ETV Bharat / state

ಮೈಸೂರು ವಿಶ್ವವಿದ್ಯಾನಿಲಯ ಪ್ರಸಾರಾಂಗದಿಂದ 'ಇ-ಬುಕ್​' ಸೇವೆ ಲಭ್ಯ

ಹಳೆಯ ಪ್ರಕಟಣೆಯ ಪುಸ್ತಕಗಳನ್ನು ಇ - ಬುಕ್ ಆಗಿ ಪರಿವರ್ತನೆ ಮಾಡಿ, ಅದನ್ನು ಪ್ರಸಾರಾಂಗದ ವೆಬ್​​ಸೈಟ್​​ಗೆ ಹಾಕಿ, ಆಸಕ್ತರು ಖರೀದಿ ಮಾಡಲು ವ್ಯವಸ್ಥೆಯನ್ನು ಮೈಸೂರು ವಿವಿ ಪ್ರಸಾರಾಂಗ ಮಾಡುತ್ತಿದೆ.

MYSURU  ಇ ಬುಕ್ ಸೇವೆ  ಮೈಸೂರು ವಿಶ್ವವಿದ್ಯಾನಿಲಯ  ಮೈಸೂರು ವಿಶ್ವವಿದ್ಯಾನಿಲಯ ವೆಬ್‌ಸೈಟ್‌
ಪ್ರಸಾರಾಂಗದ ಪುಸ್ತಕಗಳು. (ETV Bharat)
author img

By ETV Bharat Karnataka Team

Published : August 28, 2026 at 10:15 AM IST

2 Min Read
Choose ETV Bharat

ಮೈಸೂರು: ರಾಜ್ಯದಲ್ಲಿರುವ ವಿಶ್ವ ವಿದ್ಯಾನಿಲಯಗಳ ಪೈಕಿ, ಮೈಸೂರು ವಿಶ್ವವಿದ್ಯಾನಿಲಯ ಪ್ರಸಾರಾಂಗವು ಪ್ರಪ್ರಥಮ ಬಾರಿಗೆ 'ಇ-ಬುಕ್​' ಸೇವೆ ನೀಡಲು ಸಜ್ಜುಗೊಳ್ಳುತ್ತಿದೆ.

ಮೈಸೂರು ವಿಶ್ವವಿದ್ಯಾನಿಲಯದ ಅಧೀನದಲ್ಲಿರುವ 90 ವರ್ಷ ಪೂರೈಸಿರುವ ಪ್ರಸಾರಾಂಗವು ಮಹತ್ವದ ಹೆಜ್ಜೆ ಇಟ್ಟಿದ್ದು, ರಾಜ್ಯದಲ್ಲಿಯೇ ಪ್ರಪ್ರಥಮವಾಗಿ ತನ್ನ ವೆಬ್‌ಸೈಟ್‌ನಲ್ಲಿ ಓದುಗರಿಗೆ, ಆಸಕ್ತರಿಗೆ ಇ - ಬುಕ್​ ಸೇವೆ ಒದಗಿಸಲಿದೆ.

ಪ್ರಸಾರಾಂಗ ಸಹಾಯಕ ನಿರ್ದೇಶಕ ಬಿ.ಎಸ್. ಅನಿಲಕುಮಾರ ಅವರಿಂದ ಮಾಹಿತಿ. (ETV Bharat)

ಪ್ರಸಾರಾಂಗವು ಆಧುನಿಕ ತಂತ್ರಜ್ಞಾನಕ್ಕೆ ತಕ್ಕಂತೆ ಅಭಿವೃದ್ದಿಯಾಗುತ್ತಿದ್ದು, ಇನ್ನೂ ಎರಡು ವರ್ಷದಲ್ಲಿ ಪ್ರಸಾರಾಂಗದ ಪುಸ್ತಕಗಳು ಇ-ಬುಕ್‌ಗಳಾಗಿ ಪರಿವರ್ತನೆ ಆಗಲಿದ್ದು, ಕಂಪ್ಯೂಟರ್ ಪರದೆ ಮೇಲೆ ಹಾಗೂ ಮೊಬೈಲ್‌ಗಳಲ್ಲಿ ತಾವು ಇರುವ ಸ್ಥಳದಲ್ಲಿಯೇ ಪುಸ್ತಕಗಳನ್ನು ಓದಬಹುದಾಗಿದೆ. ಮೈಸೂರು ವಿಶ್ವವಿದ್ಯಾನಿಲಯದ ಕುವೆಂಪು ಕನ್ನಡ ಅಧ್ಯಯನ ಸಂಸ್ಥೆ ಹಾಗೂ ಪ್ರಸಾರಾಂಗದಲ್ಲಿ ಇರುವ ಹಸ್ತಪ್ರತಿ, ಹಳೆಗನ್ನಡ ಪುಸ್ತಕ, ವಿಶ್ವಕೋಶಗಳು, ಎಪಿಗ್ರಾಫಿಯಾ ಕರ್ನಾಟಕ, ಪ್ರವಾಸಿ ಕಂಡ ಇಂಡಿಯಾದ ಪುಸ್ತಕ, ಪರಾಮರ್ಶನ ಗ್ರಂಥ, ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಬೇಕಾದ ಮಾಹಿತಿ ಇರುವ ಪುಸ್ತಕಗಳನ್ನು ಸೇರಿದಂತೆ 4500 ಪುಸ್ತಕಗಳನ್ನು ಹೆಚ್ಚು ಈವರೆಗೆ ಪ್ರಕಟಣೆ ಮಾಡಿದೆ.

ಮೈಸೂರು ವಿಶ್ವವಿದ್ಯಾನಿಲಯದ ಪ್ರಸಾರಾಂಗಕ್ಕೆ 90 ವರ್ಷಗಳ ಸುಧೀರ್ಘವಾದ ಇತಿಹಾಸ ಇದೆ. ಮೈವಿವಿ ವ್ಯಾಪ್ತಿಯಲ್ಲಿ ಎಂಟು ಪ್ರಕಟಣ ಸಂಸ್ಥೆ ಕೆಲಸ ಮಾಡುತ್ತಿದೆ. ಪ್ರಸಾರಾಂಗ, ಕುವೆಂಪು ಕನ್ನಡ ಅಧ್ಯಯನ ಸಂಸ್ಥೆ, ಪ್ರಾಚ್ಯವಸ್ತು ಸಂಶೋಧನಾಲಯ, ಗಾಂಧಿಭವನ, ಡಾ. ಅಂಬೇಡ್ಕರ್ ಅಧ್ಯಯನ ಕೇಂದ್ರ, ಡಾ. ಬಾಬೂ ಜಗಜೀವನರಾಂ ಅಧ್ಯಯನ ಕೇಂದ್ರ, ಬಸವ ಅಧ್ಯಯನ ಪೀಠ ಪುಸ್ತಕಗಳನ್ನು ಪ್ರಕಟಣೆ ಮಾಡಿದೆ.

ಈ ಮುಂಚೆ ತತ್ವಶಾಸ್ತ್ರ ವಿಭಾಗದಿಂದಲೂ ಕೂಡ ಕೆಲವು ಪುಸ್ತಕಗಳನ್ನು ಪ್ರಕಟಣೆ ಮಾಡಲಾಗಿತ್ತು. ಪ್ರಕಟಣೆ ಮಾಡಿರುವ ಪುಸ್ತಕಗಳು, ಮಾರಾಟಕ್ಕೆ ಸಿಗುತ್ತಿರುವ ಪುಸ್ತಕಗಳನ್ನು ಬಿಟ್ಟು, ಮಾರಾಟಕ್ಕೆ ಸಿಗದೇ ಇರುವ ಪುಸ್ತಕಗಳನ್ನು ಮರು ಮುದ್ರಣಕ್ಕೆ ಕಷ್ಟವಾಗಲಿದೆ ಎಂಬ ಆಶಯದಲ್ಲಿ, ಮೈಸೂರು ವಿಶ್ವವಿದ್ಯಾನಿಲಯವು ಮಹತ್ವದ ಯೋಜನೆಯನ್ನು ರೂಪುಗೊಳಿಸಿದ್ದು. ಈಗ ಪ್ರಸಾರಾಂಗವು ಪುಸ್ತಕಗಳನ್ನು ಇ-ಬುಕ್‌ನಲ್ಲಿ ಆನ್‌ಲೈನ್ ಮಾರಾಟ ಮಾಡಲು ವ್ಯವಸ್ಥೆ ಮಾಡಿಕೊಳ್ಳುತ್ತಿದೆ.

ಎಲ್ಲ ಹಳೆಯ ಪ್ರಕಟಣೆಯ ಪುಸ್ತಕಗಳನ್ನು ಇ-ಬುಕ್ ಆಗಿ ಪರಿವರ್ತನೆ ಮಾಡಿ, ಅದನ್ನು ಪ್ರಸಾರಾಂಗದ ವೆಬ್​​ಸೈಟ್​​ಗೆ ಹಾಕಿ, ಆಸಕ್ತರು ಖರೀದಿ ಮಾಡಲು ವ್ಯವಸ್ಥೆ ಮಾಡಲಾಗುತ್ತಿದೆ. ಪ್ರಸಾರಾಂಗಕ್ಕೆ ನಾಲ್ಕೈದು ತಿಂಗಳ ಹಿಂದೆ ಹೊಸ ವೈಬ್‌ಸೈಡ್ ಮಾಡಲಾಗಿದೆ. ಎಲ್ಲ ಪುಸ್ತಕಗಳನ್ನು ಇ-ಬುಕ್ ಆಗಿ ಡೌನ್ಲೋಡ್ ಮಾಡಿಕೊಂಡಲು ನೋಡಲು ವ್ಯವಸ್ಥೆ ಮಾಡಲಾಗಿದೆ.

ರಾಜ್ಯಾದಾದ್ಯಂತ ಇರುವ ಎಲ್ಲ ವಿಶ್ವವಿದ್ಯಾನಿಲಯಗಳ ಪೈಕಿ, ಮೈಸೂರು ವಿಶ್ವವಿದ್ಯಾನಿಲಯ ವ್ಯಾಪ್ತಿಯಲ್ಲಿರುವ ಪ್ರಸಾರಾಂಗದ ಇ-ಬುಕ್ ಸೇವೆ ರಾಜ್ಯದಲ್ಲಿ ಪ್ರಪ್ರಥಮ ಯೋಜನೆ ಆಗಿದೆ. ಎರಡು ವರ್ಷದ ಕಾಲ ಮಿತಿಯೊಳಗೆ 4500 ಹೆಚ್ಚು ಪುಸ್ತಕಗಳನ್ನು ಸ್ಕ್ಯಾನ್ ಮಾಡಿ ಅಳವಡಿಸುವ ಯೋಜನೆ ಮೈಸೂರು ವಿವಿ ಹಮ್ಮಿಕೊಂಡಿದ್ದು, ಕಾರ್ಯಪ್ರವೃತವಾಗಿ ಕೆಲಸ ಮಾಡುತ್ತಿದೆ.

ಪ್ರಸಾರಾಂಗವು. "ಪುರಾಣನಾಮ ಚೂಡಮಣಿ" ಮತ್ತು "ಕನ್ನಡ ಕೈಪಿಡಿ" ಪುಸ್ತಕವನ್ನು ಇ-ಬುಕ್​ ಸೇವೆ ಅಡಿಯಲ್ಲಿ ವೆಬ್‌ಸೈಟ್​ನಲ್ಲಿ ಅಪ್ಲೋಡ್​ ಮಾಡಲಾಗಿದೆ. ಇಂಗ್ಲಿಷ್​-ಕನ್ನಡ ಡಿಕ್ಷನರಿ ಮೈಸೂರು ವಿವಿಯಿಂದ ಪ್ರಕಟವಾಗಿದೆ. ಅದನ್ನು ನೋಡಬಬಹುದಾಗಿದೆ.

ಯಾರು ವೆಚ್ಚ ಭರಿಸುವವರು?: ಮೈಸೂರು ವಿಶ್ವವಿದ್ಯಾನಿಲಯವು, ಮಿಥಿಕ್ ಸೊಸೈಟಿಯ ಜೊತೆಯ ಒಡಂಬಡಿಕೆ ಮಾಡಿಕೊಂಡಿದ್ದು,ಸಂಪೂರ್ಣ ವೆಚ್ಚವನ್ನು ಈ ಸೊಸೈಟಿಯು ಭರಿಸಲಿದೆ. ಸಣ್ಣಪುಟ್ಟ ಖರ್ಚುಗಳನ್ನು ಮೈಸೂರು ವಿಶ್ವವಿದ್ಯಾನಿಲಯ ಭರಿಸಲಿದೆ. ಎರಡು ವರ್ಷಗಳಲ್ಲಿ ಪ್ರಸಾರಾಂಗದ ಪುಸ್ತಕಗಳು ಇ-ಬುಕ್ ಆಗಿ ಓದುಗರರಿಗೆ ಮೊಬೈಲ್, ಕಂಪ್ಯೂಟರ್ ಪರದೆಯ ಮೇಲೆ ನೋಡಬಹುದಾಗಿದೆ.

ಇದನ್ನೂ ಓದಿ: 'ಹೇಳಿ ಹೋಗು ಕಾರಣ' ಪುಸ್ತಕ ಅಕ್ರಮ ಮಾರಾಟ ಪ್ರಕರಣ: 'ತಾನು ಮಾರಾಟ ಮಧ್ಯವರ್ತಿ ಮಾತ್ರ'- ಅಮೆಜಾನ್‌ ಪ್ರತಿಪಾದನೆ