ದಲಿತ ಹಿಂದೂ ಮಹಿಳೆಯ ಹತ್ಯೆ: ಕುಟುಂಬಸ್ಥರಿಗೆ 5 ಲಕ್ಷ ರೂ ಪರಿಹಾರ ನೀಡಿದ ವಿಜಯೇಂದ್ರ
ಯಲ್ಲಾಪುರದಲ್ಲಿ ನಡೆದ ದಲಿತ ಹಿಂದೂ ಮಹಿಳೆಯ ಹತ್ಯೆ ಪ್ರಕರಣ ಸಂಬಂಧ ರಾಜ್ಯ ಸರ್ಕಾರವು ಅವರ ಕುಟುಂಬಸ್ಥರಿಗೆ 50 ಲಕ್ಷ ರೂ ಪರಿಹಾರ ನೀಡಬೇಕೆಂದು ವಿಜಯೇಂದ್ರ ಒತ್ತಾಯಿಸಿದರು.

Published : January 4, 2026 at 9:49 PM IST
ಶಿರಸಿ (ಉತ್ತರ ಕನ್ನಡ): ಯಲ್ಲಾಪುರದಲ್ಲಿ ನಡೆದ ದಲಿತ ಹಿಂದೂ ಮಹಿಳೆಯ ಹತ್ಯೆಯನ್ನು ಖಂಡಿಸ್ತೇನೆ. ಈ ಕುರಿತು ಸರಿಯಾದ ರೀತಿಯಲ್ಲಿ ತನಿಖೆ ಆಗಬೇಕು. ಜೊತೆಗೆ ಕಾನೂನು ಪ್ರಕಾರ ಪರಿಹಾರ ಘೋಷಣೆ ಮಾಡಬೇಕೆಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಆಗ್ರಹಿಸಿದರು.
ಕಾಂಗ್ರೆಸ್ ಸರಕಾರ ಬಂದ ಮೇಲೆ ನಡೆಯುತ್ತಿರೋ ಲವ್ ಜಿಹಾದ್ ಹಾಗೂ ಮರ್ಡರ್ ಪ್ರಕರಣ ಖಂಡಿಸಿತ್ತೇವೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಹೇಳಿದರು.
50 ಲಕ್ಷ ಪರಿಹಾರಕ್ಕೆ ಆಗ್ರಹ: ಈಗ ನಡೆದ ದಲಿತ ಹಿಂದೂ ಮಹಿಳೆಯ ಹತ್ಯೆಯನ್ನು ಖಂಡಿಸ್ತೇನೆ. ಲವ್ ಜಿಹಾದ್ ಕಾಶ್ಮೀರದಲ್ಲೇ ಆಗಬೇಕೆಂದೇನಿಲ್ಲ, ಎಲ್ಲೂ ನಡೆಯಬಹುದು. ಈ ಪ್ರಕರಣ ಸಂಬಂಧಿಸಿ ಸರಿಯಾದ ತನಿಖೆಯಾಗಬೇಕು. ಕುಟುಂಬಕ್ಕೆ ಸಿಎಂ ಸರಿಯಾದ ಪರಿಹಾರ, ಜಾಗ ಹಾಗೂ ಕನಿಷ್ಠ 50 ಲಕ್ಷ ರೂ. ಪರಿಹಾರ ನೀಡಬೇಕು. ಬಳ್ಳಾರಿಯಲ್ಲಿ ಕಾಂಗ್ರೆಸ್ ಕಾರ್ಯಕರ್ತ ಹತ್ಯೆಯಾದಾಗ 25 ಲಕ್ಷ ರೂ. ಪರಿಹಾರ ನೀಡಿದರು. ಆದ್ದರಿಂದ ಬಡ ದಲಿತ ಮಹಿಳೆಯ ಕುಟುಂಬವನ್ನು ಸರ್ಕಾರರ ತಾತ್ಸಾರ ಮಾಡಬಾರದು ಎಂದು ಒತ್ತಾಯಿಸಿದರು.
ಬಿಜೆಪಿಯವರು ಹೆಣದ ಮೇಲೆ ರಾಜಕಾರಣ ಮಾಡ್ತಿದ್ದಾರೆ ಎಂದು ಕಾಂಗ್ರೆಸ್ ಆರೋಪ ವಿಚಾರವಾಗಿ ಮಾತನಾಡಿದ ವಿಜಯೇಂದ್ರ, ಮನುಷ್ಯತ್ವ ಇರುವವರು ಈ ರೀತಿ ಮಾತನಾಡದೇ, ರಂಜಿತಾ ಕುಟುಂಬಕ್ಕೆ ಪರಿಹಾರ ಒದಗಿಸುವ ಕೆಲಸ ಮಾಡಬೇಕು ಎಂದರು.
ಬಿಜೆಪಿಯಿಂದ 5 ಲಕ್ಷ ರೂ ಪರಿಹಾರ: ಇದೇ ವೇಳೆ ಮೃತ ರಂಜಿತಾ ಕುಟುಂಬಕ್ಕೆ 5 ಲಕ್ಷ ರೂ. ಪರಿಹಾರ ನೀಡಿ ವಿಜಯೇಂದ್ರ ಸಾಂತ್ವನ ಹೇಳಿದರು. ಬಿಜೆಪಿ ರಾಜ್ಯ ವಕ್ತಾರ ಹರಿಪ್ರಕಾಶ್ ಕೋಣೆಮನೆ ಅವರ ವತಿಯಿಂದ ರಂಜಿತಾ ಪುತ್ರನಿಗೆ ಉಚಿತ ಶಿಕ್ಷಣ ಭರವಸೆ ನೀಡಲಾಯಿತು.
ಘಟನೆಯ ಹಿನ್ನೆಲೆ: ಯಲ್ಲಾಪುರ ನಗರದ ಕಾಳಮ್ಮ ನಗರದ ಆಶ್ರಯ ಬಡಾವಣೆಯ ನಿವಾಸಿ ರಂಜಿತಾ ಎಂಬವರನ್ನು ಕತ್ತು ಕೊಯ್ದು ಹತ್ಯೆ ಮಾಡಿ ಆರೋಪಿ ಪರಾರಿಯಾಗಿದ್ದ. ಬಳಿಕ ಆರೋಪಿ ರಫೀಕ್ ಎಂಬಾತ ಕೂಡ ಅರಣ್ಯ ಇಲಾಖೆಗೆ ಸೇರಿದ ಅಕೇಶಿಯಾ ನಡುತೋಪಿನಲ್ಲಿ ಕುನ್ನೇರಲೆ ಮರದಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಯಲ್ಲಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ:

