ETV Bharat / state

ಮಧ್ಯಪ್ರಾಚ್ಯ ಯುದ್ಧ: ಬೆಂಗಳೂರು ಗ್ರಾಮಾಂತರ ಜಿಲ್ಲಾಡಳಿತದಿಂದ ಸಹಾಯವಾಣಿ ಆರಂಭ

ಅಮೆರಿಕ-ಇಸ್ರೇಲ್ ಹಾಗೂ ಇರಾನ್ ನಡುವಿನ ಯುದ್ಧದ ಹಿನ್ನೆಲೆಯಲ್ಲಿ, ಮಧ್ಯಪ್ರಾಚ್ಯ ಮತ್ತು ಕೊಲ್ಲಿ ದೇಶಗಳಲ್ಲಿ ಸಿಲುಕಿರುವ ಕನ್ನಡಿಗರ ನೆರವಿಗಾಗಿ ಸಹಾಯವಾಣಿ ತೆರೆಯಲಾಗಿದೆ.

helpline-launched-by-bengaluru-rural-district-administration-for-people-stranded-in-middle-east-war
ಇಸ್ರೇಲ್​ನಲ್ಲಿ ಇರಾನ್​ ಕ್ಷಿಪಣಿ ದಾಳಿಯಿಂದ ಧ್ವಂಸಗೊಂಡ ಕಟ್ಟಡ (AP)
author img

By ETV Bharat Karnataka Team

Published : March 1, 2026 at 3:33 PM IST

2 Min Read
Choose ETV Bharat

ಬೆಂಗಳೂರು: ಮಧ್ಯಪ್ರಾಚ್ಯ ಮತ್ತು ಕೊಲ್ಲಿ ದೇಶಗಳಲ್ಲಿ ಯುದ್ಧ ಆರಂಭವಾಗಿದ್ದು, ಇದರಿಂದ ಅಪಾರ ಪ್ರಮಾಣದಲ್ಲಿ ಸಾವು-ನೋವು ಸಂಭವಿಸಿದೆ. ಯುದ್ಧದ ಹಿನ್ನೆಲೆಯಲ್ಲಿ, ವೈಮಾನಿಕ ಸಂಚಾರ ಸ್ಥಗಿತಗೊಂಡು ಅಲ್ಲಿ ಸಿಲುಕಿರುವ ಸಂತ್ರಸ್ತರ ನೆರವಿಗೆ ಬೆಂಗಳೂರು ಗ್ರಾಮಾಂತರ ಜಿಲ್ಲಾಡಳಿತದಿಂದ ಸಹಾಯವಾಣಿ ಆರಂಭಿಸಲಾಗಿದೆ.

ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಯಾರಾದರೂ ಯುದ್ಧ ಪೀಡಿತ ದೇಶಗಳಲ್ಲಿ ಸಿಲುಕಿದ್ದರೆ, ದೇಶಗಳ ಕಂಟ್ರೋಲ್ ರೂಂ ಸಂ:

  • ಕತಾರ್: 00974-55647502
  • ಬಹ್ರೇನ್: 00973-39418071
  • ಜೋರ್ಡಾನ್: 00962-770 422 276
  • ಓಮನ್: Toll-Free: 8007 1234 | ವಾಟ್ಸ್​ಆ್ಯಪ್ ಸಂ: +968 9828 2270 ತೆರೆಯಲಾಗಿದೆ.
  • ಇರಾಕ್: +964 771 651 1185 (ಇಂಗ್ಲಿಷ್ ಮತ್ತು ಹಿಂದಿ), +964 770 444 4899 (ಅರೇಬಿಕ್)
  • ಕುವೈತ್: +965 65501946
  • ಪ್ಯಾಲೆಸ್ಟೈನ್: +970 592916418 ಸಹಾಯವಾಣಿ ಆರಂಭಿಸಲಾಗಿದೆ.
  • ಬೆಂಗಳೂರು ಗ್ರಾಮಾಂತರ ಜಿಲ್ಲಾ ಕಚೇರಿಯ ವಿಪತ್ತು ನಿರ್ವಹಣಾ ಕೇಂದ್ರ ದೂ.ಸಂ: 080-28388005 ಇಲ್ಲಿಗೆ ಕರೆ ಮಾಡಿ ಮಾಹಿತಿ ನೀಡುವಂತೆ ಬೆಂಗಳೂರು ಗ್ರಾಮಾಂತರ ಜಿಲ್ಲಾಧಿಕಾರಿ ಡಾ.ಕೆ.ಎನ್. ಅನುರಾಧ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಈ ಕುರಿತು ಗೃಹ ಸಚಿವ ಡಾ. ಜಿ.ಪರಮೇಶ್ವರ ಮಾತನಾಡಿ, ಚಿಕ್ಕಬಳ್ಳಾಪುರ ಮೂಲದ ವಿದ್ಯಾರ್ಥಿಗಳು ದುಬೈನಲ್ಲಿ ಸಿಲುಕಿರುವ ಮಾಹಿತಿ ಇದೆ. ದುಬೈನಲ್ಲಿ ವಿದ್ಯಾರ್ಥಿಗಳು ಸೇರಿ 150 ಹೆಚ್ಚು ಕನ್ನಡಿಗರು ಸಿಲುಕಿದ್ದಾರೆ. ಅವರೆಲ್ಲರನ್ನು ಸಂಪರ್ಕಿಸಿ ಸುರಕ್ಷಿತವಾಗಿ ಕರೆತರುವ ಪ್ರಯತ್ನ ಮುಂದುವರೆದಿದೆ. ಅಗತ್ಯ ಸೌಲಭ್ಯಗಳ ಕುರಿತಂತೆ ಅಧಿಕಾರಿಗಳು ಕಾರ್ಯ ಪ್ರವೃತ್ತರಾಗಿದ್ದಾರೆ. ಯಾವುದೇ ಸಮಸ್ಯೆ ಆಗದಂತೆ ಸುರಕ್ಷಿತವಾಗಿ ಕರೆತರಲು ಬೇಕಾದ ಸಿದ್ದತೆ ಮಾಡಿಕೊಂಡಿದ್ದೇವೆ ಎಂದು ಹೇಳಿದರು.

ದುಬೈನಲ್ಲಿ ಸಿಲುಕಿದ ಕರ್ನಾಟಕದ ಜನರು: ಯುದ್ಧದ ಪರಿಣಾಮ ಬಳ್ಳಾರಿ ಶಾಸಕ ನಾರಾ ಭರತ್ ರೆಡ್ಡಿ ಮತ್ತು ಪ್ರವಾಸಕ್ಕೆ ತೆರಳಿದ್ದ ಕರ್ನಾಟಕದ 50 ಜನ ದುಬೈನಲ್ಲಿ ಸಿಲುಕಿಕೊಂಡಿದ್ದಾರೆ. ವಯೋವೃದ್ಧರು ಸೇರಿ ಬಳ್ಳಾರಿ, ಚಿತ್ರದುರ್ಗ ಮತ್ತು ದಾವಣಗೆರೆಯ 50 ಜನರು ದುಬೈ ಪ್ರವಾಸ ಕೈಗೊಂಡಿದ್ದರು. ಪ್ರವಾಸ ಮುಗಿಸಿದ ತಂಡ ಶನಿವಾರ ದುಬೈನಿಂದ 9 ಗಂಟೆಯ ವಿಮಾನಕ್ಕೆ ಭಾರತಕ್ಕೆ ಆಗಮಿಸಬೇಕಿತ್ತು. ಆದರೆ ಇರಾನ್​ ವಿರುದ್ಧ ಅಮೆರಿಕ - ಇಸ್ರೇಲ್ ಜಂಟಿ ಸೇನಾ ದಾಳಿ ಆರಂಭಿಸಿದ್ದು, ವಿಮಾನಗಳನ್ನು ರದ್ದುಪಡಿಸಲಾಗಿದೆ. ಹೀಗಾಗಿ, ಕನ್ನಡಿಗರು ಅಲ್ಲೇ ಸಿಲುಕಿಕೊಂಡಿದ್ದಾರೆ.

ಲಾಡ್ಜ್​ಗಳಲ್ಲಿ ದಿನಕ್ಕೆ 15-20 ಸಾವಿರ ರೂ. ಬಿಲ್: ಶನಿವಾರ 9 ಗಂಟೆಯ ವಿಮಾನಕ್ಕೆ ಭಾರತಕ್ಕೆ ಬರಬೇಕಿತ್ತು. ಆದರೆ ಯುದ್ಧದಿಂದಾಗಿ ನಮ್ಮನ್ನು ವಿಮಾನ ನಿಲ್ದಾಣದೊಳಗೆ ಬಿಡುತ್ತಿಲ್ಲ. ಶನಿವಾರ ಮಧ್ಯಾಹ್ನ 3 ಗಂಟೆಯವರೆಗೆ ಮಾತ್ರ ಏರ್ಪೋರ್ಟ್​ ಒಳಗೆ ಹೋಗಲು ಅವಕಾಶ ನೀಡಿದ್ದರು. ಆದರೆ ನಾವು 3 ಗಂಟೆಯ ಬಳಿಕ ಬಂದಿದ್ದರಿಂದ ಒಳಗೆ ಹೋಗಲು ಬಿಡುತ್ತಿಲ್ಲ. ಪ್ರವಾಸ ಮಾಡಿದ್ದರಿಂದ ಸದ್ಯ ನಮ್ಮ ಬಳಿ ಹಣವೂ ಖಾಲಿಯಾಗಿದೆ, ಇಲ್ಲಿ ಸದ್ಯ ಲಾಡ್ಜ್​ಗಳಲ್ಲಿ ದಿನಕ್ಕೆ 15-20 ಸಾವಿರ ರೂ. ಕೇಳುತ್ತಿದ್ದಾರೆ. ಇದರಿಂದ ಎಲ್ಲಿ ಹೋಗಬೇಕೆಂದು ಗೊತ್ತಾಗದೇ ಸಂಕಷ್ಟಕ್ಕೆ ಸಿಲುಕಿದ್ದು, ಕೂಡಲೇ ತಮಗೆ ನೆರವು ನೀಡುವಂತೆ ಮಾಜಿ ಸಚಿವ ನಾಗೇಂದ್ರ ಮತ್ತು ಸಂಸದ ತುಕಾರಾಂ ಅವರಿಗೆ ಪ್ರವಾಸಿಗರು ದುಬೈನಿಂದ ವಿಡಿಯೋ ಮೂಲಕ ಮನವಿ ಮಾಡಿದ್ದಾರೆ.

ಇದನ್ನೂ ಓದಿ: ಖಮೇನಿ ಹತ್ಯೆ ಖಂಡಿಸಿ ಗೌರಿಬಿದನೂರಿನ ಅಲಿಪುರದಲ್ಲಿ ರಸ್ತೆಗಿಳಿದು ಪ್ರತಿಭಟನೆ: 3 ದಿನ ಶೋಕಾಚರಣೆ ಘೋಷಣೆ