ETV Bharat / state

ಪ್ರಯಾಣಿಕರೇ ಗಮನಿಸಿ: ದೀಪಾವಳಿ ಹಬ್ಬಕ್ಕೆ ವಿಶೇಷ ರೈಲುಗಳ ಸಂಚಾರ

ನೈಋತ್ಯ ರೈಲ್ವೆಯು ದೀಪಾವಳಿ ಹಬ್ಬಕ್ಕೆ ವಿಶೇಷ ರೈಲುಗಳ ವ್ಯವಸ್ಥೆ ಮಾಡಿದೆ.

DEEPAVALI FESTIVAL  DHARWAD  SOUTH WESTERN RAILWAY  ವಿಶೇಷ ರೈಲು
ಭಾರತೀಯ ರೈಲ್ವೆ (ಸಂಗ್ರಹ ಚಿತ್ರ IANS)
author img

By ETV Bharat Karnataka Team

Published : October 15, 2025 at 9:17 PM IST

2 Min Read
Choose ETV Bharat

ಹುಬ್ಬಳ್ಳಿ: ದೀಪಾವಳಿ ಹಬ್ಬದ ಪ್ರಯುಕ್ತ ಪ್ರಯಾಣಿಕರ ಹೆಚ್ಚುವರಿ ದಟ್ಟಣೆ ನಿವಾರಿಸಲು ನೈಋತ್ಯ ರೈಲ್ವೆಯು ಈ ಕೆಳಗಿನ ವಿಶೇಷ ರೈಲುಗಳನ್ನು ಓಡಿಸಲಿದೆ.

  • 1. ರೈಲು ಸಂಖ್ಯೆ 07365/07366 ಎಸ್ಎಸ್ಎಸ್ ಹುಬ್ಬಳ್ಳಿ–ಮಡಗಾಂವ್–ಬೆಂಗಳೂರು ಕಂಟೋನ್ಮೆಂಟ್ ವಿಶೇಷ ಎಕ್ಸ್‌ಪ್ರೆಸ್ (ಒಂದು ಟ್ರಿಪ್):

ರೈಲು ಸಂಖ್ಯೆ 07365 ಎಸ್ಎಸ್ಎಸ್ ಹುಬ್ಬಳ್ಳಿ–ಮಡಗಾಂವ್ ವಿಶೇಷ ಎಕ್ಸ್‌ಪ್ರೆಸ್ ರೈಲು ಅಕ್ಟೋಬರ್ 17, 2025ರಂದು ಯಶವಂತಪುರ ಮಾರ್ಗವಾಗಿ ಸಂಚರಿಸಲಿದೆ. ಇದು ಎಸ್ಎಸ್ಎಸ್ ಹುಬ್ಬಳ್ಳಿಯಿಂದ 05:15 ಗಂಟೆಗೆ ಹೊರಟು, ಅಕ್ಟೋಬರ್ 18, 2025ರಂದು 05:30 ಗಂಟೆಗೆ ಮಡಗಾಂವ್ ತಲುಪಲಿದೆ.

ಎಲ್ಲೆಲ್ಲಿ ನಿಲುಗಡೆ?: ಈ ರೈಲು ಹಾವೇರಿ, ದಾವಣಗೆರೆ, ಬೀರೂರು, ಅರಸೀಕೆರೆ, ತುಮಕೂರು, ಯಶವಂತಪುರ, ಕುಣಿಗಲ್, ಚನ್ನರಾಯಪಟ್ಟಣ, ಹಾಸನ, ಸಕಲೇಶಪುರ, ಸುಬ್ರಹ್ಮಣ್ಯ ರೋಡ್, ಕಬಕ, ಪುತ್ತೂರು, ಬಂಟವಾಳ, ಸುರತ್ಕಲ್, ಮುಲ್ಕಿ, ಉಡುಪಿ, ಬಾರ್ಕೂರು, ಕುಂದಾಪುರ, ಬೈಂದೂರು, ಭಟ್ಕಳ, ಮುರುಡೇಶ್ವರ, ಹೊನ್ನಾವರ, ಕುಮಟಾ, ಗೋಕರ್ಣ ರೋಡ್, ಅಂಕೋಲಾ ಮತ್ತು ಕಾರವಾರ ನಿಲ್ದಾಣಗಳಲ್ಲಿ ನಿಲುಗಡೆಯಾಗಲಿದೆ.

ರೈಲು ಸಂಖ್ಯೆ 07366 ಮಡಗಾಂವ್–ಬೆಂಗಳೂರು ಕಂಟೋನ್ಮೆಂಟ್ ವಿಶೇಷ ಎಕ್ಸ್‌ಪ್ರೆಸ್ ರೈಲು ಅಕ್ಟೋಬರ್ 18, 2025 ರಂದು ಮಡಗಾಂವ್‌ನಿಂದ 06:30 ಗಂಟೆಗೆ ಹೊರಟು, ಅದೇ ದಿನ ರಾತ್ರಿ 23:30 ಗಂಟೆಗೆ ಬೆಂಗಳೂರು ಕಂಟೋನ್ಮೆಂಟ್ ನಿಲ್ದಾಣಕ್ಕೆ ತಲುಪಲಿದೆ.

ಎಲ್ಲೆಲ್ಲಿ ನಿಲುಗಡೆ?: ಈ ರೈಲು ಕಾರವಾರ, ಅಂಕೋಲಾ, ಗೋಕರ್ಣ ರೋಡ್, ಕುಮಟಾ, ಹೊನ್ನಾವರ, ಮುರುಡೇಶ್ವರ, ಭಟ್ಕಳ, ಬೈಂದೂರು, ಕುಂದಾಪುರ, ಬಾರ್ಕೂರು, ಉಡುಪಿ, ಮುಲ್ಕಿ, ಸುರತ್ಕಲ್, ಬಂಟವಾಳ, ಕಬಕಪುತ್ತೂರು, ಸುಬ್ರಹ್ಮಣ್ಯ ರೋಡ್, ಸಕಲೇಶಪುರ, ಹಾಸನ, ಚನ್ನರಾಯಪಟ್ಟಣ, ಕುಣಿಗಲ್ ಮತ್ತು ಚಿಕ್ಕಬಾಣಾವರ ನಿಲ್ದಾಣಗಳಲ್ಲಿ ನಿಲುಗಡೆಯಾಗಲಿದೆ.

  • 2. ರೈಲು ಸಂಖ್ಯೆ 06205/06206 ಬೆಂಗಳೂರು ಕಂಟೋನ್ಮೆಂಟ್–ಮಡಗಾಂವ್–ಬೆಂಗಳೂರು ಕಂಟೋನ್ಮೆಂಟ್ ವಿಶೇಷ ಎಕ್ಸ್‌ಪ್ರೆಸ್ (ಒಂದು ಟ್ರಿಪ್):

ರೈಲು ಸಂಖ್ಯೆ 06205 ಬೆಂಗಳೂರು ಕಂಟೋನ್ಮೆಂಟ್–ಮಡಗಾಂವ್ ವಿಶೇಷ ಎಕ್ಸ್‌ಪ್ರೆಸ್ ರೈಲು ಅಕ್ಟೋಬರ್ 19, 2025ರಂದು ಬೆಂಗಳೂರು ಕಂಟೋನ್ಮೆಂಟ್‌ನಿಂದ 12:00 ಗಂಟೆಗೆ ಹೊರಟು, ಅಕ್ಟೋಬರ್ 20, 2025ರಂದು 05:30 ಗಂಟೆಗೆ ಮಡಗಾಂವ್ ತಲುಪಲಿದೆ. ಮರಳಿ ಬರುವ ಈ ರೈಲು (ಸಂಖ್ಯೆ 06206) ಅಕ್ಟೋಬರ್ 20, 2025ರಂದು ಮಡಗಾಂವ್‌ನಿಂದ 06:30 ಗಂಟೆಗೆ ಹೊರಟು, ಅದೇ ದಿನ ರಾತ್ರಿ 23:30 ಗಂಟೆಗೆ ಬೆಂಗಳೂರು ಕಂಟೋನ್ಮೆಂಟ್ ತಲುಪಲಿದೆ.

ಎರಡೂ ಮಾರ್ಗದಲ್ಲಿನ ನಿಲುಗಡೆಗಳು: ಎಸ್ಎಂವಿಟಿ ಬೆಂಗಳೂರು, ಚಿಕ್ಕಬಾಣಾವರ, ಕುಣಿಗಲ್​, ಚನ್ನರಾಯಪಟ್ಟಣ, ಹಾಸನ, ಸಕಲೇಶಪುರ, ಸುಬ್ರಹ್ಮಣ್ಯ ರೋಡ್​, ಕಬಕ ಪುತ್ತೂರು, ಬಂಟವಾಳ, ಸುರತ್ಕಲ್​, ಮುಲ್ಕಿ, ಉಡುಪಿ, ಬಾರ್ಕೂರು, ಕುಂದಾಪುರ, ಬೈಂದೂರು, ಭಟ್ಕಳ, ಮುರುಡೇಶ್ವರ, ಹೊನ್ನಾವರ, ಕುಮಟಾ, ಗೋಕರ್ಣ ರೋಡ್, ಅಂಕೋಲಾ ಮತ್ತು ಕಾರವಾರ.

ಈ ವಿಶೇಷ ರೈಲುಗಳು ಒಟ್ಟು 20 ಬೋಗಿಗಳನ್ನು ಒಳಗೊಂಡಿರುತ್ತವೆ. ಇವುಗಳಲ್ಲಿ 2 ಎಸಿ ಟು-ಟೈರ್, 3 ಎಸಿ ತ್ರಿ-ಟೈರ್, 10 ಸ್ಲೀಪರ್ ಕ್ಲಾಸ್, 3 ಜನರಲ್ ಸೆಕೆಂಡ್ ಕ್ಲಾಸ್ ಮತ್ತು 3 ಸೆಕೆಂಡ್ ಕ್ಲಾಸ್ ಸೀಟಿಂಗ್ ಕಮ್ ಲಗೇಜ್ ವ್ಯಾನ್‌ಗಳು ಇರಲಿವೆ.

ಇದನ್ನೂ ಓದಿ: ದೀಪಾವಳಿಗೆ ಊರಿಗೆ ತೆರಳುವವರಿಗೆ ಗುಡ್ ನ್ಯೂಸ್: NWKRTC ಯಿಂದ 310 ಹೆಚ್ಚುವರಿ ಬಸ್, ನೈಋತ್ಯ ರೈಲ್ವೆಯಿಂದ ವಿಶೇಷ ರೈಲು ಸೇವೆ