ETV Bharat / state

ಪೊಲೀಸ್ ರನ್: ಮಾರ್ಚ್ 1 ರಂದು ಬೆಳಗ್ಗೆ 5 ಗಂಟೆಯಿಂದಲೇ ಮೆಟ್ರೋ ರೈಲು ಸೇವೆ ಆರಂಭ

ರಾಜ್ಯ ಪೊಲೀಸ್ ಇಲಾಖೆ ಹಾಗೂ ಸ್ಟೇಟ್ ಬ್ಯಾಂಕ್ ಆಫ್‌ ಇಂಡಿಯಾ ಸಹಯೋಗದಲ್ಲಿ ಮಾರ್ಚ್ 1ರಂದು ನಡೆಯಲಿರುವ ಪೊಲೀಸ್ ಓಟದ ಪ್ರಯುಕ್ತ ಮುಂಜಾನೆ 5 ರಿಂದಲೇ ಮೆಟ್ರೋ ರೈಲುಗಳ ಸೇವೆ ಆರಂಭವಾಗಲಿದೆ.

METRO START FROM 5 AM ON MARCH 1ST
ಮೆಟ್ರೋ ರೈಲು (IANS)
author img

By ETV Bharat Karnataka Team

Published : February 27, 2026 at 1:15 PM IST

2 Min Read
Choose ETV Bharat

ಬೆಂಗಳೂರು: ರಾಜ್ಯ ಪೊಲೀಸ್ ಇಲಾಖೆ ಹಾಗೂ ಸ್ಟೇಟ್ ಬ್ಯಾಂಕ್ ಆಫ್‌ ಇಂಡಿಯಾ ಸಹಯೋಗದಲ್ಲಿ ಮಾರ್ಚ್ 1ರಂದು ನಡೆಯಲಿರುವ ಪೊಲೀಸ್ ಓಟ (KSP Run) ಪ್ರಯುಕ್ತ ಮುಂಜಾನೆ 5 ರಿಂದಲೇ ಮೆಟ್ರೋ ರೈಲುಗಳ ಸೇವೆ ಆರಂಭವಾಗಲಿದೆ. ಪೊಲೀಸ್ ರನ್‌ನಲ್ಲಿ ಭಾಗಿಯಾಗಲು ನಗರದ ವಿವಿಧೆಡೆಯಿಂದ ಸಾಕಷ್ಟು ಜನ ಭಾಗಿಯಾಗಲಿರುವುದರಿಂದ ಮಾರ್ಚ್ 1ರಂದು ಪ್ರತಿದಿನದಂತೆ ಮುಂಜಾನೆ 7ರ ಬದಲು 5 ಗಂಟೆಯಿಂದಲೇ ಎಲ್ಲಾ ಟರ್ಮಿನಲ್‌ಗಳಿಂದ ರೈಲು ಸೇವೆ ಆರಂಭವಾಗಲಿದೆ ಎಂದು ಬಿಎಂಆರ್‌ಸಿಎಲ್ ತಿಳಿಸಿದೆ.

ತೃತೀಯ ಆವೃತ್ತಿಯ 'ಪೊಲೀಸ್ ರನ್' ಮಾರ್ಚ್ 1ರಂದು ಭಾನುವಾರ ಬೆಂಗಳೂರಿನಲ್ಲಿ ನಡೆಯಲಿದೆ. 'ನಮ್ಮ ಪೊಲೀಸ್ ನಮ್ಮ ಹೆಮ್ಮೆ' ಎಂಬ ಘೋಷವಾಕ್ಯದಡಿ ರನ್ ಹಮ್ಮಿಕೊಳ್ಳಲಾಗಿದ್ದು, ಈ ಬಾರಿ 'ಹಸಿರು ಬೆಂಗಳೂರು', 'ಮಾದಕ ಮುಕ್ತ ಕರ್ನಾಟಕ', 'ಸೈಬರ್ ಅಪರಾಧ'ದ ಕುರಿತು ಜಾಗೃತಿ ಮೂಡಿಸಲು ನಿರ್ಧರಿಸಲಾಗಿದೆ. ಈ ಬಾರಿ ಎಲ್ಲ ವಯೋಮಾನದವರಿಗೂ ಓಟದಲ್ಲಿ ಭಾಗವಹಿಸಲು ಅವಕಾಶ ಕಲ್ಪಿಸಲಾಗಿದ್ದು, ಇದುವರೆಗೂ ಸ್ಪರ್ಧೆಗೆ 9 ಸಾವಿರಕ್ಕೂ ಅಧಿಕ ಮಂದಿ ರನ್‌ನಲ್ಲಿ ಭಾಗಿಯಾಗಲು ತಮ್ಮ ಹೆಸರುಗಳನ್ನ ನೋಂದಾಯಿಸಿಕೊಂಡಿದ್ದಾರೆ.

ಮಾರ್ಚ್ 1ರಂದು ಬೆಳಗ್ಗೆ 6 ಗಂಟೆಗೆ ವಿಧಾನಸೌಧ ಮುಂಭಾಗದಲ್ಲಿ ಗೃಹ ಸಚಿವ ಡಾ ಜಿ.ಪರಮೇಶ್ವರ ಅವರು ಸ್ಪರ್ಧೆಗೆ ಚಾಲನೆ ನೀಡಲಿದ್ದಾರೆ. ನಂತರ ನಗರದ ಪ್ರಮುಖ ರಸ್ತೆಗಳಲ್ಲಿ ಸಾಗಲಿರುವ ಓಟ ಕಬ್ಬನ್ ಪಾರ್ಕ್ ಮೂಲಕ ಸಾಗಿ ವಿಧಾನಸೌಧದ ಮುಂಭಾಗದಲ್ಲಿಯೇ ಮುಕ್ತಾಯಗೊಳ್ಳಲಿದೆ.

10K ರನ್ (ವೃತ್ತಿಪರ ಮತ್ತು ಅನುಭವಿ ಓಟಗಾರರಿಗೆ ), ಜಾಗೃತಿ 5K ರನ್ - (ಎಲ್ಲರಿಗೂ ಮುಕ್ತ, ಫಿಟ್‌ನೆಸ್ ಮತ್ತು ಸಮುದಾಯವನ್ನು ಉತ್ತೇಜಿಸುವುದು). ಎರಡು ವಿಭಾಗಗಳಿಂದ ವಿಜೇತರಿಗೆ ಒಟ್ಟಾರೆಯಾಗಿ 18 ಲಕ್ಷ ರೂಪಾಯಿ ನಗದು ಬಹುಮಾನ ಇರಲಿದೆ. ಈ ಬಾರಿ 3 ಸಾವಿರ ಪೊಲೀಸ್ ಸಿಬ್ಬಂದಿ ಭಾಗವಹಿಸುತ್ತಿರುವುದು ಮತ್ತೊಂದು ವಿಶೇಷವಾಗಿದೆ. 90 ವರ್ಷ ಮೇಲ್ಪಟ್ಟವರು ಹಾಗೂ ಅಂಗವಿಕಲರು ಕೂಡ ಭಾಗವಹಿಸುತ್ತಿದ್ದಾರೆ. ಇದಲ್ಲದೆ ಮಾರ್ಚ್ 1ರಂದು ರಾಜ್ಯದ ಎಲ್ಲ ಜಿಲ್ಲಾ ಕೇಂದ್ರಗಳಲ್ಲಿಯೂ ಪೊಲೀಸ್ ರನ್ ನಡೆಯಲಿದೆ.

ಕಳೆದ ಮಂಗಳವಾರ ರಾಜ್ಯ ಪೊಲೀಸ್ ಮಹಾನಿರ್ದೇಶಕ ಡಾ. ಎಂ. ಎ. ಸಲೀಂ ಮಾತನಾಡಿ, ರಾಜ್ಯ ಪೊಲೀಸ್ ಇಲಾಖೆ ಹಾಗೂ ಸ್ಟೇಟ್ ಬ್ಯಾಂಕ್ ಆಫ್‌ ಇಂಡಿಯಾ ಸಹಯೋಗದಲ್ಲಿ ತೃತೀಯ ಆವೃತ್ತಿಯ ಪೊಲೀಸ್ ಓಟ (KSP Run) ಮಾರ್ಚ್ 1ರಂದು ಬೆಂಗಳೂರಿನಲ್ಲಿ ನಡೆಯಲಿದೆ. 'ನಮ್ಮ ಪೊಲೀಸ್ ನಮ್ಮ ಹೆಮ್ಮೆ' ಎಂಬ ಘೋಷವಾಕ್ಯದಡಿ ರನ್ ಹಮ್ಮಿಕೊಳ್ಳಲಾಗಿದ್ದು, 'ಹಸಿರು ಬೆಂಗಳೂರು', 'ಮಾದಕ ಮುಕ್ತ ಕರ್ನಾಟಕ', 'ಸೈಬರ್ ಅಪರಾಧ'ದ ಕುರಿತು ಜಾಗೃತಿ ಮೂಡಿಸಲು ನಿರ್ಧರಿಸಲಾಗಿದೆ. ಇದುವರೆಗೂ ಸ್ಪರ್ಧೆಗೆ 9 ಸಾವಿರ ಮಂದಿ ಹೆಸರು ನೋಂದಾಯಿಸಿಕೊಂಡಿದ್ದಾರೆ ಎಂದು ತಿಳಿಸಿದ್ದರು.

ಇವುಗಳನ್ನೂ ಓದಿ: