿರ್ದಿಷ್ಟ ಸಾರಿಗೆ ಕೇಂದ್ರವನ್ನು ತಲುಪಿದ ನಂತರ ಬಳಕೆದಾರರು ಓಲಾ ಅಥವಾ ಉಬರ್ ಸೇವೆಗಳಿಗೆ ಪ್ರತ್ಯೇಕ ಬುಕಿಂಗ್ ಮಾಡುವ ಅಗತ್ಯವಿರಲ್ಲ. ಮೊದಲು ಖರೀದಿಸಿದ ಮೂಲ ಟಿಕೆಟ್ ಬಳಸಿ ತಮ್ಮ ಪ್ರಯಾಣವನ್ನು ಮುಂದುವರಿಸಬಹುದು. ಪ್ರಯಾಣಿಕರು ಆಯಾ ನಿಲ್ದಾಣ ಅಥವಾ ಸಾರಿಗೆ ಕೇಂದ್ರಕ್ಕೆ ಬರುವ ಹೊತ್ತಿಗೆ ಈ ಸಂಗ್ರಾಹಕರ ವಾಹನಗಳು ಅವರಿಗಾಗಿ ಅಲ್ಲಿ ಕಾಯುತ್ತಿರುತ್ತವೆ.
ಇನ್ನು ಈ ಸೇವಾ ಪೂರೈಕೆದಾರರ ಕುರಿತು ಸಂಪೂರ್ಣ ವಿವರಗಳನ್ನು ಸಹ ಅಪ್ಲಿಕೇಶನ್‌ನಲ್ಲಿ ಪ್ರದರ್ಶಿಸಲಾಗುತ್ತದೆ. ಸರ್ಕಾರವು ಈ ಹಿಂದೆ 'ಮೀ ಟಿಕೆಟ್' ಮೊಬೈಲ್ ಅಪ್ಲಿಕೇಶನ್ ಅನ್ನು ಪರಿಚಯಿಸಿತು. ಈ ಅಪ್ಲಿಕೇಶನ್ ಮೂಲಕ, ನಗರದೊಳಗಿನ ಸಾರ್ವಜನಿಕ ಉದ್ಯಾನವನಗಳು, ದೇವಾಲಯಗಳು ಮತ್ತು ಐತಿಹಾಸಿಕ ಸ್ಥಳಗಳಿಗೆ ಭೇಟಿ ನೀಡಲು ಟಿಕೆಟ್‌ಗಳನ್ನು ಖರೀದಿಸಬಹುದು. ಈ ಸೇವೆಗಳನ್ನು ಕಾಮನ್ ಮೊಬಿಲಿಟಿ ಅಪ್ಲಿಕೇಶನ್‌ನಲ್ಲಿ ಅಳವಡಿಸಲಾಗಿದೆ.
ಹೀಗೆ ನಿಮ್ಮ ಪ್ರಯಾಣ ಒಂದೇ ಟಿಕೆಟ್ನಲ್ಲಿ ಮುಕ್ತಾಯವಾಗುತ್ತದೆ. ಈ ಆ್ಯಪ್ ಬಹುತೇಕ ಬಹು ಸಾರಿಗೆ ವ್ಯವಸ್ಥೆ ಬಳಸುವವರಿಗೆ ಉಪಯುಕ್ತವಾಗಲಿದೆ. ಮುಂದಿನ ದಿನಗಳಲ್ಲಿ ಇದರ ಪ್ರಯಾಣದ ದರ ಮತ್ತು ಆ್ಯಪ್ ಬಿಡುಗಡೆ ಕುರಿತು ಹೈದರಾಬಾದ್ ಮಹಾನಗರ ಅಭಿವೃದ್ಧಿ ಪ್ರಾಧಿಕಾರ ಸಂಪೂರ್ಣ ಮಾಹಿತಿ ಒದಗಿಸಲಿದೆ. ಈಗಾಗಲೇ ಇಂತಹ ಸೇವಾ ಸೌಲಭ್ಯ ಆ್ಯಪ್ ಮುಂಬೈ, ದೆಹಲಿ, ಬೆಂಗಳೂರು, ಚೆನ್ನೈನಲ್ಲಿ ಚಾಲ್ತಿಯಲ್ಲಿದೆ.
ಓದಿ: 496km ಮೈಲೇಜ್, 29 ನಿಮಿಷದಲ್ಲಿ 80% ಚಾರ್ಜ್! ಹುಂಡೈನಿಂದ ಹೊಸ ಎಲೆಕ್ಟ್ರಿಕ್ ಕಾರ್ ರಿವೀಲ್

