ETV Bharat / state

ಮೈಸೂರು ದಸರಾ-2026: ಜಂಬೂಸವಾರಿ ಗಜಪಡೆಗಳ ತೂಕ ಪರಿಶೀಲನೆ; ಶ್ರೀಕಂಠನೇ ಬಲ ಭೀಮ

ಜಂಬೂಸವಾರಿ ತಾಲೀಮಿಗೂ ಮುನ್ನ 9 ಆನೆಗಳ ತೂಕ ಪರಿಶೀಲಿಸಲಾಗಿದೆ.

MYSURU ಮೈಸೂರು ದಸರಾ 2026  DASARA ELEPHANTS  ಜಂಬೂಸವಾರಿ ಗಜಪಡೆ
ಮೈಸೂರು ದಸರಾ ಆನೆಗಳು (ETV Bharat)
author img

By ETV Bharat Karnataka Team

Published : August 30, 2026 at 1:03 PM IST

1 Min Read
Choose ETV Bharat

ಮೈಸೂರು: ದಸರಾ ಜಂಬೂಸವಾರಿ ಮೆರವಣಿಗೆಯಲ್ಲಿ ಭಾಗವಹಿಸುವ ಮೊದಲ ತಂಡದ 9 ಆನೆಗಳ ತೂಕ ಪರಿಶೀಲನೆ ಮಾಡಲಾಯಿತು. ಅದರಲ್ಲಿ ಶ್ರೀಕಂಠ ಆನೆ ಬಲ ಭೀಮನಾಗಿದ್ದು, ಆನಂತರದ ಸ್ಥಾನವನ್ನು ಏಕಲವ್ಯ ಪಡೆದಿದ್ದಾನೆ. ಹಾಗಾದರೆ 9 ಆನೆಗಳ ತೂಕ ಎಷ್ಟು? ಜಂಬೂಸವಾರಿ ಮೆರವಣಿಗೆಗೆ ಗಜಪಡೆಗಳ ಸಿದ್ಧತೆ ಹೇಗಿದೆ? ಎಂಬ ಕುರಿತು ಮಾಹಿತಿ ಇಲ್ಲಿದೆ.

ಈ ಬಾರಿ ನಾಡಹಬ್ಬ ದಸರಾವನ್ನು ವಿಭಿನ್ನವಾಗಿ ಆಚರಿಸುವ ಸಿದ್ಧತೆಗಳು ಭರದಿಂದ ಸಾಗಿದೆ. ಮತ್ತೊಂದು ಕಡೆ ದಸರಾ ಜಂಬೂಸವಾರಿಯ ಪ್ರಮುಖ ಆಕರ್ಷಣೆ ಗಜಪಡೆಗಳನ್ನು ಸಿದ್ಧಗೊಳಿಸುತ್ತಿರುವುದು. ಈಗಾಗಲೇ ಗಜಪಯಣದ ಮೂಲಕ ಮೈಸೂರು ಅರಮನೆಯನ್ನು ಪ್ರವೇಶ ಮಾಡಿರುವ ಮೊದಲ ಗಜಪಡೆಯ ತಂಡದ ತೂಕ ಪರೀಕ್ಷೆ ಮಾಡಲಾಗಿದೆ ಎಂದು ಡಿಸಿಎಫ್ ಪ್ರಭುಗೌಡ ಮಾಹಿತಿ ನೀಡಿದರು.

ಡಿಸಿಎಫ್ ಪ್ರಭುಗೌಡ ಪ್ರತಿಕ್ರಿಯೆ. (ETV Bharat)

9 ಗಜಪಡೆಗಳ ತೂಕ ಎಷ್ಟು? (ಕೆ.ಜಿ):

  1. ಶ್ರೀಕಂಠ -5,770
  2. ಮಹೇಂದ್ರ -5,490
  3. ಧನಂಜಯ -5,480
  4. ಪ್ರಶಾಂತ -5,190
  5. ಏಕಲವ್ಯ -5,610
  6. ಗೋಪಿ -5,170
  7. ಶ್ರೀರಾಮ -4,820
  8. ಕಾವೇರಿ -3,075
  9. ಲಕ್ಷ್ಮೀ -3,920

"ಹೀಗೆ ತಾಲೀಮಿಗೆ ಮುನ್ನ ಮೊದಲ ತಂಡದ ಗಜಪಡೆಯನ್ನು ತೂಕ ಹಾಕಲಾಯಿತು. ತೂಕ ಹೆಚ್ಚಿಸುವುದು ನಮ್ಮ ಉದ್ದೇಶವಲ್ಲ, ಆನೆಗಳ ಆರೋಗ್ಯವನ್ನು ನೋಡಿ ಅವುಗಳಿಗೆ ವಿಶೇಷ ಆಹಾರ ನೀಡಲು ತೂಕ ಪರೀಕ್ಷೆ ಸಹಾಯವಾಗಲಿದ್ದು, ಆನಂತರ ಬೆಳಗ್ಗೆ ಮತ್ತು ಸಂಜೆ ಜಂಬೂಸವಾರಿ ಸಾಗುವ ಮಾರ್ಗದಲ್ಲಿ ತಾಲೀಮನ್ನು ಆರಂಭಿಸುತ್ತೇವೆ" ಎಂದು ಡಿಸಿಎಫ್ ಪ್ರಭುಗೌಡ ಮಾಹಿತಿ ನೀಡಿದರು.

"ಗಜಪಡೆ ತಾಲೀಮು ಹಾಗೂ ಶಿಬಿರಗಳ ಸ್ಥಳದಲ್ಲಿ ಗಜಪಡೆಗಳೊಂದಿಗೆ ರೀಲ್ಸ್ ಮಾಡುವುದು, ಜಾಲತಾಣಗಳಲ್ಲಿ ಸುಳ್ಳು ವಿಡಿಯೋಗಳನ್ನು ಹಾಕುವವರ ವಿರುದ್ಧ ಕ್ರಮ ಕೈಗೊಳ್ಳುತ್ತೇವೆ. ಅರಮನೆ ಆವರಣದಲ್ಲಿ ಗಜಪಡೆ ನೋಡಲು ವಿಧಿಸಿದ್ಧ ಶುಲ್ಕವನ್ನು ವಾಪಸ್ ಪಡೆಯಲಾಯಿತು. ಈ ಬಾರಿ ಜಂಬೂಸವಾರಿಯಲ್ಲಿ ಚಿನ್ನದ ಅಂಬಾರಿ ಹೊರಲು ಹಲವು ಆನೆಗಳು ಸದೃಢವಾಗಿವೆ. ತಾಲೀಮಿನ ನಂತರ ಜಂಬೂಸವಾರಿ ಕ್ಯಾಪ್ಟನ್ ಅನ್ನು ಆಯ್ಕೆ ಮಾಡಲಾಗುವುದು" ಎಂದು ಡಿಸಿಎಫ್ ಪ್ರಭುಗೌಡ ಮಾಧ್ಯಮಗಳಿಗೆ ಮಾಹಿತಿ ನೀಡಿದರು.

ಇದನ್ನೂ ಓದಿ: ದಸರಾ ಗಜಪಡೆ ವೀಕ್ಷಣೆ ಪ್ರವೇಶ ಶುಲ್ಕಕ್ಕೆ ಸಾರ್ವಜನಿಕರಿಂದ ಆಕ್ಷೇಪ: ಟಿಕೆಟ್​ ರದ್ದುಪಡಿಸಿದ ಸಚಿವ ರಾಮಲಿಂಗರೆಡ್ಡಿ