ETV Bharat / state

ಮಾಜಿ ಡಿಸಿಎಂ ಕೆ ಎಸ್‌ ಈಶ್ವರಪ್ಪಗೆ ವಿದೇಶದಿಂದ ಜೀವ ಬೆದರಿಕೆ ಕರೆ: Y ಕೆಟಗರಿ ಭದ್ರತೆ ನೀಡುವಂತೆ ಆಗ್ರಹ

ಮಾಜಿ ಉಪ ಮುಖ್ಯಮಂತ್ರಿ ಕೆ.ಎಸ್.ಈ‍ಶ್ವರಪ್ಪಗೆ ಮತ್ತೆ ವಿದೇಶದಿಂದ ಬೆದರಿಕೆ ಕರೆ ಬಂದಿದ್ದು, ಈ ಸಂಬಂಧ ಸೂಕ್ತ ಕ್ರಮ ಕೈಗೊಳ್ಳುವಂತೆ ಜಿಲ್ಲಾ ರಕ್ಷಣಧಿಕಾರಿ ಅವರಿಗೆ ಮನವಿ ಸಲ್ಲಿಸಿದ್ದಾರೆ.

EX DCM KS ESHWARAPPA
ಜಿಲ್ಲಾ ರಕ್ಷಣಧಿಕಾರಿ ನಿಖಿಲ್‌ ಬಿ ಅವರಿಗೆ ಮನವಿ ಸಲ್ಲಿಸಿದ ಮಾಜಿ ಡಿಸಿಎಂ ಕೆ ಎಸ್‌ ಈಶ್ವರಪ್ಪ (ETV Bharat)
author img

By ETV Bharat Karnataka Team

Published : January 9, 2026 at 5:35 PM IST

2 Min Read
Choose ETV Bharat

ಶಿವಮೊಗ್ಗ: ತಮಗೆ ಮತ್ತೆ ವಿದೇಶದಿಂದ ಬೆದರಿಕೆ ಕರೆ ಬಂದಿದೆ. ಹಾಗಾಗಿ ನನಗೆ Y ಕೆಟಗರಿ ಭದ್ರತೆ ನೀಡುವಂತೆ ಮಾಜಿ ಉಪ ಮುಖ್ಯಮಂತ್ರಿ ಕೆ.ಎಸ್.ಈ‍ಶ್ವರಪ್ಪನವರು, ಜಿಲ್ಲಾ ಪೊಲೀಸ್​ ವರಿಷ್ಠಾಧಿಕಾರಿ ನಿಖಿಲ್‌ ಬಿ ಅವರಿಗೆ ಮನವಿ ಸಲ್ಲಿಸಿದ್ದಾರೆ.

ನಿನ್ನೆ (ಜ.8) ತಮ್ಮ ಮೊಬೈಲ್​ಗೆ +358465445069 ಎಂಬ ಸಂಖ್ಯೆಯಿಂದ ಮಿಸ್ಡ್ ಕಾಲ್ ಬಂದಿದೆ. ಇದಕ್ಕೆ ವಾಪಸ್ ಕರೆ ಮಾಡಿದಾಗ ಕರೆ ತಲುಪಿಲ್ಲ. ಇದು ಬೆದರಿಕೆ ಕರೆ ಆಗಿರಬಹುದು. ಇದರಿಂದ ನನಗೆ ಜೀವ ಬೆದರಿಕೆ ಇದೆ. ನನಗೆ ಹಿಂದೆ ಇದೇ ರೀತಿ ಬೆದರಿಕೆ ಕರೆ ಬಂದಾಗ ರಾಜ್ಯ ಸರ್ಕಾರ Y ಕೆಟಗರಿ ಭದ್ರತೆ ನೀಡಿತ್ತು. ಕಳೆದ 3 ತಿಂಗಳ ಹಿಂದೆಯಷ್ಟೇ Y ಕೆಟಗರಿ ಭದ್ರತೆಯನ್ನು ರದ್ದು ಮಾಡಿ, X ಕೆಟಗರಿಯ ಭದ್ರತೆಯನ್ನು ನೀಡಿತ್ತು. ಇದರಿಂದು ಇಂದು ತಮ್ಮ ರಾಷ್ಟ್ರಭಕ್ತ ಬಳಗದ ಗೆಳೆಯರೊಂದಿಗೆ ಸೇರಿ ಎಸ್​ಪಿ ಕಚೇರಿಗೆ ತೆರಳಿ ಮನವಿ ಸಲ್ಲಿಸಿರುವುದಾಗಿ ತಿಳಿಸಿದ್ದಾರೆ.

ಕೆ ಎಸ್‌ ಈಶ್ವರಪ್ಪಗೆ ವಿದೇಶದಿಂದ ಜೀವ ಬೆದರಿಕೆ ಕರೆ (ETV Bharat)

ಮನವಿ ಪತ್ರ ಸಲ್ಲಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನನಗೆ ಹಿಂದೆ ಎರಡು ಸಲ ವಿದೇಶದಿಂದ ಬೆದರಿಕೆ ಕರೆ ಬಂದಿತ್ತು. ಯಾವ ದೇಶದ್ರೋಹಿ ಸಂಘಟನೆ ಹಾಗೂ ಯಾವ ದೇಶದ್ರೋಹಿ‌ ನನಗೆ ಬೆದರಿಕೆ ಕರೆ ಮಾಡಿದ್ದ ಎಂಬುದರ ಕುರಿತು ತನಿಖೆ ಆಗಬೇಕೆಂದು ನಾನು ಸರ್ಕಾರಕ್ಕೆ ಒತ್ತಾಯಿಸಿದ್ದೆ. ತನಿಖೆ ಮಾಡಿ ಯಾರಿಂದ ಬೆದರಿಕೆ ಕರೆ ಬಂದಿದೆ, ಯಾವ ವ್ಯಕ್ತಿಯಿಂದ ಬಂದಿದೆ ಎಂದು ಇದುವರೆಗೂ ಹೇಳಿಲ್ಲ. ಆದರೆ, ನನಗೆ ಭದ್ರತೆಯ ದೃಷ್ಟಿಯಿಂದ ಬೆಂಗಳೂರು ಹಾಗೂ ಶಿವಮೊಗ್ಗ ಮನೆಗೆ ಭದ್ರತೆ ಮಾಡಿಕೊಟ್ಟಿದ್ದರು. ರಾಜ್ಯ ಪ್ರವಾಸದ ವೇಳೆ ನನಗೆ ಎಸ್ಕಾರ್ಟ್​ ನೀಡುತ್ತಿದ್ದರು. ಆದರೆ, ಈಗ ಮೂರು ತಿಂಗಳ ಹಿಂದ ಇದ್ದ Y ಕೆಟರಿಗೆ ಭದ್ರತೆಯನ್ನು ಸರ್ಕಾರ ವಾಪಸ್ ತೆಗೆದುಕೊಂಡಿದೆ.

ವಾಪಸ್ ತೆಗೆದುಕೊಂಡಿದನ್ನು ಗಮನಿಸಿ ವಿದೇಶದಿಂದ ಕೆರೆ ಬಂದಿರಬಹುದುದೆಂಬ ಭಾವನೆ ನನ್ನಲ್ಲಿ ಇದೆ. ಇದರಿಂದ ಇಂದು ಜಿಲ್ಲಾ ರಕ್ಷಣಾಧಿಕಾರಿಗಳಿಗೆ ನನ್ನ ಸ್ನೇಹಿತರ ಜೊತೆ ಬಂದು ಸೂಕ್ತ ಕ್ರಮ ಕೈಗೊಳ್ಳುವಂತೆ ನಾನು ಮನವಿ ಸಲ್ಲಿಸಿದ್ದೇನೆ. ಯಾವ ದೇಶದ್ರೋಹಿ ವ್ಯಕ್ತಿ ಹಾಗೂ ಸಂಘಟನೆಗಳಿಂದ ನನಗೆ ಬೆದರಿಕೆ ಕರೆ ಬಂದಿದೆ ಎಂಬುದನ್ನು ಪತ್ತೆ ಹಚ್ಚಬೇಕು. ಕರೆ ಬಂದ ಬಗ್ಗೆ ತನಿಖೆ ಆಗಬೇಕು. ನನಗೆ ಇದ್ದ Y ಕೆಟಗರಿ ಭದ್ರತೆ ಇಲ್ಲದ್ದನ್ನೆ ಗಮನಿಸಿ ಬೆದರಿಕೆ ಕರೆ ಮಾಡಿರಬಹುದು. ಕೇಂದ್ರ ಮತ್ತು ರಾಜ್ಯ ಸರ್ಕಾರ ಇದರ ಬಗ್ಗೆ ತನಿಖೆ‌ ನಡೆಸಬೇಕು.‌ ಈಗ Y ಕೆಟಗೆರೆಯಿಂದ X ಕೆಟಗರಿಗೆ ಬದಲಾವಣೆ ಮಾಡಿದ್ದಾರೆ‌. ಹಾಗಾಗಿ ನನಗೆ ಪುನಃ Y ಕೆಟಗೆರಿ ಭದ್ರತೆ ನೀಡುವುದಾಗಿ ಎಸ್​ಪಿ ತಿಳಿಸಿದ್ದಾರೆ ಎಂದರು.

ಇದನ್ನೂ ಓದಿ: ಪಶ್ಚಿಮ ಬಂಗಾಳ ರಾಜ್ಯಪಾಲರಿಗೆ ಕೊಲೆ ಬೆದರಿಕೆ ಹಾಕಿದ ಆರೋಪಿ ಬಂಧನ; ಭದ್ರತೆ ಹೆಚ್ಚಳ