ETV Bharat / state

ಸಿದ್ದರಾಮಯ್ಯ ಸಕ್ಸಸ್​ಫುಲ್ ಲೀಡರ್ ಆಗಿದ್ದಾರೆ, ಕುಮಾರಸ್ವಾಮಿ ಸಕ್ಸಸ್​ಫುಲ್ ಲೀಡರಾ: ಸಚಿವ ಚಲುವರಾಯಸ್ವಾಮಿ

ಕುಮಾರಸ್ವಾಮಿ ಕೇಂದ್ರದ‌ ಮಂತ್ರಿ ಆಗದಿದ್ರೆ, ಬಿಜೆಪಿ ಜೊತೆ ಹೋಗದಿದ್ರೆ ಬೈಯ್ತಾ ಇದ್ರು ಎಂದು ಸಚಿವ ಚಲುವರಾಯಸ್ವಾಮಿ ವಾಗ್ದಾಳಿ ನಡೆಸಿದ್ದಾರೆ.

BENGALURU  MINISTER CHELUVARAYASWAMY  HDKUMARASWAMY  ಕುಮಾರಸ್ವಾಮಿ ವಿರುದ್ಧ ಚಲುವರಾಯಸ್ವಾಮಿ CM SIDDARAMAIAH
ಸಚಿವ ಚಲುವರಾಯಸ್ವಾಮಿ (ETV Bharat)
author img

By ETV Bharat Karnataka Team

Published : January 11, 2026 at 7:17 PM IST

2 Min Read
Choose ETV Bharat

ಬೆಂಗಳೂರು: ಸಿದ್ದರಾಮಯ್ಯ ಸಕ್ಸಸ್​ಫುಲ್ ಲೀಡರ್ ಆಗಿದ್ದಾರೆ. ಅವರ ಬಗ್ಗೆ ಮಾತನಾಡುವುದು ಸರಿಯಲ್ಲ. ಕುಮಾರಸ್ವಾಮಿ ಸಕ್ಸಸ್​ಫುಲ್ ಲೀಡರಾ? ಎಂದು ಸಚಿವ ಚಲುವರಾಯಸ್ವಾಮಿ ಅವರು ಪ್ರಶ್ನಿಸಿದರು.

ನಗರದಲ್ಲಿ ಭಾನುವಾರ ಮಾಧ್ಯಮಗೋಷ್ಟಿಯಲ್ಲಿ ಮಾತನಾಡಿದ ಅವರು, ಸಾಂದರ್ಭಿಕ ಶಿಶು ಎಂದು ಅವರೇ ಹೇಳಿದ್ದಾರೆ. ಮೈತ್ರಿ ಆಗಿದ್ದು ಅವರ ಸ್ವಂತ ಹಿತಾಸಕ್ತಿಗೆ, ಜನರ ಹಿತಾಸಕ್ತಿಗಲ್ಲ. ಕಾರ್ಯಕರ್ತರ ಹಿತಾಸಕ್ತಿಗೆ ಮೈತ್ರಿ ಮಾಡಿಕೊಂಡಿಲ್ಲ. ಕುಮಾರಸ್ವಾಮಿಗೆ ಮಂತ್ರಿ ಸ್ಥಾನ ಕೊಟ್ಟರು. ಹಾಗಾಗಿ ಅವರು ಮೈತ್ರಿ ಆಗಿದ್ದಾರೆ. ಮಿಲನ ಆಗೋದು, ಮೈತ್ರಿ ಆಗೋದು ಅವರಿಗೆ ಬಿಟ್ಟಿದ್ದು.‌ ದೇವೇಗೌಡರು, ಕುಮಾರಸ್ವಾಮಿ ಮೊದಲು ಮೋದಿ ವಿರುದ್ಧ ಕಠಿಣ ಶಬ್ದ ಬಳಸಿ ಟೀಕೆ ಮಾಡ್ತಿದ್ದರು. ಕುಮಾರಸ್ವಾಮಿ ಅವರು ಕಾಂಗ್ರೆಸ್​ಗೆ ಕೂಡ ಅಷ್ಟು ಕಠಿಣ ಶಬ್ದ ಬಳಸಿಲ್ಲ. ಮೋದಿ ಮತ್ತೆ ಪ್ರಧಾನಿಯಾದರೆ ದೇಶ ಬಿಟ್ಟು ಹೋಗ್ತೀವಿ ಅಂತ ಹೇಳಿದ್ರು. ಈಗ ಅವರ ಜೊತೆಗೆ ಹೋಗಿದ್ದಾರೆ ಎಂದು ಟಾಂಗ್ ನೀಡಿದರು.

ನರೇಗಾ ಕುರಿತು ಹೆಚ್​ಡಿಕೆ ಹೇಳಿಕೆ ವಿಚಾರವಾಗಿ ಪ್ರತಿಕ್ರಿಯಿಸುತ್ತಾ, ಅವರು ಜನರ ಪರವಾಗಿ ಇಲ್ಲ. ಮೇಲ್ವರ್ಗ, ಕೈಗಾರಿಕಾ ಉದ್ಯಮಿಗಳ ಪರ ಇದ್ದಾರೆ. ಬಿಜೆಪಿ ಆರ್ಥಿಕ ಸಬಲೀಕರಣ ಮಾಡಿದವರಲ್ಲ.‌ ರೈತರು ಅಂದ್ರೆ ಎಲ್ಲ ಸಮುದಾಯದವರು ಇರ್ತಾರೆ.‌ ಹಳೇ‌ ಮೈಸೂರು ಭಾಗದಲ್ಲಿ 60, 70% ರೈತರಿದ್ದಾರೆ. ಒಕ್ಕಲಿಗರು ಸೇರಿ ಬೇರೆ ಸಮುದಾಯದವರು ಕೃಷಿ ಮಾಡ್ತಾರೆ. ಉತ್ತರ ಕರ್ನಾಟಕದಲ್ಲಿ ಲಿಂಗಾಯತರು, ಬೇರೆ ಸಮುದಾಯದವರು ಸಹ ಕೃಷಿ ‌ಮಾಡ್ತಾರೆ. ಕುಮಾರಸ್ವಾಮಿ ಕೇಂದ್ರದ‌ ಮಂತ್ರಿ ಆಗದಿದ್ರೆ, ಬಿಜೆಪಿ ಜೊತೆ ಹೋಗದಿದ್ರೆ ಬೈಯ್ತಾ ಇದ್ರು. ಬಿಜೆಪಿಯನ್ನೇ ಉಗಿಯುತ್ತಿದ್ದರು. ನಿನ್ನೆ ಬಿಜೆಪಿ ಜೊತೆಗೆ ಪ್ರೆಸ್ ಮೀಟ್ ಮಾಡಿದ್ದಾರೆ. ಯಾವ ನೈತಿಕತೆ ಇದೆ ಅವರಿಗೆ ಎಂದು ಕಿಡಿಕಾರಿದರು.

ಸ್ವಾತಂತ್ರ್ಯ ಹೋರಾಟ ಮಾಡಿದವರು ಗಾಂಧೀಜಿ. ಅವರ ಹೆಸರನ್ನೇ ಯೋಜನೆಯಿಂದ ತೆಗೆದಿದ್ದಾರೆ. ಬಿಜೆಪಿ, RSS ನವರ ಫೋಟೋ ಹಾಕಬಹುದು. ಮುಂದೆ ಅಂಬೇಡ್ಕರ್ ಹೆಸರು ತೆಗೆಯಬಹುದು. ನಮ್ಮ ಜೊತೆ ಚರ್ಚೆ ಮಾಡಬೇಕಿತ್ತು, ಮಾಡಿಲ್ಲ. ವಿಬಿ ಜಿ ರಾಮ್ ಜೀ ಬಗ್ಗೆ ಚರ್ಚೆ ಮಾಡಿಲ್ಲ. ಇದು ಕುಮಾರಸ್ವಾಮಿಗೆ ಗೊತ್ತಿಲ್ಲವೇ?.‌ ಗೊತ್ತಿಲ್ಲ ಅಂದರೆ ಅದು ಅವರ ಹಣೆ ಬರಹ ಎಂದು ಚಲುವರಾಯಸ್ವಾಮಿ ವಾಗ್ದಾಳಿ ನಡೆಸಿದರು.

ಹೈಕಮಾಂಡ್ ನಿರ್ಧರಿಸಬೇಕು: ಇಕ್ಬಾಲ್ ಹುಸೇನ್, ಶಿವಗಂಗಾಗೆ ಏನು ಮಾಹಿತಿ ಇದೆ ಗೊತ್ತಿಲ್ಲ. ನವೆಂಬರ್, ಡಿಸೆಂಬರ್ ಕ್ರಾಂತಿ ಮುಗಿದಾಯ್ತು. ಏನೇ ಬದಲಾವಣೆ ಆದ್ರೂ ಹೈಕಮಾಂಡ್ ಮಾಡಬೇಕು. ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಮತ್ತು ಮಲ್ಲಿಕಾರ್ಜುನ ಖರ್ಗೆ ಅವರು ನಿರ್ಧಾರ ಮಾಡ್ತಾರೆ. ನಾವು ಡೇಟ್ ಫಿಕ್ಸ್ ಮಾಡೋಕೆ ಆಗಲ್ಲ. ಆ ದಿವ್ಯ ಶಕ್ತಿ ನಮಗಿಲ್ಲ. ಸದ್ಯಕ್ಕೆ ಬದಲಾವಣೆ ವಿಚಾರ ಅಪ್ರಸ್ತುತ. ಸಂಪುಟ ಪುನಾರಚನೆ ಹೈಕಮಾಂಡ್ ಮಾಡುತ್ತದೆ. ನಾವು ತೀರ್ಮಾನ ಮಾಡಲು ಸಾಧ್ಯವಿಲ್ಲ ಎಂದು ಸಚಿವ ಚಲುವರಾಯಸ್ವಾಮಿ ಪ್ರತಿಕ್ರಿಯೆ ನೀಡಿದರು.

ಇದನ್ನೂ ಓದಿ: ಜಿ ರಾಮ್ ಜಿ ಕಾಯ್ದೆ ಬಗ್ಗೆ ಬಹಿರಂಗ ಚರ್ಚೆಗೆ ನಾವು ಸಿದ್ಧ, ವಿಶೇಷ ಅಧಿವೇಶನ ಬರೀ ಪ್ರಚಾರಕಷ್ಟೇ: ಹೆಚ್.ಡಿ. ಕುಮಾರಸ್ವಾಮಿ

ಒದ್ದು ಕಿತ್ತುಕೊಳ್ಳುವುದು ನನ್ನ ಎಕ್ಸ್​ಪೀರಿಯನ್ಸ್ ಅಲ್ಲ: ಡಿಕೆಶಿಗೆ ಕೇಂದ್ರ ಸಚಿವ ಹೆಚ್​ಡಿಕೆ ತಿರುಗೇಟು