ಮಧ್ಯಪ್ರಾಚ್ಯ ಉದ್ವಿಗ್ನತೆ ಪರಿಣಾಮ: ಗಲ್ಪ್ ರಾಷ್ಟ್ರಗಳಿಗೆ ಸಂಚರಿಸುವ ಮಂಗಳೂರು ವಿಮಾನಗಳ ಸಂಚಾರದಲ್ಲಿ ವ್ಯತ್ಯಯ
ಗಲ್ಫ್ ರಾಷ್ಟ್ರಗಳಿಗೆ ಸಂಚರಿಸುವ ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಮೂಲದ ಹಲವು ವಿಮಾನಗಳು ರದ್ದು, ಮಾರ್ಗ ಬದಲಾಯಿಸಲ್ಪಟ್ಟಿವೆ.

Published : February 28, 2026 at 5:58 PM IST
ಮಂಗಳೂರು(ದಕ್ಷಿಣ ಕನ್ನಡ): ಯುಎಸ್, ಇಸ್ರೇಲ್ ಮತ್ತು ಇರಾನ್ ನಡುವೆ ಉಂಟಾದ ದಾಳಿ-ಪ್ರತಿದಾಳಿ ಪರಿಸ್ಥಿತಿಯ ಹಿನ್ನೆಲೆ ಇರಾನ್ ವಾಯುಪ್ರದೇಶವನ್ನು ತಾತ್ಕಾಲಿಕವಾಗಿ ಮುಚ್ಚಲಾಗಿದೆ. ಇದರ ಪರಿಣಾಮವಾಗಿ ಗಲ್ಫ್ ರಾಷ್ಟ್ರಗಳಿಗೆ ಸಂಚರಿಸುವ ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ (IXE) ಮೂಲದ ಹಲವು ವಿಮಾನಗಳು ರದ್ದು, ಡೈವರ್ಟ್ ಮಾಡಲ್ಪಟ್ಟಿವೆ.
ಹಿಂತಿರುಗಿಸಿದ (Back to Bay) ವಿಮಾನ: IX 831 – ಮಂಗಳೂರು (IXE) ರಿಂದ ದುಬೈ (DXB) ನಿಗದಿತ ಹೊರಡುವ ಸಮಯ ಮಧ್ಯಾಹ್ನ 1:20 (13:20 IST) ಈ ವಿಮಾನವು ಟೇಕಾಫ್ ಆದ ನಂತರ ಇರಾನ್ ವಾಯುಪ್ರದೇಶ ಮುಚ್ಚಿರುವುದರಿಂದ ಮಂಗಳೂರಿಗೆ ಮರಳಿ ಬಂದು ನಿಲುಗಡೆಗೊಂಡಿತು. ನಂತರ ಮಧ್ಯಾಹ್ನ 3 ಗಂಟೆಗೆ ವಿಮಾನವನ್ನು ಅಧಿಕೃತವಾಗಿ ರದ್ದು ಎಂದು ಘೋಷಿಸಲಾಯಿತು. ವಿಮಾನದಲ್ಲಿದ್ದ ಒಟ್ಟು 174 ಪ್ರಯಾಣಿಕರು ಹಾಗೂ 6 ಸಿಬ್ಬಂದಿಯನ್ನು ವಿಮಾನದಿಂದ ಇಳಿಸಲಾಯಿತು.
ಡೈವರ್ಟ್ ಮಾಡಿದ ವಿಮಾನ: IX 821 – ಮಂಗಳೂರು (IXE) ರಿಂದ ದೋಹಾ (DOH) ಈ ವಿಮಾನವು ದೋಹಾಕ್ಕೆ ತೆರಳುತ್ತಿದ್ದಾಗ ಇರಾನ್ ವಾಯುಮಾರ್ಗ ಲಭ್ಯವಿರದಿರುವುದರಿಂದ ಮಾರ್ಗ ಬದಲಾಯಿಸಿ ಮುಂಬೈ (BOM)ಗೆ ಡೈವರ್ಟ್ ಮಾಡಲಾಗಿದೆ.
ರದ್ದಾದ (Cancelled) ವಿಮಾನಗಳು: IX 831 – ಮಂಗಳೂರು (IXE) ರಿಂದ ದುಬೈ (DXB) ಹೊರಡುವ ಸಮಯ: ಮಧ್ಯಾಹ್ನ 1:20 (13:20 IST) – ರದ್ದು, IX 813 – ಮಂಗಳೂರು (IXE) ರಿಂದ ದುಬೈ (DXB) ಹೊರಡುವ ಸಮಯ: ರಾತ್ರಿ 8:15 (20:15 IST) – ರದ್ದು, IX 847 – ಮಂಗಳೂರು (IXE) ರಿಂದ ದಮ್ಮಾಮ್ (DMM) ಹೊರಡುವ ಸಮಯ: ರಾತ್ರಿ 11:10 (23:10 IST) – ರದ್ದು, IX 851 – ಮಂಗಳೂರು (IXE) ರಿಂದ ಕುವೈತ್ (KWI) ಹೊರಡುವ ಸಮಯ: ರಾತ್ರಿ 10:05 (22:05 IST) – ರದ್ದು, IX 815 – ಮಂಗಳೂರು (IXE) ರಿಂದ ಅಬುಧಾಬಿ (AUH) ಹೊರಡುವ ಸಮಯ: ರಾತ್ರಿ 11:20 (23:20 IST) – ರದ್ದು, 6E 1467 – ಮಂಗಳೂರು (IXE) ರಿಂದ ದುಬೈ (DXB) ಹೊರಡುವ ಸಮಯ: ಸಂಜೆ 7:15 (19:15 IST) – ರದ್ದು.
ಮಂಗಳೂರಿಗೆ ಬರಬೇಕಿದ್ದ ಮತ್ತು ರದ್ದಾದ ವಿಮಾನಗಳು: IX 822 – ದೋಹಾ (DOH) ರಿಂದ ಮಂಗಳೂರು (IXE) ಬರುವ ನಿಗದಿತ ಸಮಯ: ರಾತ್ರಿ 8:45 (20:45 IST) – ರದ್ದು, IX 832 – ದುಬೈ (DXB) ರಿಂದ ಮಂಗಳೂರು (IXE) ಬರುವ ನಿಗದಿತ ಸಮಯ: ರಾತ್ರಿ 10:10 (22:10 IST) – ರದ್ದು.
ಮಂಗಳೂರು–ದುಬೈ, ದೋಹಾ, ದಮ್ಮಾಮ್, ಕುವೈತ್ ಹಾಗೂ ಅಬುಧಾಬಿ ಮಾರ್ಗಗಳಲ್ಲಿ ಕಾರ್ಯನಿರ್ವಹಿಸುವ ಏರ್ ಇಂಡಿಯಾ ಎಕ್ಸ್‌ಪ್ರೆಸ್ ಮತ್ತು ಇಂಡಿಗೋ ವಿಮಾನಗಳಿಗೆ ಇರಾನ್ ವಾಯುಪ್ರದೇಶ ಮುಚ್ಚಿರುವುದರಿಂದ ನೇರವಾಗಿ ಪರಿಣಾಮ ಬೀರಿದೆ. ಕೆಲವು ವಿಮಾನಗಳು ಹಿಂತಿರುಗಿಸಲ್ಪಟ್ಟಿದ್ದು, ಕೆಲವು ಮಧ್ಯದಲ್ಲಿ ಮಾರ್ಗ ಬದಲಾಯಿಸಿ ಇತರ ಭಾರತೀಯ ವಿಮಾನ ನಿಲ್ದಾಣಗಳಿಗೆ ಇಳಿದಿವೆ, ಇನ್ನೂ ಕೆಲವು ಸಂಪೂರ್ಣವಾಗಿ ರದ್ದುಪಡಿಸಲಾಗಿದೆ ಎಂದು ಮಂಗಳೂರು ವಿಮಾನ ನಿಲ್ದಾಣದ ಮಾಧ್ಯಮ ವಕ್ತಾರರು ತಿಳಿಸಿದ್ದಾರೆ.
ಇದನ್ನೂ ಓದಿ: ಮಂಗಳೂರು - ಮಸ್ಕತ್ ನಡುವೆ ಮಾ.1ರಿಂದ ನೇರ ವಿಮಾನಯಾನ ಸೇವೆ ಪುನಾರಂಭ

