ETV Bharat / state

ಹಾವೇರಿ: 15 ದಿನದ ಹಿಂದಷ್ಟೇ ಮದುವೆ; ದೇವರ ದರ್ಶನ ಪಡೆದು ಬರುವಾಗ ನವದಂಪತಿ ದುರ್ಮರಣ

15 ದಿನಗಳ ಹಿಂದೆಯಷ್ಟೇ ಮದುವೆಯಾಗಿದ್ದ ದಂಪತಿ ಅಪಘಾತದಲ್ಲಿ ಇಂದು ಮೃತಪಟ್ಟಿರುವ ಘಟನೆ ಹಾವೇರಿ ಜಿಲ್ಲೆಯಲ್ಲಿ ನಡೆದಿದೆ.

HAVERI  COUPLE DIED IN ACCIDENT  CAR HITS LORRY  ಅಪಘಾತದಲ್ಲಿ ನವದಂಪತಿ ಸಾವು  NEWLY WEDDING COUPLE DIED
ಅಪಘಾತದಲ್ಲಿ ನವದಂಪತಿ ಸಾವು (ETV Bharat)
author img

By ETV Bharat Karnataka Team

Published : March 1, 2026 at 12:12 PM IST

2 Min Read
Choose ETV Bharat

ಹಾವೇರಿ: ನಿಂತಿದ್ದ ಲಾರಿಗೆ ಕಾರು ಡಿಕ್ಕಿಯಾಗಿ ನವದಂಪತಿ ಸಾವನ್ನಪ್ಪಿರುವ ಮನಕಲಕುವ ಘಟನೆ ಹಾವೇರಿ ಜಿಲ್ಲೆಯ ಶಿಗ್ಗಾಂವ ತಾಲೂಕಿನ ಕಡಹಳ್ಳಿ ಗ್ರಾಮದ ಬಳಿಯ ರಾಷ್ಟ್ರೀಯ ಹೆದ್ದಾರಿ 48ರಲ್ಲಿ ಇಂದು ನಸುಕಿನ ಜಾವ ನಡೆದಿದೆ.

ಶಿಗ್ಗಾಂವ ಮೂಲದ ಕಾರ್ತಿಕ್ ಹೂಗಾರ (34) ಮತ್ತು ಐಶ್ವರ್ಯ ಹೂಗಾರ (30) ಮೃತ ದಂಪತಿ. 15 ದಿನಗಳ ಹಿಂದೆಯಷ್ಟೇ ಇವರು ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದರು.

ಅಪಘಾತದ ಬಗ್ಗೆ ಎಸ್​ಪಿ ಮಾಹಿತಿ (ETV Bharat)

ದೇವರ ದರ್ಶನ ಪಡೆದು ಬರುವಾಗ ದುರಂತ: ಕಾರ್ತಿಕ್ ಅವರು ಪತ್ನಿ ಮತ್ತು ಸಂಬಂಧಿಕರ ಜೊತೆ ಗದಗ ಜಿಲ್ಲೆಯ ನವಲಗುಂದ ಕಾಮಣ್ಣನ ದರ್ಶನಕ್ಕೆ ಹೋಗಿದ್ದರು. ಕಾಮಣ್ಣನ ದರ್ಶನ ಪಡೆದು ಹಾವೇರಿಗೆ ಆಗಮಿಸುತ್ತಿದ್ದ ವೇಳೆ ದುರ್ಘಟನೆ ನಡೆದಿದೆ. ವಿಚಿತ್ರ ಅಂದರೆ ಐಶ್ವರ್ಯ ಅವರ ಗ್ರಾಮ ನೀರಲಗಿ ಕ್ರಾಸ್ ಬಳಿಯೇ ಅಪಘಾತ ಸಂಭವಿಸಿದೆ.

ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗೆ ಶಿಗ್ಗಾಂವ್ ತಾಲೂಕಾಸ್ಪತ್ರೆಗೆ ತರಲಾಗಿದೆ. ಇನ್ನು ಅಪಘಾತದಲ್ಲಿ ಮಲ್ಲಿಕಾರ್ಜುನ ಮತ್ತು ವಿನಾಯಕ ಎಂಬುವರು ಗಾಯಗೊಂಡಿದ್ದಾರೆ. ಮೃತರ ಸಂಬಂಧಿಕರ ಅಕ್ರಂದನ ಮುಗಿಲುಮುಟ್ಟಿತ್ತು. ಹಾವೇರಿಯಲ್ಲಿ ಸಂಜೆ‌ ಅಂತ್ಯಕ್ರಿಯೆ ನಡೆಯಲಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.

HAVERI  COUPLE DIED IN ACCIDENT  CAR HITS LORRY  ಅಪಘಾತದಲ್ಲಿ ನವದಂಪತಿ ಸಾವು  NEWLY WEDDING COUPLE DIED
ಅಪಘಾತದಲ್ಲಿ ಜಖಂಗೊಂಡ ಕಾರು (ETV Bharat)

ಅಗ್ನಿಶಾಮಕ ದಳದ ಸಿಬ್ಬಂದಿ ಹಾಗೂ ಸ್ಥಳೀಯರು ಕಾರಿನಿಂದ ಮೃತದೇಹಗಳನ್ನು ಹೊರತೆಗೆದರು. ಡಿಕ್ಕಿಯ ರಭಸಕ್ಕೆ ವಾಹನ ಸಂಪೂರ್ಣವಾಗಿ ನಜ್ಜುಗುಜ್ಜಾಗಿತ್ತು. ಸ್ಥಳಕ್ಕೆ ತಡಸ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದರು. ಈ ಕುರಿತು ತಡಸ ಪೊಲೀಸ್ ಠಾಣೆಯ ಪ್ರಕರಣ ದಾಖಲಾಗಿದೆ.

ವರದಿಗಾರ ದಿವಂಗತ ಗಂಗಾಧರ ಹೂಗಾರ ಅವರ ಇಬ್ಬರು ಪುತ್ರರಾದ ಕಾರ್ತಿಕ್ ಮತ್ತು ಕರ್ಣ ಅವರಿಗೆ ಫೆ.14ರಂದು ಮದುವೆಯಾಗಿತ್ತು. ವಿವಾಹದ ಬಳಿಕ ಕರ್ಣ ಮತ್ತು ಅವರ ಪತ್ನಿ ಪ್ರವಾಸಕ್ಕೆ ತೆರಳಿದ್ದರು. ಕಾರ್ತಿಕ್ ತಮ್ಮ ಪತ್ನಿ ಮತ್ತು ಸಂಬಂಧಿಕರೊಂದಿಗೆ ದೇವರ ದರ್ಶನಕ್ಕೆ ಹೋಗಿದ್ದರು ಎಂದು ತಿಳಿದುಬಂದಿದೆ.

ರಸ್ತೆಯಲ್ಲಿ ನಿಂತಿದ್ದ ಲಾರಿಗೆ ಹಿಂಬದಿಯಿಂದ ಕಾರು ಇಂದು ನಸುಕಿನ 5.30 ರ ಸುಮಾರಿಗೆ ಡಿಕ್ಕಿ ಹೊಡೆದಿದೆ. ಕಾರಲ್ಲಿದ್ದ 4 ಜನರಲ್ಲಿ ಇಬ್ಬರು ಸ್ಥಳದಲ್ಲೇ ಸಾವನ್ನಪ್ಪಿದ್ದು, ಗಾಯಗೊಂಡಿರುವ ಇನ್ನಿಬ್ಬರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಕುರಿತು ತಡಸ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ, ಮುಂದಿನ ತನಿಖೆ ಕೈಗೊಳ್ಳಲಾಗಿದೆ ಎಂದು ಎಸ್​ಪಿ ಯಶೋಧಾ ವಂಟಗೋಡಿ ತಿಳಿಸಿದ್ದಾರೆ.

ಇದನ್ನೂ ಓದಿ: ಬೆಂಗಳೂರಲ್ಲಿ ಒಡಿಶಾ ದಂಪತಿ ಸಾವು: ಪತ್ನಿ ಕೊಂದು ಪತಿ ಆತ್ಮಹತ್ಯೆ

ಸಂಬಂಧಿಕರ ಅಂತ್ಯಕ್ರಿಯೆಗೆ ತೆರಳುತ್ತಿದ್ದ ದಂಪತಿ ಸಾವು: ಸಂಬಂಧಿಕರ ಅಂತ್ಯಕ್ರಿಯೆ ತೆರಳುತ್ತಿದ್ದ ದಂಪತಿ ಅಪಘಾತದಲ್ಲಿ ಮೃತಪಟ್ಟ ಘಟನೆ ಮೈಸೂರಿನ ಕೆ.ಆರ್.ನಗರದ ತಾಲೂಕಿನಲ್ಲಿ ಶುಕ್ರವಾರ ನಡೆದಿತ್ತು. ಹಿಂಬದಿಯಿಂದ ಕಾರು ಡಿಕ್ಕಿಯಾದ ಪರಿಣಾಮ ಬೈಕ್​ನಲ್ಲಿ ತೆರಳುತ್ತಿದ್ದ ಗಂಡ ಹೆಂಡತಿ ಸ್ಥಳದಲ್ಲೇ ಸಾವನ್ನಪ್ಪಿದ್ದರು.

ಕೆ.ಆರ್.ನಗರ ತಾಲೂಕಿನ ಬೀರನಹಳ್ಳಿ ಗ್ರಾಮದ ನಂಜುಂಡಸೋಮಚಾರ್ (51) ಪತ್ನಿ ನೇತ್ರಾವತಿ(48) ಮೃತ ದಂಪತಿ. ಹಾಸನದಲ್ಲಿ ಸಂಬಂಧಿಕರ ಅಂತ್ಯಕ್ರಿಯೆಯಲ್ಲಿ ಭಾಗವಹಿಸಲು ಬೈಕ್​​ನಲ್ಲಿ ತೆರಳುತ್ತಿದ್ದ ವೇಳೆ ಕಗ್ಗರೆ ಬಳಿ ಹಿಂದಿನಿಂದ ವೇಗವಾಗಿ ಬಂದ ಕಾರು ಡಿಕ್ಕಿ ಹೊಡೆದಿತ್ತು. ಪರಿಣಾಮ , ಬೈಕ್‌ನಿಂದ ಕೆಳಗೆ ಬಿದ್ದ ಪರಿಣಾಮ ದಂಪತಿ ಸ್ಥಳದಲ್ಲಿಯೇ ಮೃತಪಟ್ಟಿದ್ದರು.