ಡಿ. ಕೆ. ಶಿವಕುಮಾರ್ ಸಿಎಂ ವಿಚಾರ: ಕಾಂಗ್ರೆಸ್ ಪಕ್ಷದ ಲೀಡರೇ ಕರಪ್ಟ್ ಇರುವುದು, ಆತನಿಗೆ ಒಂದು ವಿಷನ್ ಇಲ್ಲ - ಜೋಶಿ
ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಅವರು ಡಿ. ಕೆ. ಶಿವಕುಮಾರ್ ಮತ್ತು ಅವರ ವಿರುದ್ಧದ ಭ್ರಷ್ಟಾಚಾರ ಆರೋಪಗಳು ಕುರಿತು ಟೀಕಿಸಿದ್ದಾರೆ.

Published : May 30, 2026 at 6:35 PM IST
ಧಾರವಾಡ : ಡಿ. ಕೆ. ಶಿವಕುಮಾರ್ ಸಿಎಂ ಆಗುವುದರಿಂದ ಏನೋ ಬಹಳ ವ್ಯತ್ಯಾಸ ಆಗಲಿದೆ ಎಂದು ನನಗೆ ಅನಿಸಲ್ಲ, ಕಾಂಗ್ರೆಸ್ ಪಕ್ಷದ ಲೀಡರೇ ಕರಪ್ಟ್ ಇರುವುದು, ಆತನಿಗೆ ಒಂದು ವಿಷನ್ ಇಲ್ಲ ಎಂದು ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಕುಟುಕಿದ್ದಾರೆ.
ಈ ಕುರಿತು ಶನಿವಾರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, 56 ವರ್ಷದ ಯುವಕ ಲೀಡರ್ ಇದಾರೆ. ಅವರಿಗೆ ವಿಷನ್ ಇಲ್ಲ. ಅವರು ದೇಶದ ಇಂಟ್ರೆಸ್ಟ್ ವಿರುದ್ಧ ಮಾತಾಡಿದ್ದನ್ನು ಕಂಡಿದ್ದೇವೆ. ಕಾಂಗ್ರೆಸ್ ಪಕ್ಷಕ್ಕೆ, ಕರ್ನಾಟಕ ಒಂದು ಎಟಿಎಂ ಆಗಿದೆ. ಅದು ಮುಂದುವರೆಯಲಿದೆ ಎಂದಿದ್ದಾರೆ.
ಯಡಿಯೂರಪ್ಪ ಬದಲಾವಣೆ ಆದಾಗ ಕಾಂಗ್ರೆಸ್ ಮುಖಂಡರು ಮಾತಾಡಿದ್ದ ವಿಚಾರಕ್ಕೆ ಪ್ರತಿಕ್ರಿಯಿಸಿ, ಯಡಿಯೂರಪ್ಪ ಅವರೇ ನನಗೆ ಹೇಳಿದ್ದಾರೆ. ನನಗೆ 80 ವರ್ಷ ಆದ ನಂತರ ನಾನು ರಾಜೀನಾಮೆ ಕೊಡ್ತೇನೆ ಎಂದಿದ್ದರು. ಅವರನ್ನು ಈಗಲೂ ಸಹ ಪ್ರಧಾನಿ ಮತ್ತು ಕೇಂದ್ರ ಗೃಹ ಮಂತ್ರಿ ಸೇರಿದಂತೆ ಪಕ್ಷದಿಂದ ಗೌರವಯುತವಾಗಿ ನಡೆಸಿಕೊಂಡಿದ್ದಾರೆ. ಯಡಿಯೂರಪ್ಪ ಅವರಿಗೆ ಕೂಡಾ ಆ ಬಗ್ಗೆ ಸಂತೃಪ್ತಿ ಇದೆ. ಆದರೆ, ಸಿದ್ದರಾಮಯ್ಯರನ್ನು ರಾಹುಲ್ ಗಾಂಧಿ ಹೇಗೆ ನಡೆಸಿಕೊಂಡರು ಎಂದು ಮಾಧ್ಯಮಗಳು ವರದಿ ಮಾಡಿವೆ. ಹೇಮಂತ ಶರ್ಮಾ ಸೇರಿ ಬೇರೆ ಬೇರೆ ಮುಖಂಡರ ಜೊತೆ ಹೇಗೆ ನಡೆದುಕೊಂಡರು ಎಂಬ ಉದಾಹರಣೆಗಳು ಇವೆ. ಇದೇ ರೀತಿ ಸಿದ್ದರಾಮಯ್ಯನವರ ಜೊತೆ ವರ್ತಿಸಿದ್ದಾರೆ ಎಂಬ ಬಗ್ಗೆ ಮಾಧ್ಯಮಗಳಲ್ಲಿ ವರದಿ ಬಂದಿವೆ. ಸಿದ್ದರಾಮಯ್ಯರ ಬಗ್ಗೆ ಜನರ ಆಕ್ರೋಶ ಇದೆ, ಅವರು ಕೆಟ್ಟ ಆಡಳಿತ ಕೊಟ್ಟರು. ಸಿದ್ದರಾಮಯ್ಯ ಅವರ ಮತ್ತು ಹಿರಿತನದ ಬಗ್ಗೆ ಗೌರವ ಇದೆ. ಇದನ್ನು ಹೊರತುಪಡಿಸಿ ರಾಹುಲ್ ಗಾಂಧಿ ನಡೆಸಿಕೊಂಡ ರೀತಿ ಸರಿ ಇಲ್ಲ ಜೋಶಿ ಟೀಕಿಸಿದರು.
ಫೈರಿಂಗ್ ಪ್ರಕರಣ ಕುರಿತು ಪ್ರತಿಕ್ರಿಯೆ: ಧಾರವಾಡ ತಾಲೂಕಿನ ತಡಸಿನಕೊಪ್ಪ ಬಳಿ ಫೈರಿಂಗ್ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾತನಾಡಿದ ಅವರು, ಇದು ಒಂದು ಕಾನೂನು ಸುವ್ಯವಸ್ಥೆ ಸಂಪೂರ್ಣ ಕುಸಿತದ ಉದಾಹರಣೆಯಾಗಿದೆ. ಫೈರಿಂಗ್ ಮಾಡಿದ್ದಾನೆ ಅನ್ನೋನು ಇತ್ತೀಚೆಗೆ ಬಿಡ್ನಾಳ್, ರಾಮನಗಟ್ಟಿಯಲ್ಲಿ ರೈತರಿಗೆ ಮೋಸ ಮಾಡಿದ್ದಾನೆ. ಯುವಕನ ಮೇಲೆ ಫೈರಿಂಗ್ ಆಗಿ ನಾಲ್ಕು ದಿನ ಆಗಿದೆ. ಒಬ್ಬರು, ಇಬ್ಬರು ಮಾತ್ರ ಅರೆಸ್ಟ್ ಆಗಿದ್ದಾರೆ. ಲೈಸೆನ್ಸ್ ಗನ್ನಿಂದ ಫೈರ್ ಆಗಿದ್ಯೋ ಅನ್ನೋದರ ಬಗ್ಗೆ ಗೊತ್ತಿಲ್ಲ ಅಂತಾರೆ. ಫೈರಿಂಗ್ ಮಾಡಿದ ಆರೋಪಿ ಇನ್ನೂ ಅರೆಸ್ಟ್ ಆಗಿಲ್ಲ. ಲೈಸೆನ್ಸ್ ಗನ್ ಬಗ್ಗೆ ಮಾಹಿತಿ ಕಲೆ ಹಾಕ್ತೀವಿ ಅಂತಾರೆ. ರೈತರು ವಿವಾದಿತ ಜಮೀನು ನಮ್ಮದು ಅಂತಾರೆ. ಕಾನೂನು ರೀತಿಯಲ್ಲಿ ಜಮೀನು ಎಬ್ಬಿಸೋಕೆ ಕ್ರಮ ಇದ್ಯಾ..? ಎಂದು ಜೋಶಿ ಪ್ರಶ್ನಿಸಿದರು.
ಆರೋಪಿ ಸುಂದರಪೌಲ್ ಮೇಲೆ ನಾಲ್ಕೈದು ಕೇಸ್ಗಳು ಇವೆ. ಈ ಹಿಂದೆಯೂ ಒಮ್ಮೆಯೂ ಅರೆಸ್ಟ್ ಮಾಡಿಲ್ಲ. ಇದರಲ್ಲಿ ಬಹಳ ದೊಡ್ಡ ಪ್ರಮಾಣದಲ್ಲಿ ಅಧಿಕಾರಿಗಳು ಭಾಗಿ ಇದ್ದಾರೆ. ನಾನು ಆಸ್ಪತ್ರೆಗೆ ಭೇಟಿ ನೀಡುವುದು ಗೊತ್ತಿದೆ. ಪೊಲೀಸ್ ಕಮಿಷನರ್ ಇಲ್ಲಿಗೆ ಬರಬೇಕು ಅನ್ನೋದು ಗೊತ್ತಿಲ್ಲ. ಬಡ ರೈತರಿಗೆ ಸುಂದರಪೌಲ್ನಿಂದ ಮೋಸ ಆಗಿದೆ. ಬೇರೆ ಜಾತಿಯ ರೈತರಿಗೆ ಮೋಸ ಮಾಡಿದ್ದಾನೆ. ಮೂರ್ನಾಲ್ಕು ಘಟನೆಗಳು ಹೊರಗೆ ಬಂದಿವೆ. ಪೊಲೀಸ್ ಠಾಣೆಗೆ ದೂರು ಕೊಡಲು ಹೋದವರನ್ನೇ ಅಂಗಿ ಹಿಡಿದು ಹೊರಗೆ ಹಾಕಿದ್ದಾರೆ. ಗಾಳಿಯಲ್ಲಿ ಗುಂಡು ಹೊಡೆದವರನ್ನ ಅರೆಸ್ಟ್ ಮಾಡ್ತಾರೆ. ನಮ್ಮ ದೇಶದಲ್ಲಿ ಇದಕ್ಕೆ ಕಠಿಣ ಕಾನೂನು ಇದೆ. ಘಟನೆ ಆದ್ಮೇಲೂ ಪೊಲೀಸರಿಗೆ ಆತ ಸಿಗುವುದಿಲ್ಲ. ಪೊಲೀಸರು ಮೊದಲು ಆತನ ಹೆಸರು ಎಫ್ಐಆರ್ ನಲ್ಲಿ ಹಾಕಲ್ಲ. ಬಳಿಕ ಮಾಧ್ಯಮಗಳಲ್ಲಿ ಬಂದ್ಮೇಲೆ ಆತನ ಹೆಸರು ಹಾಕ್ತಾರೆ. ಲೈಸೆನ್ಸ್ ಗನ್ ಅನ್ನೋದರ ಬಗ್ಗೆ ತನಿಖೆ ಆಗಬೇಕು. ಫೈರ್ ಮಾಡಬೇಕಾದರೆ ಅದಕ್ಕೆ ವ್ಯಾಲಿಡ್ ಕಾರಣ ಇರಬೇಕು. ಪೊಲೀಸರಿಗೆ ತನಿಖೆ ಮೇಲೆ ಯಾವುದೇ ಆಸಕ್ತಿ ಇಲ್ಲ ಎಂದರು.
ಹು- ಧಾ ಪೊಲೀಸ್ ಇಲಾಖೆ ಟೋಟಲ್ ಭ್ರಷ್ಟಾಚಾರದಲ್ಲಿ ಮುಳುಗಿದೆ. ಡಿಸಿಪಿ ಅವರಿಗೆ ಏನ್ ಆಗ್ತಿದೆ ಅನ್ನೋದೆ ಗೊತ್ತಿಲ್ಲ. ಬಿಡ್ನಾಳ್ ಕೇಸ್ನಲ್ಲೂ ಯಾವುದೇ ಕ್ರಮ ಆಗಿಲ್ಲ. ಇದರಲ್ಲಿಯೂ ಆತನ ಪ್ರೊಟೆಕ್ಷನ್ ಆಗ್ತಾಯಿದೆ. ಪುಲ್ವಾಮಾ ದಾಳಿಯಲ್ಲಿ ಅಲ್ಲಿನ ಪೊಲೀಸರೇ ಭಯೋತ್ಪಾದಕರನ್ನು ಹಿಡಿತಾರೆ. ಆದರೆ, ಇಲ್ಲಿಯ ಪೊಲೀಸರಿಗೆ ಆರೋಪಿಗಳನ್ನು ಹಿಡಿಯೋಕೆ ಆಗಲ್ಲ ಅಂದ್ರೆ ಹೇಗೆ?. ತಕ್ಷಣ ಪ್ರಮುಖ ಆರೋಪಿಯನ್ನು ಅರೆಸ್ಟ್ ಮಾಡಲಿಲ್ಲ ಅಂದರೆ ಹೋರಾಟ ಮಾಡುವುದಾಗಿ ಸಚಿವ ಜೋಶಿ ಎಚ್ಚರಿಕೆ ರವಾನಿಸಿದರು.
ಇದನ್ನೂ ಓದಿ : ಕಾಂಗ್ರೆಸ್ ಪಕ್ಷದ ನೂತನ ಶಾಸಕಾಂಗ ಪಕ್ಷದ ನಾಯಕರಾಗಿ ಡಿ.ಕೆ.ಶಿವಕುಮಾರ್ ಆಯ್ಕೆ

