ಸಿಡಿ ಫ್ಯಾಕ್ಟರಿ ಇದ್ದಿದ್ದು ಹೊಳೆನರಸೀಪುರ, ಬೆಂಗಳೂರಿನ ಪದ್ಮನಾಭನಗರದಲ್ಲಿ: ಡಿ.ಕೆ. ಸುರೇಶ್ ಟಾಂಗ್
ಮಾಜಿ ಸಂಸದ ಡಿ. ಕೆ. ಸುರೇಶ್ ಅವರು ಡಿಕೆಶಿ, ಹೆಚ್ಡಿಕೆ ಟಾಕ್ ವಾರ್ ವಿಚಾರವಾಗಿ ಪ್ರತಿಕ್ರಿಯಿಸಿದ್ದಾರೆ.

Published : January 10, 2026 at 4:21 PM IST
ಬೆಂಗಳೂರು : ಸಿಡಿ ಫ್ಯಾಕ್ಟರಿ ಇದ್ದಿದ್ದು ಹೊಳೆ ನರಸೀಪುರದಲ್ಲಿ, ಬೆಂಗಳೂರಿನ ಪದ್ಮನಾಭನಗರದಲ್ಲಿ ಎಂದು ಮಾಜಿ ಸಂಸದ ಡಿ. ಕೆ. ಸುರೇಶ್ ವಾಗ್ದಾಳಿ ನಡೆಸಿದ್ದಾರೆ. ಸದಾಶಿವನಗರ ನಿವಾಸದಲ್ಲಿ ಡಿಕೆಶಿ, ಹೆಚ್ಡಿಕೆ ಟಾಕ್ ವಾರ್ ವಿಚಾರವಾಗಿ ಪ್ರತಿಕ್ರಿಯಿಸುತ್ತಾ, ಆ ಫ್ಯಾಕ್ಟರಿಯಲ್ಲಿ ಯಾರು ಮ್ಯಾನಿಫ್ಯಾಕ್ಚರ್ ಮಾಡ್ತಿದ್ರು ಎಂದು ವಾಗ್ದಾಳಿ ನಡೆಸಿದ್ದಾರೆ.
ಕುಮಾರಸ್ವಾಮಿ ಇದನ್ನೆಲ್ಲಾ ಬಿಡಿ. ದಯವಿಟ್ಟು HMT ಅವರಿಗೆ ನ್ಯಾಯ ಕೊಡಿಸಿ. ಸುಮ್ಮನೆ.. ಇಲ್ಲದೇ ಇರೋದನ್ನು ಯಾಕೆ ಹೇಳ್ತೀರಾ. ಮಂಡ್ಯ ಜಿಲ್ಕೆಯಲ್ಲಿ ಕಾರ್ಖಾನೆ ಸ್ಥಾಪನೆಗಾಗಿ ಗಣಿಗ ರವಿ ಸರ್ಕಾರಿ ಜಾಗ ಗುರುತಿಸಿದ್ದಾರೆ. ನಿಮ್ಮ ಇಲಾಖೆಯಿಂದ ಏನು ಮಾಡಿದ್ದೀರಿ ಹೇಳಿ. ಉದ್ಯೋಗ ಕೊಡಿಸುವುದನ್ನು ನೋಡಿ. ಜೆಡಿಎಸ್ನವರಿಗೆ ಕೆಲಸ ಇಲ್ಲ ಎಂದರು.
ಕನ್ನಡಿಗರ ಮೇಲೆ ಮಲಯಾಳಂ ಹೇರಿಕೆ ವಿಚಾರವಾಗಿ ಮಾತನಾಡಿದ ಅವರು, ಭಾಷೆಯನ್ನು ರಾಜಕಾರಣಕ್ಕೆ ಬಳಸೋದು ಇದೆ. ಕಾಸರಗೋಡು ಕರ್ನಾಟಕದ ಒಂದು ಭಾಗ. ಒತ್ತಡ ಹಾಕೋದ್ರಿಂದ ಗಡಿಯಲ್ಲಿ ಬಾಂಧವ್ಯ ಆಗಲ್ಲ. ಭಾಂದವ್ಯಕ್ಕೆ ಧಕ್ಕೆ ತರುವ ಕೆಲಸ ಕೇರಳ ಮಾಡ್ತಿದೆ. ಈ ರೀತಿ ಮಾಡೋದು ಸರಿಯಲ್ಲ. ಕಳೆದ 10 ವರ್ಷದಿಂದ ಅವರೇ ಇದ್ದಾರೆ. ಚುನಾವಣೆಗೋಸ್ಕರವೇ ಮಾಡ್ತಿರೋದು. ಕರ್ನಾಟಕ, ಕೇರಳ ಬಾಂಧವ್ಯ ಬೇಕಿಲ್ಲ ಅವರಿಗೆ. ನಮ್ಮಲ್ಲಿಯೂ ಮಲಯಾಳಿ ಭಾಷಿಕರಿದ್ದಾರೆ. ಅವರ ಮೇಲೆ ಬೇರೆ ಪರಿಣಾಮ ಆಗಬಾರದು. ಕೆ. ಸಿ. ವೇಣುಗೋಪಾಲ್ ಆಡಳಿತದಲ್ಲಿಲ್ಲ. ಅವರು ಇದ್ದಿದ್ದರೆ ಕೇಳಬಹುದಿತ್ತು. ವೇಣುಗೋಪಾಲ್ ಬಾಂಧವ್ಯದ ಬಗ್ಗೆ ಹೇಳಿದ್ದಾರೆ. ಅಲ್ಲಿರುವ ಕನ್ನಡಿಗರ ರಕ್ಷಣೆ ಆಗಬೇಕು ಎಂದು ಆಗ್ರಹಿಸಿದರು.
ಪ್ರಿಯಾಂಕ್ ಗಾಂಧಿ ವಿರುದ್ದ ಬಿಜೆಪಿ ಟ್ವೀಟ್ ವಿಚಾರವಾಗಿ ಮಾತನಾಡಿ, ಪ್ರಿಯಾಂಕ ಹೆಸರು ತರದಿದ್ರೆ ಅವರಿಗೆ ನಿದ್ದೆ ಬರಲ್ಲ. ಹಿಂದಿ ಹೇರಿಕೆ ಪ್ರವೃತ್ತಿ ಬಗ್ಗೆ ಮೊದಲು ಹೇಳಲಿ. ಬಿಜೆಪಿಯವರು ಸ್ಪಷ್ಟೀಕರಣ ಕೊಡಲಿ. ಅನಾವಶ್ಯಕ ವಿಚಾರಕ್ಕೆ ಅವರ ಹೆಸರು ತರೋದು ಬೇಡ ಎಂದರು.
ಸಿಡಿ ಫ್ಯಾಕ್ಟರಿ ಮಾಲೀಕನ “ಮನೆಹಾಳು ಆತ್ಮರತಿ” ಬಗ್ಗೆ @INCKarnataka ಮರೆತಿದೆ!
— Janata Dal Secular (@JanataDal_S) January 10, 2026
ಟೆಂಟ್'ನಲ್ಲಿ ನೀಲಿ ಸಿನಿಮಾ ತೋರಿಸಿದ “ದಂಧೆಕೋರನ ಆತ್ಮರತಿ” ಎಂತಹದ್ದು?
“ಕಲೆಕ್ಷನ್ ಗಿರಾಕಿಯ ಆತ್ಮರತಿ” ಇರುವುದು ಮಸಾಜ್ ಪಾರ್ಲರ್'ಗಳಲ್ಲಿ ಅಲ್ಲವೇ ?
“ಹನಿಟ್ರಾಪ್ ಅಧ್ಯಕ್ಷನ ಆತ್ಮರತಿ”ಗೆ ಸಂಪುಟದ ಮಂತ್ರಿಗಳು, ಶಾಸಕರೇ ಬಲಿಪಶುಗಳಲ್ಲವೇ ?
ದೀನ… https://t.co/o6eN9jVZQf
ಏನಿದು ಜೆಡಿಎಸ್ - ಡಿಕೆಶಿ ಟ್ವೀಟ್ ವಾರ್ : ಮೀಡಿಯಾ ಹುಲಿ ಕುಮಾರಸ್ವಾಮಿ ಎಂದಿದ್ದ ಕಾಂಗ್ರೆಸ್ಗೆ ಜೆಡಿಎಸ್ ಟ್ವೀಟ್ ಮೂಲಕ ಟಾಂಗ್ ಕೊಟ್ಟಿತ್ತು. ಜೆಡಿಎಸ್ ಅಧಿಕೃತ ಎಕ್ಸ್ ಖಾತೆಯಿಂದ ಹಾಕಲಾದ ಪೋಸ್ಟ್‌ನಲ್ಲಿ ಡಿ. ಕೆ ಶಿವಕುಮಾರ್ ಉದ್ದೇಶಿಸಿ ಸಿಡಿ ಫ್ಯಾಕ್ಟರಿ ಮಾಲೀಕ ಎಂದು ಕರೆದು ತೀವ್ರ ಆರೋಪ ಮಾಡಿತ್ತು.
ಸಿಡಿ ಫ್ಯಾಕ್ಟರಿ ಮಾಲೀಕನ ಮನೆಹಾಳು ಆತ್ಮರತಿ ಬಗ್ಗೆ ಕಾಂಗ್ರೆಸ್ ಮರೆತಿದೆ ಎಂದು ಲೇವಡಿ ಮಾಡಿರುವ ಜೆಡಿಎಸ್, ಟೆಂಟ್'ನಲ್ಲಿ ನೀಲಿ ಸಿನಿಮಾ ತೋರಿಸಿದ “ದಂಧೆಕೋರನ ಆತ್ಮರತಿ” ಎಂತಹದ್ದು?. ಕಲೆಕ್ಷನ್ ಗಿರಾಕಿಯ ಆತ್ಮರತಿ ಇರುವುದು ಮಸಾಜ್ ಪಾರ್ಲರ್ಗಳಲ್ಲಿ ಅಲ್ಲವೇ?. ಹನಿಟ್ರಾಪ್ ಅಧ್ಯಕ್ಷನ ಆತ್ಮರತಿಗೆ ಸಂಪುಟದ ಮಂತ್ರಿಗಳು, ಶಾಸಕರೇ ಬಲಿಪಶುಗಳಲ್ಲವೇ? ದೀನ ದಲಿತರು, ಬಡವರು, ಮಹಿಳೆಯರ ಜಮೀನು ಕಬಳಿಸುವ ರಿಯಲ್ ಎಸ್ಟೇಟ್ ಏಜೆಂಟ್ನ ಆತ್ಮರತಿ ಬಗ್ಗೆ ಬೆಂಗಳೂರಿಗೇ ಚಿರಪರಿಚಿತ. ಸ್ವಾರ್ಥ ಸಾಧನೆಗೆ ಬ್ಲ್ಯಾಕ್ ಮೇಲ್ ಮಾಡುವ ಆತ್ಮರತಿಯ ರಾಜಕಾರಣಿಯ ಅನಾಚಾರಗಳ ದೊಡ್ಡ ಪಟ್ಟಿಯೇ ಇದೆ. ರೌಡಿ ರಾಜಕಾರಣಿಯ ಅನುಭವದ ಕೊಚ್ಚೆಗೆ ಯಾರು ತಾನೆ ಸಮ. ನಿಮಗೆ ಯಾರೂ ಪ್ರತಿಸ್ಪರ್ಧಿಗಳೇ ಇಲ್ಲ. ಅಂಗೈ ಹುಣ್ಣಿಗೆ ಕನ್ನಡಿ ಬೇಕೇ? ರೋಲ್ ಕಾಲ್ ಅಧ್ಯಕ್ಷ? ಎಂದು ಪೋಸ್ಟ್ ಮಾಡಿತ್ತು.
ಇದಕ್ಕೆ ಪ್ರತಿಕ್ರಿಯಿಸಿರುವ ಕಾಂಗ್ರೆಸ್ ಅಧಿಕೃತ ಎಕ್ಸ್ ಖಾತೆ, 'ನಿಮ್ಮದು ಸೆಕ್ಯೂರ್ಡ್ ಬ್ಲೂ ಬಾಯ್ಸ್ ಪಾರ್ಟಿ ಅನ್ನೋದು ಮರೆತು ಹೋಯ್ತೆ?! ಎಂದು ತಿರುಗೇಟು ನೀಡಿದೆ. ಹಾಸನದ ಪ್ರಜ್ವಲ್ ರೇವಣ್ಣನ ಸೆಕ್ಸ್ ವಿಡಿಯೋ ಸ್ಕ್ಯಾಂಡಲ್ ಅನ್ನು ಉಲ್ಲೇಖಿಸಿ, 'ನಿಮ್ಮ ಹುಡುಗ ನಿರ್ಮಿಸಿ ನಟಿಸಿದ 'ಹಾಸನ್ ಬ್ಲೂ' ಚಿತ್ರ ವರ್ಲ್ಡ್ ಫೇಮಸ್ ಆಗಿದೆ. ಕರ್ನಾಟಕದ ಕೀರ್ತಿ ಪತಾಕೆಯನ್ನು ಹಾಲಿವುಡ್ವರೆಗೂ ಹಾರಾಡಿಸಿದೆ' ಎಂದು ವ್ಯಂಗ್ಯವಾಡಿದೆ. ಪಕ್ಷದಲ್ಲಿ ಬ್ಲ್ಯೂ ಫೀಲಂ ನಿರ್ಮಾಪಕರು, ನಿರ್ದೇಶಕರು, ಪಾತ್ರದಾರಿಗಳು ತುಂಬಿ ತುಳುಕುತಿದ್ದಾರೆ ಎಂದು ಟಾಂಗ್ ಕೊಟ್ಟಿತ್ತು.
ಇದನ್ನೂ ಓದಿ : ಒದ್ದು ಕಿತ್ತುಕೊಳ್ಳುವುದು ನನ್ನ ಎಕ್ಸ್ಪೀರಿಯನ್ಸ್ ಅಲ್ಲ: ಡಿಕೆಶಿಗೆ ಕೇಂದ್ರ ಸಚಿವ ಹೆಚ್ಡಿಕೆ ತಿರುಗೇಟು

