ETV Bharat / state

ಪೊಲೀಸರೇ ದುಶ್ಯಾಸನರಾಗಿದ್ದಾರೆ: ಸಿಐಡಿ ತನಿಖೆಯಿಂದ ನ್ಯಾಯ ಸಿಗೋಲ್ಲ, ನ್ಯಾಯಾಂಗ ತನಿಖೆಯಾಗಬೇಕು; ಅಶೋಕ್, ಜೋಶಿ ಒತ್ತಾಯ

ತಪ್ಪಿತಸ್ಥರ ಮೇಲೆ ಕ್ರಮ ಕೈಗೊಳ್ಳೋದಾಗಿ ಕಮಿಷನರ್ ಹೇಳಿದ್ದಾರೆ. ಅವರು ಕ್ರಮ ಕೈಗೊಳ್ಳೋ ವಿಶ್ವಾಸವಿದೆ. ತಪ್ಪಿತಸ್ಥರ ಅಮಾನತು ಆಗಬೇಕು ಅಂತ ಹೇಳಿದ್ದೇವೆ ಎಂದು ಪ್ರತಿಪಕ್ಷ ನಾಯಕ ಆರ್​ ಅಶೋಕ್​ ಹೇಳಿದ್ದಾರೆ.

Police themselves are the culprits
ಮಹಿಳೆ ವಿವಸ್ತ್ರ ಪ್ರಕರಣ; ಬಿಜೆಪಿ ನಾಯಕರ ಸುದ್ದಿಗೋಷ್ಠಿ (ETV Bharat)
author img

By ETV Bharat Karnataka Team

Published : January 9, 2026 at 9:36 PM IST

2 Min Read
Choose ETV Bharat

ಹುಬ್ಬಳ್ಳಿ: ರಾಜ್ಯದಲ್ಲಿ ಮಹಿಳೆಯರು ಗೌರವದಿಂದ ಬದುಕುವ ಹಕ್ಕು ಕಸಿದುಕೊಳ್ಳಲಾಗಿದೆ. ಪೊಲೀಸರೇ ದುಶ್ಯಾಸನರಾಗಿದ್ದಾರೆ. ಜಯನಗರ ಪ್ರಕರಣದಲ್ಲಿ ಕಳ್ಳರಾಗಿದ್ದರು. ಈ ಪ್ರಕರಣದ ಸಿಪಿಐ ಹಾಗೂ ಪಿಎಸ್ ಐ ಅಮಾನತು ಆಗಬೇಕು. ನ್ಯಾಯಂಗ ತನಿಖೆಗೆ ಒಪ್ಪಿಸಬೇಕು ಎಂದು ವಿರೋಧ ಪಕ್ಷದ ನಾಯಕ ಆರ್ ‌ಅಶೋಕ್​ ಒತ್ತಾಯಿಸಿದ್ದಾರೆ.

ನಗರದಲ್ಲಿಂದು ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ, ಛಲವಾದಿ ನಾರಾಯಣ ಸ್ವಾಮಿ ಜಂಟಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದರು. ಪೊಲೀಸ್ ಅಧಿಕಾರಿಗಳ ಜೊತೆ ಸಭೆ ನಡೆಸಿದ್ದೇವೆ. ಇಡೀ ಪೊಲೀಸ್​ ಠಾಣೆ ಕಾಂಗ್ರೆಸ್ ಕಚೇರಿಯಾಗಿದೆ. ಸುವರ್ಣ ಕಲಕುಂಟ್ಲಾ ಮೇಲೆ ಮೂರು ವರ್ಷ ಜೈಲಾಗಿತ್ತು. ಜಾಮೀನು ಮೇಲೆ ಆಕೆ ಹೊರಗಿದ್ದಾಳೆ. ಈ ಪ್ರಕರಣ ಬಗ್ಗೆ ನ್ಯಾಯಾಂಗ ತನಿಖೆಯಾಗಬೇಕು ಎಂದು ಒತ್ತಾಯಿಸಿದರು.

ಸಿಪಿಐ, ಪಿಎಸ್​ಐ ಯಾವುದೇ ಮಾಹಿತಿಯನ್ನು ಮೇಲಧಿಕಾರಿಗಳಿಗೆ ತಿಳಿಸಿಲ್ಲ. ಘಟನೆಗೆ ಅವರ ಬೇಜವಾಬ್ದಾರಿ ಕಾರಣ. ಗೃಹ ಸಚಿವ ಪರಮೇಶ್ವರ
ಮಹಿಳೆಯರ ಜೊತೆ ಗೌರವದಿಂದ ವರ್ತಿಸಿ ಅಂತ ಸಿಬ್ಬಂದಿಗೆ ತಿಳಿ ಹೇಳಬೇಕು. ತಪ್ಪಿತಸ್ಥರ ಮೇಲೆ ಕ್ರಮ ಕೈಗೊಳ್ಳೋದಾಗಿ ಕಮಿಷನರ್ ಹೇಳಿದ್ದಾರೆ. ಅವರು ಕ್ರಮ ಕೈಗೊಳ್ಳೋ ವಿಶ್ವಾಸವಿದೆ. ತಪ್ಪಿತಸ್ಥರ ಅಮಾನತು ಆಗಬೇಕು ಅಂತ ಹೇಳಿದ್ದೇವೆ ಎಂದರು.

ಸಿಐಡಿ‌ ತನಿಖೆಗೆ ಒಪ್ಪಿಗೆ ಇಲ್ಲ. ಸದ್ಯ ಪೊಲೀಸ್​ ಠಾಣೆಯನ್ನು ಕಾಂಗ್ರೆಸ್ ಕಚೇರಿ ಮಾಡಿದ್ದಾರೆ. ಸಿಐಡಿಗೆ ನೀಡಿದ್ರೆ ಅದು ಹೈಲೆವಲ್ ಕಾಂಗ್ರೆಸ್ ಕಚೇರಿ ಆಗುತ್ತೆ. ಸಿಐಡಿ ಕಾಂಗ್ರೆಸ್ ಗೆ ವಾಷಿಂಗ್ ಮಷಿನ್ ಇದ್ದಂತೆ. ಅದರಲ್ಲಿ ಹಾಕಿ ಕ್ಲೀನ್ ಚೀಟ್ ನೀಡ್ತಾರೆ.‌ ಕಾಂಗ್ರೆಸ್ ಪೊಲೀಸ್ ಇಲಾಖೆಯನ್ನು ಕುಗ್ಗಿಸೋ ಕೆಲಸ ಮಾಡುತ್ತಿದೆ ಎಂದು ಆರ್ ಅಶೋಕ್​ ಆರೋಪಿಸಿದರು.

ಇಷ್ಟು ದಿನ ಈ ವಿಡಿಯೋ ಎಲ್ಲಿತ್ತು?- ಜೋಶಿ ಪ್ರಶ್ನೆ: ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಮಾತನಾಡಿ, ಸುಜಾತಾ ಹಂಡಿ ಹಲ್ಲೆ ಆರೋಪದ ಆ ವಿಡಿಯೋ ಆಗಿದ್ದು 2023 ರಲ್ಲಿ. ಆಗ ಸುಜಾತಾ ಹಂಡಿ ಬಿಜೆಪಿಯಲ್ಲಿರಲಿಲ್ಲ. ಹಾಗಾದರೆ ಇಷ್ಟು ದಿನ ಈ ವಿಡಿಯೋ ಎಲ್ಲಿತ್ತು? ಆ ವಿಡಿಯೋ ಪೊಲೀಸ್​ ಮೂಲದಿಂದಲೇ ಕಾಂಗ್ರೆಸ್​ನವರ ಕೈಸೇರಿದೆ. ಹಳೆ ಕ್ರಿಮಿನಲ್ ಇದ್ರು ಅಂತ ಮೊದಲೇ ಜಡ್ಜಮೆಂಟ್ ಬರೆಯಲು ಸಾಧ್ಯವಿಲ್ಲ. ಬಿಎಲ್ಒಗೆ ವಿರೋಧ ಮಾಡಿದಾಗ ಸ್ವಯಂಪ್ರೇರಿತ ದೂರು ದಾಖಲು ಯಾಕೆ ಮಾಡಲಿಲ್ಲ. ಸುವರ್ಣಾ ಕಲಕುಂಟ್ಲಾ ಮತ್ತು ಬೆಂಬಲಿಗರ ಮೇಲೆ ಕೇಸ್ ಹಾಕಲಿಲ್ಲ. ಅಂದು ಕೇಸ್ ಹಾಕಿದ್ರೆ ಈ ಘಟನೆ ಇಷ್ಟು ದೊಡ್ಡದಾಗುತ್ತಿರಲಿಲ್ಲ. ಅರೆಬೆತ್ತಲೆ ಬಗ್ಗೆ ನೀವೇ ಯಾಕೆ ಷರಾ ಬರೆಯುತ್ತೀರಿ. ಎಸ್ ಐ ಆರ್ ನಡೆಯದೇ ಇಷ್ಟೊಂದು ಗಲಾಟೆ ಆರಂಭಿಸಿದ್ದಾರೆ. ಕ್ರಿಮಿನಲ್ ಇದ್ದಾಳೆ ಅಂತ ರಸ್ತೆಯಲ್ಲಿ ಗುಂಡು ಹೊಡೆಯಲು ಆಗಲ್ಲ. ಮೂರು ದಿನದಲ್ಲಿ ಮೂರು 109 ಕೇಸ್ ಹಾಕಿದ್ದಾರೆ. ಯಾರು ದೋಷಿ ಆಗಿದ್ದಾರೋ ಅ‌ವರ ಮೇಲೆ ಒಂದು ಕೇಸ್ ಕೂಡಾ ಹಾಕಲ್ಲ. ಸರ್ಕಾರದಲ್ಲಿ ಕೂತವರು ಮೊದಲೇ ಸರ್ಟಿಫಿಕೇಟ್ ನೀಡಬೇಡಿ ಈ ಬಗ್ಗೆ ನಿಷ್ಪಕ್ಷಪಾತ ತನಿಖೆ ನಡೆಸಬೇಕು ಎಂದು ಒತ್ತಾಯಿಸಿದರು.

ಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಮಾತನಾಡಿ, ಬಳ್ಳಾರಿಯಲ್ಲಿ ಅವರ ಕಾರ್ಯಕರ್ತನನ್ನು ಅವರೇ ಗುಂಡು ಹೊಡೆದು ಸಾಯಿಸಿದ್ರು. ನಂತರ ಅದನ್ನು ಜನಾರ್ದನ ರೆಡ್ಡಿ ಮೇಲೆ ಹಾಕಲು ನೋಡಿದ್ರು. ಹುಬ್ಬಳ್ಳಿಯಲ್ಲಿ ಸುಜಾತಾ ಹಂಡಿ ಮನೆಗೆ ಹೋಗಿ ಹೊಡೆದು ಅವರ ಮೇಲೆ ಕೇಸ್ ಹಾಕಿದ್ದಾರೆ ಇದು ಕಾಂಗ್ರೆಸ್ ಸಂಸ್ಕೃತಿ ಎಂದರು ಹರಿಹಾಯ್ದರು.

ಇವುಗಳನ್ನು ಓದಿ:

ಬ್ಯಾನರ್ ಗಲಾಟೆ ಪ್ರಕರಣ - ಸರ್ಕಾರ ಕಠಿಣ ಕ್ರಮ ಕೈಗೊಳ್ಳುವ ವಿಶ್ವಾಸವಿತ್ತು: ಅದು ಹುಸಿಯಾಗಿದೆ ಎಂದ ಜನಾರ್ದನ ರೆಡ್ಡಿ

ದಾವಣಗೆರೆ ಮಹಾನಗರ ಪಾಲಿಕೆಯ ಇ – ಆಸ್ತಿ ತಂತ್ರಾಂಶ ಹ್ಯಾಕ್‌ ಮಾಡಿ ಐದು ಸ್ವತ್ತುಗಳಿಗೆ ಅನುಮೋದನೆ: ದೂರು ದಾಖಲು