ಮೈಸೂರು ಕೋರ್ಟ್ಗೆ ಬಾಂಬ್ ಬೆದರಿಕೆ ಸಂದೇಶ
ಕೋರ್ಟ್ಗೆ ಬಾಂಬ್ ಇಟ್ಟು ಬ್ಲಾಸ್ಟ್ ಮಾಡುವುದಾಗಿ ನ್ಯಾಯಧೀಶರಾದ ಉಷಾರಾಣಿ ಅವರಿಗೆ ಇಮೇಲ್ ಬಂದಿದೆ.

Published : January 6, 2026 at 2:53 PM IST
ಮೈಸೂರು: ಮೈಸೂರಿನ ಕೋರ್ಟ್ಗೆ ಇಮೇಲ್ ಮೂಲಕ ಬಾಂಬ್ ಬೆದರಿಕೆ ಸಂದೇಶ ಬಂದಿದ್ದು, ಆತಂಕಗೊಂಡ ವಕೀಲರು ಹಾಗೂ ಕಕ್ಷಿದಾರರು ನ್ಯಾಯಾಲಯದಿಂದ ಹೊರಬಂದ ಘಟನೆ ಇಂದು ನಡೆಯಿತು.
ಜಿಲ್ಲಾ ಪಂಚಾಯಿತಿ ಬಳಿ ಇರುವ ಕೋರ್ಟ್ಗೆ ಇಮೇಲ್ ಮೂಲಕ ಬಾಂಬ್ ಬೆದರಿಕೆ ಬಂದಿದ್ದು, ಪರಿಶೀಲನೆ ನಡೆಸಿದ ನ್ಯಾಯಾಧೀಶರು ಈ ವಿಚಾರವನ್ನು ನಗರ ಪೊಲೀಸ್ ಕಮಿಷನರ್ಗೆ ತಿಳಿಸಿದ್ದಾರೆ. ತಕ್ಷಣ ವಕೀಲರು ಹಾಗೂ ಕಕ್ಷಿದಾರರು ಕೋರ್ಟ್ನಿಂದ ಹೊರ ಬಂದಿದ್ದಾರೆ. ಪೊಲೀಸರು ಹಾಗೂ ಬಾಂಬ್ ತಪಾಸಣೆ ತಂಡ ಕೋರ್ಟ್ಗೆ ಆಗಮಿಸಿ ಪರಿಶೀಲನೆ ನಡೆಸಿದರು. ಬಳಿಕ ಇದೊಂದು ಹುಸಿ ಬಾಂಬ್ ಬೆದರಿಕೆ ಎಂಬುದು ದೃಢಪಟ್ಟಿದೆ.
ಮೈಸೂರು ವಕೀಲರ ಸಂಘದ ಅಧ್ಯಕ್ಷ ಲೋಕೇಶ್ ಅವರು ಮಾಹಿತಿ ನೀಡಿ, ಬೆಳಗ್ಗೆ 10.30ಕ್ಕೆ ಕೋರ್ಟ್ ಕಲಾಪಕ್ಕೆ ನಾವೆಲ್ಲ ಬಂದಿದ್ದೆವು. ಸುಮಾರು 10.45ರ ಸಮಯದಲ್ಲಿ ಕೋರ್ಟ್ಗೆ ಇಮೇಲ್ ಸಂದೇಶ ಬಂದಿದೆ. ಅದರಲ್ಲಿ 1.55 ವೇಳೆಗೆ 3 RDX ಬಾಂಬ್ ಹಾಕಿ ಕೋರ್ಟ್ ಸ್ಫೋಟ ಮಾಡುವುದಾಗಿ ಬೆದರಿಕೆ ಹಾಕಲಾಗಿತ್ತು. ಮುಖ್ಯ ನ್ಯಾಯಧೀಶರಾದ ಉಷಾರಾಣಿ ಅವರು ನಗರ ಪೊಲೀಸ್ ಕಮಿಷನರ್ಗೆ ಮಾಹಿತಿ ನೀಡಿದರು. ತಕ್ಷಣ ಎರಡು ಬಾಂಬ್ ತಪಾಸಣೆ ಹಾಗೂ ನಿಷ್ಕ್ರಿಯ ದಳ ಪರಿಶೀಲನೆ ನಡೆಸಿದೆ. ಸದ್ಯ ಎರಡು ಕೋರ್ಟ್ಗಳಲ್ಲಿ ಕಲಾಪ ನಡೆಯುತಿಲ್ಲ ಎಂದು ತಿಳಿಸಿದರು.
2016ರಲ್ಲಿ ಹಳೆಯ ಕೋರ್ಟ್ನ ದಕ್ಷಿಣ ಭಾಗದಲ್ಲಿ ಕುಕ್ಕರ್ ಬಾಂಬ್ ಬ್ಲಾಸ್ಟ್ ಆಗಿತ್ತು. ಆರೋಪಿಯನ್ನು ಬಂಧಿಸಲಾಗಿತ್ತು. ಇದೊಂದು ಹುಸಿ ಬಾಂಬ್ ಬೆದರಿಕೆ ಸಂದೇಶ ಎನ್ನುವ ಗುಮಾನಿ ಇದೆ ಎಂದರು.
ಇದನ್ನೂ ಓದಿ: ಉತ್ತರ ಕನ್ನಡದ ಎರಡು ತಹಶೀಲ್ದಾರ್ ಕಚೇರಿಗಳಿಗೆ ಬಾಂಬ್ ಬೆದರಿಕೆ: ಖಾಕಿ ಪಡೆ ಹೈ ಅಲರ್ಟ್

