ಬಾಗಲಕೋಟೆ, ದಾವಣಗೆರೆ ದಕ್ಷಿಣ ಕ್ಷೇತ್ರ ಎರಡೂ ಕಾಂಗ್ರೆಸ್ ಪಾಲು; ಉಮೇಶ್ ಮೇಟಿ, ಸಮರ್ಥ್ ಶಾಮನೂರುಗೆ ಮೊದಲ ಗೆಲುವು

Published : May 4, 2026 at 7:48 AM IST
|Updated : May 4, 2026 at 4:48 PM IST
ಬಾಗಲಕೋಟೆ ವಿಧಾನಸಭೆ ಕ್ಷೇತ್ರದ ಹೈವೋಲ್ಟೇಜ್ ಉಪಸಮರದ ಫಲಿತಾಂಶ ಪ್ರಕಟಗೊಂಡಿದೆ. ಕಾಂಗ್ರೆಸ್ ಅಭ್ಯರ್ಥಿ ಉಮೇಶ್ ಮೇಟಿ ಜಯಭೇರಿ ಬಾರಿಸಿದ್ದಾರೆ. ಬಿಜೆಪಿ ಅಭ್ಯರ್ಥಿ ವೀರಣ್ಣ ಚರಂತಿಮಠ ಸೋಲನುಭವಿಸಿದ್ದಾರೆ.
ಕಾಂಗ್ರೆಸ್ ಗೆಲುವಿನ ಬೆನ್ನಲ್ಲೇ ಪಕ್ಷದ ಕಾರ್ಯಕರ್ತರು ಪಟಾಕಿ ಸಿಡಿಸಿ ಸಂಭ್ರಮಿಸಿದರು.
LIVE FEED
ಬೆಣ್ಣೆನಗರಿಯಲ್ಲಿ ಗೆದ್ದು ಬೀಗಿದ ಸಮರ್ಥ್ ಶಾಮನೂರು
ದಾವಣಗೆರೆ ದಕ್ಷಿಣ ಕ್ಷೇತ್ರದ ಉಪಚುನಾವಣೆಯಲ್ಲಿ ಸಮರ್ಥ್ ಶಾಮನೂರು ಅವರು ಮೊದಲ ಬಾರಿಗೆ ಜಯ ಸಾಧಿಸುವ ಮೂಲಕ ಅಜ್ಜನ ಗೆಲುವಿನ ಹಾದಿಯನ್ನು ಮುಂದುವರಿಸಿದ್ದಾರೆ. ತೀವ್ರ ಪೈಪೋಟಿ ನಡುವೆಯೂ ಅವರು ಬಿಜೆಪಿ ಅಭ್ಯರ್ಥಿ ಶ್ರೀನಿವಾಸ್ ದಾಸಕರಿಯಪ್ಪ ಅವರ ವಿರುದ್ಧ 5,708 ಮತಗಳ ಅಂತರದಿಂದ ಜಯ ಸಾಧಿಸಿದ್ದಾರೆ.
ಬಾಗಲಕೋಟೆಯಲ್ಲಿ ಕಾಂಗ್ರೆಸ್ ದಿಗ್ವಿಜಯ
ಬಾಗಲಕೋಟೆ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಉಮೇಶ್ ಮೇಟಿ ಜಯಭೇರಿ ಸಾಧಿಸಿದ್ದಾರೆ. 21866 ಮತಗಳ ಅಂತರದಿಂದ ಬಿಜೆಪಿ ಅಭ್ಯರ್ಥಿ ವೀರಣ್ಣ ಚರಂತಿಮಠ ಅವರನ್ನು ಉಮೇಶ್ ಮೇಟಿ ಸೋಲಿಸಿದ್ದಾರೆ.
ಉಮೇಶ್ ಮೇಟಿ ಪಡೆ ಮತಗಳು: 97941
ವೀರಣ್ಣ ಚರಂತಿಮಠ ಪಡೆದ ಮತಗಳು - 76075
ಕಾಂಗ್ರೆಸ್ ಅಭ್ಯರ್ಥಿ ಉಮೇಶ ಮೇಟಿ ಗೆಲವು ಬಹುತೇಕ ಖಚಿತ
ಕಾಂಗ್ರೆಸ್ ಅಭ್ಯರ್ಥಿ ಉಮೇಶ ಮೇಟಿ ಗೆಲವು ಬಹುತೇಕ ಖಚಿತ
ಇನ್ನು ಒಂದು ಸುತ್ತು ಮತ ಎಣಿಕೆ ಬಾಕಿ ಇದ್ದು, ಈಗಾಗಲೇ 19944 ಮತಗಳ ಅಂತರದಿಂದ ಉಮೇಶ ಮೇಟಿ ಮೇಲುಗೈ ಸಾಧಿಸಿದ್ದಾರೆ.
22ನೇ ಸುತ್ತಿನಲ್ಲಿ ಉಮೇಶ್ ಮೇಟಿ 19944 ಲೀಡ್
21ನೇ ಸುತ್ತಿನಲ್ಲಿ ಕಾಂಗ್ರೆಸ್ 17205 ಮುನ್ನಡೆ
ಉಮೇಶ್ ಮೇಟಿ - 87624
ವೀರಣ್ಣ ಚರಂತಿಮಠ - 70419
ಬಾಗಲಕೋಟೆ 20ನೇ ಸುತ್ತಿನ ಮತ ಎಣಿಕೆ ಮಾಹಿತಿ
ಉಮೇಶ್ ಮೇಟಿಗೆ 16471 ಮತಗಳ ಲೀಡ್
19ನೇ ಸುತ್ತಿನಲ್ಲಿ ಕಾಂಗ್ರೆಸ್ ಗೆ 14875 ಮತಗಳ ಮುನ್ನಡೆ
ಆರಂಭದಿಂದ 18ನೇ ಸುತ್ತಿನವರೆಗೂ ಕಾಂಗ್ರೆಸ್ ಮುನ್ನಡೆ
- 18ನೇ ಸುತ್ತಿನಲ್ಲಿ ಕಾಂಗ್ರೆಸ್ 13025 ಮತಗಳ ಮುನ್ನಡೆ
- ಉಮೇಶ್ ಮೇಟಿ - 73715
- ವೀರಣ್ಣ ಚರಂತಿಮಠ - 60697
- 17ನೇ ಸುತ್ತಿನಲ್ಲಿ ಉಮೇಶ್ ಮೇಟಿಗೆ 10766 ಮತಗಳ ಮುನ್ನಡೆ
- 16ನೇ ಸುತ್ತಿನಲ್ಲಿ 10122 ಮತಗಳ ಮುನ್ನಡೆ
15 ನೇ ಸುತ್ತಿನಲ್ಲಿ ಕಾಂಗ್ರೆಸ್ಗೆ 9555 ಮತ ಮುನ್ನಡೆ
- 15ನೇ ಸುತ್ತಿನಲ್ಲಿ ಕಾಂಗ್ರೆಸ್ 9555 ಮತಗಳಿಂದ ಮುನ್ನಡೆ
- ಉಮೇಶ್ ಮೇಟಿ - 60977
- ವೀರಣ್ಣ ಚರಂತಿಮಠ - 51422
- 14ನೇ ಸುತ್ತಿನಲ್ಲಿ ಕಾಂಗ್ರೆಸ್ 9952 ಲೀಡ್
- ಉಮೇಶ್ ಮೇಟಿ - 57471
- ವೀರಣ್ಣ ಚರಂತಿಮಠ - 47519
13ನೇ ಸುತ್ತಿನಲ್ಲೂ ಕಾಂಗ್ರೆಸ್ ಮುನ್ನಡೆ
- 13ನೇ ಸುತ್ತಿನಲ್ಲೂ ಕಾಂಗ್ರೆಸ್ ಮುನ್ನಡೆ
- ಉಮೇಶ್ ಮೇಟಿ - 53849
- ವೀರಣ್ಣ ಚರಂತಿಮಠ - 43528
- ಕಾಂಗ್ರೆಸ್ಗೆ 10321 ಮತಗಳ ಮುನ್ನಡೆ ಹಿನ್ನೆಲೆಯಲ್ಲಿ ಕಾರ್ಯಕರ್ತರು ಪಟಾಕಿ ಸಿಡಿಸಿ ಸಂಭ್ರಮಿಸುತ್ತಿದ್ದಾರೆ.
- 12ನೇ ಸುತ್ತಿನ ಮತ ಎಣಿಕೆ ಮಾಹಿತಿ
- ಉಮೇಶ್ ಮೇಟಿ - 50432
- ವೀರಣ್ಣ ಚರಂತಿಮಠ - 39898
ಸಮರ್ಥ್ ಶಾಮನೂರು ಮುನ್ನಡೆ
- 8ನೇ ಸುತ್ತಿನಲ್ಲಿ ಮುನ್ನಡೆ ಕಾಯ್ದುಕೊಂಡ ಕಾಂಗ್ರೆಸ್
- ಅಲ್ಪಸಂಖ್ಯಾತರೇ ಹೆಚ್ಚಿರುವ ಏರಿಯಾಗಳ ಮತ ಎಣಿಕೆ ಶುರು ಆಗಿದ್ದು, ಇದೇ ಮೊದಲ ಬಾರಿಗೆ ಸಮರ್ಥ್ ಶಾಮನೂರು 1071 ಮತಗಳಿಂದ ಮುನ್ನಡೆ ಸಾಧಿಸಿದ್ದಾರೆ.
ಬಾಗಲಕೋಟೆಯಲ್ಲಿ 12ನೇ ಸುತ್ತಿನಲ್ಲಿ ಕಾಂಗ್ರೆಸ್ 10534 ಮತಗಳಿಂದ ಮುನ್ನಡೆ
- ಬಾಲಕೋಟೆಯಲ್ಲಿ ಉಮೇಶ್ ಮೇಟಿ 10534 ಮತಗಳಿಂದ ಲೀಡ್
- ಉಮೇಶ್ ಮೇಟಿ - 50432
- ವೀರಣ್ಣ ಚರಂತಿಮಠ - 39898
- 7ನೇ ಸುತ್ತಿನ ಕೌಟಿಂಗ್ ಮುಕ್ತಾಯ: ದಾವಣಗೆರೆಯಲ್ಲಿ ಬಿಜೆಪಿಗೆ 3925 ಮತಗಳಿಂದ ಮುನ್ನಡೆ
- ಶ್ರೀನಿವಾಸ್ ದಾಸಕರಿಯಪ್ಪ - 25878
- ಸಮರ್ಥ್ ಶಾಮನೂರು - 21953
ಬಾಗಲಕೋಟೆಯಲ್ಲಿ 11ನೇ ಸುತ್ತು, ದಾವಣಗೆರೆಯಲ್ಲಿ 6ನೇ ಸುತ್ತು ಮುಕ್ತಾಯ
- ಬಾಗಲಕೋಟೆಯಲ್ಲಿ 11ನೇ ಸುತ್ತಿನಲ್ಲಿ 9969 ಮತಗಳಿಂದ ಕಾಂಗ್ರೆಸ್ ಮುನ್ನಡೆ
- ಕಾಂಗ್ರೆಸ್ - 47206 ಮತ
- ಬಿಜೆಪಿ - 37237 ಮತ
- ದಾವಣಗೆರೆಯಲ್ಲಿ 6ನೇ ಸುತ್ತು ಮುಕ್ತಾಯ
- 8539 ಮತಗಳಿಂದ ಬಿಜೆಪಿ ಅಭ್ಯರ್ಥಿ ಶ್ರೀನಿವಾಸ್ ದಾಸಕರಿಯಪ್ಪ ಮುನ್ನಡೆ
- ಸಮರ್ಥ್ ಶಾಮನೂರು - 17189
- ಶ್ರೀನಿವಾಸ್ ದಾಸಕರಿಯಪ್ಪ - 25728
- ಎಸ್ಡಿಪಿಐ ಅಭ್ಯರ್ಥಿ ಅಫ್ಸರ್ ಕೊಡ್ಲಿಪೇಟೆ - 2659
ಬಾಗಲಕೋಟೆಯಲ್ಲಿ ಕಾಂಗ್ರೆಸ್ಗೆ ಭಾರೀ ಮುನ್ನಡೆ
- ಬಾಗಲಕೋಟೆಯಲ್ಲಿ 10ನೇ ಸುತ್ತಿನ ಮತ ಎಣಿಕೆ ಮುಕ್ತಾಯ
- ಉಮೇಶ್ ಮೇಟಿ - 44620
- ವೀರಣ್ಣ ಚರಂತಿಮಠ - 33236
- ಕಾಂಗ್ರೆಸ್ 11384 ಮತಗಳಿಂದ ಮುನ್ನಡೆ
ಮುನ್ನಡೆ ಕಾಯ್ದುಕೊಂಡ ಬಿಜೆಪಿ, ಕಾಂಗ್ರೆಸ್
- ಬಾಗಲಕೋಟೆಯಲ್ಲಿ 9ನೇ ಸುತ್ತಿನ ಮತ ಎಣಿಕೆ ಪೂರ್ಣ
- ಉಮೇಶ್ ಮೇಟಿ - 41206
- ವೀರಣ್ಣ ಚರಂತಿಮಠ - 29397
- ಕಾಂಗ್ರೆಸ್ 11809 ಮತಗಳಿಂದ ಲೀಡ್
- ದಾವಣಗೆರೆ 5ನೇ ಸುತ್ತಿನ ಎಣಿಕ ಮುಕ್ತಾಯ
- ಸಮರ್ಥ್ ಶಾಮನೂರು - 14169
- ಶ್ರೀನಿವಾಸ್ ದಾಸಕರಿಯಪ್ಪ - 22615
- 8446 ಮತಗಳಿಂದ ಬಿಜೆಪಿ ಅಭ್ಯರ್ಥಿ ಶ್ರೀನಿವಾಸ್ ದಾಸಕರಿಯಪ್ಪ ಮುನ್ನಡೆ
ಬಾಗಲಕೋಟೆ ಮುನ್ನಡೆ ಕಾಯ್ದುಕೊಂಡ ಕಾಂಗ್ರೆಸ್
- 8ನೇ ಸುತ್ತಿನ ಮತ ಎಣಿಕೆ ಪ್ರಕ್ರಿಯೆ
- ಉಮೇಶ್ ಮೇಟಿ - 37202
- ವೀರಣ್ಣ ಚರಂತಿಮಠ - 26321
- ಕಾಂಗ್ರೆಸ್ಗೆ 10881 ಮತಗಳ ಮುನ್ನಡೆ
ಮುನ್ನಡೆ ಕಾಯ್ದುಕೊಂಡ ಬಿಜೆಪಿ ಅಭ್ಯರ್ಥಿ
- ದಾವಣಗೆರೆ ನಾಲ್ಕನೇ ಸುತ್ತಿನ ಮತ ಎಣಿಕೆ
- ಸಮರ್ಥ್ ಶಾಮನೂರು - 11953
- ಶ್ರೀನಿವಾಸ್ ದಾಸಕರಿಯಪ್ಪ - 17,654
- ಅಫ್ಸರ್ ಕೊಡ್ಲಿಪೇಟೆ - 1935
- 5701 ಮತಗಳಿಂದ ಬಿಜೆಪಿ ಅಭ್ಯರ್ಥಿ ಶ್ರೀನಿವಾಸದಾಸಕರಿಯಪ್ಪ ಮುನ್ನಡೆ
ದಾವಣಗೆರೆ ದಕ್ಷಿಣದಲ್ಲಿ ಮೂರನೇ ಸುತ್ತಿನಲ್ಲೂ ಬಿಜೆಪಿ ಮೇಲುಗೈ
- ಕಾಂಗ್ರೆಸ್ ಅಭ್ಯರ್ಥಿ ಸಮರ್ಥ್ ಶ್ಯಾಮನೂರು - 9375
- ಬಿಜೆಪಿ ಅಭ್ಯರ್ಥಿ ಶ್ರೀನಿವಾಸ್ ದಾಸಕರಿಯಪ್ಪ - 14058
- ಎಸ್ಡಿಪಿಐ ಅಭ್ಯರ್ಥಿ ಅಫ್ಸರ್ ಕೊಡ್ಲಿಪೇಟೆ - 1187
- 4683 ಮತಗಳಿಂದ ಬಿಜೆಪಿ ಮುನ್ನಡೆ
- ಎರಡನೇ ಸುತ್ತಿನ ಮತ ಎಣಿಕೆ
- ಸಮರ್ಥ್ ಶ್ಯಾಮನೂರು - 6360
- ಶ್ರೀನಿವಾಸ್ ದಾಸಕರಿಯಪ್ಪ - 9137
ಬಾಗಲಕೋಟೆ 6ನೇ ಸುತ್ತಿನ ಮತ ಎಣಿಕೆ ಪೂರ್ಣ
- ಉಮೇಶ್ ಮೇಟಿ ಪಡೆದ ಮತಗಳು - 32,363
- ವೀರಣ್ಣ ಚರಂತಿಮಠ ಪಡೆದ ಮತಗಳು - 16,906
- 15,457 ಮತಗಳ ಅಂತರ ಕಾಯ್ದುಕೊಂಡ ಕಾಂಗ್ರೆಸ್ ಅಭ್ಯರ್ಥಿ ಉಮೇಶ್ ಮೇಟಿ
5ನೇ ಸುತ್ತಿನಲ್ಲೂ ಕಾಂಗ್ರೆಸ್ ಲೀಡ್: ಕಾರ್ಯಕರ್ತರ ವಿಜಯೋತ್ಸವ
- ಉಮೇಶ್ ಮೇಟಿ - 27314 ಮತ
- ವೀರಣ್ಣ ಚರಂತಿಮಠ - 13923 ಮತ
- 15,426 ಸಾವಿರ ಮತಗಳಿಂದ ಕಾಂಗ್ರೆಸ್ ಮುನ್ನಡೆ
- ಕಾಂಗ್ರೆಸ್ ಮುನ್ನಡೆ ಹಿನ್ನೆಲೆಯಲ್ಲಿ ಪಕ್ಷದ ಕಾರ್ಯಕರ್ತರು ಮತ ಎಣಿಕೆ ಕೇಂದ್ರದ ಹೊರಗೆ ವಿಜಯೋತ್ಸವ ಆಚರಿಸುತ್ತಿದ್ದಾರೆ
ದಾವಣಗೆರೆ ದಕ್ಷಿಣ ಎರಡನೇ ಸುತ್ತಿನ ಕೌಟಿಂಗ್ ಪೂರ್ಣ
- ಕಾಂಗ್ರೆಸ್ ಅಭ್ಯರ್ಥಿ ಸಮರ್ಥ್ ಶ್ಯಾಮನೂರು - 6360 ಮತ
- ಬಿಜೆಪಿಯ ಶ್ರೀನಿವಾಸದಾಸ್ ಕರಿಯಪ್ಪ - 9137 ಮತ
- ಎಸ್ಡಿಪಿಐ ಅಭ್ಯರ್ಥಿ ಅಪ್ಸರ್ ಕೊಡ್ಲಿಪೇಟೆ - 1187 ಮತ
- 2777 ಮತಗಳಿಂದ ಬಿಜೆಪಿ ಅಭ್ಯರ್ಥಿ ಮುನ್ನಡೆ
ಬಾಗಲಕೋಟೆಯಲ್ಲಿ 4ನೇ ಸುತ್ತಿನ ಮತ ಎಣಿಕೆ ಪೂರ್ಣ
- ಬಾಗಕೋಟೆಯಲ್ಲಿ 4ನೇ ಸುತ್ತಿನ ಮತ ಎಣಿಕೆ ಪೂರ್ಣ
- ಉಮೇಶ್ ಮೇಟಿ - 21835 ಮತಗಳು
- ವೀರಣ್ಣ ಚರಂತಿಮಠ - ಬಿಜೆಪಿ 10968 ಮತಗಳು
- 10,000 ಮತಗಳ ಅಂತರದಿಂದ ಕಾಂಗ್ರೆಸ್ ಮುನ್ನಡೆ
3ನೇ ಸುತ್ತಿನ ಮತ ಎಣಿಕೆ:
- ಉಮೇಶ್ ಮೇಟಿ - 16,935 ಮತಗಳು
- ವೀರಣ್ಣ ಚರಂತಿಮಠ - ಬಿಜೆಪಿ 8312 ಮತಗಳು
- 8,623 ಮತಗಳ ಅಂತರದಿಂದ ಕಾಂಗ್ರೆಸ್ ಮುನ್ನಡೆ
ದಾವಣಗೆರೆಯಲ್ಲಿ ಬಿಜೆಪಿ ಮುನ್ನಡೆ
- ದಾವಣಗೆರೆಯಲ್ಲಿ ಮೊದಲ ಸುತ್ತಿನ ಮತ ಎಣಿಕೆ
- ಸಮರ್ಥ್ ಶ್ಯಾಮನೂರು- 3134 ಮತ
- ಶ್ರೀನಿವಾಸ್ ದಾಸಕರಿಯಪ್ಪ- 3711
- 577 ಮತಗಳಿಂದ ಬಿಜೆಪಿ ಅಭ್ಯರ್ಥಿ ಶ್ರೀನಿವಾಸದಾಸಕರಿಯಪ್ಪ ಮುನ್ನಡೆ
- 638 ಮತಗಳನ್ನು ಪಡೆದ ಎಸ್ಡಿಪಿಐ ಅಭ್ಯರ್ಥಿ ಅಪ್ಸರ್ ಕೊಡ್ಲಿಪೇಟೆ
- ಪಕ್ಷೇತರ ಅಭ್ಯರ್ಥಿ ರಿಯಾಜ್ ಅವರಿಗೆ 347 ಮತ
ಎರಡನೇ ಸುತ್ತಿನಲ್ಲೂ ಕಾಂಗ್ರೆಸ್ ಮುನ್ನಡೆ
- ಬಾಗಲಕೋಟೆಯಲ್ಲಿ ಎರಡನೇ ಸುತ್ತು ಮುಕ್ತಾಯವಾಗಿದ್ದು, ಕಾಂಗ್ರೆಸ್ 5016 ಮತಗಳಿಂದ ಮುನ್ನಡೆ ಕಾಯ್ದುಕೊಂಡಿದೆ.
- ಉಮೇಶ್ ಮೇಟಿಗೆ 10996, ವೀರಣ್ಣ ಚರಂತಿಮಠ ಅವರಿಗೆೆ 5980 ಮತಗಳು ಬಿದ್ದಿವೆ.
ಮತ ಎಣಿಕೆ ಆರಂಭ
- ದಾವಣಗೆರೆಯಲ್ಲಿ ಅಂಚೆ ಮತ ಎಣಿಕೆಯ ಬಳಿಕ ಇವಿಎಂ ಕೌಂಟಿಂಗ್ ಶುರುವಾಗಿದೆ.
- ಆರಂಭದಲ್ಲಿ ಕಾಂಗ್ರೆಸ್ ಇವಿಎಂನಲ್ಲಿ 317 ಮತಗಳ ಮುನ್ನಡೆ ಸಾಧಿಸಿದೆ.
ಸ್ಟ್ರಾಂಗ್ ರೂಮ್ ಕೀ ಯಡವಟ್ಟು
- ದಾವಣಗೆರೆಯಲ್ಲಿ ಸ್ಟ್ರಾಂಗ್ ರೂಮ್ ಓಪನ್ ಮಾಡಲು ಮುಂದಾದಾಗ ಕೀ ಹೊಂದಾಣಿಕೆ ಆಗದ ಹಿನ್ನೆಲೆಯಲ್ಲಿ ಬಾಗಿಲಿನ ಚಿಲಕವನ್ನು ಸುತ್ತಿಗೆಯಿಂದ ಒಡೆದು ಸ್ಟ್ರಾಂಗ್ ರೂಮ್ ಓಪನ್ ಮಾಡಲಾಯಿತು.
- ಒಟ್ಟು ನಾಲ್ಕು ಸ್ಟ್ರಾಂಗ್ ರೂಮ್‌ಗಳನ್ನು ಒಡೆದು ಓಪನ್ ಮಾಡಲಾಯಿತು. ಡಿಸಿ ಜಿಎಂ ಗಂಗಾಧರ ಸ್ವಾಮಿ, ಚುನಾವಣಾ ವೀಕ್ಷಕರಾದ ಕುಮಾರ್ ರಮಣಿಕಾಂತ್, ಸಿಇಒ ಗಿತ್ತಿ ಮಾದವ್ ವಿಠಲ್ ರಾವ್, ಎಸ್ಪಿ ಹೆಚ್ ಟಿ ಶೇಖರ್ ಅಲ್ಲದೆ ಈ ವೇಳೆ ಏಜೆಂಟರು ಈ ವೇಳೆ ಇದ್ದರು.
- 8ಕ್ಕೆ ಅಂಚೆ ಮತದಾನ, 8.30ಕ್ಕೆ ಇವಿಎಂ ಮತ ಎಣಿಕೆ ಆರಂಭ ಆಗಬೇಕಿತ್ತು. ಆದರೆ ಸ್ವಲ್ಪ ತಡವಾಗಿ ಅಂಚೆ ಮತದಾನ ಆರಂಭಿಸಲಾಗಿದೆ.
- ಸ್ಟ್ರಾಂಗ್ ರೂಮ್ ಮ್ಯಾಚ್ ಅಗದ ಕಾರಣ ಡಿಸಿ ಜಿಎಂ ಗಂಗಾಧರಸ್ವಾಮಿ ಜಿಎಂ ಅವರು ಸಹ ಅಧಿಕಾರಿಗಳ ಮೇಲೆ ಗರಂ ಆದರು.

ಮತ ಎಣಿಕಾ ಕೇಂದ್ರಕ್ಕೆ ಎವಿಎಂ ಯಂತ್ರ ರವಾನೆ
- ಡಿಸಿ, ಎಸ್ಪಿ ಮತ್ತು ಚುನಾವಣಾಧಿಕಾರಿಗಳ ಸಮ್ಮುಖದಲ್ಲಿ ಸ್ಟ್ರಾಂಗ್ ರೂಮ್ ಓಪನ್
- ಭದ್ರತಾ ಕೊಠಡಿಯಿಂದ ಮತ ಎಣಿಕೆ ಕೇಂದ್ರಕ್ಕೆ ಬಿಗಿ ಭದ್ರತೆಯಲ್ಲಿ ಇವಿಎಂ ಯಂತ್ರ ರವಾನೆ ಮಾಡಲಾಯಿತು.

ಬಾಗಲಕೋಟೆ ಉಪ ಚುನಾವಣೆ
- ಬಾಗಲಕೋಟೆ ವಿಧಾನಸಭಾ ಕ್ಷೇತ್ರದ ಮತ ಎಣಿಕೆ.
- ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯದಲ್ಲಿ ಮತ ಎಣಿಕೆಗೆ ಸಕಲ ಸಿದ್ಧತೆ.
- ಜಿಲ್ಲಾಧಿಕಾರಿ ಸಂಗಪ್ಪ, ಸಿಇಓ ಶಶಿಧರ ಕುರೇರ, ಎಸ್ಪಿ ಸಿದ್ದಾರ್ಥ ಹಾಗೂ ಚುನಾವಣೆ ಆಯೋಗದ ಅಧಿಕಾರಿಗಳ ಸಮ್ಮುಖದಲ್ಲಿ ಭದ್ರತಾ ಕೊಠಡಿ ಓಪನ್
ದಾವಣಗೆರೆ ದಕ್ಷಿಣ ಉಪಸಮರ
- ದಾವಣಗೆರೆ ನಗರದ ಡಿಆರ್ಆರ್ ಶಾಲೆಯಲ್ಲಿ ಮತ ಎಣಿಕೆ. ಬಿಗಿ ಭದ್ರತೆಗಾಗಿ ಪೊಲೀಸ್ ಹಾಗೂ ಸಿಆರ್ಪಿಎಫ್ ಸಿಬ್ಬಂದಿ ನಿಯೋಜನೆ ಮಾಡಲಾಗಿದೆ. ಅಲ್ಲದೆ ಮತ ಎಣಿಕೆ ಕೇಂದ್ರದಿಂದ ಗೇಟ್ ತನಕ ಮೂರು ರೀತಿಯ ಭದ್ರತೆಗಳನ್ನು ಮಾಡಲಾಗಿದೆ. ಜೊತೆಗೆ ಅಭ್ಯರ್ಥಿಗಳಿಗೆ, ಏಜೆಂಟ್ಗಳಿಗೆ ಕ್ಯೂಆರ್ ಕೋಡ್ ರೀತಿಯ ಗುರುತಿನ ಚೀಟಿಗಳನ್ನು ಕೊಡಲಾಗಿದೆ. ಯಾರ ಬಳಿ ಗುರುತಿನ ಚೀಟಿ ಇರುತ್ತೊ ಅವರನ್ನು ಮಾತ್ರ ಮತ ಎಣಿಕೆಯ ಕೇಂದ್ರಕ್ಕೆ ಬಿಡಲಾಗುತ್ತದೆ.
- ಬೆಳಗ್ಗೆ 7:30ಕ್ಕೆ ಮತಪೆಟ್ಟಿಗೆ(ಇವಿಎಂ ಮಷಿನ್) ಇರುವ ಸ್ಟ್ರಾಂಗ್ ರೂಂ ಓಪನ್.
- ಶಾಮನೂರು ಶಿವಶಂಕರಪ್ಪ ಅವರ ನಿಧನದಿಂದ ತೆರವಾದ ದಾವಣಗೆರೆ ದಕ್ಷಿಣ ಕ್ಷೇತ್ರದಲ್ಲಿ ಕಾಂಗ್ರೆಸ್‌ನಿಂದ ಸಮರ್ಥ್ ಶಾಮನೂರು ಮತ್ತು ಬಿಜೆಪಿಯಿಂದ ಟಿ.ಶ್ರೀನಿವಾಸ ದಾಸಕರಿಯಪ್ಪ ಮಧ್ಯೆ ನೇರ ಪೈಪೋಟಿ ಏರ್ಪಟ್ಟಿದೆ.

