ETV Bharat / state

ಮೈಸೂರು: ಕಳೆದ 6 ತಿಂಗಳಲ್ಲಿ 105 ಕಳವು ಪ್ರಕರಣ ಪತ್ತೆ; ಪೊಲೀಸ್ ಕಮಿಷನರ್ ಸೀಮಾ ಲಾಟ್ಕರ್

ಮೈಸೂರು ನಗರದ ವಿವಿಧ ಪೊಲೀಸ್​​​​ ಠಾಣಾ ವ್ಯಾಪ್ತಿಯಲ್ಲಿ ದಾಖಲಾಗಿದ್ದ ಕಳವು ಪ್ರಕರಣದ ಬಗ್ಗೆ ಮಾಧ್ಯಮಗೋಷ್ಟಿಯಲ್ಲಿ ಪೊಲೀಸ್ ಕಮಿಷನರ್ ಸೀಮಾ ಲಾಟ್ಕರ್ ಮಾಹಿತಿ ನೀಡಿದರು.

ಪೊಲೀಸ್ ಕಮಿಷನರ್ ಸೀಮಾ ಲಾಟ್ಕರ್  MYSURU  105 THEFT CASES  ಕಳವು ಪ್ರಕರಣ
ಪೊಲೀಸ್ ಕಮಿಷನರ್ ಸೀಮಾ ಲಾಟ್ಕರ್ ಅವರಿಂದ ಪರಿಶೀಲನೆ (ETV Bharat)
author img

By ETV Bharat Karnataka Team

Published : February 25, 2026 at 4:48 PM IST

1 Min Read
Choose ETV Bharat

ಮೈಸೂರು: ಕಳೆದ 6 ತಿಂಗಳಲ್ಲಿ ಮೈಸೂರು ನಗರದ ವಿವಿಧ ಪೊಲೀಸ್​​ ಠಾಣೆಗಳ ವ್ಯಾಪ್ತಿಯಲ್ಲಿ 105 ಕಳವು ಪ್ರಕರಣಗಳನ್ನು ಪತ್ತೆ ಮಾಡಲಾಗಿದ್ದು, ಅವುಗಳಿಂದ ನಗದು, ಚಿನ್ನಾಭರಣ, ವಾಹನಗಳು ಸೇರಿದಂತೆ ಇತರ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ನಗರ ಪೊಲೀಸ್ ಕಮಿಷನರ್ ಸೀಮಾ ಲಾಟ್ಕರ್ ಮಾಹಿತಿ ನೀಡಿದರು.

ಇಂದು ತಮ್ಮ ಕಚೇರಿಯಲ್ಲಿ ಮಾಧ್ಯಮಗೋಷ್ಟಿ ನಡೆಸಿದ ನಗರ ಪೊಲೀಸ್​​​ ಕಮಿಷನರ್​​ ಸೀಮಾ ಲಾಟ್ಕರ್​​ ಅವರು, "6 ತಿಂಗಳಲ್ಲಿ ಮೈಸೂರು ನಗರದ ವಿವಿಧ ಪೊಲೀಸ್​​​​ ಠಾಣಾ ವ್ಯಾಪ್ತಿಯಲ್ಲಿ 2,96,36,000 ಮೌಲ್ಯದ 2 ಕೆ.ಜಿ 54 ಗ್ರಾಂ ಚಿನ್ನಾಭರಣ, 5 ಕೆ.ಜಿ 13 ಗ್ರಾಂ ಬೆಳ್ಳಿ ಪದಾರ್ಥಗಳು, 57 ವಾಹನಗಳು ಹಾಗೂ 10.03.000 /- ಲಕ್ಷದ ನಗದು ಹಾಗೂ ಇತರೆ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ. ಇದರ ಜೊತೆಗೆ 2026ನೇ ಸಾಲಿನಲ್ಲಿ 22 ಎನ್​​.ಡಿ.ಪಿ.ಎಸ್​​​ ಕಾಯ್ದೆಯಲ್ಲಿ 30 ಕೆ.ಜಿ. 255 ಗ್ರಾಂ ಗಾಂಜಾ, 311 ಗ್ರಾಂ 579 ಮಿಲಿ ಗ್ರಾಂ, ಸಿಂಥೆಟಿಕ್ ಪದಾರ್ಥಗಳನ್ನು ವಶಪಡಿಸಿಕೊಳ್ಳಲಾಗಿದೆ" ಎಂದು ತಿಳಿಸಿದರು.

ಪೊಲೀಸ್ ಕಮಿಷನರ್ ಸೀಮಾ ಲಾಟ್ಕರ್ ಮಾಹಿತಿ. (ETV Bharat)

ಕಳವು ಪ್ರಕರಣ ವಿವರ: ಈ ಪ್ರಕರಣದಲ್ಲಿ ಒಟ್ಟು 82 ಆರೋಪಿಗಳನ್ನು ದಸ್ತಗಿರಿ ಮಾಡಲಾಗಿದೆ. ಇದೇ ಸಂದರ್ಭದಲ್ಲಿ ಮೈಸೂರು ನಗರದ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪತ್ತೆ ಮಾಡಿದ ಪ್ರಕರಣಗಳ ವಿವರವನ್ನು ಪೊಲೀಸ್ ಕಮಿಷನರ್​ ವಿವರಿಸಿದರು.

ಎನ್.ಡಿ.ಪಿ.ಎಸ್​ ಪ್ರಕರಣಗಳು: "ಜನವರಿಯಿಂದ ಇಲ್ಲಿಯವರೆಗೆ 16 ಜನರನ್ನು ಎನ್.ಡಿ.ಪಿ.ಎಸ್​ ಕಾಯ್ದೆ ಅಡಿಯಲ್ಲಿ ಪೆಡ್ಲರ್ಸ್​ ಎಂದು ಮೈಸೂರಿನಲ್ಲಿ ರಿಜಿಸ್ಟರ್ ಮಾಡಿಕೊಳ್ಳಲಾಗಿತ್ತು, ಅವರನ್ನು ನಾವು ಗಡೀಪಾರು ಮಾಡಿದ್ದೇವೆ. ಅದೇ ರೀತಿಯಲ್ಲಿ ಗೂಂಡಾ ಕಾಯ್ದೆಯಡಿಯಲ್ಲಿನ ಬಂಧನಕ್ಕೆ ಸಂಬಂಧಿಸದಂತೆ ನಾವು ಸರ್ಕಾರಕ್ಕೆ ಮಾಹಿತಿ ಕಳುಹಿಸಿದ್ದೇವೆ. ಗೂಂಡಾ ಕಾಯ್ದೆಯಡಿ ಇರುವ ಆರೋಪಿ ಶಿವಮೊಗ್ಗದಲ್ಲಿ ಇದ್ದಾನೆ, ಅವನನ್ನು ಸಹ ಕಸ್ಟಡಿಗೆ ತೆಗೆದುಕೊಳ್ಳಲಾಗುವುದು" ಎಂದು ಹೇಳಿದರು.

ಇದನ್ನೂ ಓದಿ: ಮೈಸೂರಿನಲ್ಲಿ ಡ್ರಗ್ಸ್​​​ ತಯಾರಿಕಾ ಘಟಕ ಪತ್ತೆ ಪ್ರಕರಣ; ಗುಜರಾತ್‌ನ ಐವರ ಬಂಧನ

ಡ್ರಗ್ಸ್​​​ ತಯಾರಿಕಾ ಘಟಕ ಪತ್ತೆ ಹಚ್ಚಿರುವ ಪ್ರಕರಣದಲ್ಲಿ ತೀವ್ರ ಕಾರ್ಯಾಚರಣೆ ನಡೆಸುತ್ತಿರುವ ಮೈಸೂರು ಪೊಲೀಸರು ಗುಜರಾತ್​ನಲ್ಲಿಯೇ ಇಲ್ಲಿನ ಐವರು ಆರೋಪಿಗಳನ್ನು ಬಂಧಿಸಿದ್ದಾರೆ. ಪೊಲೀಸ್ ತಂಡ ಇನ್ನೂ ಕೂಡ ಗುಜರಾತ್‌ನಲ್ಲೇ ಇದ್ದು, ಇನ್ನೂ ಹಲವು ಆರೋಪಿಗಳನ್ನು ಬಂಧಿಸಲು ಕಾರ್ಯಾಚರಣೆಯಲ್ಲಿ ತೊಡಗಿದ್ದಾರೆ. ಉಳಿದ ಆರೋಪಿಗಳ ಬಗ್ಗೆ ನಮ್ಮ ತಂಡಕ್ಕೆ ಸ್ಪಷ್ಟ ಸುಳಿವು ದೊರೆತಿದ್ದು, ಅವರನ್ನೂ ಕೂಡಲೇ ಬಂಧಿಸಲಾಗುವುದು ಎಂದು ಎಸ್ಪಿ ಮಲ್ಲಿಕಾರ್ಜುನ ಬಾಲದಂಡಿ ಅವರು ತಿಳಿಸಿದ್ದಾರೆ.