ETV Bharat / state

ಸಿದ್ದರಾಮಯ್ಯನವರ ಕನಸಿನ ಕೂಸಾದ ಜಾತಿಗಣತಿಯನ್ನು ಸ್ವೀಕರಿಸಿದ್ದು, ಜಾರಿ ಮಾಡುತ್ತೇವೆ: ಸಚಿವ ಯತೀಂದ್ರ ಸಿದ್ದರಾಮಯ್ಯ

ಸಿದ್ದರಾಮಯ್ಯನವರು ಜಾತಿಗಣತಿ ವರದಿಯನ್ನು ಜಾರಿಗೊಳಿಸಬೇಕು ಎಂದುಕೊಂಡಿದ್ದರು, ಅದನ್ನು ನಾವು ಜಾರಿ ಮಾಡುತ್ತೇವೆ ಎಂದು ಸಚಿವ ಯತೀಂದ್ರ ಸಿದ್ದರಾಮಯ್ಯ ಹೇಳಿದ್ದಾರೆ.

YATHINDRA SIDDARAMAIAH
ಸಚಿವ ಯತೀಂದ್ರ ಸಿದ್ದರಾಮಯ್ಯ (ETV Bharat)
author img

By ETV Bharat Karnataka Team

Published : July 3, 2026 at 5:37 PM IST

2 Min Read
Choose ETV Bharat

ದಾವಣಗೆರೆ: ಸಿದ್ದರಾಮಯ್ಯ ಅವರು ಇನ್ನೂ ಎರಡು ವರ್ಷ ಮುಖ್ಯಮಂತ್ರಿಯಾಗಿ ಇರುತ್ತಾರೆ ಅಂದುಕೊಂಡಿದ್ದೆವು, ಕಾರಣಾಂತರಗಳಿಂದ ಆ ಸ್ಥಾನದಿಂದ ಕೆಳಗಿಳಿದಿದ್ದಾರೆ. ಅದರೆ, ಅವರ ಕನಸಿನ ಕೂಸು ಜಾತಿಗಣತಿ ಸ್ವೀಕರಿಸಿದ್ದೇವೆ, ಜಾರಿ ಮಾಡುತ್ತೇವೆ ಎಂದು ಸಚಿವ ಯತೀಂದ್ರ ಸಿದ್ದರಾಮಯ್ಯ ತಿಳಿಸಿದರು.

ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಸಿದ್ದರಾಮಯ್ಯ ಅವರು ಜಾತಿಗಣತಿ ವರದಿಯನ್ನು ಜಾರಿಗೊಳಿಸಬೇಕು ಎಂದುಕೊಂಡಿದ್ದರು, ಅದನ್ನು ನಾವು ಜಾರಿ ಮಾಡುತ್ತೇವೆ. ಅದು ಕ್ಯಾಬಿನೆಟ್ ಮುಂದೆ ಚರ್ಚೆಗೆ ಬರಬೇಕಿದೆ. ನಮ್ಮ ಪಕ್ಷದ ಪ್ರಣಾಳಿಕೆಯಲ್ಲಿ ಜಾತಿಗಣತಿ ಬಿಡುಗಡೆ ಮಾಡುವುದಾಗಿ ಹೇಳಿದ್ದೆವು, ಬಿಡುಗಡೆ ಮಾಡುತ್ತೇವೆ ಎಂದರು.

ಸಚಿವ ಯತೀಂದ್ರ ಸಿದ್ದರಾಮಯ್ಯ (ETV Bharat)

ನಿನ್ನೆ ನಡೆದ ಕ್ಯಾಬಿನೆಟ್​​ನಲ್ಲಿ 23 ಅಜೆಂಡಾಗಳು ಇದ್ದವು. ಮುಖ್ಯಮಂತ್ರಿಗಳು ಹೊಸದಾಗಿ ಪ್ರಜಾಸೇವೆ ಇಲಾಖೆ ಆರಂಭಿಸಿದ್ದಾರೆ. ಭಾರತ್ ಜೋಡೋ ಯುವಕರ ಸಂಘದಿಂದ ಪಕ್ಷ ಸಂಘಟಿಸುವ ನಿರ್ಧಾರ ಮಾಡಲಾಗಿದೆ. ಅಲ್ಲದೇ ಎಸ್​ಐಆರ್​​ ಸೇರಿದಂತೆ ಹಲವು ವಿಷಯಗಳ ಬಗ್ಗೆ ಚರ್ಚೆ‌ ನಡೆದವು ಎಂದು ಹೇಳಿದರು.

ವಿದ್ಯುತ್ ಖಾಸಗೀಕರಣ ವಿಚಾರವಾಗಿ ಮಾತನಾಡಿ, ರಾಜ್ಯ ಸರ್ಕಾರ ವಿದ್ಯುತ್ ಖಾಸಗೀಕರಣದ ವಿರೋಧವಿದೆ. ಈಗಾಗಲೇ ಮುಖ್ಯಮಂತ್ರಿಗಳು ಹಾಗೂ ಇಂಧನ ಸಚಿವರು ಈ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ. ಯಾವುದೇ ಕಾರಣಕ್ಕೂ ವಿದ್ಯುತ್ ಖಾಸಗೀಕರಣ ಮಾಡೋದಿಲ್ಲ ಎಂದು ತಿಳಿಸಿದರು.

ವಿರೋಧ ಪಕ್ಷದವರು ಇರೋದೆ ಟೀಕೆ ಮಾಡೋಕೆ: ಕಾಂಗ್ರೆಸ್​ ಪಕ್ಷ ಎಸ್​ಐಆರ್ ವಿರುದ್ಧ ದೊಡ್ಡ ಷಡ್ಯಂತ್ರ ಮಾಡುತ್ತಿದೆ ಎಂಬ ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಹೇಳಿಕೆ ವಿಚಾರವಾಗಿ ಮಾತನಾಡಿ, ವಿರೋಧ ಪಕ್ಷದವರು ಇರೋದೇ ಟೀಕೆ ಮಾಡೋಕೆ. ಅವರ ಹೇಳಿಕೆಯಲ್ಲಿ ಯಾವುದೇ ಹುರುಳಿಲ್ಲ. ಎಸ್ಐಆರ್ ಬಂದು ಲಕ್ಷಾಂತರ ಜನರ ಮತದಾನದ ಹಕ್ಕನ್ನು ಕಸಿದುಕೊಂಡಿದೆ. ಮತದಾನದ ಹಕ್ಕನ್ನು ಕಳೆಯುವ ಕೆಲಸ ಬಿಜೆಪಿ ಮಾಡಿದೆ. ಯಾರು ಕೂಡ ಮತದಾನದ ಹಕ್ಕನ್ನು ಕಳೆದುಕೊಳ್ಳದಂತೆ ಚುನಾವಣಾ ಆಯೋಗ ನಿಗಾ ವಹಿಸಬೇಕಿತ್ತು, ಅದು ಆಗಿಲ್ಲ. ಮತದಾನದ ಹಕ್ಕನ್ನು ಕಸಿದುಕೊಂಡು ಮತಗಳ್ಳತನ ಮಾಡುವ ಪಕ್ಷ ಎಂದರೆ ಬಿಜೆಪಿ ಎಂದು ಕಿಡಿಕಾರಿದರು.

ವಸತಿ ಯೋಜನೆಗಳ ಬಗ್ಗೆ ಸಾಕಷ್ಟು ಸವಾಲುಗಳು ಇವೆ, ಅದರ ಬಗ್ಗೆ ಸಭೆ ನಡೆಸಲು ಬಂದಿದ್ದೇನೆ ಅಂದ ಅವರು, ಕೇಂದ್ರದ ನಗರಾಭಿವೃದ್ಧಿ ಇಲಾಖೆಯ ರಾಜ್ಯ ಸಚಿವರ ಭೇಟಿ ವಿಚಾರವಾಗಿ ಮಾತನಾಡಿ 15 ಹಣಕಾಸು ಆಯೋಗದಿಂದ 18 ಸಾವಿರ ಕೋಟಿ ಬಾಕಿ ಇದೆ. ಅದನ್ನು ಬಿಡುಗಡೆ ಮಾಡುವಂತೆ ಮನವಿ ಮಾಡಲಾಗಿದೆ. ಸ್ಥಳೀಯ ಸಂಸ್ಥೆಗಳ ಚುನಾವಣೆ, ಜಿಬಿಎ ಚುನಾವಣೆ ಕೂಡ ಅದಷ್ಟು ಬೇಗಾ ಮಾಡಲಾಗುವುದು ಎಂದರು.

ರಾಜ್ಯದಲ್ಲಿ ದುರ್ಬಲ ಮುಂಗಾರು ವಿಚಾರವಾಗಿ ಮಾತನಾಡಿ, ಕಾಂಗ್ರೆಸ್​​ನಲ್ಲಿ ಅಧಿಕಾರ ಬದಲಾವಣೆಗೂ ಮಳೆಗೂ ಸಂಬಂಧ ಇಲ್ಲ. ಹವಾಮಾನ ಬದಲಾವಣೆ ಕಾರಣಕ್ಕೆ ಎಲ್ಲ ಕಡೆ ಮಳೆ ಕೊರತೆಯಾಗಿದೆ ಎಂದರು.

ಅರ್ಹರಿಗೆ ಗ್ಯಾರಂಟಿ: ಸಚಿವ ಸಂಪುಟ ವಿಸ್ತರಣೆ ವಿಚಾರವಾಗಿ ಮಾತನಾಡಿ, ಅದು ಹೈಕಮಾಂಡ್​ಗೆ ಬಿಟ್ಟ ವಿಚಾರ. ಎರಡು ವಾರದಲ್ಲಿ ಸಂಪುಟ ವಿಸ್ತರಣೆಯಾಗುವ ನಿರೀಕ್ಷೆ ಇದೆ. ಸಂಪುಟದಲ್ಲಿ ಹೊಸಬರು ಹಾಗೂ ಹಳಬರು ಕೂಡ ಇರಬೇಕು. ಎಲ್ಲ ವಿಚಾರವನ್ನು ಹೈಕಮಾಂಡ್​ಗೆ ಬಿಟ್ಟಿದ್ದೇವೆ, ಅವರೇ ತೀರ್ಮಾನ ತೆಗೆದುಕೊಳ್ಳುತ್ತಾರೆ. ಹೊಸ ಸಿಎಂ ಪ್ರಮಾಣ ವಚನ ಸ್ವೀಕಾರ ಮಾಡಿ ಒಂದು ತಿಂಗಳಾಗಿದೆ. ನೂರು ದಿನಗಳ ಅಜೆಂಡಾ ಇದೆ. ಯಾರು ಬಡವರು, ಅರ್ಹರಿದ್ದಾರೆ ಅವರಿಗೆ ಗ್ಯಾರಂಟಿ ಕೊಡುತ್ತೇವೆ. ಜಾತಿ ಆಧಾರಿತವಾಗಿ ಗ್ಯಾರಂಟಿ ಯೋಜನೆ ನೀಡಿಲ್ಲ. ಯಾವ ಸಮುದಾಯದವರು ಎಷ್ಟು ಫಲಾನುಭವಿಗಳು ಇದ್ದಾರೆ ಅನ್ನೋ ನಿಟ್ಟಿನಲ್ಲಿ ಇರಬೇಕು ಎಂದು ಹೇಳಿದರು.

ಇವುಗಳನ್ನೂ ಓದಿ: