ETV Bharat / state

ಲೋಕಭವನದತ್ತ ಜನ ಜಮಾವಣೆ: ಪಾಸ್ ಇದ್ದವರಿಗಷ್ಟೇ ಪ್ರವೇಶ ಕಲ್ಪಿಸುತ್ತಿರುವ ಪೊಲೀಸರು

ಡಿ.ಕೆ.ಶಿವಕುಮಾರ್ ಪ್ರಮಾಣವಚನವನ್ನು ಕಣ್ತುಂಬಿಕೊಳ್ಳಲು ಜನರು ವಿಐಪಿ ಪಾಸ್ ತೋರಿಸಿ ಲೋಕಭವನ ಪ್ರವೇಶಿಸುತ್ತಿದ್ದಾರೆ.

BENGALURU  DK SHIVAKUMAR  ಡಿಕೆ ಶಿವಕುಮಾರ್ ಪ್ರಮಾಣವಚನ  ಲೋಕಭವನ
ಲೋಕಭವನದತ್ತ ಜನರ ಜಮಾವಣೆ (ETV Bharat)
author img

By ETV Bharat Karnataka Team

Published : June 3, 2026 at 4:02 PM IST

1 Min Read
Choose ETV Bharat

ಬೆಂಗಳೂರು: ರಾಜ್ಯದ ನೂತನ ಸಿಎಂ ಆಗಿ ಡಿ.ಕೆ.ಶಿವಕುಮಾರ್ ಅವರ ಪ್ರಮಾಣವಚನಕ್ಕೆ ಕ್ಷಣಗಣನೆ ಆರಂಭವಾಗಿದೆ‌. ಲೋಕಭವನಕ್ಕೆ ನಿಧಾನವಾಗಿ ಜನರು ಜಮಾವಣೆಯಾಗುತ್ತಿದ್ದಾರೆ‌. ದೂರದ ಊರಿನಿಂದ ಬಂದಿರುವ ಜನರು ವಿಐಪಿ ಪಾಸ್ ತೋರಿಸಿ ಲೋಕಭವನ ಪ್ರವೇಶಿಸುತ್ತಿದ್ದಾರೆ.

ಪಾಸ್ ಹೊಂದಿರುವವರಿಗೆ ಪೊಲೀಸ್ ತಿಮ್ಮಯ್ಯ ಜಂಕ್ಷನ್ ಮೂಲಕ ಪ್ರವೇಶ ಕಲ್ಪಿಸಲಾಗಿದೆ‌. ಪ್ರತಿಯೊಬ್ಬರ ಪಾಸ್ ಪರಿಶೀಲಿಸಿ ಸಹಿ ಹಾಕಿ, ಸ್ಕ್ಯಾನ್ ಮಾಡಿ ಪೊಲೀಸರು ಒಳಬಿಡುತ್ತಿದ್ದಾರೆ. ಬ್ಯಾರಿಕೇಡ್‌​ಗಳನ್ನು ಹಾಕಿ ಪಾದಚಾರಿ ರಸ್ತೆ ಮೂಲಕ ಲೋಕಭವನಕ್ಕೆ ಬಿಡಲಾಗುತ್ತಿದೆ. ಒಂದು ಪಾಸ್​ಗೆ ಒಬ್ಬರಿಗಷ್ಟೇ ಪ್ರವೇಶವಿದೆ. ಪಾಸ್ ಇಲ್ಲದವರನ್ನು ಪೊಲೀಸರು ವಾಪಸ್ ಕಳುಹಿಸುತ್ತಿದ್ದಾರೆ.

ಈಗಾಗಲೇ ಲೋಕಭವನದ ರಸ್ತೆ ಬಂದ್ ಮಾಡಿರುವ ಸಂಚಾರ ಪೊಲೀಸರು ಇಂಡಿಯನ್ ಎಕ್ಸ್​ಪ್ರೆಸ್ -ಕನ್ನಿಂಗ್ ಹಾಮ್ ರಸ್ತೆ ಮೂಲಕ ಗಾಲ್ಫ್ ರಸ್ತೆಗೆ ಅವಕಾಶ ಕಲ್ಪಿಸಿದ್ದಾರೆ.

ಇದನ್ನೂ ಓದಿ: ಲೈವ್ LIVE Updates: ಕೆಲವೇ ಹೊತ್ತಲ್ಲಿ ಸಿಎಂ ಆಗಿ ಡಿ.ಕೆ.ಶಿವಕುಮಾರ್ ಪದಗ್ರಹಣ; ರಾಜ್ಯದ 230 ಬಸ್ ನಿಲ್ದಾಣಗಳಲ್ಲಿ ನೇರಪ್ರಸಾರ