ETV Bharat / state

ಬಾಲಿವುಡ್​ ಚಿತ್ರದತ್ತ ನಿರ್ದೇಶಕ ಇಂದ್ರಜಿತ್​​​​​​​​​​ ಲಂಕೇಶ್: 'ಜೈ ಹಿಂದ್​ ಜೈ ಸಿಂಧ್' ಬಹುತೇಕ ಚಿತ್ರೀಕರಣ ಮುಕ್ತಾಯ

ನಿರ್ದೇಶಕ ಇಂದ್ರಜಿತ್​​​​​​​​​​ ಲಂಕೇಶ್ ಅವರು ಸದ್ದಿಲ್ಲದೆ ಬಾಲಿವುಡ್ ಸಿನಿಮಾವನ್ನು ನಿರ್ದೇಶಿಸುತ್ತಿದ್ದು, ನಾಲ್ವರು ಹೊಸ ಪ್ರತಿಭೆಗಳನ್ನು ಚಿತ್ರರಂಗಕ್ಕೆ ಕಲಾವಿದರಾಗಿ ಪರಿಚಯಿಸುತ್ತಿದ್ದಾರೆ.

ಜೈ ಹಿಂದ್​ ಜೈ ಸಿಂಧ್ ಹಿಂದಿ ಸಿನಿಮಾ  ನಿರ್ದೇಶಕ ಇಂದ್ರಜಿತ್​​​​​​​​​​ ಲಂಕೇಶ್  INDRAJIT LANKESH BOLLYWOOD MOVIE  JAI HIND JAI SINDH
'ಜೈ ಹಿಂದ್​ ಜೈ ಸಿಂಧ್​' ಚಿತ್ರತಂಡದೊಂದಿಗೆ ನಿರ್ದೇಶಕ ಇಂದ್ರಜಿತ್​​​​​​​​​​ ಲಂಕೇಶ್ (ETV Bharat)
author img

By ETV Bharat Karnataka Team

Published : March 2, 2026 at 3:52 PM IST

2 Min Read
Choose ETV Bharat

ಕನ್ನಡ ಚಿತ್ರರಂಗದಲ್ಲಿ ಸ್ಟೈಲಿಶ್​​​​​ ನಿರ್ದೇಶಕ ಅಂತಾ ಕರೆಯಿಸಿಕೊಂಡಿರುವ ಡೈರೆಕ್ಟರ್​​​​​​ ​​​​ಅಂದರೆ ಅದು ಇಂದ್ರಜಿತ್​​​​​​​​​​ ಲಂಕೇಶ್​​​​​​​​​. ಗೌರಿ ಚಿತ್ರ ಆದಮೇಲೆ ಇಂದ್ರಜಿತ್​​​​​​​​ ಲಂಕೇಶ್​​​​​​​​​ ಯಾವ ಸಿನಿಮಾ ಮಾಡ್ತಿದ್ದಾರೆ ಎಂಬ ಕುತೂಹಲ ಅವರ ಅಭಿಮಾನಿಗಳಲ್ಲಿತ್ತು. ಆ ಕುತೂಹಲಕ್ಕೆ ಈಗ ಉತ್ತರ ಸಿಕ್ಕಿದೆ.

ಈ ಹಿಂದೆ ಶಕೀಲಾ ಸಿನಿಮಾ ಮಾಡಿದ್ದ ಇಂದ್ರಜಿತ್​​​​ ಲಂಕೇಶ್​ ಈಗ ಮತ್ತೊಮ್ಮೆ ಹಿಂದಿ ಚಿತ್ರರಂಗಕ್ಕೆ ದೊಡ್ಡ ಮಟ್ಟದಲ್ಲಿ ಕಾಲಿಟ್ಟಿದ್ದಾರೆ. ಅವರು ಇದೀಗ 'ಜೈ ಹಿಂದ್​ ಜೈ ಸಿಂಧ್​' ಎಂಬ ಹಿಂದಿ ಚಿತ್ರವನ್ನು ಸದ್ದಿಲ್ಲದೆ ನಿರ್ದೇಶಿಸುತ್ತಿದ್ದು, ಈಗಾಗಲೇ ಬಹುತೇಕ ಚಿತ್ರೀಕರಣ ಮುಗಿದಿದೆ. ಚಿತ್ರದ ಕೊನೆಯ ಹಂತದ ಚಿತ್ರೀಕರಣ ಇದೀಗ ಉತ್ತರಾಖಂಡದಲ್ಲಿ ಭರದಿಂದ ಸಾಗಿದೆ.

ಇತ್ತೀಚೆಗೆ ಡೆಹ್ರಾಡೂನ್​ನಲ್ಲಿ 'ಜೈ ಹಿಂದ್ ಜೈ ಸಿಂಧ್' ಚಿತ್ರದ ಮೋಷನ್​​ ಪೋಸ್ಟರ್​​ ಬಿಡುಗಡೆ ಸಮಾರಂಭದ ಜೊತೆಗೆ, ಚಿತ್ರದ ಮೊದಲ ಮಾಧ್ಯಮಗೋಷ್ಟಿ ಅದ್ಧೂರಿಯಾಗಿ ನಡೆಯಿತು. ಈ ವೇಳೆ ಭಾರತದ ಮೂಲೆಮೂಲೆಗಳಿಂದ ದೊಡ್ಡ ಸಂಖ್ಯೆಯಲ್ಲಿ ಆಗಮಿಸಿದ್ದ ಪತ್ರಕರ್ತರು ಹಾಜರಿದ್ದರು. ಈ ಕಿಕ್ಕಿರಿದ ಮಾಧ್ಯಮಗೋಷ್ಟಿಯಲ್ಲಿ ಇಂದ್ರಜಿತ್ ಜೊತೆಗೆ ನಿರ್ಮಾಪಕ ಸ್ಯಾಮಿ ನನ್ವಾನಿ, ಆಕಾಶಾ ವತ್ಸ್, ವಿಕ್ರಂ ಕೊಚ್ಚರ್ ಮುಂತಾದವರು ಹಾಜರಿದ್ದರು.

ಈ ಚಿತ್ರದ ಕುರಿತು ಮಾತನಾಡಿದ ನಿರ್ದೇಶಕ ಇಂದ್ರಜಿತ್​​​​ ಲಂಕೇಶ್​​​​, ಇದೊಂದು ಪ್ರೇಮಕಥೆಯಾಗಿದ್ದು, ದೇಶ ವಿಭಜನೆ ಪ್ರಮುಖ ಪಾತ್ರ ವಹಿಸುತ್ತದೆ. ಅನೇಕತೆಯಲ್ಲಿ ಏಕತೆ ಎಂಬ ವಿಷಯವನ್ನು ಈ ಚಿತ್ರದ ಮೂಲಕ ಹೇಳುವ ಪ್ರಯತ್ನ ಮಾಡಿದ್ದೇನೆ. ದೇಶ ವಿಭಜನೆಯಾದಾಗ ಸಿಂಧ್ ಪ್ರಾಂತ್ಯದ ಜನ ಹೇಗೆ ನರಳಿದರು, ಅದರಿಂದ ಹೊರಬಂದು, ಈಗ ತಮ್ಮ ಬದುಕನ್ನು ಹೇಗೆ ಕಟ್ಟಿಕೊಂಡಿದ್ದಾರೆ ಎಂಬುದನ್ನು ಈ ಚಿತ್ರದ ಮೂಲಕ ಹೇಳುವ ಪ್ರಯತ್ನ ಮಾಡಿದ್ದೇನೆ ಎಂದರು.

ಹಾಗೇ ನನ್ನ ಮೊದಲ ಚಿತ್ರದಿಂದ ಹಲವು ನಟ-ನಟಿಯರನ್ನು ಪರಿಚಯಿಸುವ ಪ್ರಯತ್ನ ಮಾಡುತ್ತಲೇ ಬಂದಿದ್ದೇನೆ ಎಂದ ಇಂದ್ರಜಿತ್, ಗಾಯಕಿ ವಸುಂದರಾ ದಾಸ್ ಅವರನ್ನು 'ಲಂಕೇಶ್ ಪತ್ರಿಕೆ' ಚಿತ್ರದ ಮೂಲಕ ನಾಯಕಿಯಾಗಿ ಪರಿಚಯಿಸಿದರೆ, ದೀಪಿಕಾ ಪಡುಕೋಣೆ ಅವರನ್ನು ಐಶ್ವರ್ಯ ಚಿತ್ರದ ಮೂಲಕ ಪರಿಚಯಿಸಿದ್ದೆ. ಈಗ ಈ ಚಿತ್ರದ ಮೂಲಕ ನಾಲ್ವರು ಹೊಸ ಪ್ರತಿಭೆಗಳನ್ನು ಚಿತ್ರರಂಗಕ್ಕೆ ಪರಿಚಯಿಸುತ್ತಿದ್ದೇನೆ ಎಂದು ತಿಳಿಸಿದರು.

'ಜೈ ಹಿಂದ್ ಜೈ ಸಿಂಧ್'' ಚಿತ್ರವನ್ನು ಸ್ಯಾಮೀಸ್ ಎಂಟರ್​ಟೈನ್ಮೆಂಟ್ ಸಂಸ್ಥೆಯಡಿ ಸ್ಯಾಮಿ ನನ್ವಾನಿ ನಿರ್ಮಿಸುತ್ತಿದ್ದಾರೆ. ಈ ಚಿತ್ರದಲ್ಲಿ ಮಹೇಶ್ ಮಂಜ್ರೇಕರ್, ವಿಕ್ರಂ ಕೋಚಾರ್, ಜರೀನಾ ವಹಾಬ್, ಜಯಪ್ರದ, ಉಪಾಸನಾ ಸಿಂಗ್, ಅಮಿತ್ ಬಹಲ್ ಮುಂತಾದ ಪ್ರತಿಭಾವಂತ ಕಲಾವಿದರು ಪ್ರಮುಖ ಪಾತ್ರಗಳಲ್ಲಿ ನಟಿಸುತ್ತಿದ್ದಾರೆ. ಈ ಚಿತ್ರದ ಮೂಲಕ ಇಂದ್ರಜಿತ್ ಲಂಕೇಶ್, ನಾಲ್ವರು ಹೊಸ ಪ್ರತಿಭೆಗಳನ್ನು ಚಿತ್ರರಂಗಕ್ಕೆ ಕಲಾವಿದರಾಗಿ ಪರಿಚಯಿಸುತ್ತಿದ್ದಾರೆ.

ಒಟ್ಟಾರೆ ಜೈ ಹಿಂದ್ ಜೈ ಸಿಂಧ್ ಸದ್ಯದಲ್ಲೇ ಚಿತ್ರೀಕರಣ ಮುಗಿಯಲಿದ್ದು, ಈ ವರ್ಷದ ಮಧ್ಯಭಾಗದ ಹೊತ್ತಿಗೆ ಚಿತ್ರ ಬಿಡುಗಡೆಯಾಗುವ ಸಾಧ್ಯತೆ ಇದೆ.

ಇದನ್ನೂ ಓದಿ: ಯುವ ನಟನಿಗೆ ಕಿಚ್ಚ ಸಾಥ್: ನಾನು ಸುದೀಪ್ ಅಭಿಮಾನಿ ಎಂದ 'ಯಾರೇ ನೀನು ಚೆಲುವೆ' ನಾಯಕಿ