ETV Bharat / state

ಕಣ್ಣಿಗೆ ಬಟ್ಟೆ ಕಟ್ಟಿಕೊಂಡು ಬೆಂಕಿಯಿಂದ ನುಂಚಾಕು ಪ್ರದರ್ಶನ: ಬುಕ್ ಆಫ್ ವರ್ಲ್ಡ್ ರೆಕಾರ್ಡ್​ನಲ್ಲಿ ಮೈಸೂರು ಯುವಕನ ಸಾಧನೆ

ಕಣ್ಣಿಗೆ ಬಟ್ಟೆ ಕಟ್ಟಿಕೊಂಡು ಕೈಯಲ್ಲಿ ಬೆಂಕಿ ಹಚ್ಚಿದ ನುಂಚಾಕು ಹಿಡಿದು ತಿರುಗಿಸುವುದೇ ಈ ಕಲೆಯಾಗಿದೆ. ಯುವಕರೊಬ್ಬರು ಈ ಕೌಶಲ್ಯ ಪ್ರದರ್ಶಿಸಿ ಬುಕ್ ಆಫ್ ವರ್ಲ್ಡ್ ರೆಕಾರ್ಡ್​ನಲ್ಲಿ ಸ್ಥಾನ ಪಡೆದಿದ್ದಾರೆ.

MYSURU  ನುಂಚಾಕು ಕಲೆ  NUNCHAKU FIGHT  ಬುಕ್ ಆಫ್ ವರ್ಲ್ಡ್ ರೆಕಾರ್ಡ್
ನುಂಚಾಕು ಕಲೆಗಾರ ವಿದ್ಯಾರ್ಥಿ ಪ್ರವೀಣ್. (ETV Bharat)
author img

By ETV Bharat Karnataka Team

Published : September 3, 2026 at 11:23 AM IST

2 Min Read
Choose ETV Bharat

ಮೈಸೂರು: ಕಣ್ಣಿಗೆ ಬಟ್ಟೆ ಕಟ್ಟಿಕೊಂಡು ಬೆಂಕಿಯ ನುಂಚಾಕು ಕೌಶಲ್ಯ ಪ್ರದರ್ಶಿಸಿ ಮೈಸೂರಿನ ಮಹಾರಾಜ ಕಾಲೇಜಿನ ವಿದ್ಯಾರ್ಥಿ ಬುಕ್ ಆಫ್ ವರ್ಲ್ಡ್ ರೆಕಾರ್ಡ್​ನಲ್ಲಿ ತನ್ನ ಹೆಸರು ನಮೂದಿಸಿದ್ದಾರೆ.

ಚಲನಚಿತ್ರಗಳಲ್ಲಿ ಸಾಹಸ ದೃಶ್ಯಗಳ ಸ್ಟಂಟನ್ನು ಮೀರಿಸುವ ರೀತಿ ವಿದ್ಯಾರ್ಥಿ ಪ್ರವೀಣ್​ ಕಣ್ಣಿಗೆ ಬಟ್ಟೆ ಕಟ್ಟಿಕೊಂಡು ಬೆಂಕಿಯ ನುಂಚಾಕು ಕೌಶಲ್ಯ ಪ್ರದರ್ಶಿಸಿ ಬುಕ್ ಆಫ್ ವರ್ಲ್ಡ್ ರೆಕಾರ್ಡ್​ನಲ್ಲಿ ಸ್ಥಾನ ಪಡೆದಿದ್ದಾರೆ. ಈ ರೀತಿಯ ಸಾಧನೆ ಮಾಡಿದ ಮೊದಲ ಯುವಕ ಎಂಬ ಖ್ಯಾತಿ ಪಡೆದಿದ್ದಾರೆ.

ಈ ಸಾಹಸ ಮಾಡಿದ ಯುವಕ ಮೈಸೂರಿನ ಶತಮಾನ ಕಂಡ ಮಹಾರಾಜ ಕಾಲೇಜಿನ ಬಿ.ಬಿ.ಎ. ಅಂತಿಮ ವರ್ಷದ ವಿದ್ಯಾರ್ಥಿ. ಈತ ಗಾಂಧಿ ನಗರದ ನಿವಾಸಿಯಾಗಿದ್ದು, ಓದಿನೊಂದಿಗೆ ಕ್ರೀಡೆಯಲ್ಲಿ ಏನಾದರೂ ಸಾಧನೆ ಮಡಬೇಕೆಂಬ ಆಸಕ್ತಿ ಬೆಳೆಸಿಕೊಂಡಿದ್ದರು. ಹೀಗಾಗಿ ವಿಭಿನ್ನ ಹಾಗೂ ಅಪಾಯಕಾರಿ ನುಂಚಾಕು ಕೌಶಲ್ಯ ಪ್ರದರ್ಶನ ಮಾಡಿದ್ದಾರೆ. ಈ ಕೌಶಲ್ಯ ಕಲಿಕೆ ಮತ್ತು ಪ್ರದರ್ಶನಕ್ಕೆ ಜಾಲತಾಣದ ಉಪಯೋಗ ಪಡೆದುಕೊಂಡು ಈ ಸಾಹಸ ಕ್ರೀಡೆ ಮೂಲಕ ಬುಕ್ ಆಫ್ ವರ್ಲ್ಡ್ ರೆಕಾರ್ಡ್ ಸಾಧನೆ​ ಮಾಡಿದ್ದಾರೆ.

ಈಟಿವಿ ಭಾರತಕ್ಕೆ ಪ್ರವೀಣ್ ಹೇಳಿದ್ದು ಹೀಗೆ: ಕಣ್ಣಿಗೆ ಬಟ್ಟೆ ಕಟ್ಟಿಕೊಂಡು ಬೆಂಕಿ ಬಳಸಿ ನುಂಚಾಕು ಪ್ರದರ್ಶನ ಮಾಡಿ ಬುಕ್ ಆಫ್ ವರ್ಲ್ಡ್ ರೆಕಾರ್ಡ್​ ಮಾಡಿದ್ದೇನೆ. ಇದಕ್ಕೆ ಸ್ನೇಹಿತರು, ಕುಟುಂಬದವರು ತುಂಬಾ ಸಹಕಾರ ನೀಡಿದ್ದಾರೆ ಎಂದು ಪ್ರವೀಣ್ ವಿವರಿಸುತ್ತಾರೆ.

"ನನಗೆ ಓದಿನಲ್ಲಿ ಅಷ್ಟೊಂದು ಆಸಕ್ತಿ ಇಲ್ಲ. ಆದರೆ ಆಟದಲ್ಲಿ ನನಗೆ ಹೆಚ್ಚು ಆಸಕ್ತಿ. ನಾನು ಮ್ಯಾರಥಾನ್​ನಲ್ಲಿ ಅಭ್ಯಾಸ ಮಾಡುತ್ತಿದ್ದೆ. ಆದರೆ ಸಾಧನೆ ಮಾಡಲು ಆಗಲಿಲ್ಲ. ಹೀಗೆ ಯೋಚನೆ ಮಾಡುತ್ತಾ, ಗೂಗಲ್​ನಲ್ಲಿ ನೋಡಿದಾಗ ಕಣ್ಣಿಗೆ ಬಟ್ಟೆ ಕಟ್ಟಿಕೊಂಡು ಈ ರೀತಿಯ ನುಂಚಾಕು ಪ್ರದರ್ಶನ ಯಾರೂ ಮಾಡಿರಲಿಲ್ಲ. ಇದನ್ನೇ ಚಾಲೆಂಜ್​ ಆಗಿ ತೆಗೆದುಕೊಂಡು ಮೊಬೈಲ್​ ನೋಡಿ ಕಳೆದ ಐದಾರು ವರ್ಷಗಳಿಂದ ಕಣ್ಣಿಗೆ ಬಟ್ಟೆಕಟ್ಟಿಕೊಂಡು ನುಂಚಾಕು ಪ್ರದರ್ಶನ ಆರಂಭಿಸಿದೆ. ಈಗ ಈ ಸಾಹಸದಲ್ಲಿ ಬುಕ್ ಆಫ್ ವರ್ಲ್ಡ್ ರೆಕಾರ್ಡ್ ಸಾಧನೆ ಮಾಡಿದೆ. ಜುಲೈ 16 ರಂದು ಬುಕ್ ಆಫ್ ವರ್ಲ್ಡ್ ರೆಕಾರ್ಡ್​ನಿಂದ ದಾಖಲೆಯ ಪ್ರಮಾಣ ಪತ್ರ ಬಂದಿದೆ, ಇದರಿಂದ ಖುಷಿಯಾಗಿದೆ. ನನಗೆ ಸಹಕಾರ ನೀಡಿದ ಎಲ್ಲರಿಗೂ ಧನ್ಯವಾದ. ಈ ಪ್ರದರ್ಶನವನ್ನು ದಸರಾದಲ್ಲಿ ಮಾಡಬೇಕೆಂಬ ಆಸೆ. ಆದರೆ ಇದಕ್ಕೆ ಸರಿಯಾದ ಸಪೋರ್ಟ್ ಇಲ್ಲ. ಇದನ್ನು ಇತರೆ ಯುವಕರಿಗೂ ಕಲಿಸುವ ಆಸೆ ಇದೆ" ಎಂದು ಈ ಪ್ರದರ್ಶನದ ಬಗ್ಗೆ ಪ್ರವೀಣ್ ವಿವರಿಸಿದರು.

ಮೊಮ್ಮಗನ ಸಾಧನೆಗೆ ಬಗ್ಗೆ ಅಜ್ಜಿಯ ಹರ್ಷ: ಮೊಮ್ಮಗನ ಸಾಧನೆ ತಮಗೆ ಖುಷಿಕೊಟ್ಟಿದೆ ಎಂದು ಪ್ರವೀಣ ಅಜ್ಜಿ ಸಿದ್ದಮ್ಮ ಹೇಳಿದ್ದಾರೆ. ಪ್ರವೀಣ ಯಾರ ಸುದ್ದಿಗೂ ಹೋಗದೇ ತನ್ನ ಪಾಡಿಗೆ ಓದುವುದು ಮತ್ತು ಆಟ ಆಡುವುದರಲ್ಲಿ ನಿರತನಾಗಿರುತ್ತಿದ್ದ. ಈ ಕ್ರೀಡೆಯಲ್ಲಿ ಆಸಕ್ತಿ ಇದೆ ಎಂದು ಹೇಳಿದ, ಇದರಲ್ಲೇ ಮುಂದುವರೆಯುವ ಅವನ ಆಸೆಗೆ ಅಡ್ಡಿ ಬರಲಿಲ್ಲ. ಇನ್ನು ಮುಂದೆಯೂ ಇಂತಹದೇ ಸಾಧನೆ ಮಾಡಿ ರಾಜ್ಯಕ್ಕೆ ಕೀರ್ತಿ ತರಲಿ ಎಂದು ಅಜ್ಜಿ ಹೇಳಿದ್ದಾರೆ.

ಅಷ್ಟಕ್ಕೂ ಏನಿದು ನಂಚಾಕು ಕಲೆ?: ನಂಚಾಕು ಎಂಬುದು ಸಾಂಪ್ರದಾಯಿಕ ಮಾರ್ಷಲ್ ಆರ್ಟ್ಸ್ ಆಯುಧವಾಗಿದೆ. ಇದನ್ನು ಕನ್ನಡದಲ್ಲಿ ಸಮರಕಲೆ ಎಂದು ಕರೆಯಲಾಗುತ್ತದೆ. ಪ್ರಸ್ತುತ ಜಾಗತಿಕ ಮಟ್ಟದಲ್ಲಿ ಇದನ್ನು ಅತ್ಯಂತ ಜನಪ್ರಿಯ ಮತ್ತು ರೋಚಕ ಕ್ರೀಡೆಯಾಗಿ ಅಭ್ಯಾಸ ಮಾಡಲಾಗುತ್ತಿದೆ. ಎರಡು ಬಲವಾದ ಕೋಲುಗಳನ್ನು ಸಣ್ಣ ಸರಪಳಿ ಅಥವಾ ಹಗ್ಗದಿಂದ ಜೋಡಿಸಿ ಈ ಆಯುಧವನ್ನು ತಯಾರಿಸಲಾಗುತ್ತದೆ.

ಇತಿಹಾಸ: ಜಪಾನ್‌ನ ಓಕಿನಾವಾ ಪ್ರಾಂತ್ಯದ ಕೃಷಿಕರು ಭತ್ತದ ಒಕ್ಕಣಿಕೆಗೆ ಬಳಸುತ್ತಿದ್ದ ಉಪಕರಣವು ಕಾಲಕ್ರಮೇಣ ರಕ್ಷಣಾತ್ಮಕ ಆಯುಧವಾಗಿ ಬಳಕೆಗೆ ಬಂದಿತು. 1970 ರ ದಶಕದಲ್ಲಿ ಮಾರ್ಷಲ್ ಆರ್ಟ್ಸ್ ದಂತಕಥೆ ಬ್ರೂಸ್ ಲೀ ಅವರು ತಮ್ಮ ಚಲನಚಿತ್ರಗಳಲ್ಲಿ ಇದನ್ನು ಬಳಸಿದ್ದರು. ಆ ನಂತರ ನಂಚಾಕು ವಿಶ್ವದಾದ್ಯಂತ ಅಪಾರ ಜನಪ್ರಿಯತೆ ಗಳಿಸಿತು.

ಇದು ಮುಖ್ಯವಾಗಿ ಕರಾಟೆ, ಒಕಿನಾವನ್ ಕೊಬುಡೋ ಮತ್ತು ಚೈನೀಸ್ ಕುಂಗ್-ಫೂ ಕಲೆಗಳ ಪ್ರಮುಖ ಭಾಗವಾಗಿದೆ.

ಇದನ್ನೂ ಓದಿ: ಕೈಬರಹ ಸುಧಾರಣೆಗೆ ಶುರು ಮಾಡಿದ ಬರವಣಿಗೆ, ನ್ಯಾಷನಲ್ ಬುಕ್ ಆಫ್ ರೆಕಾರ್ಡ್ಸ್​ನಲ್ಲಿ ದಾಖಲೆ: 10 ಸಾವಿರ ಒಳ್ಳೆಯ ವಿಚಾರ ಬರೆದ ಎಂಜಿನಿಯರ್!