ETV Bharat / state

ನನ್ನ ಮೇಲೆ ಹಲ್ಲೆಯಾಗಿಲ್ಲ, ಮುತ್ತಿಗೆ ಹಾಕುವ ಭರದಲ್ಲಿ ಕೈ ಹಾಕಿದ್ದಾರೆ: ಡಿಸಿಪಿ ನ್ಯಾಮಗೌಡ

ಯೂತ್ ಕಾಂಗ್ರೆಸ್​ ಅಧ್ಯಕ್ಷನಿಂದ ಹಲ್ಲೆ ಆರೋಪ ಸಂಬಂಧ ಡಿಸಿಪಿ ಸ್ಪಷ್ಟನೆ ನೀಡಿ, ಮತ್ತಿಗೆ ಹಾಕುವ ಯತ್ನದಲ್ಲಿ ನನ್ನ ಮೇಲೆ ಕೈ ಹಾಕಲಾಗಿದೆ, ಇದು ಉದ್ದೇಶಪೂರ್ವಕವಾಗಿ ನಡೆದ ಘಟನೆ ಅಲ್ಲ ಎಂದಿದ್ದಾರೆ.

BENGALURU  YOUTH CONGRESS PROTEST  YOUTH CONGRESS PRESIDENT  DCP NAMGOUDA
ಯೂತ್ ಕಾಂಗ್ರೆಸ್ ಪ್ರತಿಭಟನೆ ವೇಳೆ (ETV Bharat)
author img

By ETV Bharat Karnataka Team

Published : September 1, 2026 at 8:35 PM IST

1 Min Read
Choose ETV Bharat

ಬೆಂಗಳೂರು: ನಗರದ ಉತ್ತರ ವಿಭಾಗದ ಡಿಸಿಪಿ ಮೇಲೆ ರಾಜ್ಯ ಯುವ ಕಾಂಗ್ರೆಸ್ ಅಧ್ಯಕ್ಷ ಹಲ್ಲೆ ಮಾಡಿರುವ ಆರೋಪ ಕೇಳಿಬಂದಿದ್ದು, ಈ ಸಂಬಂಧ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಈ ಬೆನ್ನಲ್ಲೇ ಡಿಸಿಪಿ ನ್ಯಾಮಗೌಡ ಪ್ರತಿಕ್ರಿಯೆ ನೀಡಿ, ನನ್ನ ಮೇಲೆ ಹಲ್ಲೆಯಾಗಿಲ್ಲ. ಮುತ್ತಿಗೆ ಹಾಕುವ ಭರದಲ್ಲಿ ನನ್ನ ಮೇಲೆ ಕೈ ಹಾಕಲಾಗಿದೆ. ಉದ್ದೇಶಪೂರ್ವಕವಾಗಿ ಘಟನೆ ನಡೆದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ಕೇಂದ್ರದ ಧೋರಣೆ ಖಂಡಿಸಿ ಭಾನುವಾರ ಮಧ್ಯಾಹ್ನ ಯುವ ಕಾಂಗ್ರೆಸ್ ಅಧ್ಯಕ್ಷ ಮಂಜುನಾಥ್ ಗೌಡ ಅವರ ನೇತೃತ್ವದಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಮಲ್ಲೇಶ್ವರ ಬಿಜೆಪಿ ಕಚೇರಿಗೆ ಮುತ್ತಿಗೆ ಹಾಕಲು ಮುಂದಾಗಿದ್ದರು.

ಮಾಹಿತಿ ಆಧರಿಸಿ ಸ್ಥಳಕ್ಕೆ ದೌಡಾಯಿಸಿದ ಪೊಲೀಸರು ಮುತ್ತಿಗೆ ಹಾಕದಂತೆ ಮನವಿ ಮಾಡಿದರೂ ಮುತ್ತಿಗೆಗೆ ಯತ್ನಿಸಿದ್ದಾರೆ. ಈ ವೇಳೆ ಪೊಲೀಸರು ಪ್ರತಿಭಟನಾಕಾರರನ್ನು ಚುದುರಿಸಲು ಲಘು ಲಾಠಿ ಪ್ರಹಾರ ನಡೆಸಿದ್ದಾರೆ. ಕೇಂದ್ರದ ವಿರುದ್ಧ ಘೋಷಣೆ ಕೂಗುವ ಭರದಲ್ಲಿ ಸ್ಥಳದಲ್ಲಿದ್ದ ಡಿಸಿಪಿ ನ್ಯಾಮಗೌಡ ಅವರನ್ನ ಮಂಜುನಾಥ್ ಗೌಡ ಅವರು ತಳ್ಳಾಡಿದ್ದಾರೆ. ಬಳಿಕ ವೈಯ್ಯಾಲಿಕಾವಲ್ ಠಾಣೆ ಪೊಲೀಸರು ಪ್ರತಿಭಟನಾಕಾರರನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಡಿಸಿಪಿಯನ್ನ ಹಿಡಿದು ತಳ್ಳಾಡಿದ ವಿಡಿಯೋ ವೈರಲ್ ಆಗಿತ್ತು.

ಘಟನೆ ಬಗ್ಗೆ ಈಟಿವಿ ಭಾರತದೊಂದಿಗೆ ಮಾತನಾಡಿರುವ ಡಿಸಿಪಿ ನ್ಯಾಮಗೌಡ, ನನ್ನ ಮೇಲೆ ಹಲ್ಲೆ ನಡೆದಿಲ್ಲ. ಮುತ್ತಿಗೆ ಹಾಕುವ ಭರದಲ್ಲಿ ನನ್ನ ಮೇಲೆ ಕೈ ಹಾಕಲಾಗಿದೆ. ಉದ್ದೇಶಪೂರ್ವಕವಾಗಿ ಘಟನೆ ನಡೆದಿಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ.

ಇದನ್ನೂ ಓದಿ: ಬೆಳಗಾವಿಯಲ್ಲಿ ಗಮನ ಸೆಳೆದ ಪೊಲೀಸ್ ಶ್ವಾನಗಳ ಸ್ಪರ್ಧೆ: ಆರು ಜಿಲ್ಲೆಗಳ 18ಕ್ಕೂ‌ ಅಧಿಕ ಶ್ವಾನಗಳು ಭಾಗಿ