ನಿಮ್ಮ ಆಂಡ್ರಾಯ್ಡ್ ಫೋನ್‌ಗಳಲ್ಲಿವೆ ಹಲವಾರು ಸಾಲಿಡ್ ಪ್ರೈವೆಸಿ ಫೀಚರ್ಸ್!
Android Privacy Features: ಆಂಡ್ರಾಯ್ಡ್ ಫೋನ್‌ಗಳಲ್ಲಿ ಐಫೋನ್ ಮೀರಿಸುವಂತಹ ಪ್ರೈವೆಸಿ ಫೀಚರ್ಸ್‌ಗಳಿವೆ. ಈ ವೈಶಿಷ್ಟ್ಯಗಳಲ್ಲಿ ಹಲವು ಗೂಗಲ್‌ನಿಂದ ಬಂದರೆ, ಇನ್ನು ಕೆಲವನ್ನು ಸ್ಮಾರ್ಟ್‌ಫೋನ್ ತಯಾರಕರು ಪರಿಚಯಿಸಿದ್ದಾರೆ.

Published : June 4, 2026 at 1:19 PM IST
Android Privacy Features: ಪ್ರೈವೆಸಿ ವಿಷಯಕ್ಕೆ ಬಂದರೆ ಐಫೋನ್ ಬೆಸ್ಟ್ ಎಂದು ಪರಿಗಣಿಸಲಾಗುತ್ತದೆ. ಇತ್ತೀಚಿನವರೆಗೂ ಇದು ನಿಜವಾಗಿತ್ತು. ಆದರೆ ಈ ವಿಷಯದಲ್ಲಿ ಐಫೋನ್‌ಗಳು ಮತ್ತು ಆಂಡ್ರಾಯ್ಡ್ ಫೋನ್‌ಗಳ ನಡುವಿನ ಸ್ಪರ್ಧೆ ಈಗ ತೀವ್ರವಾಗಿದೆ. ಬಳಕೆದಾರರ ಗೌಪ್ಯತೆಯನ್ನು ಅತ್ಯಂತ ಕಷ್ಟಕರವಾಗಿಸುವ ವೈಶಿಷ್ಟ್ಯಗಳನ್ನು ಗೂಗಲ್ ಈಗ ಪರಿಚಯಿಸುತ್ತಿದೆ. ಇಂದು ಐಫೋನ್ ಬಳಕೆದಾರರು ಇನ್ನೂ ಅಂತಹ ವೈಶಿಷ್ಟ್ಯಗಳಿಗಾಗಿ ಕಾಯುತ್ತಿರುವ ಸಮಯದಲ್ಲಿ ಆಂಡ್ರಾಯ್ಡ್ ಪರಿಚಯಿಸುತ್ತಿದೆ.
ಪ್ರೈವೆಸಿ ಡಿಸ್ಪ್ಲೇ: ಸ್ಯಾಮ್‌ಸಂಗ್ ತನ್ನ ಗ್ಯಾಲಕ್ಸಿ ಎಸ್ 26 ಅಲ್ಟ್ರಾದಲ್ಲಿ ಪ್ರೈವೆಸಿ ಡಿಸ್ಪ್ಲೇ ಆಯ್ಕೆ ನೀಡಿದೆ. ಇದನ್ನು ಈ ವರ್ಷ ಫೆಬ್ರವರಿಯಲ್ಲಿ ಬಿಡುಗಡೆ ಮಾಡಲಾಗಿದೆ. ಇದೇ ಮೊದಲ ಬಾರಿಗೆ ಫೋನ್‌ನಲ್ಲಿ ಇಂತಹ ಫೀಚರ್ ಬಂದಿದೆ. ಅದನ್ನು ಆ್ಯಕ್ಟಿವ್ಗೊಳಿಸಿದ ನಂತರ ಬಳಕೆದಾರರ ಸುತ್ತಲೂ ಕುಳಿತುಕೊಳ್ಳುವ ಜನರಿಗೆ ಸ್ಕ್ರೀನ್ ಸಂಪೂರ್ಣವಾಗಿ ಡಾರ್ಕ್ ಆಗುತ್ತದೆ. ಅಂದರೆ ಬಳಕೆದಾರರನ್ನು ಹೊರತುಪಡಿಸಿ ಯಾರೂ ಸ್ಕ್ರೀನ್ ಮೇಲೆ ಪ್ಲೇ ಆಗುತ್ತಿರುವ ಕಂಟೆಂಟ್ ನೋಡಲು ಸಾಧ್ಯವಾಗುವುದಿಲ್ಲ. ಇದರೊಂದಿಗೆ ಪ್ರೈವೆಸಿ ಬಗೆಗಿನ ಕಾಳಜಿಯೂ ದೂರವಾಗಿದ್ದು, ಪ್ರತ್ಯೇಕ ಪ್ರೈವೆಸಿ ಸ್ಕ್ರೀನ್ ಪ್ರೊಟೆಕ್ಟರ್ ಅಳವಡಿಸುವ ತೊಡಕನ್ನೂ ನಿವಾರಿಸಲಾಗಿದೆ. ಈಗ ಇತರ ಕಂಪನಿಗಳು ತಮ್ಮ ಆಂಡ್ರಾಯ್ಡ್ ಫೋನ್‌ಗಳಲ್ಲಿ ಈ ವೈಶಿಷ್ಟ್ಯವನ್ನು ನಕಲಿಸುವಲ್ಲಿ ನಿರತವಾಗಿವೆ.
ಸೆಕೆಂಡರಿ ಸ್ಪೇಸ್: ಸೆನ್ಸಿಟಿವ್ ಅಪ್ಲಿಕೇಶನ್‌ಗಳಿಗೆ ಆಂಡ್ರಾಯ್ಡ್ ಫೋನ್‌ಗಳು "ಸೆಕೆಂಡರಿ ಸ್ಪೇಸ್" ಆಯ್ಕೆ ನೀಡುತ್ತವೆ. ಮೊದಲ ನೋಟದಲ್ಲಿ ಈ ವೈಶಿಷ್ಟ್ಯವು ಐಫೋನ್‌ನ ಹಿಡನ್ ಫೋಲ್ಡರ್‌ನಂತೆಯೇ ಕಾಣಿಸಬಹುದು. ಆದ್ರೆ ಎರಡರ ನಡುವೆ ಗಮನಾರ್ಹ ವ್ಯತ್ಯಾಸವಿದೆ. ಆಂಡ್ರಾಯ್ಡ್ ಸೆಕೆಂಡರಿ ಸ್ಪೇಸ್‌ಗಾಗಿ ಪ್ರತ್ಯೇಕ ಪಿನ್ ಕೋಡ್ ಅಥವಾ ಪ್ಯಾಟರ್ನ್ ಅನ್ನು ನಿರ್ದಿಷ್ಟವಾಗಿ ಹೊಂದಿಸಬಹುದು. ಇದಲ್ಲದೆ ಈ ಜಾಗವನ್ನು ಸಂಪೂರ್ಣವಾಗಿ ಮರೆಮಾಡಬಹುದು. ಆದರೆ ಐಫೋನ್‌ನ ಹಿಡನ್ ಫೋಲ್ಡರ್ ಕಾಣಿಸುತ್ತದೆ. ಹೆಚ್ಚುವರಿಯಾಗಿ ಆಂಡ್ರಾಯ್ಡ್ ಸೆಕೆಂಡರಿ ಸ್ಪೇಸ್‌ನಲ್ಲಿರುವ ಅಪ್ಲಿಕೇಶನ್‌ಗಳನ್ನು ಪ್ರತ್ಯೇಕ ಗೂಗಲ್ ಖಾತೆಗೆ ಲಿಂಕ್ ಮಾಡಬಹುದು.
ಬಿಲ್ಟ್-ಇನ್ ವಿಪಿಎನ್: ಇಂಟರ್ನೆಟ್‌ನಲ್ಲಿ ನಿಮ್ಮ ಪ್ರೈವೆಸಿ ಬಗ್ಗೆ ನೀವು ಕಾಳಜಿ ವಹಿಸುತ್ತಿದ್ದರೆ Google Pixel ಸ್ಮಾರ್ಟ್‌ಫೋನ್‌ಗಳಲ್ಲಿ ಲಭ್ಯವಿರುವ ಬಿಲ್ಟ್-ಇನ್ VPN ವೈಶಿಷ್ಟ್ಯವು ಅತ್ಯಂತ ಉಪಯುಕ್ತವಾಗಿದೆ ಎಂದು ಸಾಬೀತುಪಡಿಸಬಹುದು. ಈ ವೈಶಿಷ್ಟ್ಯವು Pixel 7 ಮಾದರಿಗಳು ಮತ್ತು ನಂತರದ ಆವೃತ್ತಿಗಳಲ್ಲಿ ಲಭ್ಯವಿದೆ ಮತ್ತು ಸೆಟ್ಟಿಂಗ್ಸ್ ಮೆನುಗೆ ನ್ಯಾವಿಗೇಟ್ ಮಾಡುವ ಮೂಲಕ ಇದನ್ನು ಆ್ಯಕ್ಟಿವ್ ಮಾಡಿಕೊಳ್ಳಬಹುದು. ಈ VPN ಬಳಸಿಕೊಂಡು ಇಂಟರ್ನೆಟ್ ಬ್ರೌಸ್ ಮಾಡುವಾಗ ನಿಮ್ಮ IP ವಿಳಾಸವನ್ನು ಮರೆಮಾಡಲಾಗುತ್ತದೆ. ಇದು ನಿಮ್ಮ ಇಂಟರ್ನೆಟ್ ಸೇವಾ ಪೂರೈಕೆದಾರರು (ISP) ನಿಮ್ಮ ಆನ್‌ಲೈನ್ ಚಟುವಟಿಕೆಯನ್ನು ಟ್ರ್ಯಾಕ್ ಮಾಡುವುದನ್ನು ತಡೆಯುತ್ತದೆ.
ಆಟೋ-ರೀಸೆಟ್ ಅನುಮತಿ: ಐಫೋನ್ ಮತ್ತು ಆಂಡ್ರಾಯ್ಡ್ ಎರಡೂ ಸಾಧನಗಳು ಅಪ್ಲಿಕೇಶನ್‌ಗಳಿಗೆ ನೀಡಲಾದ ಅನುಮತಿಗಳನ್ನು ಆಟೋ-ರೀಸೆಟ್ ಮಾಡುವ ಆಯ್ಕೆ ನೀಡುತ್ತವೆ. ಐಫೋನ್‌ನಲ್ಲಿರುವಾಗ ನೀವು ಪ್ರತಿಯೊಂದು ಅಪ್ಲಿಕೇಶನ್‌ಗೆ ಮ್ಯಾನುವಲ್ ಆಗಿ ಅನುಮತಿಗಳನ್ನು ಪರಿಶೀಲಿಸಬೇಕಾಗುತ್ತದೆ. ಆದ್ರೆ ಆಂಡ್ರಾಯ್ಡ್ ಈ ಕಾರ್ಯವನ್ನು ಆಟೋಮೆಟಿಕ್ ಆಗಿ ನಿರ್ವಹಿಸುತ್ತದೆ. ಆಂಡ್ರಾಯ್ಡ್ ಫೋನ್‌ಗಳು "ಆಟೋ-ರಿಸೆಟ್ ಪರ್ಮಿಶನ್" ಆಯ್ಕೆಯನ್ನು ಒಳಗೊಂಡಿರುತ್ತವೆ. ಒಮ್ಮೆ ಆ್ಯಕ್ಟಿವ್ಗೊಳಿಸಿದ ನಂತರ ನಿರ್ದಿಷ್ಟ ಅವಧಿಗೆ ಬಳಸದ ಯಾವುದೇ ಅಪ್ಲಿಕೇಶನ್‌ಗಳಿಗೆ ಇದು ಆಟೋಮೆಟಿಕ್ ಆಗಿ ಪರ್ಮಿಶನ್ ರೀಸೆಟ್ ಮಾಡುತ್ತದೆ.
ಇದನ್ನೂ ಓದಿ: ವಿನ್ಫಾಸ್ಟ್ ಸೂಪರ್ ಫಾಸ್ಟ್; ವರ್ಷದೊಳಗೆ 10 ಸಾವಿರ ಇವಿಗಳ ಉತ್ಪಾದನೆ!

