ETV Bharat / state

ಸಿದ್ದರಾಮಯ್ಯ ಸಿಎಂ ಆಗಿ ದಾಖಲೆ ಮಾಡುವುದು ಮುಖ್ಯವಲ್ಲ, ಎಷ್ಟರಮಟ್ಟಿಗೆ ಜನಪರ ಆಡಳಿತ ನೀಡಿದ್ದಾರೆಂಬುದು ಮುಖ್ಯ: ಜಗದೀಶ್​ ಶೆಟ್ಟರ್

ಸಿದ್ದರಾಮಯ್ಯನವರು ಈಗ ಅಡಳಿತದ ಮೇಲಿನ ಹಿಡಿತ ಕಳೆದುಕೊಂಡಿದ್ದಾರೆ ಎಂದು ಸಂಸದ ಜಗದೀಶ್​ ಶೆಟ್ಟರ್​ ಹೇಳಿದ್ದಾರೆ.

JAGADISH SHETTAR
ಸಂಸದ ಜಗದೀಶ್​ ಶೆಟ್ಟರ್ (ETV Bharat)
author img

By ETV Bharat Karnataka Team

Published : January 6, 2026 at 5:41 PM IST

2 Min Read
Choose ETV Bharat

ಹುಬ್ಬಳ್ಳಿ: ದೇವರಾಜ ಅರಸು ಅವರು ಎರಡು ಅವಧಿ ಗ್ಯಾಪ್ ಇಲ್ಲದೇ ಸಿಎಂ ಆಗಿ ದಾಖಲೆ ಮಾಡಿದರು. ಆದರೆ, ಸಿದ್ದರಾಮಯ್ಯನವರು ಸತತ ಎರಡು ಅವಧಿ ಸಿಎಂ ಆಗಿಲ್ಲ, ಗ್ಯಾಪ್ ಇದೆ ಎಂದು ಮಾಜಿ‌ ಸಿಎಂ ಹಾಗೂ ಸಂಸದ ಜಗದೀಶ್​ ಶೆಟ್ಟರ್​ ಹೇಳಿದರು.

ನಗರದಲ್ಲಿಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ದಾಖಲೆ ಮಾಡುವುದು ಮುಖ್ಯವಲ್ಲ. ಜನಪರ ಆಡಳಿತ ಎಷ್ಟರಮಟ್ಟಿಗೆ ನೀಡಿದರು ಅನ್ನೋದು ಮುಖ್ಯ. ಈಗಿನ ಸಿದ್ದರಾಮಯ್ಯನವರ ಅವಧಿಯಲ್ಲಿ ಆಡಳಿತ ವ್ಯವಸ್ಥೆ ಕುಸಿದು ಹೋಗಿದೆ. ಸಿದ್ದರಾಮಯ್ಯನವರು ಈಗ ಅಡಳಿತದ ಮೇಲಿನ ಹಿಡಿತ ಕಳೆದುಕೊಂಡಿದ್ದಾರೆ. ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟು ಹೋಗಿದೆ. ಆರ್ಥಿಕ ವ್ಯವಸ್ಥೆ ಸಂಪೂರ್ಣ ನೆಲಕಚ್ಚಿದೆ. ಜನಪರ ಯೋಜನೆಗಳಿಗೆ ಅನುದಾನ ಇಲ್ಲ, ಗುತ್ತಿಗೆದಾರರ ಬಿಲ್ ಬಾಕಿ ಉಳಿದಿವೆ. ಕೇಂದ್ರ ಸರ್ಕಾರಗಳ ಯೋಜನೆಗೆ ಭೂ ಸ್ವಾಧೀನಕ್ಕೆ ಸಂಬಂಧಿಸಿದಂತೆ ರಾಜ್ಯ ಸರ್ಕಾರ ಹಣ ಬಿಡುಗಡೆ ಮಾಡುತ್ತಿಲ್ಲ ಎಂದರು.

ಸಂಸದ ಜಗದೀಶ್​ ಶೆಟ್ಟರ್​ (ETV Bharat)

ಸಿಎಂಗೆ ಯಾವ ನೈತಿಕತೆ ಇದೆ?: ಬೆಳಗಾವಿ - ಧಾರವಾಡ ರೈಲ್ವೆ ಯೋಜನೆ ಇಲ್ಲಿನ ಕಾಂಗ್ರೆಸ್ ಸರ್ಕಾರ ನಿರ್ಲಕ್ಷ್ಯದಿಂದ ನಿಂತಿದೆ. ದಾಖಲೆಯ ಸಿಎಂ‌ ಅವಧಿ ಪೂರೈಸಿದ್ದೇನೆ ಎನ್ನುವುದಕ್ಕೆ ಸಿದ್ದರಾಮಯ್ಯನವರಿಗೆ ಯಾವ ನೈತಿಕತೆ ಇದೆ?. ಬಳ್ಳಾರಿಯಲ್ಲಿ ಅವರದ್ದೇ ಶಾಸಕನ ಗಲಾಟೆಯಿಂದ ಹಿಡಿದು ಬೆಂಗಳೂರಿನ ಮಾಲಾಧಾರಿಗಳ ಮೇಲೆ ಕಲ್ಲೆಸೆತ ರಾಜ್ಯದಲ್ಲಿನ ಕಾನೂನು ಸುವ್ಯವಸ್ಥೆ ಹದಗೆಟ್ಟಿರುವುದನ್ನು ತೋರಿಸುತ್ತದೆ. ಕಾನೂನು ಸುವ್ಯವಸ್ಥೆಯಿಂದ ಅಭಿವೃದ್ಧಿ ಸೇರಿ ವಾಣಿಜ್ಯ ಚಟುವಟಿಕೆಗಳ ಮೇಲೆ ದುಷ್ಪರಿಣಾಮ ಬೀರುತ್ತದೆ. ಪಕ್ಕದ ಆಂಧ್ರದಲ್ಲಿನ ಸಿಎಂ ಅವರು ವಿದೇಶಿ ಬಂಡವಾಳ ಕಂಪನಿಗಳನ್ನು ತಮ್ಮ ರಾಜ್ಯದತ್ತ ಸೆಳೆಯುತ್ತಿದ್ದಾರೆ‌ ಎಂದು ಹೇಳಿದರು.

ಬೀದರ್‌ನಲ್ಲಿ ಎಂಎಲ್ಎ ಹಾಗೂ ಎಂಎಲ್​ಸಿ ಕೈ ಕೈ ಮಿಲಾಯಿಸಿಕೊಂಡ ವಿಚಾರದ ಪ್ರತಿಕ್ರಿಯಿಸಿ, ಜನಪ್ರತಿನಿಧಿಗಳು ಜವಾಬ್ದಾರಿಯುತವಾಗಿ ನಡೆದುಕೊಳ್ಳಬೇಕು. ಸಭೆಯಲ್ಲಿ ಎಂಎಲ್​ಸಿಯವರು ಮಾತಾಡುತ್ತಿದ್ದಾರೆ ಅದಕ್ಕೆ ನಮ್ಮ ಪಕ್ಷದ ಎಂಎಲ್‌ಎ ಅಕ್ಷೇಪ ವ್ಯಕ್ತಪಡಿಸಿದ್ದಾರೆ. ಆದರೆ, ಆಕ್ಷೇಪ ಮಾಡುತ್ತಿದಂತೆ ಎಂಎಲ್​ಸಿ, ಎಂಎಲ್‌ಎ ಮೇಲೆ ಕೈ ಮಾಡಲು ಮುಂದಾಗುವ ಸಂಸ್ಕ್ರತಿ ಸರಿಯಲ್ಲ ಎಂದರು.

ಕೊಪ್ಪಳದಲ್ಲೂ ವಿ. ಸೋಮಣ್ಣವರೊಂದಿಗೆ ಮಿನಿಸ್ಟರ್ ಕಿರಿಕ್ ವಿಚಾರವಾಗಿ ಪ್ರತಿಕ್ರಿಯಿಸಿ, ಉತ್ತರ ಕರ್ನಾಟಕದ ಇತರ ಭಾಗದಲ್ಲಿ ಆಗದ ಕಿರಿಕ್ ಕೊಪ್ಪಳದಲ್ಲಿ ಯಾಕೆ?, ಪ್ರೋಟೋಕಾಲ್ ಪ್ರಕಾರ ಕಲ್ಲಿನಲ್ಲಿ ಎಲ್ಲರ ಹೆಸರು ಇವೆ. ಬ್ಯಾನರ್​ನಲ್ಲಿ ಫೋಟೋ ಹಾಕಿಲ್ಲ ಎಂದು ಜಗಳ ತೆಗಿತ್ತಾರೆ. ಕೇಂದ್ರ ಸರ್ಕಾರದ ಕಾರ್ಯಕ್ರಮಗಳಲ್ಲಿ ಈ ರೀತಿ ಗಲಾಟೆ ಮಾಡಿ ಅಭಿವೃದ್ಧಿ ಕೆಲಸಕ್ಕೆ ಹಿನ್ನಡೆ ಮಾಡ್ತಾರೆ. ತಾವೂ ಮಾಡೋದಿಲ್ಲ, ಕೇಂದ್ರ ಸರ್ಕಾರ ಅಭಿವೃದ್ಧಿ ಮಾಡತ್ತಿದ್ದರೆ ಅದನ್ನು ಸಹಿಸಿಕೊಳ್ಳಲು ಕಾಂಗ್ರೆಸ್‌ನವರಿಗೆ ಆಗತ್ತಿಲ್ಲ ಎಂದು ಹೇಳಿದರು.

ಸವದತ್ತಿ ಎಲ್ಲಮ್ಮ ದೇವಸ್ಥಾನ ಅಭಿವೃದ್ಧಿ ವಿಹಾರಕ್ಕೆ ಪ್ರತಿಕ್ರಿಯಿಸಿ, ಸವದತ್ತಿ ಯಲ್ಲಮ್ಮ ಕ್ಷೇತ್ರ ಅಭಿವೃದ್ಧಿಗೆ ರಾಜ್ಯ ಸರ್ಕಾರ ಕೊಡುಗೆ ಏನು?, ರಾಜ್ಯಪಾಲರ ಭಾಷಣದಲ್ಲಿ 300 ಕೋಟಿ ಅಂದರು ಕೊಡಲಿಲ್ಲ. ಕೇಂದ್ರ ಸರ್ಕಾರ ನಮ್ಮ ಒತ್ತಾಯಕ್ಕೆ 118 ಕೋಟಿ ರೂ ಅನುದಾನ ನೀಡಿದೆ. ರಾಜ್ಯ ಸರ್ಕಾರ ಸವದತ್ತಿ ಭಕ್ತರ ದುಡ್ಡನೇ ಸೇರಿ 80 ಕೋಟಿಗೂ ಅಧಿಕ ಹಣ ನೀಡಿದೆ ಎಂದು ತಿಳಿಸಿದರು.

ರಾಜ್ಯ ಸರ್ಕಾರ ಅನುದಾನ ನೀಡಿಲ್ಲ. ಯಲ್ಲಮ್ಮನ ಭಕ್ತರು ದೇಣಿಗೆಯ ಹಣವನ್ನೇ ನೀಡಿ 200 ಕೋಟಿ ಅಂತಿದೆ. ಅನುದಾನ‌ ಬಂದು ಬ್ಯಾಂಕ್​ಗೆ ಬಂದಿದ್ದರು, ರಾಜ್ಯ ಸರ್ಕಾರ ಟೆಂಡರ್ ಕರೆಯಲಿಲ್ಲ. ನಾನು ಸಿಎಂ ಅವರಿಗೆ ಪತ್ರ ಬರೆದು ಸುದ್ದಿಗೋಷ್ಠಿ ಮಾಡಿದ ಮೇಲೆ ಈಗ ಟೆಂಡರ್ ಕರೆಯಲು ಮುಂದಾಗಿದ್ದಾರೆ. ಆದಷ್ಟು ಬೇಗ ಎಲ್ಲ ಕ್ಷೇತ್ರದ ಅಭಿವೃದ್ಧಿ ಕೆಲಸಗಳು ಆರಂಭಿಸಲು ಆಗ್ರಹಿಸುತ್ತೇನೆ ಎಂದರು.

ಇವುಗಳನ್ನೂ ಓದಿ: