ETV Bharat / state

ಮೈಸೂರಲ್ಲಿ 20,000 ನಿವೇಶನಗಳ ಹೊಸ ಮೆಗಾ ಟೌನ್​ಶಿಪ್​: MDA ಸಿದ್ಧತೆ

ಬೊಮ್ಮನಹಳ್ಳಿ ಬಳಿ 2113 ಎಕರೆ ಪ್ರದೇಶದಲ್ಲಿ ಮೆಗಾ ಟೌನ್​​ಶಿಪ್​ ಮಾಡಲು ಮೈಸೂರು ಅಭಿವೃದ್ಧಿ ಪ್ರಾಧಿಕಾರ ಮುಂದಾಗಿದೆ.

Mysuru Development Authority
ಮೈಸೂರು ಅಭಿವೃದ್ಧಿ ಪ್ರಾಧಿಕಾರ (ETV Bharat)
author img

By ETV Bharat Karnataka Team

Published : January 9, 2026 at 11:00 AM IST

2 Min Read
Choose ETV Bharat

ಮೈಸೂರು: ಮುಡಾ ಈಗ ಮೈಸೂರು ಅಭಿವೃದ್ಧಿ ಪ್ರಾಧಿಕಾರವಾದ (MDA) ಮೇಲೆ ರೈತರೊಂದಿಗಿನ ಸಹ ಮಾಲೀಕತ್ವದ ಶೇ.50:50 ರಷ್ಟು ನಿವೇಶನ ಅಭಿವೃದ್ಧಿಪಡಿಸಿ ಹೊಸ ಮೆಗಾ ಟೌನ್​ಶಿಪ್​​ ಅಭಿವೃದ್ಧಿಗೆ ಮುಂದಾಗಿದೆ. ಇದರ ಅನುಕೂಲಗಳೇನು ಎಂಬ ಮಾಹಿತಿ ಇಲ್ಲಿದೆ.

ಇಲ್ಲಿಯವರಗೆ ಬೇರೆ ರೀತಿಯಲ್ಲಿ ಸುದ್ದಿಯಾಗುತ್ತಿದ್ದ ಮೈಸೂರು ಮುಡಾ ಈಗ ತನ್ನ ಹಳೆಯ ಹೆಸರನ್ನು ಬದಲಾಯಿಸಿಕೊಂಡ ಈಗ MDA ಅಗಿದೆ. ಅಂದರೆ ಮೈಸೂರು ಅಭಿವೃದ್ಧಿ ಪ್ರಾಧಿಕಾರವಾಗಿದೆ. ಈಗ ಈ ಅಭಿವೃದ್ಧಿ ಪ್ರಾಧಿಕಾರದ ವೃತ್ತಿಯಿಂದ ನಗರದ ಹೊರವಲಯ ಬೊಮ್ಮನಹಳ್ಳಿ ಬಳಿ 2113 ಎಕರೆ ಪ್ರದೇಶದಲ್ಲಿ ಸುಮಾರು 20,000 ಸಾವಿರ ನಿವೇಶನಗಳನ್ನು ಒಳಗೊಂಡ ಮೆಗಾ ಟೌನ್​​ಶಿಪ್​ ಮಾಡಲು ಮುಂದಾಗಿದೆ.

ಬೊಮ್ಮನಹಳ್ಳಿ ಬಳಿ ರೈತರ 2113 ಎಕರೆ ಭೂಮಿಯನ್ನು ರೈತರೊಂದಿಗೆ 50:50 ಮಾದರಿಯಲ್ಲಿ ಅಭಿವೃದ್ಧಿಪಡಿಸಿ ಅದರಲ್ಲಿ ಮುಡಾ ಅಭಿವೃದ್ಧಿ ಪಡಿಸಿದ ಭೂಮಿಯನ್ನು ಶೇ.50:50 ರಷ್ಟು ನಿವೇಶನ ರೈತರಿಗೆ ನೀಡಿ ಉಳಿದ ನಿವೇಶನಗಳನ್ನು ಹಂಚುವ ಮೂಲಕ ಬೃಹತ ಟೌನ್​ಶಿಪ್​ ಮಾಡುವ ವಸತಿಯೋಜನೆಯನ್ನು MDA ಸಿದ್ಧಪಡಿಸಿದೆ.

ಡಿಸೆಂಬರ್ 30 ಅಧಿಕೃತ ಆದೇಶ: MDA ಮೈಸೂರಿನ ಬೊಮ್ಮೇನಹಳ್ಳಿ ಸವೀಪ ಇಲವಾಲ ಹೋಬಳಿಯ 2113 ಎಕರೆ ಪ್ರದೇಶದಲ್ಲಿ ಸುಮಾರು 20,000 ಸಾವಿರ ನಿವೇಶನದ ರೈತರ ಜಮೀನನ್ನು ಅಭಿವೃದ್ಧಿಪಡಿಸಿ ಅವರೊಂದಿಗೆ 50:50 ಅನುಪಾತದೊಂದೆ ಸೈಟ್ ಹಂಚುವುದು, ಇಲ್ಲವೆ ರೈತರಿಗೆ ಸೈಟ್ ಮೌಲ್ಯದ ಹಣ ನೀಡುವ ಪ್ರಕ್ರಿಯೆ ಬಗ್ಗೆ MDA ಡಿಸೆಂಬರ್ 30 ರಂದು ಅಧಿಕೃತ ಆದೇಶ ಮಾಡಿ ಸ್ಥಳೀಯ ರೈತರೊಂದಿಗೆ ಮಾತುಕತೆ ನಡೆಸಿದೆ.

ಅಭಿವೃದ್ಧಿ ಹೇಗೆ: ರೈತರ ಭೂಮಿಯನ್ನು ಯಾವುದೇ ಹಣ ನೀಡದೆ 2113 ಎಕರೆಯನ್ನು ಪಡೆಯುವ MDA ಈ ರೈತರ ಭೂಮಿಯನ್ನು ಅವರ ಸಹಭಾಗಿತ್ವದಲ್ಲಿ 50:50 ಮಾದರಿಯಲ್ಲಿ ಅಭಿವೃದ್ಧಿಪಡಿಸಿ ಶೇ.50:50 ರಷ್ಟು ಅಭಿವೃದ್ಧಿ ಪಡಿಸಿದ ನಿವೇಶನಗಳನ್ನು ರೈತರಿಗೆ ನೀಡಲಾಗುತ್ತದೆ. ರೈತರು ಹಣ ಕೇಳಿದರೆ ಸೈಟ್​ನ ಮೌಲ್ಯದ ದರದಲ್ಲಿ ಹಣ ನೀಡಲಾಗುತ್ತದೆ.

ಈ ಮೆಗಾ ಟೌನ್​ಶಿಪ್​ನಲ್ಲಿ ಅಗಲವಾದ ರಸ್ತೆಗಳು, ಒಳಚರಂಡಿ ವ್ಯವಸ್ಥೆ, ವಿದ್ಯುತ್ ಸಂಪರ್ಕ, ನೀರು ಸರಬರಾಜು, ಬೀದಿದೀಪ, ಪಾರ್ಕ್​ಗಳು, ಸಮುದಾಯ ಭವನ, ಕ್ರೀಡಾಂಗಣ, ಬಸ್ ನಿಲ್ದಾಣ, ಶಾಪಿಂಗ್ ಮಾಲ್, ಸೇರಿದಂತೆ ನಾಗರಿಕ ಸೌಕರ್ಯಗಳ ಅಭಿವೃದ್ಧಿಯನ್ನು ಮಾಡಿ ಈ ಮೆಗಾ ಟೌನ್​ ಶಿಪ್​ ನಿರ್ಮಾಣ ಮಾಡಲು ಸಿದ್ಧತೆ ಮಾಡಿಕೊಂಡಿದೆ.

ರೈತರೊಂದಿಗೆ ಮಾತುಕತೆ: ಮೈಸೂರಿನ ಹೊರವಲಯದ ಇಲವಾಲ, ಹೋಬಳಿಯ, ಬೊಮ್ಮನಹಳ್ಳಿ, ನಾಗವಾಲ, ಕಮರವಳ್ಳಿ ಮತ್ತು ದೊಡ್ಡಮರಗೌಡನಹಳ್ಳಿ ಗ್ರಾಮದ ರೈತರ ಜೊತೆ ಈಗಾಗಲೇ ಮಾತುಕತೆ ನಡೆಸಲಾಗುತ್ತಿದೆ. ರೈತರ ಒಪ್ಪಿಗೆ ಪಡೆದು ಈ ಮೆಗಾ ಯೋಜನೆ ಜಾರಿಗೊಳಿಸಲು MDA ಮುಂದಾಗಿದೆ ಎಂದು MDA ಆಯುಕ್ತ ರಕ್ಷಿತ್ ಅವರು ಈಟಿವಿ ಭಾರತ್​ಗೆ ತಿಳಿಸಿದರು.

ನಿವೇಶನ ಅಂಕ್ಷಕ್ಷಿಗಳಲ್ಲಿ ನಿರೀಕ್ಷೆ: ಕಳೆದ 25 ವರ್ಷಗಳಿಂದ ಮುಡಾ ನಿವೇಶನಕ್ಕಾಗಿ ಸಾವಿರಾರು ಮಂದಿ ಈಗಾಗಲೇ ಹಣ ಪಾವತಿಸಿ ನಿವೇಶನಕ್ಕಾಗಿ ಕಾಯುತ್ತಿದ್ದಾರೆ. ಇದರಿಂದ ಈ ಮೆಗಾ ಟೌನ್​ಶಿಪ್​ ನಿರ್ಮಾಣ ಮಾಡಲು MDA ಮುಂದಾಗಿರುವುದು ತಮಗೆ ನಿವೇಶನ ಸಿಗುವ ಭರವಸೆ ಮೂಡಿದೆ ಎನ್ನುತ್ತಾರೆ ನಿವೇಶನಕ್ಕೆ ಅರ್ಜಿ ಸಲ್ಲಿಸಿರುವ ಭಾಸ್ಕರ್.

ಖಾಸಗಿ ರಿಯಲ್ ಎಸ್ಟೇಟ್ ಮಾಲೀಕರಿಗೆ ಭಯ: ಈಗಾಗಲೇ ರಾಜ್ಯದಲ್ಲಿ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ನಗರಗಳಲ್ಲಿ ಮೈಸೂರು ಮುಂದೆ ಇದೆ. ಇಂತಹ ಮೈಸೂರಿನಲ್ಲಿ ಹಲವಾರು ಖಾಸಗಿ ರಿಯಲ್ ಎಸ್ಟೇಟ್ ಕಂಪನಿಗಳು ಜಮೀನು ತೆಗೆದುಕೊಂಡು ಸೈಟ್​ಗಳನ್ನು ಅಭಿವೃದ್ಧಿ ಪಡಿಸಿಕೊಂಡು ಮಾರಾಟ ಮಾಡುತ್ತಿವೆ. ಇಂತಂಹ ಸಂದರ್ಭದಲ್ಲಿ MDA ಈ ರೀತಿ ಮೆಗಾ ಟೌನ್​ಶಿಪ್​ ಮಾಡಲು ಮುಂದಾಗಿರುವುದು ಖಾಸಗಿ ರಿಯಲ್ ಎಸ್ಟೇಟ್ ಮಾಲೀಕರಿಗೆ ಭಯ ಶುರುವಾಗಿದೆ ಎನ್ನುತ್ತಾರೆ ರಿಯಲ್ ಎಸ್ಟೇಟ್ ಕಂಪನಿ ಹೊಂದಿರುವ ಬಾಬು.

ಇದನ್ನೂ ಓದಿ: ಕಾಮಗಾರಿ ಗುಣಮಟ್ಟದಲ್ಲಿ ರಾಜಿ ಬೇಡ, ಜಿಲ್ಲಾ‌ ಉಸ್ತುವಾರಿ ಸಚಿವರು ಪ್ರಗತಿ ಪರಿಶೀಲಿಸಿ: ಸಿಎಂ ಸೂಚನೆ