ETV Bharat / state

ಗೃಹಲಕ್ಷ್ಮಿ ಹಣದ ಬಗ್ಗೆ ಕೇಳಲು ಬಿಜೆಪಿಯವರಿಗೆ ನೈತಿಕತೆ ಇದೆಯಾ?: ಸಚಿವ ಲಾಡ್​

ಗೃಹಲಕ್ಷ್ಮಿ ಹಣ ಸಂಬಂಧ ಬಿಜೆಪಿ ನಾಯಕರ ಆರೋಪಕ್ಕೆ ಸಚಿವ ಸಂತೋಷ್ ಲಾಡ್​ ತಿರುಗೇಟು ನೀಡಿದ್ದಾರೆ.

SANTOSH LAD
ಸಚಿವ ಸಂತೋಷ್ ಲಾಡ್​ (ETV Bharat)
author img

By ETV Bharat Karnataka Team

Published : January 5, 2026 at 1:38 PM IST

2 Min Read
Choose ETV Bharat

ಧಾರವಾಡ: "ಎರಡು ತಿಂಗಳ ಗೃಹಲಕ್ಷ್ಮಿ ಹಣ ಕೊಡದಿದ್ದಕ್ಕೆ ಇಷ್ಟು ಮಾತನಾಡುತ್ತಾರೆ, 15 ಲಕ್ಷ ರೂಪಾಯಿ ಕೊಡುತ್ತೇವೆ ಎಂದು ಎದೆ ಬಡಿದುಕೊಂಡು ಇಡೀ ದೇಶ ತಿರುಗಾಡಿದರಲ್ಲ, ಇವರಿಗೆ ಈ ಬಗ್ಗೆ ಕೇಳಲು ಅರ್ಹತೆ ಇದೆಯಾ?" ಎಂದು ಸಚಿವ ಸಂತೋಷ್​ ಲಾಡ್​ ಬಿಜೆಪಿ ನಾಯಕರ ವಿರುದ್ಧ ಹರಿಹಾಯ್ದರು.

ನಗರದಲ್ಲಿಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಫಲಾನುಭವಿಗಳಿಗೆ ಗೃಹಲಕ್ಷ್ಮಿ ಹಣ ಇನ್ನೂ ಬಂದಿಲ್ಲ ಎಂಬ ಬಿಜೆಪಿ ನಾಯಕರ ಆರೋಪದ ಬಗ್ಗೆ ಪ್ರತಿಕ್ರಿಯಿಸಿ, "ಎರಡು ತಿಂಗಳ ಗೃಹಲಕ್ಷ್ಮಿ ಹಣ ಕೊಟ್ಟಿಲ್ಲ, ಈ ಸಂಬಂಧ ಮುಖ್ಯಮಂತ್ರಿಗಳು ಸದನದಲ್ಲಿ ಸಮರ್ಪಕವಾಗಿ ಉತ್ತರ ಕೊಟ್ಟಿದ್ದಾರೆ. 25 ತಿಂಗಳ ಪೈಕಿ 23 ತಿಂಗಳು ಗೃಹಲಕ್ಷ್ಮಿ ಹಣ ಕೊಟ್ಟಿದ್ದೇವೆ. ಬೇರೆ ರಾಜ್ಯಗಳಲ್ಲಿ ಚುನಾವಣೆಗೋಸ್ಕರ ಹಣ ಕೊಡುತ್ತಿದ್ದಾರಲ್ಲ, ಇವರಿಗೆ ಯಾವ ನೈತಿಕತೆ ಇದೆ ಕೇಳಲು?. ಮುಂಬರುವ ದಿನಗಳಲ್ಲಿ ಫಲಾನುಭವಿಗಳಿಗೆ ಹಣ ಕೊಡುತ್ತೇವೆ" ಎಂದು ತಿರುಗೇಟು ಕೊಟ್ಟರು.

ಸಚಿವ ಸಂತೋಷ್ ಲಾಡ್​ (ETV Bharat)

ಓಂ ಶಕ್ತಿ ಮಾಲಾಧಾರಿಗಳ ಮೇಲೆ ಕಲ್ಲೆಸೆದಿರುವ ವಿಚಾರವಾಗಿ ಮಾತನಾಡಿ, "ಯಾರು ಕಲ್ಲೆಸೆದಿದ್ದಾರೆ ಎಂದು ಸರ್ಕಾರ ಪತ್ತೆ ಹಚ್ಚುತ್ತದೆ. ಗಲಾಟೆ ಆಗಿದ್ದು ನಿಜ, ಸರ್ಕಾರ ಸೂಕ್ತ ಕ್ರಮ ಕೈಗೊಳ್ಳಲಿದೆ" ಎಂದರು.

"ಜನಾರ್ದನ ರೆಡ್ಡಿ ಹತ್ಯೆಗೆ ಸಂಚು ರೂಪಿಸಿದ್ದಾರೆ ಎಂಬ ಬಗ್ಗೆ ನನಗೆ ಗೊತ್ತಿಲ್ಲ. ಸಂಚು ಯಾರು ಮಾಡಿದ್ದಾರೆ ಅನ್ನೋದು ತನಿಖೆ ಬಳಿಕ ಗೊತ್ತಾಗಲಿದೆ" ಎಂದ ಅವರು, ಬಳ್ಳಾರಿ ರಿಪಬ್ಲಿಕ್ ವಿಚಾರವಾಗಿ ಮಾತನಾಡಿ, "ರಿಪಬ್ಲಿಕ್‌ಗೆ ರಿಪೋರ್ಟ್ ಕೊಟ್ಟವರು ಯಾರು, ರಿಪಬ್ಲಿಕ್ ಅಂತ ಕೊಟ್ಟಿದ್ದು ಸಂತೋಷ್ ಹೆಗ್ಡೆ ಸಾಹೇಬರು. ಅವರು ಅದರ ಬಗ್ಗೆ ಬರೆದಿದ್ದಾರೆ, ಅದನ್ನು ಓದಲು ಹೇಳಿ. ಆದರೆ ಘಟನೆ ಆಗಿದ್ದರ ಬಗ್ಗೆ ನಾನು ಒಪ್ಪಿಕೊಳ್ಳಲ್ಲ, ಸರ್ಕಾರವೂ ಒಪ್ಪಿಕೊಳ್ಳಲ್ಲ. ಗಲಾಟೆ ವಿಚಾರದಲ್ಲಿ ಯಾರ ತಪ್ಪಿದೆ ಎಂದು ತನಿಖೆ ಬಳಿಕ ಗೊತ್ತಾಗಲಿದೆ. ಯಾರು ತಪ್ಪಿತಸ್ಥರಿದ್ದಾರೆ ಎಂದು ಸತ್ಯಶೋಧನಾ ಸಮಿತಿ ತನಿಖೆ ಮಾಡಲಿದೆ. ಸರ್ಕಾರ ಉನ್ನತ ಮಟ್ಟದ ತನಿಖೆ ನಡೆಸುತ್ತದೆ. ಯಾರ ವಿರುದ್ಧ ಕ್ರಮ ತೆಗೆದುಕೊಳ್ಳಬೇಕೋ ತೆಗೆದುಕೊಳ್ಳುತ್ತಾರೆ" ಎಂದು ಹೇಳಿದರು.

ಪ್ರಚೋದನಕಾರಿ ಭಾಷಣ ವಿಚಾರವಾಗಿ ಮಾತನಾಡಿ, "ಕಾಯ್ದೆಯನ್ನು ಈಗಾಗಲೇ ನಾವು ಜಾರಿಗೆ ತಂದಿದ್ದೇವೆ, ಯಾರು ತಪ್ಪಿತಸ್ಥರಿದ್ದಾರೆ ಅವರ ಮೇಲೆ ಕ್ರಮ ಆಗಲಿದೆ" ಎಂದರು.

ಇತ್ತೀಚಿಗೆ ಬಳ್ಳಾರಿಯ ಸಂಡೂರು ತಾಲೂಕಿನ ವಿಠಲಾಪುರದಲ್ಲಿ ಮಾತನಾಡಿದ್ದ ಸಂತೋಷ್‌ ಲಾಡ್, "ಮುಖ್ಯಮಂತ್ರಿ ಹಾಗೂ ಉಪ ಮುಖ್ಯಮಂತ್ರಿ ಉಪಹಾರಕ್ಕೆಂದು ಅವರವರ ಮನೆಗೆ ಹೋಗಿ ಬಂದಿದ್ದಾರೆ. ಪರಸ್ಪರರು ಮುಕ್ತವಾಗಿ ಮಾತನಾಡಿ ಚರ್ಚಿಸಿ ಸ್ಪಷ್ಟನೆ ಕೊಟ್ಟಿದ್ದಾರೆ. ಯಾರಿಗೇ ಆಗಲಿ ಅಧಿಕಾರ ಶಾಶ್ವತ ಅಲ್ಲ. ಈ ಫಿಲಾಸಫಿ ಎಲ್ಲರಿಗೂ ಗೊತ್ತಿದೆ. ನಾವು ಗೌತಮ ಬುದ್ಧನ ತತ್ವವನ್ನು ಪಾಲಿಸುತ್ತೇವೆ. ರಾಜಕೀಯ, ಅಧಿಕಾರ ಸೇರಿದಂತೆ ಯಾವುದೂ ಶಾಶ್ವತವಲ್ಲ" ಎಂದು ತಿಳಿಸಿದ್ದರು.

ಇವುಗಳನ್ನೂ ಓದಿ: