ETV Bharat / state

ದಾವಣಗೆರೆ: ಹಣ್ಣು, ತರಕಾರಿಯಿಂದ ತಯಾರಿಸಿದ ಬಣ್ಣಗಳಿಂದ ಹೋಳಿ ಸಂಭ್ರಮ

ದಾವಣಗೆರೆಯ ಎಸ್ಎಸ್ ಲೇಔಟ್‌ನಲ್ಲಿ‌ ಮಹಿಳೆಯರ ಗುಂಪು ಕೆಮಿಕಲ್ ಮಿಶ್ರಿತ ಬಣ್ಣಕ್ಕೆ ಗುಡ್​​ಬೈ ಹೇಳಿ ಹರ್ಬಲ್ ಹಣ್ಣು, ತರಕಾರಿ ಪೇಸ್ಟ್​ಗಳನ್ನು ತಯಾರಿಸಿ ಹೋಳಿ ಆಚರಿಸಿ ಸಂಭ್ರಮಿಸಿದರು.

HOLI CELEBRATION
ನೈಸರ್ಗಿಕ ಬಣ್ಣಗಳಿಂದ ಹೋಳಿ ಸಂಭ್ರಮ (ETV Bharat)
author img

By ETV Bharat Karnataka Team

Published : March 4, 2026 at 1:21 PM IST

1 Min Read
Choose ETV Bharat

ದಾವಣಗೆರೆ: ಕೆಮಿಕಲ್ ಮಿಶ್ರಿತ ಬಣ್ಣಗಳನ್ನು ಬಳಸಿ ಹೋಳಿ ಆಡುವುದು ಸಾಮಾನ್ಯ. ಆದರೆ, ಬೆಣ್ಣೆನಗರಿ ದಾವಣಗೆರೆಯ ಎಸ್ಎಸ್ ಲೇಔಟ್‌ನಲ್ಲಿ‌ ಹಣ್ಣು, ತರಕಾರಿಯಿಂದ ಪೇಸ್ಟ್ ತಯಾರು ಮಾಡಿ ವಿಶೇಷವಾಗಿ ಹೋಳಿ ಆಚರಿಸಿದ್ದು ಗಮನ ಸೆಳೆಯಿತು. ಕನ್ನಡ, ಹಿಂದಿ ಹಾಡುಗಳಿಗೆ ಜನರು ಕುಣಿದು ಕುಪ್ಪಳಿಸಿದರು.

ರಾಮ್ ಆ್ಯಂಡ್ ಕೋ ಸರ್ಕಲ್ ಹೋಳಿ ಹೆಸರುವಾಸಿ: ದಾವಣಗೆರೆ ಎಂದರೆ ಹೋಳಿ ಹಬ್ಬಕ್ಕೆ ಫೇಮಸ್. ಅದ್ರಲ್ಲೂ ಇಲ್ಲಿನ ರಾಮ್​ ಆ್ಯಂಡ್ ಕೋ ವೃತ್ತದಲ್ಲಿ ಯುವಕ-ಯುವತಿಯರು ಕಿಕ್ಕಿರಿದು ಸೇರಿ ಹೋಳಿ ಆಚರಿಸುವುದು ವಿಶೇಷ.

ನಗರದ ಎಸ್ಎಸ್ ಬಡಾವಣೆಯ ಎ ಬ್ಲಾಕ್​ನ ಮಹಿಳೆಯರು ತರಕಾರಿ, ಸೊಪ್ಪು, ಹಣ್ಣು, ಮಜ್ಜಿಗೆ, ಮೊಸರಿನಿಂದ ನೈಸರ್ಗಿಕ ಬಣ್ಣ ತಯಾರಿಸಿ ಹೋಳಿ ಆಚರಿಸಿ ಹಾಡುಗಳಿಗೆ ಹೆಜ್ಜೆ ಹಾಕಿ ಎಂಜಾಯ್ ಮಾಡಿದರು. ನೈಸರ್ಗಿಕ ಬಣ್ಣದಿಂದ ತ್ವಚೆಯೂ ಕಾಂತಿಯುತವಾಗುತ್ತದೆ. ಯಾವುದೇ ಅಡ್ಡಪರಿಣಾಮವೂ ಇರುವುದಿಲ್ಲ ಎಂಬುದು ಅವರ ಮಾತು.

Holi celebration
ಮಹಿಳೆಯರಿಂದ ಕೆಮಿಕಲ್ ರಹಿತ ಹೋಳಿ ಆಚರಣೆ (ETV Bharat)

"ದಾಸವಾಳ, ಸೇಬು, ಕಲ್ಲಂಗಡಿ, ಆರೆಂಜ್, ಸೊಪ್ಪು, ಮೆಹಂದಿ, ಬೀಟ್​ರೂಟ್, ಕ್ಯಾರೆಟ್, ಕಡ್ಲೆ ಹಿಟ್ಟು, ಟೊಮೆಟೊ, ಅಕ್ಕಿ ಹಿಟ್ಟು, ಅಲೋವೆರಾ ಪೇಸ್ಟ್​​ಗಳನ್ನು ಮಾಡಿ ನೈಸರ್ಗಿಕ ಬಣ್ಣ ಬಳಸಿದ್ದೇವೆ. ಈ ಮೂಲಕ ಕೃತಕ ಬಣ್ಣಗಳಿಗೆ ಗುಡ್​​ಬೈ ಹೇಳಿದ್ದೇವೆ. ಹರ್ಬಲ್ ಹೋಳಿ ಆಡುವುದರಿಂದ ಮುಖವೂ ಕಾಂತಿಯುತವಾಗಿರುತ್ತದೆ" ಎಂದು ಮಧು ಉಮೇಶ್ ಎಂಬವರು ತಿಳಿಸಿದರು.

Holi celebration
ನೈಸರ್ಗಿಕ ಬಣ್ಣ (ETV Bharat)

15 ವರ್ಷಗಳಿಂದ ಕೆಮಿಕಲ್‌ರಹಿತ ಹೋಳಿ: ತರಕಾರಿ ಸೊಪ್ಪು, ಹಣ್ಣು ಸೇರಿದಂತೆ ನೈಸರ್ಗಿಕವಾಗಿ ಸಿಗುವ ಹಣ್ಣುಗಳಿಂದಲೂ ಬಣ್ಣ ತಯಾರಿಸುತ್ತಾ ಮಹಿಳೆಯರ ತಂಡ 15 ವರ್ಷಗಳಿಂದ ಕೆಮಿಕಲ್ ರಹಿತ ಹೋಳಿ ಆಚರಣೆ ಮಾಡುತ್ತಿದೆ.

Holi celebration
ನೈಸರ್ಗಿಕ ಬಣ್ಣ ಹೋಳಿ ಆಚರಿಸಿದ ಮಹಿಳೆಯರು (ETV Bharat)

ಶಿಲ್ಪಾ ಎಂಬವರು ಮಾತನಾಡಿ, "ಹಣ್ಣುಗಳು, ಅಲೋವೆರಾ, ಮೆಹಂದಿ, ಟೊಮೆಟೊ, ಸೌತೆಕಾಯಿ, ಪಾಲಕ್ ಸೊಪ್ಪು, ಅರಿಶಿನ ಬಳಸಿ ಆರೋಗ್ಯಕರ ಬಣ್ಣ ತಯಾರು ಮಾಡಿದ್ದೇವೆ. 20 ವರ್ಷಗಳಿಂದ ಇದನ್ನು ಆಚರಿಸಿಕೊಂಡು ಬರಲಾಗುತ್ತಿದೆ" ಎಂದು ತಿಳಿಸಿದರು. ‌

ಇವುಗಳನ್ನೂ ಓದಿ: