ETV Bharat / state

ದೆಹಲಿಯಲ್ಲಿರುವ ವಿನ್ಜೋ ಕಂಪನಿ ವಿರುದ್ಧ ಬೆಂಗಳೂರಿನಲ್ಲಿ ಪ್ರಕರಣ: ಮುಂದಿನ ವಿಚಾರಣೆವರೆಗೂ ಬಲವಂತದ ಕ್ರಮ ಬೇಡ ಎಂದ ಹೈಕೋರ್ಟ್

ದೆಹಲಿಯಲ್ಲಿ ನೋಂದಣಿಯಾಗಿರುವ ಕಚೇರಿ ಸಂಬಂಧ ಬೆಂಗಳೂರಿನಲ್ಲಿ ತನಿಖೆ ನಡೆಯುತ್ತಿರುವ ಕ್ರಮವನ್ನು ಪ್ರಶ್ನಿಸಿ ವಿನ್ಜೋ ಕಂಪನಿ ಮತ್ತು ಕಂಪನಿಯ ಸಹ ಸಂಸ್ಥಾಪಕಿ ಸೌಮ್ಯ ರಾಥೋರ್ ಹೈಕೋರ್ಟ್​ಗೆ ಅರ್ಜಿ ಸಲ್ಲಿಸಿದ್ದಾರೆ.

High Court says no coercive action
ಮುಂದಿನ ವಿಚಾರಣೆವರೆಗೂ ಬಲವಂತದ ಕ್ರಮ ಬೇಡ ಎಂದ ಹೈಕೋರ್ಟ್ (ETV Bharat)
author img

By ETV Bharat Karnataka Team

Published : January 8, 2026 at 8:14 PM IST

2 Min Read
Choose ETV Bharat

ಬೆಂಗಳೂರು: ಆನ್ಲೈನ್ ಗೇಮಿಂಗ್ ಕಂಪನಿ ಸಹ - ಸಂಸ್ಥಾಪಕಿ ಮತ್ತು ನಿರ್ದೇಶಕಿ ಸೌಮ್ಯ ರಾಥೋಡ್ ವಿರುದ್ಧ ಜಾರಿ ನಿರ್ದೇಶನಾಲಯ (ಇಡಿ) ದಾಖಲಿಸಿರುವ ಪ್ರಕರಣ ಮತ್ತು ದೆಹಲಿಯಲ್ಲಿ ನೋಂದಣಿಯಾಗಿರುವ ಕಚೇರಿ ಸಂಬಂಧ ಬೆಂಗಳೂರಿನಲ್ಲಿ ತನಿಖೆ ನಡೆಯುತ್ತಿರುವ ಕ್ರಮವನ್ನು ಪ್ರಶ್ನಿಸಿ ವಿನ್ಜೋ ಕಂಪನಿ ಮತ್ತು ಕಂಪನಿಯ ಸಹ ಸಂಸ್ಥಾಪಕಿ ಸೌಮ್ಯ ರಾಥೋರ್ ಹೈಕೋರ್ಟ್​ಗೆ ಅರ್ಜಿ ಸಲ್ಲಿಸಿದ್ದಾರೆ.

ಇಡಿ ಬೆಂಗಳೂರು ನಗರದಲ್ಲಿ ದಾಖಲಿಸಿರುವ ಪ್ರಕರಣ ಸಂಬಂಧ ಮುಂದಿನ ವಿಚಾರಣೆವರೆಗೂ ಯಾವುದೇ ಬಲವಂತದ ಕ್ರಮ ಕೈಗೊಳ್ಳದಂತೆ ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರಿದ್ದ ನ್ಯಾಯಪೀಠ ಈ ಸೂಚನೆ ನೀಡಿ ವಿಚಾರಣೆಯನ್ನು ಜನವರಿ 14ಕ್ಕೆ ಮುಂದೂಡಿದೆ. ವಿಚಾರಣೆ ವೇಳೆ ಅರ್ಜಿದಾರರ ಪರ ವಾದ ಮಂಡಿಸಿದ ವಕೀಲರು, ವಿನ್ಜೋ ಒಂದು ಗೇಮಿಂಗ್​ ಕಂಪನಿಯಾಗಿದೆ. ಕಂಪನಿ ದೆಹಲಿಯಲ್ಲಿ ನೋಂದಣಿ ಕಚೇರಿಯನ್ನು ಹೊಂದಿದ್ದು, ಕಂಪನಿಯ ಎಲ್ಲ ಕಾರ್ಯಾಚರಣೆಗಳು ದೆಹಲಿಯಿಂದಲೇ ನಡೆಯುತ್ತಿವೆ. ಕಂಪನಿಯ ಇಬ್ಬರು ನಿರ್ದೇಶಕರೂ ಸಹಾ ದೆಹಲಿಯಲ್ಲಿ ವಾಸವಾಗಿದ್ದಾರೆ.

ಒಂದು ಎಫ್​ಐಆರ್​ ಪಾನ್​ ಕಾರ್ಡ್​ ದುರ್ಬಳಕೆ ಮಾಡಿರುವ ಆರೋಪದಲ್ಲಿ ದಾಖಲಾಗಿದೆ. ಇನ್ನೆರಡು ಎಫ್​ಐಆರ್​ಗಳು ರಾಜಸ್ಥಾನದಲ್ಲಿ ದಾಖಲಾಗಿವೆ. ಅದರಲ್ಲಿ ಒಂದು ಕಂಪನಿಯ ಸಿಬ್ಬಂದಿ ಹಣಕ್ಕಾಗಿ ಬೇಡಿಕೆ ಇಟ್ಟಿದ್ದಾಗಿದೆ. ಇದರಲ್ಲಿ ಕಂಪನಿ ವಿರುದ್ಧ ಆರೋಪವಿಲ್ಲ. ತನಿಖೆ ನಡೆದು ಬಿ ವರದಿ ಸಲ್ಲಿಲಾಗಿದೆ. ಮೂರನೇ ಎಫ್​ಐಅರ್​, ನಾಲ್ಕು ಜನರಲ್ಲಿ ಒಬ್ಬರ ಒಬ್ಬರ ತಂದೆ ಪ್ರಕರಣ ದಾಖಲಿಸಿದ್ದು, ಇತರರು ತನ್ನ ಮಗನನ್ನು ಗೇಮ್​ ಆಡುವಂತೆ ಒತ್ತಾಯಿಸಿದ್ದಾಗಿದೆ. ಇದರಲ್ಲಿ ಕಂಪನಿ ವಿರುದ್ಧ ಆರೋಪವಿಲ್ಲ. ಮತ್ತೊಂದು ಎಫ್​ಐಆರ್​ ದೆಹಲಿಯಲ್ಲಿ ದಾಖಲಾಗಿದ್ದು, ಒಂದು ವ್ಯಕ್ತಿಯನ್ನು ಮತ್ತೊಂದು ವ್ಯಕ್ತಿ ವಂಚಿಸಿದ್ದಾಗಿದೆ. ಪಾನ್​ ಕಾರ್ಡ್​ ವಂಚನೆ ಹೊರತುಪಡಿಸಿ ಇನ್ನುಳಿದ ಪ್ರಕರಣಗಳು ಬೆಂಗಳೂರಿಗೆ ಸಂಬಂಧವಿಲ್ಲ. ಆದ್ದರಿಂದ ಬೆಂಗಳೂರಿನಲ್ಲಿ ದಾಖಲಾಗಿರುವ ಪ್ರಕರಣ ಸಂಬಂಧ ಬೆಂಗಳೂರು ಇಡಿ ಕಚೇರಿಯ ಅಧಿಕಾರಿಗಳು ದೆಹಲಿಯ ವಿನ್ಜೋ ಕಚೇರಿ ದಾಳಿ ನಡೆಸುವುದಕ್ಕೆ ಅವಕಾಶವಿಲ್ಲ.

ಜತೆಗೆ, ಇಡಿ ತನಿಖೆಯನ್ನು ಬೆಂಗಳೂರಿನಲ್ಲಿ ನಡೆಸುವುದಕ್ಕೆ ಅವಕಾಶವಿಲ್ಲ. ಅಲ್ಲದೇ, ಕಂಪನಿಯ ಹದಿನಾಲ್ಕು ಖಾತೆಗಳನ್ನು ಸ್ಥಗಿತಗೊಳಿಸಲಾಗಿದೆ. ಎಲ್ಲವೂ ದೆಹಲಿಯಲ್ಲಿದೆ. ಇದೆಲ್ಲವೂ ದೆಹಲಿಯಲ್ಲಿ ನಡೆದಿದೆ. ನಿಮಗೆ (ಇಡಿ) ದೆಹಲಿಯಲ್ಲಿ ಕಚೇರಿ ಇಲ್ಲವೇ? ನೀವು ಬೆಂಗಳೂರನ್ನು ಏಕೆ ಆರಿಸುತ್ತೀರಿ? ಇಲ್ಲಿನ ನ್ಯಾಯಾಲಯಕ್ಕೆ ಬರುವುದು ಪ್ರಾಸಿಕ್ಯೂಷನ್‌ನ ಆಯ್ಕೆಯಾಗಿರಬಾರದು ಎಂದು ತಿಳಿಸಿದರು. ಇಡಿ ತನ್ನ ವಲಯ ಕಚೇರಿಯ ಮೂಲಕ ತನಿಖೆ ನಡೆಸಲು ನಿರ್ಧರಿಸಿದರೂ, ಈ ಕಚೇರಿಯು ಹಾಗೆ ಮಾಡಲು ಉತ್ತಮವಾಗಿ ಸಜ್ಜಾಗಿರುವುದರಿಂದ, ಈ ತನಿಖೆಯಿಂದ ಉಂಟಾಗುವ ನ್ಯಾಯಾಲಯದ ಪ್ರಕ್ರಿಯೆಗಳು ದೆಹಲಿಯಲ್ಲಿರಬೇಕು ಎಂದು ಪೀಠಕ್ಕೆ ತಿಳಿಸಿದರು.

ಇಡಿ ಪರ ವಕೀಲರು, ಅರ್ಜಿದಾರರ ವಿರುದ್ಧದ ಇಡಿ ತನಿಖೆ ನಿರ್ಣಾಯಕ ಹಂತದಲ್ಲಿದೆ. ಈ ಸಂಬಂಧ ಈವರೆಗೂ 800 ಕೋಟಿ ರು.ಗಳಷ್ಳಟು ಜಪ್ತಿ ಮಾಡಲಾಗಿದೆ. ವಿನ್ಜೋ ವಿರುದ್ಧ ಎಲ್ಲಿ ದೂರು ಸಲ್ಲಿಸಬೇಕು ಎಂಬುದರ ಬಗ್ಗೆ ಮಾಹಿತಿ ಇಲ್ಲ. ಪ್ಯಾನ್ - ಇಂಡಿಯಾ ಏಜೆನ್ಸಿಯಾಗಿರುವ ಇಡಿ, ಈ ವಿಷಯವನ್ನು ತನಿಖೆ ಮಾಡುವಾಗ ತನ್ನ ಅಧಿಕಾರದೊಳಗೆ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದೆ. ಅಲ್ಲದೇ, ನಾನು ಅಖಿಲ ಭಾರತ ಸಂಸ್ಥೆಯಾಗಿರುವುದರಿಂದ ತನಿಖೆ ಮಾಡುವ ಹಕ್ಕು ಇರಲಿದೆ ಎಂದು ತಿಳಿಸಿದರು.

ಈ ವೇಳೆ ಮಧ್ಯ ಪ್ರವೇಶಿಸಿದ ಅರ್ಜಿದಾರರ ಪರ ವಕೀಲರು, ಇಡಿ ಮಾಡಿರುವ ಆರೋಪಗಳು ನಿಜವೆಂದು ಭಾವಿಸಿದರೂ, ವಿನ್ಜೋ ಪ್ರತಿನಿಧಿಗಳಿಗೆ ಇಡಿ ಸಮನ್ಸ್ ಮತ್ತು ಅವರ ಬಂಧನ ಹೊರತುಪಡಿಸಿ ಬೆಂಗಳೂರಿನಲ್ಲಿ ಪ್ರಕರಣಕ್ಕೂ ಯಾವುದೇ ಸಂಬಂಧವಿಲ್ಲ. ರಾಥೋರ್​ ಅವರಿಗೆ ಜಾಮೀನು ಮಂಜೂರಾಗಿದ್ದರೂ, ಸಹ - ಸಂಸ್ಥಾಪಕ ಪವನ್ ನಂದಾ ಅವರು ಬೆಂಗಳೂರು ನ್ಯಾಯಾಲಯವು ನೀಡಿದ ರಿಮಾಂಡ್ ಆದೇಶದ ಮೇಲೆ ಜೈಲಿನಲ್ಲಿದ್ದಾರೆ, ಈ ವಿಷಯವು ದೆಹಲಿ ನ್ಯಾಯಾಲಯದ ಮುಂದೆ ಇರಬೇಕಾಗಿರುವುದರಿಂದ ಯಾವುದೇ ಪ್ರಾದೇಶಿಕ ನ್ಯಾಯವ್ಯಾಪ್ತಿಯನ್ನು ಹೊಂದಿಲ್ಲ ಎಂದು ಎಂದು ಪೀಠಕ್ಕೆ ವಿವರಿಸಿದರು. ವಾದ ಆಲಿಸಿದ ಪೀಠ ವಿಚಾರಣೆಯನ್ನು ಮುಂದೂಡಿತು.

ಇವುಗಳನ್ನು ಓದಿ: ವರದಕ್ಷಿಣೆ ಕಿರುಕುಳ ಆರೋಪದಲ್ಲಿ ನೆರೆಹೊರೆಯವರ ಮೇಲೆ ಕೇಸು ಹಾಕಲು ಅವಕಾಶವಿಲ್ಲ: ಹೈಕೋರ್ಟ್

ಹುಬ್ಬಳ್ಳಿ ಮಹಿಳೆ ವಿವಸ್ತ್ರ ಕೇಸ್: ಸ್ವಯಂಪ್ರೇರಿತ ದೂರು ದಾಖಲಿಸಿಕೊಂಡ ಮಹಿಳಾ ಆಯೋಗ, ಕೈ ಪಾಲಿಕೆ ಸದಸ್ಯೆ ವಶಕ್ಕೆ