ETV Bharat / state

ಹಾವೇರಿ: ಪರೀಕ್ಷೆಗೆ ಹೆದರಿ ನಾಪತ್ತೆಯಾಗಿದ್ದ ಐವರು ಎಸ್​ಎಸ್​ಎಲ್​ಸಿ ವಿದ್ಯಾರ್ಥಿಗಳು ಪತ್ತೆ

ಪರೀಕ್ಷೆಗೆ ಹೆದರಿ ನಾಪತ್ತೆಯಾಗಿದ್ದ ಐವರು ಎಸ್​ಎಸ್​ಎಲ್​ಸಿ ವಿದ್ಯಾರ್ಥಿಗಳು ಪತ್ತೆಯಾಗಿದ್ದಾರೆ.

five-sslc-students-who-went-missing-due-to-exam-anxiety-found
ಮೊರಾರ್ಜಿ ವಸತಿ ಶಾಲೆ, ಹಾವೇರಿ (ETV Bharat)
author img

By ETV Bharat Karnataka Team

Published : February 27, 2026 at 8:29 PM IST

|

Updated : February 27, 2026 at 9:13 PM IST

1 Min Read
Choose ETV Bharat

ಹಾವೇರಿ: ಪರೀಕ್ಷೆಗೆ ಹೆದರಿ ನಾಪತ್ತೆಯಾಗಿದ್ದ ಜಿಲ್ಲೆಯ ರಾಣೆಬೆನ್ನೂರು ತಾಲೂಕಿನ ಸುಣಕಲಬಿದರಿ ಗ್ರಾಮದ ಅಲ್ಪಸಂಖ್ಯಾತರ ಮೊರಾರ್ಜಿ ವಸತಿ ಶಾಲೆಯ ಐವರು ಎಸ್​ಎಸ್​ಎಲ್​ಸಿ ವಿದ್ಯಾರ್ಥಿಗಳು ಪತ್ತೆಯಾಗಿದ್ದಾರೆ. ವಿದ್ಯಾರ್ಥಿಗಳು ಇಂದು ಮುಂಜಾನೆಯಿಂದ ಕಾಣೆಯಾಗಿದ್ದರು.

ಜಿಲ್ಲಾ ಅಲ್ಪಸಂಖ್ಯಾತ ಇಲಾಖೆಯ ಕಲ್ಯಾಣಾಧಿಕಾರಿ ಅಬ್ದುಲ್ ಮಿರ್ಜಾನವರ್ ಪ್ರತಿಕ್ರಿಯಿಸಿ, "ಈ ವಿಚಾರ ನನಗೆ ಬೆಳಿಗ್ಗೆ ಗೊತ್ತಾಯಿತು. ನಾನು ಪ್ರಾಂಶುಪಾಲರು ಹಾಗೂ ವಾರ್ಡನ್​ಗಳನ್ನು ವಿಚಾರಿಸಿದಾಗ ವಿದ್ಯಾರ್ಥಿಗಳು ರಾತ್ರಿ 12ರ ವರೆಗೂ ಇಲ್ಲಿಯೇ ಇದ್ದರು ಎಂಬುದು ತಿಳಿಯಿತು. ಇಲ್ಲಿ ನೈಟ್ ವಾಚ್ ಮ್ಯಾನ್ ಇರುತ್ತಾರೆ. ಬೆಳಗ್ಗೆ 5 ಗಂಟೆಗೆ ಅವರು ಇಲ್ಲಿಗೆ ಬಂದಿದ್ದಾರೆ. ನಮ್ಮ ವಿದ್ಯಾರ್ಥಿಗಳು ಹಾಸ್ಟೆಲ್ ಹಿಂಬದಿಯಿಂದ ತಪ್ಪಿಸಿಕೊಂಡು ಹೋಗಿದ್ದಾರೆ. ಏಕೆ ಎಂದು ಪ್ರಾಂಶುಪಾಲರನ್ನು ವಿಚಾರಿಸಿದಾಗ, ಇವತ್ತು ಎಸ್​ಎಸ್​ಎಲ್​ಸಿ ಎಕ್ಸಾಂ ನಡೆಯುತ್ತಿದ್ದು, ಸೈನ್ಸ್ ಪೇಪರ್ ಇತ್ತು. ಪರೀಕ್ಷೆ ಸ್ವಲ್ಪ ಟಫ್ ಇದ್ದುದರಿಂದಾಗಿ ಅವರು ಪರಾರಿಯಾಗಿದ್ದಾರೆ" ಎಂದು ತಿಳಿಸಿದ್ದಾಗಿ ಹೇಳಿದರು.

ಜಿಲ್ಲಾ ಅಲ್ಪಸಂಖ್ಯಾತ ಇಲಾಖೆಯ ಕಲ್ಯಾಣಾಧಿಕಾರಿ ಅಬ್ದುಲ್ ಮಿರ್ಜಾನವರ್ ಅವರ ಪ್ರತಿಕ್ರಿಯೆ (ETV Bharat)

"ಇಲ್ಲಿಗೆ ಬರುವ ವಿದ್ಯಾರ್ಥಿಗಳು ಎಂಟ್ರೆನ್ಸ್ ಎಕ್ಸಾಂ ಬರೆದೇ ಬಂದಿರುತ್ತಾರೆ. ಎಸ್​ಎಸ್​ಎಲ್​ಸಿಯಲ್ಲಿ ಉತ್ತಮ ಸ್ಕೋರ್ ಮಾಡಬೇಕು, ಏನಾದರು ಸಾಧನೆ ಮಾಡಬೇಕು ಎಂದು ಅಂದುಕೊಂಡಿರುತ್ತಾರೆ. ಹೀಗಾಗಿ, ಭಯದಲ್ಲಿ ಅವರು ಹೋಗಿದ್ದಾರೆ" ಎಂದು ಹೇಳಿದ್ದಾರೆ.

ವಿದ್ಯಾರ್ಥಿಗಳಿಗೆ ಗುಣಮಟ್ಟದ ಆಹಾರ ಕೊಡುತ್ತಿಲ್ಲ ಎಂಬ ಆರೋಪ ಕೇಳಿಬಂದಿದೆಯಲ್ಲವೇ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, "ನಾನು ಆಗಾಗ ಭೇಟಿ ನೀಡುತ್ತಿರುತ್ತೇನೆ. ಆಗಾಗ ಕ್ಲಾಸ್ ಕೂಡ ತೆಗೆದುಕೊಳ್ಳುತ್ತೇನೆ. ಎಲ್ಲಾ ವಿದ್ಯಾರ್ಥಿಗಳೊಂದಿಗೆ ಚರ್ಚೆ ಮಾಡುತ್ತೇನೆ. ಇತ್ತೀಚಿಗೆ ನಾನು ಇಲ್ಲಿಗೆ ಬಂದಿದ್ದೆ" ಎಂದರು.

ಇದನ್ನೂ ಓದಿ: ದೇಶ ವಿರೋಧಿ ಕಾರ್ಯಕ್ರಮ ಆರೋಪ: ಅಜೀಂ ಪ್ರೇಮ್‌ಜಿ ವಿವಿ ವಿರುದ್ಧ ಎಬಿವಿಪಿ ಪ್ರತಿಭಟನೆ, ಹಲವರು ಪೊಲೀಸ್ ವಶಕ್ಕೆ

Last Updated : February 27, 2026 at 9:13 PM IST