ETV Bharat / state

ಸಾಧನೆಯ ಹಾದಿಯಲ್ಲಿ ದೇವರಾಜು ಅರಸು ಬಹಳ ಉತ್ತುಂಗದ ಸ್ಥಾನದಲ್ಲಿದ್ದಾರೆ: ಕುಮಾರ ಬಂಗಾರಪ್ಪ

ದೀರ್ಘಾವಧಿ ಸಿಎಂ ಆಗಿ ದಾಖಲೆ ಬರೆದ ಸಿದ್ಧರಾಮಯ್ಯ ಅವರಿಗೆ ಶುಭಾಶಯ ತಿಳಿಸುತ್ತೇನೆ ಎಂದು ಮಾಜಿ ಸಚಿವ ಕುಮಾರ ಬಂಗಾರಪ್ಪ ಹೇಳಿದ್ದಾರೆ.

KUMARA BANGARAPPA
ಕುಮಾರ ಬಂಗಾರಪ್ಪ (ETV Bharat)
author img

By ETV Bharat Karnataka Team

Published : January 10, 2026 at 3:33 PM IST

2 Min Read
Choose ETV Bharat

ರಾಯಚೂರು: ರಾಜ್ಯದ ಮುಖ್ಯಮಂತ್ರಿಯಾಗಿದ್ದ ಕಾಲಮಾನದಲ್ಲಿ ಸಾಧನೆಯ ಹಾದಿಯಲ್ಲಿ ದೇವರಾಜು ಅರಸು ಅವರು ಬಹಳ ಉತ್ತುಂಗದ ಸ್ಥಾನದಲ್ಲಿದ್ದಾರೆ ಎಂದು ಮಾಜಿ ಸಚಿವ ಕುಮಾರ ಬಂಗಾರಪ್ಪ ತಿಳಿಸಿದ್ದಾರೆ. ಖಾಸಗಿ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಲು ನಗರಕ್ಕೆ ಆಗಮಿಸಿದ್ದ ವೇಳೆ ಮಾಜಿ ಸಂಸದ ಬಿ.ವಿ.ನಾಯಕ ನಿವಾಸದಲ್ಲಿ ಮಾಧ್ಯಮದವರೊಂದಿಗೆ ಅವರು ಮಾತನಾಡಿದರು.

ಸಿದ್ಧರಾಮಯ್ಯ ದೀರ್ಘಾವಧಿ ಸಿಎಂ ಆಗಿ ದಾಖಲೆ ಬರೆದಿರುವುದಕ್ಕಾಗಿ ಅವರಿಗೆ ಶುಭಾಶಯ ತಿಳಿಸುತ್ತೇನೆ. ಸಾಧನೆ ವಿಚಾರಕ್ಕೆ ದಿ.ದೇವರಾಜ ಅರಸು ಅವರ ಸಾಧನೆ ಅತ್ಯಂತ ಉತ್ತುಂಗದಲ್ಲಿದ್ದರೆ, ಅದಕ್ಕೆ ಸರಿಸಾಟಿಯಾಗಿ ಸಿದ್ದರಾಮಯ್ಯಗೆ ಅನೇಕರು, ಹಿಂಬಾಲಕರು, ಅಭಿಮಾನಿಗಳು ಹೋಲಿಕೆ ಮಾಡುತ್ತಿದ್ದಾರೆ. ದೇವರಾಜು ಅರಸುರಿಗೆ ಹೋಲಿಕೆ ಮಾಡಲಾಗುತ್ತಿದೆ. ಅಂದರೆ ದೇವರಾಜು ಅರಸು ಅವರ ಹೆಸರು ಹೇಳುತ್ತಿದ್ದಾರೆ ಎಂದರೆ ಮೇಲಕ್ಕೆ ಹೊರತು, ಅದಕ್ಕೆ ಸರಿಸಾಟಿಯಾಗಿ ಬರಲ್ಲ ಎಂದು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು.

ಒಬ್ಬರ ಹೆಸರಿನಲ್ಲಿ ರಾಜಕಾರಣ ಬಂದಿರುವುದಿಲ್ಲ: ಒಬ್ಬರು ಮುಖ್ಯಮಂತ್ರಿಯಾಗಿ ತಮ್ಮ ಆಡಳಿತ ನಡೆಸುವಾಗ ಅವರದ್ದೇ ಆದ ಕೊಡುಗೆ ನೀಡಿದ್ದಾರೆ. ಬಂಗಾರಪ್ಪನವರು ಎರಡು ವರ್ಷ ಸಿಎಂ ಆಗಿದ್ರು, ರೈತರಿಗೆ 10 ಹೆಚ್​ಪಿ ಮೋಟರ್ ಸೇರಿದಂತೆ ಹಲವು ಕಾರ್ಯಕ್ರಮಗಳನ್ನು ನೀಡಿದ್ದರು. ಹಾಗೆ ಜೆ.ಎಚ್.ಪಾಟೇಲರು, ದೇವರಾಜು ಅರಸು, ನಿಜಲಿಂಗಪ್ಪ ಸೇರಿದಂತೆ ಹಲವರನ್ನು ನೆನೆಸುತ್ತಾರೆ. ಹೀಗಾಗಿ ಆಗ ಅವರೆಲ್ಲ ಒಬ್ಬೊಬ್ಬರು ಒಂದು ವಿಶ್ವವಿದ್ಯಾಲಯ ಇದ್ದ ಹಾಗೆ. ಒಬ್ಬರ ಹೆಸರಿನಲ್ಲಿ ರಾಜಕಾರಣ ಬಂದಿರುವುದಿಲ್ಲ ಎಂದು ತಿಳಿಸಿದರು.

ಒಬ್ಬ ಕಾರ್ಯಕರ್ತನಾಗಿ ನನ್ನ ಧ್ವನಿ ಎತ್ತಿದ್ದೇನೆ: ರಾಜ್ಯ ಬಿಜೆಪಿ ರಾಜ್ಯಾಧ್ಯಕ್ಷರ ಬದಲಾವಣೆ ವಿಚಾರವಾಗಿ, ಬದಲಾವಣೆಯಾಗುವವರೆಗೂ ಅನಿಸಿಕೆಗಳನ್ನು ವ್ಯಕ್ತಪಡಿಸುತ್ತೇವೆ. ಒಬ್ಬ ಕಾರ್ಯಕರ್ತನಾಗಿ ನನ್ನ ಧ್ವನಿಯನ್ನು ಎತ್ತಿದ್ದೇನೆ. ಅದು ಎಲ್ಲಾ ಕಾರ್ಯಕರ್ತರ ಹಕ್ಕು ಕೂಡಾ ಹೌದು. ನಮ್ಮ ಅನಿಸಿಕೆ ಹೇಳುವ ಹಕ್ಕಿದೆ, ಹೇಳಿದ್ದೇವೆ. ಒಂದು ಬಾರಿ ನಿರ್ಧಾರ ತೆಗೆದುಕೊಂಡ ಬಳಿಕ ಅದನ್ನು ಪಾಲಿಸಬೇಕಾಗುತ್ತದೆ. ನಮ್ಮ ಅಭಿಪ್ರಾಯ ಪಕ್ಷದ ಮುಂದಿಟ್ಟಿದ್ದೇವೆ. ಕೆಲವರು ತೆರೆಮರೆಯಲ್ಲಿ ಮಾಡುತ್ತಾರೆ. ನಾವು ತೆರೆಯ ಮುಂದೆ ಮಾಡಿದ್ದೇವೆ ಎಂದರು.

ಮಲೆಯಾಳಂ ಭಾಷೆ ಹೇರಿಕೆ ಅಕ್ಷಮ್ಯ ಅಪರಾಧ: ಕನ್ನಡಿಗರ ಮೇಲೆ ಕೇರಳ ಸರ್ಕಾರ ಮಲೆಯಾಳಂ ಭಾಷೆ ಹೇರಿಕೆ ಮಾಡುವುದು ಅಕ್ಷಮ್ಯ ಅಪರಾಧವಾಗಿದೆ. ಗಡಿ ಭಾಗದಲ್ಲಿ ಕನ್ನಡ ಭಾಷೆಗಳ ಶಾಲೆಗಳು ನಡೆಯುತ್ತಿವೆ. ಸ್ಥಳೀಯವಾಗಿ ಮರಾಠಿ ಭಾಷೆ ಶಾಲೆಗಳಿಗೂ ಪ್ರೋತ್ಸಾಹ ನೀಡಲಾಗಿದೆ. ಕನ್ನಡ ಭಾಷೆ ಶಾಲೆಗಳಿಗೆ ಅವರಿಂದಲೂ ಪ್ರೋತ್ಸಾಹ ಸಿಕ್ಕಿದೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ನಮ್ಮ ಪ್ರಾದೇಶಿಕ ಭಾಷೆಗಳನ್ನು ಗೌರವಿಸುವುದು, ಮತ್ತೊಂದು ರಾಜ್ಯದ ಭಾಷೆಗೆ ಗೌರವ ಕೂಡಬೇಕಾಗುತ್ತದೆ. ಕಾನೂನು, ವ್ಯವಸ್ಥೆ ಮಾಡುವುದಕ್ಕೆ ಆಗಲ್ಲ. ಇವಲ್ಲಾ ಸಾಮಾಜಿಕವಾಗಿ ಪರಿವರ್ತನೆಯಾಗಿದ್ದು, ಸಮಾಜ ನಿರ್ಧಾರ ಮಾಡುತ್ತದೆ ಎಂದು ತಿಳಿಸಿದರು.

ಇವುಗಳನ್ನೂ ಓದಿ: