ETV Bharat / state

ಖಮೇನಿ ಹತ್ಯೆ ಖಂಡನೀಯ, ಅವರ ಆತ್ಮಕ್ಕೆ ಶಾಂತಿ ಸಿಗಲಿ: ಸಿಎಂ ಸಿದ್ದರಾಮಯ್ಯ

ಅಮೆರಿಕ-ಇಸ್ರೇಲ್ ಹಾಗೂ ಇರಾನ್ ನಡುವಿನ ಯುದ್ಧ ಹಾಗೂ ವಿದೇಶಗಳಲ್ಲಿ ಸಿಲುಕಿರುವ ಕನ್ನಡಿಗರ ಸುರಕ್ಷತೆ ಕುರಿತಂತೆ ಸಿಎಂ ಸಿದ್ದರಾಮಯ್ಯ ಪ್ರತಿಕ್ರಿಯಿಸಿದರು.

ali-hosseini-khamenei-assassination-is-condemnable-may-his-soul-rest-in-peace-says-cm-siddaramaiah
ಸಿಎಂ ಸಿದ್ದರಾಮಯ್ಯ (ETV Bharat)
author img

By ETV Bharat Karnataka Team

Published : March 1, 2026 at 4:31 PM IST

2 Min Read
Choose ETV Bharat

ಶಿವಮೊಗ್ಗ: ಯುದ್ದ ಅನಗತ್ಯವಾದದ್ದು. ಇರಾನ್‌ನ ಸರ್ವೋಚ್ಚ ನಾಯಕ ಅಯತೊಲ್ಲಾ ಸಯ್ಯದ್ ಅಲಿ ಖಮೇನಿ ಹತ್ಯೆ ಖಂಡನೀಯ, ಅವರ ಆತ್ಮಕ್ಕೆ ಶಾಂತಿ ಸಿಗಲೆಂದು ಪ್ರಾರ್ಥಿಸುತ್ತೇನೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.

ತರಿಕೆರೆ ಶಾಸಕರ ಮಗಳ‌ ಮದುವೆಯಲ್ಲಿ ಭಾಗಿಯಾಗಲೆಂದು ಭಾನುವಾರ ಶಿವಮೊಗ್ಗದ ಕುವೆಂಪು ವಿಮಾನ ನಿಲ್ದಾಣಕ್ಕೆ ಆಗಮಿಸಿದ ವೇಳೆ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಅಮೆರಿಕದವರು ಖಮೇನಿ ಮೇಲೆ ಮಾಡಿರುವ ಯುದ್ಧ ಅನಗತ್ಯವಾದದ್ದು. ಅಮೆರಿಕದ ಅಧ್ಯಕ್ಷ ಡೊನಾಲ್ಡ್​​ ಟ್ರಂಪ್ ಒಂದು ಕಡೆ ಶಾಂತಿ ಬಗ್ಗೆ ಮಾತನಾಡುತ್ತಾರೆ. ಇನ್ನೊಂಡೆಡೆ ಯುದ್ಧ ಮಾಡುತ್ತಾರೆ.‌ ಇದು ಅಮೆರಿಕದವರ ತದ್ವಿರುದ್ದವಾದ ನೀತಿಯಾಗಿದೆ. ಇದನ್ನು ಖಂಡಿಸುತ್ತೇನೆ ಎಂದರು.

ಸಿಎಂ ಸಿದ್ದರಾಮಯ್ಯ (ETV Bharat)

ಇರಾನ್, ಇಸ್ರೇಲ್​​ನಲ್ಲಿ ನೆಲೆಸಿರುವ ಕನ್ನಡಿಗರನ್ನು ಸುರಕ್ಷಿತವಾಗಿ ವಾಪಸ್ ಕರೆ ತರಲು ನಾವು ಕೇಂದ್ರದ ವಿದೇಶಾಂಗ ಇಲಾಖೆ ಜೊತೆ ನಿರಂತರ ಸಂಪರ್ಕದಲ್ಲಿದ್ದೇವೆ. ನಾನು ಈ ಕುರಿತು ನಮ್ಮ ರಾಜ್ಯದ ಮುಖ್ಯ ಕಾರ್ಯದರ್ಶಿ ಜೊತೆ ಮಾತನಾಡಿದ್ದೇನೆ. ವಿದೇಶ ಪ್ರವಾಸದಲ್ಲಿರುವ ಎಂಎಲ್​ಸಿ ಭೋಜೆಗೌಡರ ಜೊತೆ ಮಾತನಾಡಿದ್ದೇನೆ. ಅವರು ಸುರಕ್ಷಿತವಾಗಿದ್ದಾರೆ. ಅಲ್ಲಿನ ವಿಮಾನ ನಿಲ್ದಾಣದ ತೆರೆದ ತಕ್ಷಣ ಎಲ್ಲರನ್ನೂ ವಾಪಸ್​​ ಕರೆ ತರಲಾಗುವುದು ಎಂದು ತಿಳಿಸಿದರು.

ವಿದೇಶಗಳಲ್ಲಿ ಸಿಲುಕಿರುವ ನಮ್ಮ ರಾಜ್ಯದವರ ಜೊತೆ ನಾವು ಸಂಪರ್ಕದಲ್ಲಿದ್ದೇವೆ. ಅವರನ್ನು ಸುರಕ್ಷಿತವಾಗಿ ಕರೆತರಲಾಗುವುದು. ದುಬೈನಲ್ಲಿನ ಭಾರತದ ಎಲ್ಲಾ ಪ್ರಜೆಗಳೂ ಸುರಕ್ಷಿತವಾಗಿದ್ದಾರೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದರು.

ರಾಜ್ಯ ಬಜೆಟ್ ಕುರಿತ ಪ್ರಶ್ನೆಗೆ, ಬಜೆಟ್ ನೋಡಿ ಎಂದ ಸಿಎಂ, ರಾಜ್ಯದಲ್ಲಿ ಗಾಂಜಾ ಹಾವಳಿ ಬಗ್ಗೆ ಕೇಳಿದಾಗ, ವಿಪಕ್ಷಗಳಿಗೆ ಬೇರೆ ಕೆಲಸ ಇಲ್ಲದೆ, ಈ ಆರೋಪ‌ ಮಾಡುತ್ತಿದ್ದಾರೆ ಎಂದರು.

ಇದೇ ವೇಳೆ, ವಿದ್ಯುತ್ ದರ ಏರಿಕೆ ಕುರಿತ ಪ್ರಶ್ನೆಗೆ, ಸದ್ಯಕ್ಕೆ ಯಾವುದೇ ಏರಿಕೆ ಇಲ್ಲ ಎಂದು ಪ್ರತಿಕ್ರಿಯಿಸಿದರು.

ali-hosseini-khamenei-assassination-is-condemnable-may-his-soul-rest-in-peace-says-cm-siddaramaiah
ಬಾಲಕ ಸಂಕೇತ ಕುಟುಂಬಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಂದ ಪರಿಹಾರದ ಚೆಕ್ ವಿತರಣೆ (ETV Bharat)

ಇದೇ ವೇಳೆ, ಊರುಗಡೂರು ಬಡಾವಣೆಯಲ್ಲಿ ಇತ್ತೀಚೆಗೆ ಸ್ನೇಹಿತರ ಜಗಳದಲ್ಲಿ ಮೃತಪಟ್ಟ ಬಾಲಕ ಸಂಕೇತ್​ ಕುಟುಂಬಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಪರಿಹಾರದ ಚೆಕ್ ವಿತರಿಸಿದರು.

ಬೆಂಗಳೂರು ಗ್ರಾಮಾಂತರ ಜಿಲ್ಲಾಡಳಿತದಿಂದ ಸಹಾಯವಾಣಿ: ಮಧ್ಯಪ್ರಾಚ್ಯ ಮತ್ತು ಕೊಲ್ಲಿ ದೇಶಗಳಲ್ಲಿ ಯುದ್ಧ ಆರಂಭವಾಗಿರುವ ಹಿನ್ನೆಲೆಯಲ್ಲಿ, ವೈಮಾನಿಕ ಸಂಚಾರ ಸ್ಥಗಿತಗೊಂಡು ಅಲ್ಲಿ ಸಿಲುಕಿರುವ ಸಂತ್ರಸ್ತರ ನೆರವಿಗೆ ಬೆಂಗಳೂರು ಗ್ರಾಮಾಂತರ ಜಿಲ್ಲಾಡಳಿತದಿಂದ ಸಹಾಯವಾಣಿ ಆರಂಭಿಸಲಾಗಿದೆ.

ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಯಾರಾದರೂ ಯುದ್ಧ ಪೀಡಿತ ದೇಶಗಳಲ್ಲಿ ಸಿಲುಕಿದ್ದರೆ, ದೇಶಗಳ ಕಂಟ್ರೋಲ್ ರೂಂ ಸಂಖ್ಯೆಗಳು ಹೀಗಿವೆ:

  • ಕತಾರ್: 00974-55647502
  • ಬಹ್ರೇನ್: 00973-39418071
  • ಜೋರ್ಡಾನ್: 00962-770 422 276
  • ಓಮನ್: Toll-Free: 8007 1234 | ವಾಟ್ಸ್​ಆ್ಯಪ್ ಸಂ: +968 9828 2270 ತೆರೆಯಲಾಗಿದೆ.
  • ಇರಾಕ್: +964 771 651 1185 (ಇಂಗ್ಲಿಷ್ ಮತ್ತು ಹಿಂದಿ), +964 770 444 4899 (ಅರೇಬಿಕ್)
  • ಕುವೈತ್: +965 65501946
  • ಪ್ಯಾಲೆಸ್ಟೈನ್: +970 592916418 ಸಹಾಯವಾಣಿ ಆರಂಭಿಸಲಾಗಿದೆ.
  • ಬೆಂಗಳೂರು ಗ್ರಾಮಾಂತರ ಜಿಲ್ಲಾ ಕಚೇರಿಯ ವಿಪತ್ತು ನಿರ್ವಹಣಾ ಕೇಂದ್ರ ದೂ.ಸಂ: 080-28388005 ಇಲ್ಲಿಗೆ ಕರೆ ಮಾಡಿ ಮಾಹಿತಿ ನೀಡುವಂತೆ ಬೆಂಗಳೂರು ಗ್ರಾಮಾಂತರ ಜಿಲ್ಲಾಧಿಕಾರಿ ಡಾ.ಕೆ.ಎನ್. ಅನುರಾಧ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಇದನ್ನೂ ಓದಿ: ಖಮೇನಿ ಹತ್ಯೆ ಖಂಡಿಸಿ ಗೌರಿಬಿದನೂರಿನ ಅಲಿಪುರದಲ್ಲಿ ರಸ್ತೆಗಿಳಿದು ಪ್ರತಿಭಟನೆ: 3 ದಿನ ಶೋಕಾಚರಣೆ ಘೋಷಣೆ