ETV Bharat / state

ಮಂಗಳೂರು: ಭಾರತ್​ ಪೆಟ್ರೋಲಿಯಂ ಆಟೋಕ್ರಾಸ್; ಮೋಟಾರ್ ಸ್ಪೋರ್ಟ್ಸ್ ಪ್ರಿಯರಿಗೆ ರೋಮಾಂಚನ

ಎಂಎಂಎಸ್‌ಎ ಅಧ್ಯಕ್ಷ ಸುಧೀರ್ ಬಿ.ಕೆ. ಅವರ ನೇತೃತ್ವದಲ್ಲಿ ಮಂಗಳೂರಿನ ಕೂಳೂರಿನ ಗೋಲ್ಡ್‌ಫಿಂಚ್​ ಸಿಟಿಯ ಮಣ್ಣಿನ ಟ್ರ್ಯಾಕ್‌ನಲ್ಲಿ ಮೋಟಾರ್ ಸ್ಪೋರ್ಟ್ಸ್ ಉತ್ಸವ ಆಯೋಜಿಸಲಾಗಿತ್ತು.

DAKSHINA KANNADA  ಮಂಗಳೂರು ಭಾರತ್ ಪೆಟ್ರೋಲಿಯಂ ಆಟೋಕ್ರಾಸ್  CAR RACE  ಮೋಟಾರ್ ಸ್ಪೋರ್ಟ್ಸ್ ಉತ್ಸವ
4-ವೀಲ್​ ಡರ್ಟ್​ ರೇಸ್‌-ಮಂಗಳೂರು (ETV Bharat)
author img

By ETV Bharat Karnataka Team

Published : October 12, 2026 at 9:22 AM IST

2 Min Read
Choose ETV Bharat

ಮಂಗಳೂರು: ಮಂಗಳೂರು ಮೋಟಾರ್​ ಸ್ಪೋರ್ಟ್ಸ್ ಅಸೋಸಿಯೇಷನ್ (MMSA) ಆಶ್ರಯದಲ್ಲಿ ನಗರದ ಕೂಳೂರಿನ ಗೋಲ್ಡ್‌ಫಿಂಚ್​ ಸಿಟಿಯ ಮಣ್ಣಿನ ಟ್ರ್ಯಾಕ್‌ನಲ್ಲಿ ಆಯೋಜಿಸಲಾಗಿದ್ದ ಬಹುನಿರೀಕ್ಷಿತ 'ಭಾರತ್​ ಪೆಟ್ರೋಲಿಯಂ ಆಟೋಕ್ರಾಸ್ 2026' (4W Dirt Autocross) ಮೋಟಾರ್ ಸ್ಪೋರ್ಟ್ಸ್ ಉತ್ಸವವು ಅತ್ಯಂತ ರೋಮಾಂಚಕವಾಗಿ ಸಂಪನ್ನಗೊಂಡಿದೆ.

ಎಫ್‌ಎಂಎಸ್‌ಸಿಐ (FMSCI) ಮಾನ್ಯತೆಯೊಂದಿಗೆ ಅಕ್ಟೋಬರ್ 10 ಮತ್ತು 11ರಂದು ಜರುಗಿದ ಈ ರೇಸಿಂಗ್ ಕದನದಲ್ಲಿ ಬೆಂಗಳೂರು, ಮೈಸೂರು, ಚಿಕ್ಕಮಗಳೂರು, ಕೊಡಗು, ಮೂಡುಬಿದಿರೆ ಹಾಗೂ ಕೇರಳ ಸೇರಿದಂತೆ ವಿವಿಧ ಭಾಗಗಳಿಂದ ಸುಮಾರು 120 ಸ್ಪರ್ಧಿಗಳು ಪಾಲ್ಗೊಂಡಿದ್ದರು. ಗೋಲ್ಡ್‌ಫಿಂಚ್ ಸಿಟಿಯ ಆವರಣದಲ್ಲಿ ಸಿದ್ಧಪಡಿಸಲಾಗಿದ್ದ ತಿರುವುಗಳಿಂದ ಕೂಡಿದ ಸುಮಾರು 1.1 ಕಿ.ಮೀ. ಮಣ್ಣಿನ ಟ್ರ್ಯಾಕ್‌ನಲ್ಲಿ ರೇಸರ್‌ಗಳು ಪ್ರದರ್ಶಿಸಿದ ವೇಗ ಹಾಗೂ ಕೌಶಲ್ಯ ಪ್ರೇಕ್ಷಕರ ಮೈನವಿರೇಳಿಸಿತು.

DAKSHINA KANNADA  ಮಂಗಳೂರು ಭಾರತ್ ಪೆಟ್ರೋಲಿಯಂ ಆಟೋಕ್ರಾಸ್  CAR RACE  ಮೋಟಾರ್ ಸ್ಪೋರ್ಟ್ಸ್ ಉತ್ಸವ
ಮಂಗಳೂರು ಭಾರತ್​ ಪೆಟ್ರೋಲಿಯಂ ಆಟೋಕ್ರಾಸ್​​ 2026 (ETV Bharat)

ಪ್ರಮುಖ ವಿಭಾಗಗಳಲ್ಲಿ ಮಿಂಚಿದ ರೇಸರ್‌ಗಳು (ಫಲಿತಾಂಶ ವಿವರ): ಒಟ್ಟು 13 ವಿಭಾಗಗಳಲ್ಲಿ ಸ್ಪರ್ಧೆಗಳು ನಡೆದಿದ್ದು, ಕೂರ್ಗ್‌ನ ಖ್ಯಾತ ರೇಸರ್ ನಿಖಿಲ್ ಮುದ್ದಪ್ಪ (ವಿಎಂ ರೇಸಿಂಗ್), ಜೀಶಾನ್ ಹಾಗೂ ವೈಶಾಕ್ ರೈ ತಮ್ಮ ಅತ್ಯುತ್ತಮ ಟೈಮಿಂಗ್ ಮೂಲಕ ಪ್ರಮುಖ ವಿಭಾಗಗಳಲ್ಲಿ ಅಗ್ರಸ್ಥಾನ ಪಡೆದುಕೊಂಡಿದ್ದಾರೆ.

1.ಕ್ಲಾಸ್ 1 (INAC 1 Open - 1650 cc ವರೆಗೆ): ನಿಖಿಲ್ ಮುದ್ದಪ್ಪ (02:46.630) ಪ್ರಥಮ.

2.ಕ್ಲಾಸ್ 2 (INAC 1 Open - 3000 cc ವರೆಗೆ): ನಿಖಿಲ್ ಮುದ್ದಪ್ಪ (02:45.530) ಪ್ರಥಮ.

  • ಜೀಶಾನ್ (02:46.050) ದ್ವಿತೀಯ.
  • ಅಶ್ರಫಿ (03:04.920) ತೃತೀಯ.

3.ಕ್ಲಾಸ್ 3 (INAC 1 Open - Unrestricted Open): ಜೀಶಾನ್ (02:50.200) ಪ್ರಥಮ.

4.ಕ್ಲಾಸ್ 4 (INAC 2 Modified - 1100 cc ವರೆಗೆ): ವೈಶಾಕ್ ರೈ (03:00.390) ಪ್ರಥಮ.

5.ಕ್ಲಾಸ್ 5 (INAC 2 Modified - 1400 cc ವರೆಗೆ): ಪ್ರದೀಪ್ (03:03.910) ಪ್ರಥಮ.

6.ಕ್ಲಾಸ್ 6 (INAC 2 Modified - 1650 cc ವರೆಗೆ): ಜೀಶಾನ್ (02:46.550) ಪ್ರಥಮ.

  • ರೊನಾಲ್ಡ್ (03:18.810) ದ್ವಿತೀಯ.

7.ಕ್ಲಾಸ್ 7 (INAC 2 Modified - 2500 cc ವರೆಗೆ): ನಿಖಿಲ್ ಮುದ್ದಪ್ಪ (02:45.460) ಪ್ರಥಮ.

  • ಜೀಶಾನ್ (02:48.140) ದ್ವಿತೀಯ.

8.ಕ್ಲಾಸ್ 8 (INAC 2 Modified - Foreign Open): ಜೀಶಾನ್ (02:46.270) ಪ್ರಥಮ.

  • ನಿಖಿಲ್ ಮುದ್ದಪ್ಪ (03:04.360) ದ್ವಿತೀಯ.

9.ಕ್ಲಾಸ್ 9 (INAC 2 Modified - Ladies Open): ಅಶ್ರಫಿ (03:10.040) ಪ್ರಥಮ.

10.ಕ್ಲಾಸ್ 10 (INAC 2 Modified - 2500 cc ಗಿಂತ ಹೆಚ್ಚು): ನಿಖಿಲ್ ಮುದ್ದಪ್ಪ (02:44.550 - ಕೂಟದ ಅತ್ಯಂತ ವೇಗದ ಲ್ಯಾಪ್‌ಗಳಲ್ಲಿ ಒಂದು) ಪ್ರಥಮ.

  • ಜೀಶಾನ್ (02:49.490) ದ್ವಿತೀಯ.

11.ಕ್ಲಾಸ್ 11 (INAC 2 Modified - Amateur Open): ವೈಶಾಕ್ ರೈ (02:57.490) ಪ್ರಥಮ.

  • ಆಲ್ಡನ್ (03:04.060) ದ್ವಿತೀಯ.
  • ಪ್ರದೀಪ್ (03:06.320) ತೃತೀಯ.

12.ಕ್ಲಾಸ್ 12 (INAC 3 Stock - Street Stock Open): ವೈಶಾಕ್ ರೈ (02:57.830) ಪ್ರಥಮ.

  • ಅಶ್ರಫಿ (03:01.780) ದ್ವಿತೀಯ.
  • ಆಲ್ಡನ್ (03:04.020) ತೃತೀಯ.
  • ಶಾನವಾಜ್ (03:07.120) ನಾಲ್ಕನೇ ಸ್ಥಾನ.

13.ಕ್ಲಾಸ್ 13 (INAC 1 Open - 800 cc ವರೆಗೆ): ವೈಶಾಕ್ ರೈ (03:08.480) ಪ್ರಥಮ.

ರೇಸ್ ಆರಂಭಕ್ಕೂ ಮುನ್ನ ಸಾರ್ವಜನಿಕರಿಗೆ ಹಾಗೂ ವಾಹನ ಪ್ರಿಯರಿಗೆ ರೇಸಿಂಗ್ ಕಾರುಗಳನ್ನು ಹತ್ತಿರದಿಂದ ವೀಕ್ಷಿಸಲು ವಿಶೇಷ ಕಾರ್ ಡಿಸ್ಪ್ಲೇ ಆಯೋಜಿಸಲಾಗಿತ್ತು. ಎಂಎಂಎಸ್‌ಎ ಅಧ್ಯಕ್ಷ ಸುಧೀರ್ ಬಿ.ಕೆ. ಅವರ ನೇತೃತ್ವದಲ್ಲಿ ನಡೆದ ಈ ಕ್ರೀಡಾಕೂಟ ಕರಾವಳಿಯ ಮೋಟಾರ್ ಸ್ಪೋರ್ಟ್ಸ್ ಪ್ರಿಯರಿಗೆ ರೋಮಾಂಚಕ ಅನುಭವ ನೀಡಿತು ಎಂದು ಪ್ರಕಟಣೆ ತಿಳಿಸಿದೆ.

ಇದನ್ನೂ ಓದಿ: 'ಅಂಚೆಚೀಟಿ ಸಂಗ್ರಹಿಸಿ, ಪರಂಪರೆ ಕಣ್ತುಂಬಿಕೊಳ್ಳಿ': ಫಿಲಾಟೆಲಿ ಪಾಸ್‌ಪೋರ್ಟ್ ಮೂಲಕ Gen Zಯಿಂದ ಕರ್ನಾಟಕ ಮರುಶೋಧನೆ