ETV Bharat / state

ಗೃಹಜ್ಯೋತಿ ಯೋಜನೆಯ ಮರು ಪರಿಶೀಲನೆ: ನೀವು ನೀಡಬೇಕಾದ ದಾಖಲೆಗಳಿವು!

ಶಿವಮೊಗ್ಗದಲ್ಲಿ ಗೃಹ ಜ್ಯೋತಿ ಯೋಜನೆಯ ಫಲಾನುಭವಿಗಳ ಪುನರ್ ಪರಿಶೀಲನೆ ಪ್ರಾರಂಭವಾಗಿದ್ದು, ಮೀಟರ್ ರೀಡರ್ ಹಾಗೂ ಲೈನ್​​ಮ್ಯಾನ್​​ ಗೃಹ ಜ್ಯೋತಿ ಪ್ರಕ್ರಿಯೆ ನಡೆಸುತ್ತಿದ್ದಾರೆ.

GRUHA JYOTHI RE VERIFICATION
ಗೃಹಜ್ಯೋತಿ ಯೋಜನೆಯ ಮರು ಪರಿಶೀಲನೆ (ETV Bharat)
author img

By ETV Bharat Karnataka Team

Published : July 8, 2026 at 7:53 PM IST

3 Min Read
Choose ETV Bharat

ಶಿವಮೊಗ್ಗ: ರಾಜ್ಯ ಸರ್ಕಾರದ ಪಂಚ ಗ್ಯಾರಂಟಿಗಳಲ್ಲಿ‌ ಒಂದಾದ ಗೃಹ ಜ್ಯೋತಿ ಯೋಜನೆಯ ಫಲಾನುಭವಿಗಳ ಪುನರ್ ಪರಿಶೀಲನೆ ಪ್ರಾರಂಭಿಸಿದೆ. ಇದರ ಭಾಗವಾಗಿ ಪ್ರತಿ ಮನೆಗೂ ಮೀಟರ್ ರೀಡರ್ ಹಾಗೂ ಲೈನ್​​ಮ್ಯಾನ್​​ಗಳ ಮೂಲಕ ಗೃಹ ಜ್ಯೋತಿ ಬಳಕೆದಾರರ ಪರಿಶೀಲನೆ ನಡೆಸುತ್ತಿದೆ. ಮೀಟರ್ ರೀಡರ್ ಹಾಗೂ ಲೈನ್​​ಮ್ಯಾನ್​​ಗಳು ಪ್ರತಿ‌ ಮನೆಗೂ ತೆರಳಿ, ಮನೆಯಲ್ಲಿ ವಾಸ ಮಾಡುತ್ತಿರುವವರ ಬಳಿ ಮಾಹಿತಿ ಪಡೆದುಕೊಳ್ಳುತ್ತಿದ್ದಾರೆ‌.

ಯಾವ ಮಾಹಿತಿ ಪಡೆಯುತ್ತಿದ್ದಾರೆ: ಮೀಟರ್ ರೀಡರ್ ಮತ್ತು ಲೈನ್​​ಮ್ಯಾನ್​​ಗಳು ಒಟ್ಟಿಗೆ ತೆರಳಿ ಮನೆಯಲ್ಲಿ ವಾಸ ಮಾಡುವವರ ಬಳಿ, ಇದು ಸ್ವಂತ ಮನೆಯೇ, ಬಾಡಿಗೆ ಮನೆಯೇ ಮನೆಯಲ್ಲಿ ಎಷ್ಟು ಜನ ವಾಸವಾಗಿದ್ಧೀರಿ, ನೀವು ಯಾವ ಜಾತಿ, ಜಾತಿ ಪ್ರಮಾಣ ಪತ್ರ, ಮತದಾರರ ಗುರುತಿನ ಚೀಟಿ, ಆಧಾರ್ ಕಾರ್ಡ್, ವಿದ್ಯುತ್ ಮೀಟರ್ ಬಿಲ್ ಹೀಗೆ ಹಲವು ದಾಖಲೆಗಳನ್ನು ಸರ್ಕಾರ ಹೇಳಿದಂತೆ ಪಡೆದು ಅದನ್ನು ಮೊದಲು ಮೊಬೈಲ್ ಆ್ಯಪ್​​ನಲ್ಲಿ ಅಪ್​ಲೋಡ್​ ಮಾಡಿಕೊಂಡು ನಂತರ ಆಫ್‌ಲೈನ್ ಅರ್ಜಿಯನ್ನು ತುಂಬುತ್ತಾರೆ. ಅದಕ್ಕೆ ಮನೆಯಲ್ಲಿ ವಾಸವಾಗಿರುವವರ ಬಳಿ ಸಹಿ ಪಡೆದು ತೆರಳುತ್ತಿದ್ದಾರೆ‌.

ಗೃಹಜ್ಯೋತಿ ಯೋಜನೆಯ ಮರು ಪರಿಶೀಲನೆ (ETV Bharat)

ಈ ಹಿಂದೆ ಆನ್‌ಲೈನ್​ನಲ್ಲಿ ಗೃಹ ಜ್ಯೋತಿಗೆ ಅರ್ಜಿ ಸಲ್ಲಿಸಿದವರು ಈಗ ಮನೆಗೆ ಬರುವ ಮೆಸ್ಕಾಂ ಸಿಬ್ಬಂದಿಗೆ ತಮ್ಮ ಮಾಹಿತಿಯನ್ನು ನೀಡಬೇಕು. ಈ ವೇಳೆ ಆನ್​​ಲೈನ್​​ನಲ್ಲಿ ಅರ್ಜಿ ತುಂಬುವ ವೇಳೆ ಮನೆಯಲ್ಲಿ ಇರುವವರ ಫೋಟೋವನ್ನು ತೆಗೆದುಕೊಂಡು ಅಪ್​​ಲೋಡ್ ಮಾಡುತ್ತಾರೆ. ಜೊತೆಗೆ ಆಧಾರ್​​ನಲ್ಲಿರುವ ಮೊಬೈಲ್ ನಂಬರ್​​ಗೆ OTPB ಬರುತ್ತದೆ. ಇದರಿಂದ ಎಲ್ಲ ಗೃಹ ಜ್ಯೋತಿ ಬಳಕೆದಾರರು ಕಡ್ಡಾಯವಾಗಿ ಆಧಾರ್​​ನಲ್ಲಿರುವ ಮೊಬೈಲ್ ನಂಬರ್ ಇಟ್ಟುಕೊಳ್ಳಬೇಕು.

gruha jyothi re verification
ಗೃಹಜ್ಯೋತಿ ಯೋಜನೆಯ ಮರು ಪರಿಶೀಲನೆ (ETV Bharat)

ಒಂದು ವೇಳೆ ಆಧಾರ್​​ನಲ್ಲಿನ ನಂಬರ್ ಬದಲಾವಣೆ ಮಾಡಬೇಕಾದರೆ ತಕ್ಷಣದಿಂದಲೇ ನಂಬರ್ ಬದಲಾಯಿಸಿಕೊಳ್ಳಬೇಕು. ಆನ್​​ಲೈನ್, ಆಫ್​​ಲೈನ್ ಪ್ರಕ್ರಿಯೆ ಮುಗಿಸಲು ಕನಿಷ್ಠ 8 ನಿಮಿಷ ಬೇಕಾಗುತ್ತದೆ. ಇದೆಲ್ಲಾ ಮುಗಿದ ನಂತರ ಗ್ರಾಹಕರ ಮೊಬೈಲ್​ಗೆ ಒಂದು ಮೇಸೆಜ್ ಬರುತ್ತದೆ. ನಂತರ ಆಫ್​​ಲೈನ್​​ನಲ್ಲಿ ತುಂಬಿದ ಅರ್ಜಿಯನ್ನು ಗ್ರಾಹಕರಿಗೆ ನೀಡಲಾಗುತ್ತದೆ‌. ಇದರಿಂದ ಗೃಹಜ್ಯೋತಿ ಯೋಜನೆಗೆ ಬಳಕೆದಾರರಾಗಬೇಕಾದರೆ, ಮೊದಲು ಆಧಾರ್ ಕಾರ್ಡ್​ನಲ್ಲಿ‌ ಮೊಬೈಲ್ ನಂಬರ್ ಬಳಕೆಯಲ್ಲಿರಬೇಕು. ವೋಟರ್​ ಐಡಿ ಸರಿಯಾಗಿರಬೇಕು. ಅವಶ್ಯಕವಿದ್ದರೆ ಜಾತಿ ಪ್ರಮಾಣ ಪತ್ರ, ಬಾಡಿಗೆ ಮನೆಯಲ್ಲಿದ್ರೆ, ಮನೆಯ ಕರಾರುಪತ್ರ ಜೊತೆಯಲ್ಲಿಟ್ಟು ಕೊಳ್ಳಬೇಕು.‌ ಇದರಲ್ಲಿ ತೆರಿಗೆದಾರರಾಗಿದ್ದರೆ, ಅವರು ತಮ್ಮ ಪಾನ್​​ಕಾರ್ಡ್ ಸಹ ನೀಡಬೇಕು. ಸದ್ಯ ಮೀಟರ್ ರೀಡರ್ ಹಾಗೂ ಲೈನ್​​ಮ್ಯಾನ್​​ಗಳಿಗೆ ದಿನಕ್ಕೆ ಇಷ್ಟೇ ಮನೆ ಮಾಡಬೇಕೆಂದು ಟಾರ್ಗೆಟ್ ನೀಡಿಲ್ಲ. ಆದರೆ ಎರಡು ತಿಂಗಳಲ್ಲಿ ತಮ್ಮ ಏರಿಯಾವನ್ನು ಮುಗಿಸಬೇಕೆಂದು ತಿಳಿಸಿದೆ. ಸರ್ಕಾರ ಮುಂದಿನ ದಿನಗಳಲ್ಲಿ ಹೆಚ್ಚಿನ ಆದಾಯ ಪಡೆಯುವವರನ್ನು ಈ ಯೋಜನೆಯಿಂದ ಹೊರಗಿಡಬಹುದು.

gruha jyothi re verification
ಗೃಹಜ್ಯೋತಿ ಯೋಜನೆಯ ಮರು ಪರಿಶೀಲನೆ (ETV Bharat)

ಗೃಹ ಜ್ಯೋತಿ ಸರ್ಕಾರ ಒಳ್ಳೆಯ ಯೋಜನೆಯಾಗಿದೆ.‌ ಈ ಯೋಜನೆಯನ್ನು ಎಲ್ಲರಿಗೂ ಪರಿಶೀಲನೆ ಮಾಡಿ ನೀಡಬೇಕೆಂಬ ಕಾರ್ಯದಲ್ಲಿ ನಾವಿದ್ದೇವೆ. ಈ ಕೆಲಸ ಮಾಡಲು ತುಂಬ ಖುಷಿ‌ ಇದೆ.‌ ಕೆಲವೆಡೆ ಕೂಲಿ ಕಾರ್ಮಿಕರಿದ್ದಾರೆ. ಅವರಿಗೆ ಯೋಜನೆ ತಲುಪಿಸಬೇಕಿದೆ. ಇದಕ್ಕಾಗಿ ನಾವು ಅವರ ಅಕ್ಕ ಪಕ್ಕದ ಮನೆಗಳಿಗೆ ಹೋದಾಗ ಕೆಲಸಕ್ಕೆ ಹೋದವರು ಸಹ ನಮಗೆ ಬೇಕಾದ ದಾಖಲಾತಿಗಳನ್ನು ತೆಗೆದಿಟ್ಟುಕೊಂಡಿರುತ್ತಾರೆ.‌ ಆದರೆ, ನಾವು ಬಂದಾಗ ಗ್ರಾಹಕರು ಸಹಕಾರ ನೀಡಬೇಕಿದೆ ಎಂದು ಲೈನ್​​ಮ್ಯಾನ್ ಪ್ರಮೋದ್ ಈಟಿವಿ ಭಾರತಕ್ಕೆ ತಿಳಿಸಿದ್ದಾರೆ.

gruha jyothi re verification
ಗೃಹಜ್ಯೋತಿ ಯೋಜನೆಯ ಮರು ಪರಿಶೀಲನೆ (ETV Bharat)

ನೀಡಬೇಕಾದ ದಾಖಲೆಗಳು: ರೇಷನ್ ಕಾರ್ಡ್, ಆಧಾರ್ ಕಾರ್ಡ್ , ವೋಟರ್​ ಐಡಿ, ವಿದ್ಯುತ್ ಬಿಲ್, ಪಾಸ್​​ಪೋರ್ಟ್ ಸೈಜ್ ಫೋಟೋ. ಜಾತಿ ಪ್ರಮಾಣ ಪತ್ರ, ಬಾಡಿಗೆ ಇದ್ದವರು ಬಾಡಿಗೆ ಕರಾರರು ಪತ್ರವನ್ನು ನೀಡಬೇಕಾಗುತ್ತದೆ.‌ ಇದನ್ನು ಸರ್ಕಾರ ಬಿಡುಗಡೆ ಮಾಡಿರುವ ಗೃಹ ಜ್ಯೋತಿ ಎಂಬ ಮೊಬೈಲ್ ಆ್ಯಪ್​​ನಲ್ಲಿ ಎಲ್ಲವನ್ನು ಮೊದಲು ಭರ್ತಿ ಮಾಡಬೇಕು. ಆನ್​​ಲೈನ್​​ನಲ್ಲಿ ಅರ್ಜಿಯನ್ನು ಭರ್ತಿ ಮಾಡಿದ ನಂತರ ಗ್ರಾಹಕರಿಗೆ ನೀಡಲು ಅರ್ಜಿಯನ್ನು ಭರ್ತಿ ಮಾಡಿ, ಒಂದು ಅರ್ಜಿಯನ್ನು ನಾವಿಟ್ಟುಕೊಂಡು,‌ ಇನ್ನೂಂದನ್ನು ಗ್ರಾಹಕರಿಗೆ ನೀಡಲಾಗುತ್ತದೆ.‌ ಎಲ್ಲಾ‌ ದಾಖಲೆಗಳು ಸರಿಯಾಗಿದ್ದು ಒಂದು ಅರ್ಜಿ ಭರ್ತಿ ಮಾಡಬೇಕೆಂದರೆ ಕನಿಷ್ಠ ಅಂದ್ರು‌ 15 ನಿಮಿಷ ಬೇಕಾಗುತ್ತದೆ.‌ ಸರಿಯಾಗಿ ನೆಟ್​​ವರ್ಕ್ ಇಲ್ಲದೇ ಹೋದ್ರೆ, ದಾಖಲೆಗಳನ್ನು ಹುಡುಕಬೇಕೆಂದಾಗ 40 ನಿಮಿಷ ಬೇಕಾಗುತ್ತದೆ. ಸದ್ಯಕ್ಕೆ ಪ್ರತಿ‌ ದಿನದ ಟಾರ್ಗೆಟ್ ಇಲ್ಲ, ಆದರೆ, ಎರಡು ತಿಂಗಳಲ್ಲಿ ಮುಗಿಸಬೇಕೆಂದು ತಿಳಿಸಿದ್ದಾರೆ ಎಂದರು.

gruha jyothi re verification
ಗೃಹಜ್ಯೋತಿ ಯೋಜನೆಯ ಮರು ಪರಿಶೀಲನೆ (ETV Bharat)

ಗ್ರಾಹಕರಾದ ಕೀರ್ತಿ ವರ್ಮ ಈಟಿವಿ ಭಾರತ ಜೊತೆ ಮಾತನಾಡಿ, ನಮ್ಮ ಮನೆಗೆ ಮೆಸ್ಕಾಂ ಸಿಬ್ಬಂದಿ ಬಂದಿದ್ರು, ಅವರು ಆಧಾರ್, ವೋಟರ್​​ ಐಡಿ, ಫೋನ್​​ ನಂಬರ್ ಸರಿಯಾಗಿದೆಯೇ ಎಂದು‌ ನೋಡಿ, ಬೇಗ ಬೇಗ ಮುಗಿಸಿದರು. ನೀವು ಎಲ್ಲಾ ದಾಖಲೆಗಳನ್ನು ಸರಿಯಾಗಿ ಇಟ್ಟುಕೊಂಡ್ರೆ ಬೇಗ ಪ್ರಕ್ರಿಯೆ ಮುಗಿಯುತ್ತದೆ ಎಂದು ಹೇಳಿದರು.

ಇವುಗಳನ್ನೂ ಓದಿ: