ETV Bharat / state

ರಣಜಿ ಫೈನಲ್ ವೀಕ್ಷಣೆಗೆ ಜಮ್ಮು ಸಿಎಂ ಓಮರ್ ಅಬ್ದುಲ್ಲಾ ಆಗಮನ; ಪೊಲೀಸ್ ಇಲಾಖೆಯಿಂದ ಸರ್ವ ಸಿದ್ದತೆ

ಹು-ಧಾ ಪೊಲೀಸ್ ಕಮಿಷನರ್ ಎನ್.ಶಶಿಕುಮಾರ್ ಅವರು ರಣಜಿ ಫೈನಲ್ ಪಂದ್ಯದ ಸೂಕ್ತ ಭದ್ರತೆ ಕುರಿತು ಪ್ರತಿಕ್ರಿಯಿಸಿದರು.

n-shashi-kumar-reaction-about-security-for-the-ranaji-final-match
ಹು-ಧಾ ಪೊಲೀಸ್ ಕಮಿಷನರ್ ಎನ್. ಶಶಿಕುಮಾರ್ (ETV Bharat)
author img

By ETV Bharat Karnataka Team

Published : February 27, 2026 at 6:35 PM IST

1 Min Read
Choose ETV Bharat

ಹುಬ್ಬಳ್ಳಿ: ಇಲ್ಲಿನ ಕೆಎಸ್​ಸಿಎ ಮೈದಾನದಲ್ಲಿ ‌ನಡೆಯುತ್ತಿರುವ ಕರ್ನಾಟಕ ಹಾಗೂ ಜಮ್ಮು ಕಾಶ್ಮೀರ ರಣಜಿ ಫೈನಲ್ ಪಂದ್ಯ ವೀಕ್ಷಣೆಗೆ ಜಮ್ಮು ಮತ್ತು ಕಾಶ್ಮೀರದ ಮುಖ್ಯಮಂತ್ರಿ ಓಮರ್ ಅಬ್ದುಲ್ಲಾ ಅವರು ಆಗಮಿಸುತ್ತಿದ್ದು, ಈ ಹಿನ್ನೆಲೆಯಲ್ಲಿ ಸೂಕ್ತ ಭದ್ರತೆ ವಹಿಸಲಾಗುತ್ತಿದೆ ಎಂದು ಹು-ಧಾ ಪೊಲೀಸ್ ಕಮಿಷನರ್ ಎನ್.ಶಶಿಕುಮಾರ್ ಹೇಳಿದ್ದಾರೆ.

ಈ ಕುರಿತು ಇಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ರಣಜಿ ಫೈನಲ್ ಪಂದ್ಯ ನಡೆಯುತ್ತಿದೆ.‌ ಸೂಕ್ತ ಭದ್ರತೆಯ ದೃಷ್ಟಿಯಿಂದ ಕೆಎಸ್​ಸಿಎ ಹಾಗೂ ಸಂಬಂಧಿತ ಪದಾಧಿಕಾರಿಗಳ ಜೊತೆ ಮಾತನಾಡಿದ್ದು, ಭದ್ರತೆ ಒದಗಿಸಲಾಗುತ್ತಿದೆ ಎಂದು ತಿಳಿಸಿದರು.

ಹು-ಧಾ ಪೊಲೀಸ್ ಕಮಿಷನರ್ ಎನ್. ಶಶಿಕುಮಾರ್ ಅವರ ಪ್ರತಿಕ್ರಿಯೆ (ETV Bharat)

ಈಗಾಗಲೇ ಎಷ್ಟು ಸೀಟು ಇದೆಯೋ ಅಷ್ಟು ಟಿಕೆಟ್ ವಿತರಸುವ ಕಾರ್ಯವನ್ನು ಆಯೋಜಕರು ಮಾಡಿದ್ದಾರೆ. ನಾಳೆ ಕೊನೆ ದಿನವಾದ್ದರಿಂದ ಹೆಚ್ಚಿನ ಜನ ಪ್ರೇಕ್ಷಕರು ಆಗಮಿಸಬಹುದು‌‌. ಅದಕ್ಕೆಲ್ಲ ಸಿದ್ದತೆ ಮಾಡಿಕೊಳ್ಳಲಾಗಿದೆ. ಹೆಚ್ಚಿನ ಬಂದೋಬಸ್ತ್ ಅವಶ್ಯಕತೆ ಇಲ್ಲ ಎಂದರು.

ನಮ್ಮ ರಾಜ್ಯದಿಂದ ಯಾರಾದರೂ ರಾಜಕಾರಣಿಗಳು ಬರುತ್ತಾರಾ? ಎಂಬ ಮಾಧ್ಯಮದವರ ಪ್ರಶ್ನೆಗೆ, ಈ ಬಗ್ಗೆ ನಮಗೆ ಸದ್ಯಕ್ಕೆ ಯಾವುದೇ ಮಾಹಿತಿ ಇಲ್ಲ. ಬಹಳ ಜನ ಸಂಪರ್ಕಿಸುತ್ತಿರುವುದಾಗಿ ಕೆಎಸ್​ಸಿಎಯವರು ಹೇಳಿದ್ದಾರೆ ಎಂದರು.

ಕೆಎಸ್​ಸಿಎ ಧಾರವಾಡ ಜೋನ್ ಕನ್ವೇನರ್ ವೀರಣ್ಣ ಸವಡಿ ಅವರು ಈಟಿವಿ ಭಾರತಕ್ಕೆ ಪ್ರತಿಕ್ರಿಯಿಸಿ, "ರಣಜಿ ಫೈನಲ್ ಪಂದ್ಯಾವಳಿ ಹುಬ್ಬಳ್ಳಿಯಲ್ಲಿ ನಡೆಯುತ್ತಿರುವುದು ತುಂಬಾ ಸಂತೋಷ ತಂದಿದೆ. ರಣಜಿ ಪಂದ್ಯಾವಳಿ​ಗೆ ಬಹಳ ಪ್ರಾಮುಖ್ಯತೆ ಇದೆ. ಫೈನಲ್ ಪಂದ್ಯ ನಡೆಸಲು ಅವಕಾಶ ಮಾಡಿಕೊಟ್ಟ ಬಿಸಿಸಿಐ, ಕೆಎಸ್‌ಸಿಎ ಪದಾಧಿಕಾರಿಗಳಿಗೆ ಧನ್ಯವಾದಗಳು" ಎಂದಿದ್ದರು.

ಇದನ್ನೂ ಓದಿ: ಹುಬ್ಬಳ್ಳಿಯಲ್ಲಿ ಕರ್ನಾಟಕ-ಜಮ್ಮು ಕಾಶ್ಮೀರ ರಣಜಿ ಫೈನಲ್‌ಗೆ ಭರದ ಸಿದ್ಧತೆ: ಕ್ರೀಡಾಭಿಮಾನಿಗಳ ಸಂತಸ