ಮದುವೆ ಆಗಲಿದೆ ಎಂದು ಹೇಳಿ ಯುವತಿಯಿಂದ 2 ಲಕ್ಷ ಹಣ ಪಡೆದು ಸುಲಿಗೆ ಮಾಡಿದ ಆರೋಪ: ಗುರೂಜಿ ವಿರುದ್ಧ ಪ್ರಕರಣ ದಾಖಲು
ಮದುವೆ ಆಗಲಿದೆ ಎಂದು ಹೇಳಿ ಯುವತಿಯಿಂದ 2 ಲಕ್ಷ ಹಣ ಪಡೆದ ಸುಲಿಗೆ ಮಾಡಿದ ಆರೋಪದ ಹಿನ್ನೆಲೆಯಲ್ಲಿ ಚಂದ್ರಶೇಖರ್ ಸುಗತ್ ಗುರೂಜಿ ಎಂಬುವವರ ವಿರುದ್ಧ ಪ್ರಕರಣ ದಾಖಲಾಗಿದೆ.

Published : January 9, 2026 at 4:10 PM IST
ಬೆಂಗಳೂರು: ಮದುವೆಯಾಗಲು ಪೂಜೆ ಮಾಡಬೇಕು ಎಂಬ ನೆಪವೊಡ್ಡಿ ಯುವತಿಯಿಂದ 2 ಲಕ್ಷ ಹಣ ಸುಲಿಗೆ ಮಾಡಿದ ಆರೋಪದಡಿ ಗುರೂಜಿ ವಿರುದ್ಧ ಆಡುಗೋಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 21 ವರ್ಷದ ಯುವತಿ ನೀಡಿದ ದೂರಿನ ಮೇರೆಗೆ ಚಂದ್ರಶೇಖರ್ ಸುಗತ್ ಗುರೂಜಿ ವಿರುದ್ಧ ಎಫ್ಐಆರ್ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಆಡುಗೋಡಿಯ ಪಿಜಿಯೊಂದರಲ್ಲಿ ನೆಲೆಸಿದ್ದ ಯುವತಿ, ಖಾಸಗಿ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದಾರೆ. ಕಳೆದ ತಿಂಗಳು ಇನ್ಸ್ಟಾಗ್ರಾಮ್ ನೋಡುವಾಗ ಚಂದ್ರಶೇಖರ್ ಸುಗತ್ ಗುರೂಜಿಯಿಂದ ಎಲ್ಲಾ ಕಷ್ಟಗಳನ್ನ ಪರಿಹರಿಸಲಾಗುವುದು ಎಂಬ ಜಾಹೀರಾತು ನೋಡಿ ಪ್ರೇರಿತಗೊಂಡಿದ್ದರು. ಮೊಬೈಲ್ ನಂಬರ್ ಪಡೆದು ಗುರೂಜಿಗೆ ಕರೆ ಮಾಡಿ ತನಗೆ ಮದುವೆಯಾಗಲಿದೆಯಾ ಎಂದು ಪ್ರಶ್ನಿಸಿದ್ದಳು. ಇದಕ್ಕೆ ಉತ್ತರಿಸಿದ ಗುರೂಜಿ, ಮದುವೆಯಾಗಲಿದೆ. ಆದರೆ, ಹಣ ಖರ್ಚಾಗಲಿದೆ ಅಂತ ಹೇಳಿದ್ದರು. ಅದರಂತೆ ಆತನ ಮಾತನ್ನ ನಂಬಿ ಹಂತ-ಹಂತವಾಗಿ 2 ಲಕ್ಷ ರೂ.ವರೆಗೆ ಹಣ ನೀಡಿದ್ದೆ. ಹೇಳಿದಂತೆ ಪೂಜೆ ಮಾಡಿದ್ದಾರೆ. ಆದರೆ, ಮದುವೆಯಾಗದಿದ್ದರೆ ಹಣ ವಾಪಸ್ ನೀಡುವಂತೆ ಕೇಳಿದ್ದೆ. ಆದರೆ, ಆ ಗುರೂಜಿ ಹಣ ಮರಳಿ ವಾಪಸ್ ನೀಡುವುದಿಲ್ಲ, ಏನಾದರೂ ಮಾಡಿಕೊ ಎಂದು ಧಮಕಿ ಹಾಕಿದ್ದಾರೆ ಎಂದು ದೂರಿನಲ್ಲಿ ಯುವತಿ ಆರೋಪಿಸಿದ್ದಾಳೆ.
ಪ್ರಕರಣ ದಾಖಲಾಗುತ್ತಿದ್ದಂತೆ ಆರೋಪಿ ಗುರೂಜಿ ತಮ್ಮ ಮೊಬೈಲ್ ಸ್ವಿಚ್ಡ್ ಆಫ್ ಮಾಡಿಕೊಂಡು ನಾಪತ್ತೆಯಾಗಿದ್ದಾನೆ. ಆತನ ಪತ್ತೆಗಾಗಿ ಶೋಧಕಾರ್ಯ ಕೈಗೊಂಡಿರುವುದಾಗಿ ಪೊಲೀಸರು ತಿಳಿಸಿದ್ದಾರೆ.
ಇದನ್ನೂ ಓದಿ:
- ಮಹಿಳಾ ಪಿಜಿಗೆ ನುಗ್ಗಿ ಯುವತಿಯೊಂದಿಗೆ ಅನುಚಿತ ವರ್ತನೆ, ಹಣ ಸುಲಿಗೆ: ಗಿಗ್ ಕಾರ್ಮಿಕನ ಬಂಧನ
- ಯುವತಿಯ ಮನ ಗೆಲ್ಲಲು ಸಿನಿಮಾ ಶೈಲಿಯಲ್ಲಿ ಅಪಘಾತ ಎಸಗಿ ನಾಟಕ; ಇಬ್ಬರು ಸೆರೆ
- ಮಹಿಳೆಗೆ ನಂಬಿಸಿ ಹಣ ಪಡೆದು ವಂಚನೆ ಪ್ರಕರಣ: ಆರೋಪಿ ವಿರುದ್ಧದ ಎಫ್ಐಆರ್ ರದ್ದುಪಡಿಸಲು ನಿರಾಕರಿಸಿದ ಹೈಕೋರ್ಟ್
ಲೇಡೀಸ್ ಪೇಯಿಂಗ್ ಗೆಸ್ಟ್ಗೆ (ಪಿ.ಜಿ) ನುಗ್ಗಿ ಯುವತಿಯೊಂದಿಗೆ ಅನುಚಿತ ವರ್ತನೆ ತೋರಿ, ಹಣ ಸುಲಿಗೆ ಮಾಡಿ ಪರಾರಿಯಾಗಿದ್ದ ಗಿಗ್ ಕಾರ್ಮಿಕ ನರೇಶ್ (30) ಎಂಬಾತನನ್ನು ನಗರದ ಸುದ್ದುಗುಂಟೆಪಾಳ್ಯ ಠಾಣೆ ಪೊಲೀಸರು ಬಂಧಿಸಿದ್ದ ಘಟನೆ ಇತ್ತೀಚೆಗೆ ನಡೆದಿತ್ತು.
ಬಂಧಿತ ನರೇಶ್ ಆಂಧ್ರಪ್ರದೇಶದ ಮದನಪಲ್ಲಿ ಮೂಲದವನಾಗಿದ್ದು, ಕಳೆದ ಎರಡು ವರ್ಷಗಳಿಂದ ನಗರದ ಆವಲಹಳ್ಳಿಯಲ್ಲಿ ವಾಸವಾಗಿದ್ದ. ಆಗಸ್ಟ್ 29ರ ನಸುಕಿವ ಜಾವ 4.30ರ ಸುಮಾರಿಗೆ ಸುದ್ದುಗುಂಟೆಪಾಳ್ಯ ಬಳಿಯ ಗಂಗೋತ್ರಿ ಸರ್ಕಲ್ ಬಳಿಯಿರುವ ಪಿಜಿಯೊಂದಕ್ಕೆ ನುಗ್ಗಿದ ಆರೋಪಿ, ಯುವತಿಯೊಂದಿಗೆ ಅನುಚಿತವಾಗಿ ವರ್ತಿಸಿದ್ದ. ಈ ಬಗ್ಗೆ ಸಿಸಿಟಿವಿ ದೃಶ್ಯಗಳನ್ನು ಆಧರಿಸಿ ಪ್ರಕರಣ ದಾಖಲಿಸಿಕೊಂಡು, ಆರೋಪಿಯನ್ನು ಬಂಧಿಸಿರುವ ಬಗ್ಗೆ ಪೊಲೀಸರು ಮಾಹಿತಿ ನೀಡಿದ್ದರು.
ಜೀವನಕ್ಕಾಗಿ ಆರೋಪಿಯು ಬೈಕ್ ಟ್ಯಾಕ್ಸಿ ಹಾಗೂ ಡೆಲಿವರಿ ಬಾಯ್ ಆಗಿ ಕೆಲಸ ಮಾಡುತ್ತಿದ್ದ. ಬೈಕ್ನಲ್ಲಿ ಹೋಗುವಾಗ ಪಿಜಿಯ ಬಾಗಿಲು ತೆಗೆದಿರುವುದನ್ನು ಕಂಡು ಒಳಗೆ ನುಗ್ಗಿದ್ದ. ಈ ವೇಳೆ, ಯುವತಿಯೊಂದಿಗೆ ಅನುಚಿತವಾಗಿ ವರ್ತಿಸಿ, ಆಕೆಯ ಬಳಿಯಿದ್ದ 2,500 ಸಾವಿರ ರೂಪಾಯಿ ಕಸಿದು ಕಾಲ್ಕಿತ್ತಿದ್ದನು.

