ETV Bharat / state

ತಪಾಸಣೆ ನಡೆಸದೆ 10 ಸಾವಿರಕ್ಕಿಂತ ಹೆಚ್ಚು ವಾಹನಗಳಿಗೆ ಎಫ್​ಸಿ ನೀಡಿದ ಆರೋಪ: ನಿವೃತ್ತ ಅಧಿಕಾರಿ ವಿರುದ್ಧ ದಾಖಲಾಯ್ತು ಎಫ್ಐಆರ್

ಭೌತಿಕವಾಗಿ ಖುದ್ದು ತೆರಳಿ ತಪಾಸಣೆ ನಡೆಸದೆ 10 ಸಾವಿರಕ್ಕಿಂತ ಹೆಚ್ಚು ವಾಹನಗಳಿಗೆ ಎಫ್​ಸಿ ನೀಡಿದ ಆರೋಪದ ಮೇರೆಗೆ ನಿವೃತ್ತ ಅಧಿಕಾರಿ ವಿರುದ್ಧ ಎಫ್ಐಆರ್ ದಾಖಲಾಗಿದೆ.

Representative image
ಪ್ರಾತಿನಿಧಿಕ ಚಿತ್ರ (ETV Bharat)
author img

By ETV Bharat Karnataka Team

Published : March 2, 2026 at 8:27 PM IST

2 Min Read
Choose ETV Bharat

ಬೆಂಗಳೂರು : ತಪಾಸಣೆ ನಡೆಸದೆ ಮಹಾರಾಷ್ಟ್ರ ಹಾಗೂ ಗುಜರಾತ್ ಸೇರಿದಂತೆ ರಾಜ್ಯದ 10 ಸಾವಿರ ವಾಹನಗಳಿಗೆ ಅರ್ಹತಾ ಪತ್ರ (ಫಿಟ್​ನೆಸ್ ಸರ್ಟಿಫಿಕೇಟ್) ನೀಡಿದ ಆರೋಪದಡಿ ನಿವೃತ್ತ ಮೋಟಾರ್ ವಾಹನ ನಿರೀಕ್ಷಕನ ವಿರುದ್ಧ ಹೆಚ್ಎಸ್​ಆರ್ ಲೇಔಟ್ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ.

ಬೆಂಗಳೂರು ಕೇಂದ್ರ ಪ್ರಾದೇಶಿಕ ಸಾರಿಗೆ ಇಲಾಖೆ ಅಧಿಕಾರಿ ಎಲ್. ದೀಪಕ್ ನೀಡಿದ ದೂರಿನ ಮೇರೆಗೆ ನಿವೃತ್ತ ಅಧಿಕಾರಿ ನಿಸಾರ್ ಅಹಮದ್ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

'ಕಳೆದ 8 ವರ್ಷಗಳಿಂದ ಮೋಟಾರು ವಾಹನ ನಿರೀಕ್ಷಕರಾಗಿ ಕೆಲಸ ಮಾಡುತ್ತಿರುವ ನಿಸಾರ್ ಅಹಮದ್ ಅವರು ವಯೋ ಸಹಜದಿಂದ ಕಳೆದ ಜ.31ರಂದು ನಿವೃತ್ತಿ ಹೊಂದಿದ್ದರು. ಕಳೆದ ಆಗಸ್ಟ್ 1ರಿಂದ ಜ.31ರವರೆಗೆ ಹೊರರಾಜ್ಯದ ಸುಮಾರು 10,210ಕ್ಕೂ ಹೆಚ್ಚು ವಾಹನಗಳನ್ನು ಭೌತಿಕವಾಗಿ ಖುದ್ದು ತೆರಳಿ ತಪಾಸಣೆ ನಡೆಸದೆ ವಾಹನಗಳಿಗೆ ಎಫ್​ಸಿ ನೀಡಿರುವುದಾಗಿ ವಕೀಲ ನಟರಾಜ್ ಶರ್ಮಾ ದೂರು ನೀಡಿದ್ದರು' ಎಂದು ಎಫ್ಐಆರ್​ನಲ್ಲಿ ದೀಪಕ್ ಅವರು ಉಲ್ಲೇಖಿಸಿದ್ದಾರೆ.

ಈ ದೂರು ಆಧರಿಸಿ ಸಾರಿಗೆ ಆಯುಕ್ತರು ವಾಹನ್ ತಂತ್ರಾಂಶದಲ್ಲಿ ಲಭ್ಯವಿರುವ 10,210 ವಾಹನಗಳ ಮಾಹಿತಿ ಪರಿಶೀಲಿಸಿದಾಗ ಎಫ್​ಸಿ ನೀಡಿರುವುದು ಕಂಡುಬಂದಿದೆ. ಗುಜರಾತ್​ನ 41 ವಾಹನಗಳಿಗೆ ಎಫ್​ಸಿ ನೀಡಿರುವ ಸಂಬಂಧ ನಿಸಾರ್ ಅಹಮದ್ ಅವರನ್ನು ಅಮಾನತುಗೊಳಿಸಲಾಗಿತ್ತು.

ಪರಿಶೀಲನೆ ವೇಳೆ ಭೌತಿಕವಾಗಿ ಪರಿಶೀಲಿಸದೆ ಎಫ್​ಸಿ ನೀಡಿ ಇಲಾಖೆಗೆ ನಂಬಿಕೆದ್ರೋಹ ಹಾಗೂ ವಾಹನ ಮಾಲೀಕರೊಂದಿಗೆ ಸೇರಿ ಮೋಸ ಮಾಡಿರುವುದು ಮೇಲ್ನೊಟಕ್ಕೆ ಕಂಡುಬಂದ ಹಿನ್ನೆಲೆಯಲ್ಲಿ ನಿಸಾರ್ ವಿರುದ್ಧ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಬೆಳಗಾವಿ ಡಿಸಿಸಿ ಬ್ಯಾಂಕ್​ಗೆ 2 ಲಕ್ಷ ರೂಪಾಯಿ ದಂಡ ವಿಧಿಸಿದ RBI (ಬೆಳಗಾವಿ) : ಬ್ಯಾಂಕಿಂಗ್​​​​ ನಿಯಮಾವಳಿಗಳನ್ನು ಉಲ್ಲಂಘಿಸಿರುವ ಹಿನ್ನೆಲೆಯಲ್ಲಿ ಬೆಳಗಾವಿ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್​ (ಡಿಸಿಸಿ)ಗೆ ಭಾರತೀಯ ರಿಸರ್ವ್ ಬ್ಯಾಂಕ್​​ (ಆರ್‌ಬಿಐ) 2 ಲಕ್ಷ ರೂ ದಂಡ ವಿಧಿಸಿದೆ. ಫೆ. 23ರಂದೇ ಈ ಕುರಿತು ಆರ್​ಬಿಐ ಆದೇಶ ಹೊರಡಿಸಿದ್ದು, ತಡವಾಗಿ ಬೆಳಕಿಗೆ ಬಂದಿದೆ.

ಬ್ಯಾಂಕಿಂಗ್​ ನಿಯಂತ್ರಣ ಕಾಯ್ದೆ-1949ರ ಸೆಕ್ಷನ್​ 20ನ್ನು ಸೆಕ್ಷನ್​ 56ರೊಂದಿಗೆ ಓದಿದ ನಿಯಮಗಳ ಉಲ್ಲಂಘನೆ ಹಾಗೂ ಗೋಲ್ಡ್​ ಲೋನ್​-ಬುಲೆಟ್ ರಿಪೇಮೆಂಟ್‌ ಯೋಜನೆ ಮತ್ತು ವಾಣಿಜ್ಯ ರಿಯಲ್ ಎಸ್ಟೇಟ್‌ಗೆ ಎಕ್ಸ್‌ಪೋಜರ್‌ ಸಂಬಂಧ ಆರ್‌ಬಿಐ ನೀಡಿದ್ದ ಮಾರ್ಗಸೂಚಿಗಳನ್ನು ಪಾಲಿಸದೇ ಇರುವುದೇ ದಂಡ ಬೀಳಲು ಕಾರಣವಾಗಿದೆ. ಸೆಕ್ಷನ್​ 47A (1) (ಸಿ) ಅನ್ನು ಸೆಕ್ಷನ್ 46 (4) (i) ಮತ್ತು 56ರೊಂದಿಗೆ ಓದಿದ ಅಧಿಕಾರದಡಿ ಬೆಳಗಾವಿ ಡಿಸಿಸಿ ಬ್ಯಾಂಕ್ ವಿರುದ್ಧ ಈ ಕ್ರಮ ಕೈಗೊಳ್ಳಲಾಗಿದೆ ಎಂಬ ಮಾಹಿತಿ ಮೂಲಗಳಿಂದ ತಿಳಿದುಬಂದಿದೆ.

ಇದನ್ನೂ ಓದಿ : ಬೆಳಗಾವಿ ಡಿಸಿಸಿ ಬ್ಯಾಂಕ್​ಗೆ 2 ಲಕ್ಷ ರೂಪಾಯಿ ದಂಡ ವಿಧಿಸಿದ RBI