ETV Bharat / state

ಶಿವಮೊಗ್ಗ: ಹಣಗೆರೆಕಟ್ಟೆಯಲ್ಲಿ ವಾರ್ಷಿಕ ಹುಂಡಿ ಎಣಿಕೆ; 1 ಕೋಟಿ ರೂ. ಕಾಣಿಕೆ ಸಂಗ್ರಹ

ಹಣಗೆರೆಕಟ್ಟೆಯಲ್ಲಿ ವಾರ್ಷಿಕ ಹುಂಡಿ ಕಾಣಿಕೆಯಲ್ಲಿ ಎಣಿಕೆ ನಡೆಸಿದ್ದು, ಈ ಬಾರಿ 1 ಕೋಟಿ ರೂಪಾಯಿ ಸಂಗ್ರಹವಾಗಿದೆ.

Darga hundi donation
ಹಣಗೆರೆಕಟ್ಟೆಯ ಶ್ರೀ ಚೌಡೇಶ್ವರಿ–ಸಯ್ಯಿದ್ ಸಾದತ್ ದರ್ಗಾದಲ್ಲಿ ವಾರ್ಷಿಕ ಕಾಣಿಕೆ ಹುಂಡಿ ಎಣಿಕೆಯಲ್ಲಿ ಭಾಗಿಯಾದ ಅಧಿಕಾರಿಗಳು ಮತ್ತು ಸಿಬ್ಬಂದಿ (ETV Bharat)
author img

By ETV Bharat Karnataka Team

Published : September 3, 2026 at 1:11 PM IST

|

Updated : September 3, 2026 at 2:29 PM IST

1 Min Read
Choose ETV Bharat

ಶಿವಮೊಗ್ಗ: ಜಿಲ್ಲೆಯ ಧಾರ್ಮಿಕ ಸೌಹಾರ್ದ ಕ್ಷೇತ್ರವಾದ ತೀರ್ಥಹಳ್ಳಿ ತಾಲೂಕಿನ ಹಣಗೆರೆಕಟ್ಟೆಯ ನಡೆಸಲಾಗಿದೆ. ಈ ಬಾರಿ ಹಣಗೆರೆಕಟ್ಟೆಯಲ್ಲಿ ಬರೋಬ್ಬರಿ ಒಂದು ಕೋಟಿ, ಒಂದು ಲಕ್ಷದ 73 ಸಾವಿರದ 650 ರೂಪಾಯಿ (1,01,73,650) ಸಂಗ್ರಹವಾಗಿದೆ.

ಇದರ ಜೊತೆಗೆ ಭಕ್ತಾದಿಗಳಿಂದ ಚಿನ್ನ ಹಾಗೂ ಬೆಳ್ಳಿಯ ಆಭರಣಗಳು ಸಹ ಕಾಣಿಕೆಯಾಗಿ ಸ್ವೀಕೃತವಾಗಿವೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ. ಸಂಗ್ರಹವಾದ ನಗದು ಮೊತ್ತವನ್ನು ನಿಯಮಾನುಸಾರ ಬ್ಯಾಂಕ್ ಖಾತೆಗೆ ಜಮಾ ಮಾಡಲಾಗಿದೆ.

ಈ ಹುಂಡಿ ಎಣಿಕೆ ಕಾರ್ಯವನ್ನು ಜಿಲ್ಲಾಧಿಕಾರಿ ಶ್ರೀ ಪ್ರಭುಲಿಂಗ ಕವಳಿಕಟ್ಟಿ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಎನ್. ಹೇಮಂತ್ ಕುಮಾರ್ ಹಾಗೂ ಉಪವಿಭಾಗಾಧಿಕಾರಿ ಡಾ. ಮೈತ್ರಿ ಅವರು ಖುದ್ದು ಭೇಟಿ ನೀಡಿ, ಪರಿಶೀಲಿಸಿದರು.

ಈ ಸಂದರ್ಭದಲ್ಲಿ ತಹಶಿಲ್ದಾರ್ ರಂಜಿತ್, ಮುಜರಾಯಿ ತಹಶಿಲ್ದಾರ್ ಆರ್. ಪ್ರದೀಪ್, ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷರಾದ ಕೆರೆಹಳ್ಳಿ ರಾಮಪ್ಪ ಹಾಗೂ ಸಮಿತಿಯ ಸದಸ್ಯರು, ಕಾರ್ಯನಿರ್ವಾಹಕ ಅಧಿಕಾರಿಗಳು, ಕಂದಾಯ ಇಲಾಖೆಯ ಅಧಿಕಾರಿಗಳು ಮತ್ತು ಸಿಬ್ಬಂದಿ, ಗ್ರಾಮ ಸಹಾಯಕರು, ದೇವಸ್ಥಾನದ ಸಿಬ್ಬಂದಿ, ಬ್ಯಾಂಕ್ ಸಿಬ್ಬಂದಿ ಹಾಗೂ ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿ ಭಾಗವಹಿಸಿದ್ದರು ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಹಿಂದೂ - ಮುಸ್ಲಿಂ ಧಾರ್ಮಿಕ ಕೇಂದ್ರ: ಇದು ಹಿಂದೂ ಮತ್ತು ಮುಸ್ಲಿಂ ಧರ್ಮದವರ ಧಾರ್ಮಿಕ ಕೇಂದ್ರವಾಗಿದೆ. ಇಲ್ಲಿಗೆ ದೇಶದ ನಾನಾ ಭಾಗಗಳಿಂದ ಉಭಯ ಧರ್ಮಿಯರು ಆಗಮಿಸುತ್ತಾರೆ. ಅಮಾವಾಸೆ ದಿನದಂದು ಭಕ್ತರ ದಂಡೇ ಇಲ್ಲಿಗೆ ಹರಿದುಬರುತ್ತದೆ. ಹಿಂದೆ ಇಲ್ಲಿ‌ ಬಲಿ‌ ನೀಡುವ ಪದ್ಧತಿ ಇತ್ತು. ಆದ್ರೆ ಈಗ ಆ ಪದ್ಧತಿಯನ್ನು‌‌ ನಿಷೇಧಿಸಲಾಗಿದೆ.

ಪ್ರಸ್ತು ಇಲ್ಲಿ ಮೂಲಭೂತ ಸೌಕರ್ಯದ ಕೊರತೆ ಇದೆ. ಕಾಡಿನಲ್ಲಿ ಇರುವ ಕಾರಣಕ್ಕೆ ಇಲ್ಲಿ ಹೆಚ್ಚಿನ ಅಭಿವೃದ್ಧಿ ಸಾಧ್ಯವಾಗುತ್ತಿಲ್ಲ. ಇದು ಮುಜರಾಯಿ‌ ಇಲಾಖೆಗೆ ಒಳಪಟ್ಟಿದ್ದು ತೀರ್ಥಹಳ್ಳಿ ತಹಶಿಲ್ದಾರ್ ಅವರ ಉಸ್ತುವಾರಿಯಲ್ಲಿ ಇರಲಿದೆ. ಇಲ್ಲಿಗೆ ಬರುವ ಭಕ್ತರು ಮೊದಲು ಚೌಡೇಶ್ವರಿ, ಭೂತಪ್ಪ ದೇವರಿಗೆ ಪೂಜೆ ಸಲ್ಲಿಸುತ್ತಾರೆ. ನಂತರ ಸಯ್ಯಿದ್ ಸಾದತ್ ದರ್ಗಾಗೆ ಪೂಜೆ ಸಲ್ಲಿಸುತ್ತಾರೆ. ಇಲ್ಲಿ ವರ್ಷಕ್ಕೊಮ್ಮೆ ಉರುಸ್ ನಡೆಯುತ್ತದೆ. ಉರುಸ್ ಗೂ ಸಹ ರಾಜ್ಯಾದ್ಯಂತ ಭಕ್ತರು ಆಗಮಿಸುತ್ತಾರೆ ಎನ್ನುತ್ತಾರೆ ಸ್ಥಳೀಯರು.

ಇದನ್ನೂ ಓದಿ: ಬೀದಿ ಬದಿ ವಲಯದಿಂದಲೇ ದೂರ ಉಳಿದಿರುವ ಬೀದಿ ಬದಿ ವ್ಯಾಪಾರಿಗಳು: ಇದಕ್ಕೆ ಪಾಲಿಕೆ ಆಯುಕ್ತರ ಉತ್ತರವೇನು?

Last Updated : September 3, 2026 at 2:29 PM IST