ETV Bharat / state

ವಿಶ್ವೇಶ್ವರಯ್ಯ ಜಲ ನಿಗಮ ನಿಯಮಿತ ಕಾಲುವೆ ಕಾಮಗಾರಿ: ಹಲವು ರೈಲುಗಳು ರದ್ದು

ಮೈಸೂರು ವಿಭಾಗೀಯ ವಾಣಿಜ್ಯ ವ್ಯವಸ್ಥಾಪಕ ಗಿರೀಶ್​ ಧರ್ಮರಾಜ ಕಲಗೊಂಡ ಅವರು ರೈಲು ಸಂಚಾರ ರದ್ದು ಮತ್ತು ಮಾರ್ಗ ಬದಲಾವಣೆಯ ಕುರಿತು ಪ್ರಕಟಣೆಯಲ್ಲಿ ಮಾಹಿತಿ ನೀಡಿದ್ದಾರೆ.

ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ (IANS)
author img

By ETV Bharat Karnataka Team

Published : June 3, 2026 at 2:39 PM IST

3 Min Read
Choose ETV Bharat

ಶಿವಮೊಗ್ಗ: ವಿಶ್ವೇಶ್ಬರಯ್ಯ ಜಲ ನಿಗಮ ನಿಯಮಿತದ ಕಾಲುವೆ ಕಾಮಗಾರಿ‌ ಹಿನ್ನೆಲೆಯಲ್ಲಿ ಹಲವು ರೈಲುಗಳ ಸಂಚಾರವನ್ನು ರದ್ದುಗೊಳಿಸಲಾಗಿದೆ. ಹೀಗಾಗಿ ಮಾರ್ಗ ಬದಲಾವಣೆ, ನಿಯಂತ್ರಣ, ಭಾಗಶಃ ರದ್ದು ಹಾಗೂ ಮರುನಿಗದಿಯ ಕುರಿತು ಸಾರ್ವಜನಿಕರಿಗೆ ಮಾಹಿತಿ ನೀಡಲಾಗಿದೆ.

ರದ್ದಾದ ರೈಲುಗಳ ವಿವರ:

  1. ರೈಲು ಸಂಖ್ಯೆ 66577 ತುಮಕೂರು – ಶಿವಮೊಗ್ಗ ಟೌನ್ ಪ್ಯಾಸೆಂಜರ್ 2.6.2026 ಹಾಗೂ 16.6.2026 ರಂದು ರದ್ದು.
  2. ರೈಲು ಸಂಖ್ಯೆ 66578 ಶಿವಮೊಗ್ಗ ಟೌನ್ – ತುಮಕೂರು ಪ್ಯಾಸೆಂಜರ್ 2.6.2026 ಹಾಗೂ 16.6.2026 ರಂದು ರದ್ದು.
  3. ರೈಲು ಸಂಖ್ಯೆ 16567 ತುಮಕೂರು – ಶಿವಮೊಗ್ಗ ಟೌನ್ ಎಕ್ಸ್‌ಪ್ರೆಸ್ 6.6.2026 ಹಾಗೂ 13.6.2026 ರಂದು ರದ್ದು.
  4. ರೈಲು ಸಂಖ್ಯೆ 16568 ಶಿವಮೊಗ್ಗ ಟೌನ್ – ತುಮಕೂರು ಎಕ್ಸ್‌ಪ್ರೆಸ್ 7.6.2026 ಹಾಗೂ 14.6.2026 ರಂದು ರದ್ದು.
  5. ರೈಲು ಸಂಖ್ಯೆ 12089 ಕೆಎಸ್‌ಆರ್ ಬೆಂಗಳೂರು – ಶಿವಮೊಗ್ಗ ಟೌನ್ ಜನಶತಾಬ್ದಿ ಎಕ್ಸ್‌ಪ್ರೆಸ್ 6.6.2026 ಹಾಗೂ 13.6.2026 ರಂದು ರದ್ದು.
  6. ರೈಲು ಸಂಖ್ಯೆ 12090 ಶಿವಮೊಗ್ಗ ಟೌನ್ – ಕೆಎಸ್‌ಆರ್ ಬೆಂಗಳೂರು ಜನಶತಾಬ್ದಿ ಎಕ್ಸ್‌ಪ್ರೆಸ್ 7.6.2026 ಹಾಗೂ 14.6.2026 ರಂದು ರದ್ದು.
  7. ರೈಲು ಸಂಖ್ಯೆ 56224 ಅರಸೀಕೆರೆ – ಕೆಎಸ್‌ಆರ್ ಬೆಂಗಳೂರು ಪ್ಯಾಸೆಂಜರ್ 7.6.2026 ಹಾಗೂ 14.6.2026 ರಂದು ರದ್ದು.
  8. ರೈಲು ಸಂಖ್ಯೆ 56223 ಕೆಎಸ್‌ಆರ್ ಬೆಂಗಳೂರು – ಅರಸೀಕೆರೆ ಪ್ಯಾಸೆಂಜರ್ 7.6.2026 ಹಾಗೂ 14.6.2026 ರಂದು ರದ್ದು.
  9. ರೈಲು ಸಂಖ್ಯೆ 06581 ಕೆಎಸ್‌ಆರ್ ಬೆಂಗಳೂರು – ಚನ್ನಪಟ್ಟಣ ಪ್ಯಾಸೆಂಜರ್ 7.6.2026 ಹಾಗೂ 14.6.2026 ರಂದು ರದ್ದು.
  10. ರೈಲು ಸಂಖ್ಯೆ 06582 ಚನ್ನಪಟ್ಟಣ – ಕೆಎಸ್‌ಆರ್ ಬೆಂಗಳೂರು ಪ್ಯಾಸೆಂಜರ್ 7.6.2026 ಹಾಗೂ 14.6.2026 ರಂದು ರದ್ದು.

ರೈಲುಗಳ ಮಾರ್ಗ ಬದಲಾವಣೆ:

  • ರೈಲು ಸಂಖ್ಯೆ 11022 ತಿರುನೆಲ್ವೇಲಿ ಜಂಕ್ಷನ್ – ದಾದರ್ ಸೆಂಟ್ರಲ್ ಎಕ್ಸ್‌ಪ್ರೆಸ್ 1.6.2026 ಮತ್ತು 15.6.2026 ರಂದು ಚಿಕ್ಕಬಾಣವರ, ನೆಲಮಂಗಲ, ಹಾಸನ ಮತ್ತು ಅರಸೀಕೆರೆ ಮೂಲಕ ಸಂಚರಿಸಲಿದ್ದು, ತುಮಕೂರು ಮತ್ತು ತಿಪಟೂರು ನಿಲ್ದಾಣಗಳಲ್ಲಿ ನಿಲುಗಡೆ ಇರುವುದಿಲ್ಲ.
  • ರೈಲು ಸಂಖ್ಯೆ 56519 ಕೆಎಸ್‌ಆರ್ ಬೆಂಗಳೂರು – ಹೊಸಪೇಟೆ ಪ್ಯಾಸೆಂಜರ್ 2.6.2026 ಮತ್ತು 16.6.2026 ರಂದು ಚಿಕ್ಕಬಾಣವರ, ನೆಲಮಂಗಲ, ಹಾಸನ ಮತ್ತು ಅರಸೀಕೆರೆ ಮೂಲಕ ಸಂಚರಿಸಲಿದ್ದು, ದೊಡ್ಡಬೆಲೆ, ಕ್ಯಾಯಸಂದ್ರ, ತುಮಕೂರು, ಗುಬ್ಬಿ, ಅಮ್ಮಸಂದ್ರ ಮತ್ತು ತಿಪಟೂರಿನಲ್ಲಿ ನಿಲುಗಡೆ ಇರುವುದಿಲ್ಲ.
  • ರೈಲು ಸಂಖ್ಯೆ 12079 ಕೆಎಸ್‌ಆರ್ ಬೆಂಗಳೂರು – ಎಸ್‌ಎಸ್‌ಎಸ್ ಹುಬ್ಬಳ್ಳಿ ಜನಶತಾಬ್ದಿ ಎಕ್ಸ್‌ಪ್ರೆಸ್ 2.6.2026 ಮತ್ತು 16.6.2026 ರಂದು ಯಶವಂತಪುರ, ಚಿಕ್ಕಬಾಣವರ, ನೆಲಮಂಗಲ, ಹಾಸನ ಮತ್ತು ಅರಸೀಕೆರೆ ಮೂಲಕ ಸಂಚರಿಸಲಿದ್ದು, ತುಮಕೂರು ಮತ್ತು ತಿಪಟೂರು ನಿಲ್ದಾಣಗಳಲ್ಲಿ ನಿಲುಗಡೆ ಇರುವುದಿಲ್ಲ.
  • ರೈಲು ಸಂಖ್ಯೆ 16536 ಪಂಢರಾಪುರ – ಮೈಸೂರು ಎಕ್ಸ್‌ಪ್ರೆಸ್ 6.6.2026 ಮತ್ತು 13.6.2026 ರಂದು ಅರಸೀಕೆರೆ, ಹಾಸನ, ನೆಲಮಂಗಲ, ಚಿಕ್ಕಬಾಣವರ ಮತ್ತು ಯಶವಂತಪುರ ಮೂಲಕ ಸಂಚರಿಸುಲಿದ್ದು, ತಿಪಟೂರು ಮತ್ತು ತುಮಕೂರು ನಿಲ್ದಾಣಗಳಲ್ಲಿ ನಿಲುಗಡೆ ಇರುವುದಿಲ್ಲ.
  • ರೈಲು ಸಂಖ್ಯೆ 20654 ಬೆಳಗಾವಿ – ಕೆಎಸ್‌ಆರ್ ಬೆಂಗಳೂರು ಎಕ್ಸ್‌ಪ್ರೆಸ್ 6.6.2026 ಮತ್ತು 13.6.2026 ರಂದು ಅರಸೀಕೆರೆ, ಹಾಸನ, ನೆಲಮಂಗಲ, ಚಿಕ್ಕಬಾಣವರ ಮತ್ತು ಯಶವಂತಪುರ ಮೂಲಕ ಸಂಚರಿಸಲಿದ್ದು, ತುಮಕೂರು ನಿಲ್ದಾಣದಲ್ಲಿ ನಿಲುಗಡೆ ಇರುವುದಿಲ್ಲ.
  • ರೈಲು ಸಂಖ್ಯೆ 16546 ಸಿಂಧನೂರು – ಯಶವಂತಪುರ ಎಕ್ಸ್‌ಪ್ರೆಸ್ 6.6.2026 ಮತ್ತು 13.6.2026 ರಂದು ಅರಸೀಕೆರೆ, ಹಾಸನ, ನೆಲಮಂಗಲ ಮತ್ತು ಚಿಕ್ಕಬಾಣವರ ಮೂಲಕ ಸಂಚರಿಸಲಿದ್ದು, ತಿಪಟೂರು, ಅಮ್ಮಸಂದ್ರ, ಗುಬ್ಬಿ, ತುಮಕೂರು, ಕ್ಯಾಯತಸಂದ್ರ ಮತ್ತು ದೊಡ್ಡಬೆಲೆ ನಿಲ್ದಾಣಗಳಲ್ಲಿ ನಿಲುಗಡೆ ಇರುವುದಿಲ್ಲ.
  • ರೈಲು ಸಂಖ್ಯೆ 17310 ವಾಸ್ಕೋ ಡ ಗಾಮಾ – ಯಶವಂತಪುರ ಎಕ್ಸ್‌ಪ್ರೆಸ್ 6.6.2026 ಮತ್ತು 13.6.2026 ರಂದು ಅರಸೀಕೆರೆ, ಹಾಸನ, ನೆಲಮಂಗಲ, ಚಿಕ್ಕಬಾಣವರ ಮತ್ತು ಯಶವಂತಪುರ ಮೂಲಕ ಸಂಚರಿಸಲಿದ್ದು, ತಿಪಟೂರು ಮತ್ತು ತುಮಕೂರು ನಿಲ್ದಾಣಗಳಲ್ಲಿ ನಿಲುಗಡೆ ಇರುವುದಿಲ್ಲ.

ರೈಲುಗಳ ನಿಯಂತ್ರಣ:

  1. ರೈಲು ಸಂಖ್ಯೆ 20689 ಯಶವಂತಪುರ – ಶಿವಮೊಗ್ಗ ಟೌನ್ ಎಕ್ಸ್‌ಪ್ರೆಸ್ 2 ಮತ್ತು 16 ರಂದು ಮಾರ್ಗಮಧ್ಯೆ 15 ನಿಮಿಷಗಳ ಕಾಲ ನಿಯಂತ್ರಿಸಲಿದೆ.
  2. ರೈಲು ಸಂಖ್ಯೆ 16568 ಶಿವಮೊಗ್ಗ ಟೌನ್ – ತುಮಕೂರು ಎಕ್ಸ್‌ಪ್ರೆಸ್ 2 ಮತ್ತು 16 ರಂದು ಮಾರ್ಗಮಧ್ಯೆ 60 ನಿಮಿಷಗಳ ಕಾಲ ನಿಯಂತ್ರಿಸಲಿದೆ.
  3. ರೈಲು ಸಂಖ್ಯೆ 12090 ಶಿವಮೊಗ್ಗ ಟೌನ್ – ಕೆಎಸ್‌ಆರ್ ಬೆಂಗಳೂರು ಜನಶತಾಬ್ದಿ ಎಕ್ಸ್‌ಪ್ರೆಸ್ 2 ಮತ್ತು 16 ರಂದು ಮಾರ್ಗಮಧ್ಯೆ 15 ನಿಮಿಷ ನಿಯಂತ್ರಿಸಲಿದೆ.
  4. ರೈಲು ಸಂಖ್ಯೆ 12726 ಧಾರವಾಡ – ಕೆಎಸ್‌ಆರ್ ಬೆಂಗಳೂರು ಎಕ್ಸ್‌ಪ್ರೆಸ್ 7 ಮತ್ತು 14ರಂದು ಮಾರ್ಗಮಧ್ಯೆ 75 ನಿಮಿಷಗಳ ಕಾಲ ನಿಯಂತ್ರಿಸಲಿದೆ.
  5. ರೈಲು ಸಂಖ್ಯೆ 26751 ಬೆಳಗಾವಿ – ಕೆಎಸ್‌ಆರ್ ಬೆಂಗಳೂರು ವಂದೇ ಭಾರತ್ ಎಕ್ಸ್‌ಪ್ರೆಸ್ 7 ಮತ್ತು 14ರಂದು ಮಾರ್ಗಮಧ್ಯೆ 30 ನಿಮಿಷಗಳ ಕಾಲ ನಿಯಂತ್ರಿಸಲಿದೆ.

ಭಾಗಶಃ ರದ್ದು:

  • ರೈಲು ಸಂಖ್ಯೆ 20652 ತಾಳಗುಪ್ಪ – ಕೆಎಸ್‌ಆರ್ ಬೆಂಗಳೂರು ಎಕ್ಸ್‌ಪ್ರೆಸ್ ಅರಸೀಕೆರೆ – ಕೆಎಸ್‌ಆರ್ ಬೆಂಗಳೂರು ನಡುವಿನ ಸೇವೆ ಭಾಗಶಃ ರದ್ದಾಗಲಿದೆ. ಈ ರೈಲು ಅರಸೀಕೆರೆಯಲ್ಲಿ ಕೊನೆಗೊಳ್ಳುತ್ತದೆ.
  • ರೈಲು ಸಂಖ್ಯೆ 12725 ಕೆಎಸ್‌ಆರ್ ಬೆಂಗಳೂರು – ಧಾರವಾಡ ಎಕ್ಸ್‌ಪ್ರೆಸ್ ಕೆಎಸ್‌ಆರ್ ಬೆಂಗಳೂರು – ಅರಸೀಕೆರೆ ನಡುವೆ ಭಾಗಶಃ ರದ್ದಾಗಲಿದೆ. ಅರ್ಸಿಕೇರಿಯಿಂದ ತನ್ನ ಪ್ರಯಾಣ ಆರಂಭಿಸಲಿದೆ.

ರೈಲು ಮರುನಿಗದಿ:

  • ರೈಲು ಸಂಖ್ಯೆ 16239 ಚಿಕ್ಕಮಗಳೂರು – ಯಶವಂತಪುರ ಎಕ್ಸ್‌ಪ್ರೆಸ್ 7 ಮತ್ತು 14 ರಂದು ಚಿಕ್ಕಮಗಳೂರಿನಿಂದ 120 ನಿಮಿಷಗಳ ಕಾಲ ತಡವಾಗಿ ಹೊರಡಲಿದೆ.

ಇದನ್ನೂ ಓದಿ: ಕೊಡಗಿನ ಮೂಲಕ ಯಾವುದೇ ರೈಲು ಮಾರ್ಗದ ಪ್ರಸ್ತಾವನೆ ಇಲ್ಲ: ಸಂಸದ ಯದುವೀರ್ ಸ್ಪಷ್ಟನೆ