ETV Bharat / state

ಪಕ್ಷಕ್ಕೆ ಮುಜುಗರ ಆಗಬಾರದೆಂದು ನಾಗೇಂದ್ರ ರಾಜೀನಾಮೆ ನೀಡಿದ್ದಾರೆ: ಡಿಸಿಎಂ ಜಿ.ಪರಮೇಶ್ವರ್

ರಾಜೀನಾಮೆ ಕೊಡೋ ಅವಶ್ಯಕತೆ ಇರಲಿಲ್ಲ, ಪಕ್ಷಕ್ಕೆ ಮುಜುಗರ ಆಗಬಾರದು ಅಂತ ನಾಗೇಂದ್ರ ಅವರು ರಾಜೀನಾಮೆ ಕೊಟ್ಟಿದ್ದಾರೆ ಎಂದು ಡಿಸಿಎಂ ಪರಮೇಶ್ವರ್ ಎಂದು ತಿಳಿಸಿದ್ದಾರೆ.

DCM G. Parameshwar
ಡಿಸಿಎಂ ಜಿ.ಪರಮೇಶ್ವರ್ (ETV Bharat)
author img

By ETV Bharat Karnataka Team

Published : August 29, 2026 at 4:15 PM IST

|

Updated : August 29, 2026 at 4:58 PM IST

2 Min Read
Choose ETV Bharat

ಮೈಸೂರು: ಸಚಿವ ನಾಗೇಂದ್ರ ಅವರು ಪಕ್ಷಕ್ಕೆ ಮುಜುಗರ ಆಗಬಾರದು ಎಂಬ ಕಾರಣಕ್ಕೆ ರಾಜೀನಾಮೆ ನೀಡಿದ್ಧಾರೆ ಎಂದು ಡಿಸಿಎಂ ಪರಮೇಶ್ವರ್ ಹೇಳಿದ್ದಾರೆ.

ಮೈಸೂರಿನಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಬಿಜೆಪಿ ಈ ವಿಚಾರದಲ್ಲಿ ರಾಜಕೀಯ ಮಾಡಿದೆ. ಎರಡು ಬಾರಿ ರಾಜೀನಾಮೆ ಕೊಡಿಸಿ ರಾಜಕೀಯ ಮಾಡಿದ್ರು. ನಾಗೇಂದ್ರ ಪಕ್ಷದ ಶಿಸ್ತಿನ ಸಿಪಾಯಿ. ಪಕ್ಷಕ್ಕೆ ಮುಜುಗರ ಆಗಬಾರದು ಎಂದು ರಾಜೀನಾಮೆ ಕೊಟ್ಟಿದ್ದಾರೆ. ರಾಜೀನಾಮೆ ಕೊಡೋ ಅವಶ್ಯಕತೆ ಇರಲಿಲ್ಲ. ಇಡಿ, ಸಿಬಿಐನಲ್ಲಿ ನಾಗೇಂದ್ರ ಹೆಸರು ಉಲ್ಲೇಖ ಇಲ್ಲ. ನಾಗೇಂದ್ರ ಹಣ ಪಡೆದಿರುವ ಬಗ್ಗೆಯೂ ಸಾಕ್ಷಿ ಇಲ್ಲ. ನಾನು ಗೃಹಮಂತ್ರಿ ಆಗಿದ್ದಾಗಲೇ ಬಹುತೇಕ 79 ಶೇ. ಹಣ ರಿಕವರಿ ಆಗಿತ್ತು. 5 ಕೋಟಿ ಹಣ ರಿಕವರಿ ಪ್ರೊಸೆಸಿಂಗ್ ಆಗ್ತಿದೆ. ಅಲ್ಲೆಲ್ಲೂ ನಾಗೇಂದ್ರ ಹೆಸರು ಇಲ್ಲ. ನಾವು ಮುಂದಿನ ದಿನಗಳಲ್ಲಿ ವಸ್ತುಸ್ಥಿತಿ ಬಗ್ಗೆ ಜನರ ಮುಂದೆ ತಿಳಿಸುತ್ತೇವೆ. ಬಿಜೆಪಿಯವರು ಸದನದಲ್ಲಿ ಈ ಪ್ರಶ್ನೆ ಕೇಳಿ ಎಂದರೂ ಕೇಳಲಿಲ್ಲ. ಅವರು ಬರೀ ರಾಜಕೀಯ ಮಾಡ್ತಿದ್ದಾರೆ ಅಷ್ಟೇ ಎಂದರು.

ಡಿಸಿಎಂ ಜಿ.ಪರಮೇಶ್ವರ್ (ETV Bharat)

ಈ ಬಗ್ಗೆ ನನಗೆ ಹೆಚ್ಚಿನ ಮಾಹಿತಿ ಇಲ್ಲ. ಮೈಸೂರಿನಲ್ಲಿ ಹೆಚ್ಚಿನ ಕಾರ್ಖಾನೆಗಳು ಬರಬೇಕು ಅಂತ ಕೆಐಡಿಬಿ ಭೂಮಿಗೆ ನೋಟಿಫಿಕೇಶನ್ ಕೊಟ್ಟಿರಬಹುದು. ಈ ಬಗ್ಗೆ ಮಾಜಿ ಸಿಎಂ ಸಿದ್ದರಾಮಯ್ಯ, ಜಿಲ್ಲಾ ಮಂತ್ರಿಗಳು ನೋಡಿಕೊಳ್ಳುತ್ತಾರೆ. ಆ ಬಗ್ಗೆ ಹೆಚ್ಚು ಮಾಹಿತಿ ಇಲ್ಲ. ಕೈಗಾರಿಕಾ ಮಂತ್ರಿಗಳು ಜಿಲ್ಲಾ ಮಂತ್ರಿಗಳು ಈ ಬಗ್ಗೆ ನೋಡಿಕೊಳ್ಳುತ್ತಾರೆ ಎಂದು ತಿಳಿಸಿದರು.

ಕೇಂದ್ರ ಪರಿಹಾರ ನೀಡಲಿ: 101 ತಾಲೂಕುಗಳನ್ನು ಬರ ತಾಲೂಕು ಎಂದು ಘೋಷಣೆ ಮಾಡಿದ್ದೇವೆ. ಕೇಂದ್ರ ಸರ್ಕಾರಕ್ಕೆ ಪರಿಹಾರದ ಕುರಿತು ಮನವಿ ಮಾಡಿದ್ದೇವೆ. ಕೇಂದ್ರ ಸರ್ಕಾರದ ನಿಯಮಗಳಂತೆ ಬರ ಅಧ್ಯಯನ ಆಗಿದೆ. ಅವರು ಕೂಡ ಒಂದು ಟೀಮ್ ಕಳುಹಿಸಿ ಪರಿಶೀಲನೆ ಮಾಡುತ್ತಾರೆ. ಆ ಬಳಿಕ ಪರಿಹಾರದ ಹಣ ಬಿಡುಗಡೆ ಮಾಡ್ತಾರೆ. ನಮ್ಮ ಮುಂದೆ ಇರೋದು ಕುಡಿಯುವ ನೀರಿಗೆ ಮೊದಲ ಆದ್ಯತೆ. ಜಾನುವಾರುಗಳಿಗೆ ಕುಡಿಯುವ ನೀರು ಒದಗಿಸುವುದು. ಕಳೆದ ಬಾರಿ ನ್ಯಾಯಾಲಯಕ್ಕೆ ಹೋಗಿ ಹೋರಾಟ ಮಾಡಿ 3,500 ಸಾವಿರ ಕೋಟಿ ಪರಿಹಾರ ಬಂತು. ಈ ಬಗ್ಗೆ ಕೇಂದ್ರ ಸರ್ಕಾರದ ಗಮನಕ್ಕೆ ತಂದಿದ್ದೇವೆ ಇಂತಹ ಘಟನೆಗಳು ಮರುಕಳಿಸದಂತೆ ನೋಡಿಕೊಳ್ಳಿ ಎಂದು ಮನವಿ ಮಾಡುತ್ತೇವೆ ಎಂದು ಹೇಳಿದರು.

ಕುಮಾರಸ್ಚಾಮಿ ದಾಖಲಾತಿ ಕೊಡಲಿ: ಎಲ್ಲರ ಮೇಲೂ ಎಲ್ಲದಕ್ಕೂ ಅಪಾದನೆ ಮಾಡೋದು ಕುಮಾರಸ್ವಾಮಿ ಅವರ ಕೆಲಸ. ಅದಕ್ಕೆ ತಕ್ಕಂತ ದಾಖಲೆಗಳು ಇದ್ರೆ ಕೊಡಲಿ. ಕಾನೂನು ಚೌಕಟ್ಟಿನಲ್ಲಿ ಏನು ಬೇಕಾದರೂ ಮಾಡಲಿ. ದೇಶದಲ್ಲಿ ಕಾನೂನು ಎಲ್ಲರಿಗೂ ಒಂದೇ. ನನಗೂ ಒಂದೇ ಕುಮಾರಸ್ವಾಮಿಗೂ ಒಂದೇ, ಪ್ರಿಯಾಂಕಾ ಖರ್ಗೆಗೂ ಒಂದೇ ಎಂದರು.

ಸಿದ್ದರಾಮಯ್ಯ ಸದನಕ್ಕೂ ಬಂದಿದ್ರು ಈಗ ಎರಡು ತಿಂಗಳು ರೆಸ್ಟ್ ತೆಗೆದುಕೊಳ್ಳುತ್ತಿದ್ದಾರೆ. ಬಳಿಕ ಅವರು ಕೂಡ ಶುರು ಮಾಡ್ತಾರೆ ಎಂದು ಹೇಳಿದರು.

ಇದನ್ನೂ ಓದಿ: 102 ತಾಲೂಕುಗಳ ಗ್ರೌಂಡ್‌ ಟ್ರೂಥಿಂಗ್‌ ವರದಿ ಬಂದಿದ್ದು, ಮುಂದಿನ ಸಂಪುಟ ಸಭೆಯಲ್ಲಿ ಬರ ಘೋಷಣೆ: ಡಿಸಿಎಂ ಜಿ. ಪರಮೇಶ್ವರ್​​

Last Updated : August 29, 2026 at 4:58 PM IST