ETV Bharat / state

ಬೆಂಗಳೂರು: ಸಿನಿಮಾ ಥಿಯೇಟರ್​​ನ ಮಹಿಳಾ ಶೌಚಾಲಯದಲ್ಲಿ ವಿಡಿಯೋ ಮಾಡುವಾಗ ಸಿಕ್ಕಿಬಿದ್ದ ಅಪ್ರಾಪ್ತ

ಸಿನಿಮಾ ಥಿಯೇಟರ್​ನ​ ಮಹಿಳಾ ಶೌಚಾಲಯದಲ್ಲಿ ವಿಡಿಯೋ ಚಿತ್ರೀಕರಿಸಿದ ಆರೋಪದ ಮೇಲೆ ಅಪ್ರಾಪ್ತ ಬಾಲಕನನ್ನು ಪೊಲೀಸರು ಬಂಧಿಸಿದ್ದಾರೆ.

BENGALURU  FILMING VIDEO IN WOMAN TOILET  ಮಹಿಳಾ ಶೌಚಾಲಯದಲ್ಲಿ ವಿಡಿಯೋ  ಸಿನಿಮಾ ಥಿಯೇಟರ್
ಸಾಂದರ್ಭಿಕ ಚಿತ್ರ (ETV Bharat)
author img

By ETV Bharat Karnataka Team

Published : January 5, 2026 at 5:28 PM IST

2 Min Read
Choose ETV Bharat

ಬೆಂಗಳೂರು: ಸಿನಿಮಾ ಥಿಯೇಟರ್‌ನ ಮಹಿಳಾ ಶೌಚಾಲಯದಲ್ಲಿ ವಿಡಿಯೋ ಚಿತ್ರೀಕರಣ ಮಾಡುತ್ತಿದ್ದ ಅಪ್ರಾಪ್ತನನ್ನು ಮಡಿವಾಳ ಠಾಣೆ ಪೊಲೀಸರು ಬಂಧಿಸಿದ್ದಾರೆ. ಜನವರಿ 4ರಂದು ರಾತ್ರಿ 9:30ಕ್ಕೆ ಮಡಿವಾಳದ ಸಂಧ್ಯಾ ಚಿತ್ರಮಂದಿರಲ್ಲಿ ಈ ಘಟನೆ ನಡೆದಿದೆ.

ಆರೋಪಿಗೆ ಥಳಿಸಿ, ಪೊಲೀಸರಿಗೆ ಒಪ್ಪಿಸಿದ ಜನ: ಸಿನಿಮಾ ನೋಡಲು ಬಂದಿದ್ದ ಕೆಲ ಸ್ನೇಹಿತೆಯರು ಶೌಚಾಲಯ ಬಳಸಲು ತೆರಳಿದ್ದರು‌. ಅದೇ ಸಂದರ್ಭದಲ್ಲಿ ಆರೋಪಿ ಮೊಬೈಲ್ ಕ್ಯಾಮೆರಾ ಮೂಲಕ ಚಿತ್ರೀಕರಣ ಮಾಡುತ್ತಿರುವುದನ್ನು ಕಂಡು ಆಘಾತಕ್ಕೊಳಗಾಗಿದ್ದಾರೆ‌. ಘಟನೆ ಬೆಳಕಿಗೆ ಬರುತ್ತಿದ್ದಂತೆ ಸ್ಥಳೀಯರು ಕೂಡಲೇ ಆರೋಪಿಯನ್ನು ಹಿಡಿದು ಥಳಿಸಿ ಪೊಲೀಸರಿಗೆ ಒಪ್ಪಿಸಿದ್ದಾರೆ.

ಥಿಯೇಟರ್​ನಲ್ಲೇ ಕೆಲಸ ಮಾಡುತ್ತಿದ್ದ ಆರೋಪಿ: ಕೆಲ ದಿನಗಳಿಂದಲೂ ಆರೋಪಿ ಥಿಯೇಟರ್‌ನಲ್ಲಿ ಕೆಲಸ ಮಾಡುತ್ತಿದ್ದು, ಕಮಲ್ ಎಂಬಾತ ವಿಡಿಯೋ ಚಿತ್ರೀಕರಿಸಲು ಸೂಚಿಸಿರುವುದಾಗಿ ಪೊಲೀಸರ ಮುಂದೆ ಅಪ್ರಾಪ್ತ ಬಾಯ್ಬಿಟ್ಟಿದ್ದಾನೆ. ಸದ್ಯ ಆರೋಪಿ ಬಾಲಕ, ಕಮಲ್ ಹಾಗೂ ಸಂಧ್ಯಾ ಥಿಯೇಟರ್ ಸಿಬ್ಬಂದಿ ವಿರುದ್ಧ ಎಫ್ಐಆರ್ ದಾಖಲಿಸಿಕೊಳ್ಳಲಾಗಿದೆ.

ಮೊಬೈಲ್​ ವಿಡಿಯೋಗಳು ಪತ್ತೆ: ಆರೋಪಿಯ ಮೊಬೈಲ್ ಫೋನ್‌ನಲ್ಲಿ ಕೆಲ ವಿಡಿಯೋಗಳು ಪತ್ತೆಯಾಗಿದ್ದು, ಹಲವು ದಿನಗಳಿಂದ ಕೃತ್ಯ ಎಸಗುತ್ತಿದ್ದ ಬಗ್ಗೆ ಶಂಕೆಯಿದೆ. ತನಿಖೆ ಮುಂದುವರೆಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಇವುಗಳನ್ನೂ ಓದಿ: ರೀಲ್ಸ್​ ಮಾಡುವುದನ್ನು ಪ್ರಶ್ನಿಸಿದ ಯುವಕನಿಗೆ ಚಾಕು ಇರಿದು ವಿಡಿಯೋ ಚಿತ್ರೀಕರಿಸಿದ ನಾಲ್ವರು ಅಪ್ರಾಪ್ತರು!

2025ರ ಹಿನ್ನೋಟ: ಚಿನ್ನಸ್ವಾಮಿ ಸ್ಟೇಡಿಯಂ ಕಾಲ್ತುಳಿತ, ಎಟಿಎಂ ಹಣ ದರೋಡೆ ಸೇರಿ ರಾಜ್ಯದ ಪ್ರಮುಖ ಕ್ರೈಂ ಕೇಸ್​ಗಳ ಇಣುಕು ನೋಟ

ಇತ್ತೀಚಿಗೆ ನಡೆದ ಪ್ರಕರಣ: ಆಸ್ಪತ್ರೆಯಲ್ಲಿನ ಜೂನಿಯರ್ ಟೆಕ್ನಿಷಿಯನ್​ನ್ನೋರ್ವ ಆಪರೇಷನ್ ಥಿಯೇಟರ್​ನ (ಒಟಿ) ಡ್ರೆಸಿಂಗ್ ರೂಮ್​ನಲ್ಲಿ ಮಹಿಳಾ ಸಿಬ್ಬಂದಿ ಬಟ್ಟೆ ಬದಲಾಯಿಸುವಾಗ ರಹಸ್ಯವಾಗಿ ಮೊಬೈಲ್ ಇಟ್ಟು ವಿಡಿಯೋ ಮಾಡಲು ಯತ್ನಿಸಿದ್ದ ಘಟನೆ ಕಳೆದ ತಿಂಗಳು ಬೆಳಕಿಗೆ ಬಂದಿತ್ತು. ನಾಗರಬಾವಿ ಎರಡನೇ ಹಂತದಲ್ಲಿರುವ ಖಾಸಗಿ ಆಸ್ಪತ್ರೆಯೊಂದರ ನಿರ್ದೇಶಕ ಡಾ.ಚೇತನ್ ಎಂಬುವರು ನೀಡಿದ ದೂರಿನ ಮೇರೆಗೆ ಸುವೆಂದು ಮೊಹತಾ (23) ಎಂಬುವನನ್ನ ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿತ್ತು.

ಆಸ್ಪತ್ರೆಯಲ್ಲಿ ಆರೋಪಿ ಜೂನಿಯರ್ ಟೆಕ್ನಿಷಿಯನ್​ನ ಆಗಿ ಕೆಲಸ ಮಾಡುತ್ತಿದ್ದ. ಪಶ್ಚಿಮಬಂಗಾಳ ಮೂಲದ ಸುವೆಂದು ಕಳೆದ ಒಂದು ವರ್ಷದಿಂದ ಆಸ್ಪತ್ರೆಯ ಆಪರೇಷನ್ ಥಿಯೇಟರ್​ನಲ್ಲಿ ಜೂನಿಯರ್ ಟೆಕ್ನಿಷಿಯನ್ ಆಗಿ ಕೆಲಸ ಮಾಡುತ್ತಿದ್ದ. ಕೊಟ್ಟಿಗೆಪಾಳ್ಯದ ಪಿಜಿಯೊಂದರಲ್ಲಿ ನೆಲೆಸಿದ್ದ. ಡಿ.20ರಂದು ಬೆಳಗ್ಗೆ 8.30ರ ಸುಮಾರಿಗೆ ಶಸ್ತ್ರ ಚಿಕಿತ್ಸಾ ಘಟಕದ ಕೊಠಡಿಯಲ್ಲಿ ಮಹಿಳಾ ಸಿಬ್ಬಂದಿಗಳು ಬಟ್ಟೆ ಬದಲಾಯಿಸುವಾಗ ಆರೋಪಿ ಇಟ್ಟಿದ್ದ ಮೊಬೈಲ್ ಗಮನಿಸಿದ್ದರು. ಆತಂಕಗೊಂಡ ಸಿಬ್ಬಂದಿಯು ಮೊಬೈಲ್ ಪರಿಶೀಲಿಸಿದಾಗ ಗುಪ್ತವಾಗಿ ವಿಡಿಯೋ ಮಾಡುತ್ತಿರುವುದು ಗೊತ್ತಾಗಿತ್ತು. ಈ ಸಂಬಂಧ ಅನ್ನಪೂರ್ಣೇಶ್ವರಿ ನಗರ ಠಾಣೆಗೆ ದೂರು ನೀಡಲಾಗಿತ್ತು. ಆ ಬಳಿಕ ಆರೋಪಿಯನ್ನು ಪೊಲೀಸರು ಬಂಧಿಸಿದ್ದರು.