ಬಿಜೆಪಿ, ಜೆಡಿಎಸ್ ವಿಲೀನವಾಗುವ ಸಾಧ್ಯತೆ ಇದೆ: ಡಿಸಿಎಂ ಡಿ.ಕೆ.ಶಿವಕುಮಾರ್
ಬಿಜೆಪಿ ಹಾಗೂ ಜೆಡಿಎಸ್ ಪಕ್ಷಗಳು ವಿಲೀನವಾಗುವ ಸಾಧ್ಯತೆಯ ಬಗ್ಗೆ ಡಿಸಿಎಂ ಡಿ.ಕೆ.ಶಿವಕುಮಾರ್ ಹೇಳಿಕೆ ನೀಡಿದ್ದಾರೆ.

Published : January 8, 2026 at 3:03 PM IST
ಬೆಂಗಳೂರು: ಬಿಜೆಪಿ, ಜೆಡಿಎಸ್ ವಿಲೀನ ಆಗಬಹುದು. ಆದಷ್ಟು ಬೇಗ ಅವರು ವಿಲೀನವಾಗುವ ಸಾಧ್ಯತೆ ಇದೆ. ಎರಡು ಪಾರ್ಟಿ ಇದ್ದರೆ ರಾಜ್ಯಕ್ಕೆ ಒಳ್ಳೆಯದು ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ತಿಳಿಸಿದರು.
ಕೆಪಿಸಿಸಿ ಕಚೇರಿಯಲ್ಲಿಂದು ಮಾತನಾಡಿದ ಅವರು, ಲೆಕ್ಕಕ್ಕೆ 3 ಆಟಕ್ಕೆ 2 ಪಾರ್ಟಿ ಅನ್ನೋ ಹಾಗಾಗಿದೆ. ಆದಷ್ಟು ಬೇಗ ಅವರು ವಿಲೀನವಾಗಲಿ. ಎರಡೇ ಪಾರ್ಟಿಯಾದರೆ ರಾಜಕಾರಣ ಮಾಡಬಹುದು. ನಾವು ಫೈಟ್ ಮಾಡೋಕೆ ಒಳ್ಳೆಯದಾಗುತ್ತೆ. ಎರಡು ಪಾರ್ಟಿ ಇದ್ದರೆ ರಾಜ್ಯಕ್ಕೂ ಒಳ್ಳೆಯದು ಎಂದರು.
ಬೆಂಗಳೂರು ನಗರದಲ್ಲಿ ಚುನಾವಣೆ ಬರುತ್ತಿದೆ. ಅರ್ಜಿ ಹಾಕಲು ಅವಕಾಶ ನೀಡಿದ್ದೇವೆ. ಅದಕ್ಕೆ ಡೇಟ್ ಕೂಡ ಫಿಕ್ಸ್ ಆಗಿದೆ. 779 ಜನ ಜಿಬಿಎ ಚುನಾವಣೆಗೆ ಅರ್ಜಿ ಹಾಕಿದ್ದಾರೆ. ಯಾರು ಅರ್ಜಿ ಹಾಕಿದ್ದೀರೋ ಈಗಲೇ ಕೆಲಸ ಮಾಡಿ. ನಾವೂ ಕೂಡ ಪರಾಮರ್ಶೆ ಮಾಡ್ತೇವೆ. ಸರಿಯಾದ ಅಭ್ಯರ್ಥಿಯನ್ನೇ ಹಾಕಬೇಕು. ಬೆಂಗಳೂರು ನಗರದಲ್ಲಿ ಕೆಲಸ ಆಗ್ತಿದೆ. ನಾವು ಉತ್ತಮವಾಗಿ ಕೆಲಸ ಮಾಡ್ತಿದ್ದೇವೆ. ನೇರವಾಗಿ ಫೈಟ್ ಮಾಡೋಕೆ ನಾವು ರೆಡಿ ಇದ್ದೇವೆ ಎಂದು ಹೇಳಿದರು.
ಈ ವರ್ಷ ಚುನಾವಣಾ ವರ್ಷ ಅಂತ ಭಾವಿಸಬೇಕು. ಸ್ಥಳೀಯ ಸಂಸ್ಥೆಗಳ ಚುನಾವಣೆ ಇದೆ. ಚುನಾವಣೆ ಮಾಡೋದಕ್ಕೆ ನಾವು ರೆಡಿ ಇದ್ದೇವೆ. ಪಂಚಾಯಿತಿ, ಪುರಸಭೆ ಮೇಲ್ದೆರ್ಜೆಗೇರಿಕೆ ಆಗ್ತಿದೆ. ಕೇಂದ್ರದ ಜನಗಣತಿ ಪ್ರಾರಂಭವಾಗ್ತಿದೆ. ನಾವು ಚುನಾವಣೆಗೆ ಸಿದ್ದತೆ ಮಾಡಿಕೊಳ್ತಿದ್ದೇವೆ. ಜೆಡಿಎಸ್ ಪಕ್ಷದ ರೀತಿಯಲ್ಲಿ ಇಲ್ಲ. ಅದು ಪರ್ಸನಲ್ ಪ್ರಾಪರ್ಟಿ ಥರ ಇದೆ. ಆ ಪಕ್ಷಕ್ಕೆ ಒಂದು ಸಿದ್ದಾಂತ ಇಲ್ಲ. ಯಾವುದೇ ಐಡಿಯಾಲಜಿ ಇಲ್ಲ ಎಂದರು.
ಗೋವಿಂದರಾಜು ಕಾಂಗ್ರೆಸ್ ಸೇರ್ಪಡೆ: ಜೆಡಿಎಸ್ ಮುಖಂಡ ಗೋವಿಂದರಾಜ್, ಅವರ ಪತ್ನಿ ಗೌರಮ್ಮ ಮತ್ತಿತರರು ಡಿ.ಕೆ.ಶಿವಕುಮಾರ್ ಹಾಗೂ ಸಚಿವ ಜಮೀರ್ ಅಹ್ಮದ್ ಖಾನ್ ಸಮ್ಮುಖದಲ್ಲಿ ಕಾಂಗ್ರೆಸ್ ಸೇರ್ಪಡೆಯಾದರು. ಆರ್ಟಿಐ ಕಾರ್ಯಕರ್ತ ಲಿಂಗರಾಜು ಹತ್ಯೆ ಪ್ರಕರಣದ ಆರೋಪಿಯಾಗಿದ್ದ ಅವರು ಖುಲಾಸೆಯಾಗಿದ್ದರು.
ಇದನ್ನೂ ಓದಿ: ಬಿಜೆಪಿ-ಜೆಡಿಎಸ್ ಮೈತ್ರಿ ಲೋಕಸಭೆ, ವಿಧಾನಸಭೆಗಷ್ಟೇ ಸೀಮಿತ, ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಸ್ವತಂತ್ರ ಸ್ಪರ್ಧೆ: ದೇವೇಗೌಡ

